Labour Card Scholarship 2026: ವಿದ್ಯಾರ್ಥಿಗಳಿಗೆ 60,000 ರೂ. ಶೈಕ್ಷಣಿಕ ಸಹಾಯಧನ; ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್, ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ 2025-26ನೇ ಸಾಲಿನ ಶೈಕ್ಷಣಿಕ ಸಹಾಯಧನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕಟ್ಟಡ ಕಾರ್ಮಿಕರ ಮಕ್ಕಳ ವ್ಯಾಸಂಗಕ್ಕೆ ನೆರವಾಗಲು ‘ಕಲಿಕಾ ಭಾಗ್ಯ’ ಯೋಜನೆ (Labour Card Scholarship) ನೀಡುತ್ತಿದ್ದಾರೆ. ಈ ಯೋಜನೆಯಡಿಯಲ್ಲಿ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ ಈ ವಿದ್ಯಾರ್ಥಿವೇತನವನ್ನು ದೊರೆಯಲಿದೆ.

ಅರ್ಹತೆಗಳೇನು..?
ಅರ್ಜಿದಾರರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಾಗಿದ್ದು, ಮಂಡಳಿಯಲ್ಲಿ ನೋಂದಾಯಿತರಾಗಿರಬೇಕು.

Labour Card Scholarship Amount 2025

ಕೋರ್ಸ್/ತರಗತಿತರಗತಿ/ಪದವಿ (ಪ್ರತಿ ವರ್ಷಕ್ಕೆ) (ರೂ.ಗಳಲ್ಲಿ)ಸ್ನಾತಕೋತ್ತರ ಪದವಿ (ಪ್ರತಿ ವರ್ಷಕ್ಕೆ) (ರೂ.ಗಳಲ್ಲಿ)
1ನೇ ತರಗತಿಯಿಂದ 5ನೇ ತರಗತಿ1,800/-
6ನೇ ತರಗತಿಯಿಂದ 8ನೇ ತರಗತಿ2,400/-
9 ಮತ್ತು 10ನೇ ತರಗತಿ3,000/-
ಪಿಯುಸಿ, 11 ಹಾಗೂ 12ನೇ ತರಗತಿ ಅಥವಾ ತತ್ಸಮಾನ ಕೋರ್ಸ್.6,000/-
10ನೇ ತರಗತಿ ನಂತರದ ಐಟಿಐ/ ತತ್ಸಮಾನ ತಾಂತ್ರಿಕ ಕೋರ್ಸ್ ಗಳು10,000/-
ಪಿಯುಸಿ ನಂತರದ ಯಾವುದೇ ಡಿಪ್ಲೋಮಾ ತರಗತಿ.12,000/-
ಸಾಮಾನ್ಯ ಪದವಿ (ಜನರಲ್ ಡಿಗ್ರಿ) – ಬಿಎ, ಬಿಕಾಂ, ಬಿಎಸ್ಸಿ ಮುಂತಾದವುಗಳು15,000/-20,000/-
03 ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ Vocational ವೃತ್ತಿಪರ ಕೋರ್ಸ್ ಗಳು ಕಾನೂನು ಪದವಿ ಸಹಿತ (Professional Courses)20,000/-25,000/-
04 ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ವೃತ್ತಿಪರ ಕೋರ್ಸ್ ಗಳು (Professional Courses)25,000/-35,000/-
03 ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಪ್ಯಾರಾ ಮೆಡಿಕಲ್ ವೃತ್ತಿಪರ ಕೋರ್ಸ್ ಗಳು (Para Medical Courses)20,000/-25,000/-
03 ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ವೃತ್ತಿಪರ ಕೋರ್ಸ್ ಗಳು (Professional Courses)25,000/-35,000/-
ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಪದವಿ ಕೋರ್ಸ್ ಗಳು40,000/-50,000/-
ಪಿಎಚ್‌ಡಿ/ಎಂಫಿಲ್ (03 ವರ್ಷ ಅವಧಿಯವರೆಗೆ)40,000/-
IIT, IIIT, AIMS, IISc, IISERC ನಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು.50,000/-60,000/-

Labour Card Scholarship 2025 ಅಗತ್ಯ ದಾಖಲೆಗಳು:

  • ಮಂಡಳಿಯಿಂದ ನೀಡಲಾದ ನೋಂದಣಿ ಕಾರ್ಡ್ (ಲೇಬರ್ ಕಾರ್ಡ್) ಹೊಂದಿರಬೇಕು.
  • ನೋಂದಣಿದಾರರು ಮತ್ತು ಅವರ ಪತಿ/ಪತ್ನಿಯ ಆಧಾರ್ ಕಾರ್ಡ್.
  • ವಿದ್ಯಾರ್ಥಿಯ ಆಧಾರ್ ಕಾರ್ಡ್.
  • ಬ್ಯಾಂಕ್ ಖಾತೆ ವಿವರ (ಖಾತೆಗೆ ಆಧಾರ್ ಜೋಡಣೆಯಾಗಿರಬೇಕು ಮತ್ತು NPCI ಮ್ಯಾಪ್ ಆಗಿರಬೇಕು).
  • ವಿದ್ಯಾರ್ಥಿಯ SATS ID ಅಥವಾ ಸ್ಟೂಡೆಂಟ್ ಐಡಿ.
  • ವ್ಯಾಸಂಗ ಪ್ರಮಾಣ ಪತ್ರ (Study Certificate).
  • ಉದ್ಯೋಗ ದೃಢೀಕರಣ ಪತ್ರ ಮತ್ತು ಸ್ವಯಂ ದೃಢೀಕರಣ ಪತ್ರ.

ಸೂಚನೆ: ದಿನಾಂಕ 31-05-2025 ಕ್ಕೂ ಮೊದಲು ಮಂಡಳಿಯಲ್ಲಿ ನೋಂದಾಯಿತರಾದ ಕಾರ್ಮಿಕರು ಮಾತ್ರ ತಮ್ಮ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-01-2026

Labour Department Scholarship 2025 Online Application Link:
ಅರ್ಜಿ ಸಲ್ಲಿಕೆ ಲಿಂಕ್:‌ Apply ಮಾಡಿ
ಅಧಿಕೃತ ವೆಬ್‌ಸೈಟ್‌ಗಳು: karbwwb.karnataka.gov.in, ssp.karnataka.gov.in

ಸಹಾಯವಾಣಿ ಸಂಖ್ಯೆ: ಹೆಚ್ಚಿನ ಮಾಹಿತಿಗಾಗಿ ಅಥವಾ ಅರ್ಜಿ ಸಲ್ಲಿಸುವಾಗ ಸಮಸ್ಯೆ ಎದುರಾದರೆ ಕಾರ್ಮಿಕ ಸಹಾಯವಾಣಿ 155214 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಕಾರ್ಮಿಕರ ಮಕ್ಕಳಿಗೆ 20,000 ರೂ. ವಿದ್ಯಾರ್ಥಿವೇತನ; ಅರ್ಜಿ ಆಹ್ವಾನ

ವಿದ್ಯಾಸಿರಿ ವಿದ್ಯಾರ್ಥಿವೇತನ 2025-26; ಆನ್‌ಲೈನ್ ಅರ್ಜಿ ಸಲ್ಲಿಸಿ

NSP Scholarship 2025-26: ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

Telegram Group Join Now
WhatsApp Group Join Now

Leave a Comment