ಅನ್ನಭಾಗ್ಯ ಯೋಜನೆ: ಫಲಾನುಭವಿಗಳಿಗೆ ಅಕ್ಕಿ ಜತೆ ರಾಗಿ, ಜೋಳ ವಿತರಣೆ

Telegram Group Join Now
WhatsApp Group Join Now

ಕರ್ನಾಟಕದ BPL ಮತ್ತು ಅಂತ್ಯೋದಯ ರೇಷನ್ ಕಾರ್ಡ್‌ದಾರರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್. ಮೇ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಜೊತೆಗೆ 2 ಕೆ.ಜಿ ರಾಗಿ ಅಥವಾ ಜೋಳವನ್ನು ವಿತರಿಸಲಾಗುತ್ತಿದೆ.

ಇನ್ನು ಮುಂದೆ ಕೇವಲ ಅಕ್ಕಿಯನ್ನಷ್ಟೇ ಅಲ್ಲದೆ, ಪೌಷ್ಟಿಕಾಂಶಯುಕ್ತ ಸಿರಿಧಾನ್ಯಗಳಾದ ರಾಗಿ ಮತ್ತು ಜೋಳವನ್ನು ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಪ್ರಸ್ತುತ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು ಸೇರಿ ಪ್ರತಿ ವ್ಯಕ್ತಿಗೆ ಒಟ್ಟು 10 ಕೆ.ಜಿ. ಅಕ್ಕಿಯನ್ನು ನೀಡಲಾಗುತ್ತಿದೆ. ಆದರೆ, ಹೆಚ್ಚಿನ ಪ್ರಮಾಣದ ಅಕ್ಕಿ ಬಳಕೆಯಾಗದೆ, ಫಲಾನುಭವಿಗಳು ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದವು.

ಇದನ್ನು ತಪ್ಪಿಸುವ ಹಾಗೂ ಜನರಿಗೆ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ, 10 ಕೆ.ಜಿ. ಪಡಿತರದಲ್ಲಿ 2 ಕೆ.ಜಿ. ಸಿರಿಧಾನ್ಯವನ್ನು (ರಾಗಿ/ಜೋಳ) ಸೇರ್ಪಡೆ ಮಾಡಲಾಗುತ್ತಿದೆ.

ಯಾವ ಭಾಗಕ್ಕೆ ಯಾವ ಧಾನ್ಯ? ರಾಜ್ಯದ ಭೌಗೋಳಿಕ ಆಹಾರ ಪದ್ಧತಿಗೆ ಅನುಗುಣವಾಗಿ ಪಡಿತರ ವಿತರಿಸಲು ಇಲಾಖೆ ತೀರ್ಮಾನಿಸಿದೆ. ಅದರಂತೆ:

  • ಹಳೇ ಮೈಸೂರು ಭಾಗ: ದಕ್ಷಿಣ ಕರ್ನಾಟಕದ ಜಿಲ್ಲೆಗಳ ಪಡಿತರದಾರರಿಗೆ ತಲಾ 2 ಕೆ.ಜಿ. ರಾಗಿ ನೀಡಲಾಗುವುದು.
  • ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗ: ಉತ್ತರ ಕರ್ನಾಟಕದ ಜಿಲ್ಲೆಗಳ ಫಲಾನುಭವಿಗಳಿಗೆ ತಲಾ 2 ಕೆ.ಜಿ. ಜೋಳ ವಿತರಿಸಲಾಗುವುದು.

ರೈತರಿಂದ ಬೃಹತ್ ಪ್ರಮಾಣದ ರಾಗಿ ಖರೀದಿ: ರಾಜ್ಯದಲ್ಲಿ ಪ್ರಸ್ತುತ 1.14 ಕೋಟಿ ಬಿಪಿಎಲ್‌ ಕಾರ್ಡ್‌ಗಳಿದ್ದು, 4.01 ಕೋಟಿ ಫಲಾನುಭವಿಗಳಿದ್ದಾರೆ. ಇವರಿಗೆ ಪ್ರತಿ ತಿಂಗಳು ವಿತರಿಸಲು ಸುಮಾರು 57 ಸಾವಿರ ಮೆಟ್ರಿಕ್‌ ಟನ್‌ ರಾಗಿ ಹಾಗೂ 8-9 ಸಾವಿರ ಮೆಟ್ರಿಕ್ ಟನ್ ಜೋಳದ ಅಗತ್ಯವಿದೆ.

ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮವು ಬೆಂಬಲ ಬೆಲೆ ಯೋಜನೆಯಡಿ ಈಗಾಗಲೇ 5.2 ಲಕ್ಷ ಮೆಟ್ರಿಕ್‌ ಟನ್‌ ರಾಗಿಯನ್ನು ರೈತರಿಂದ ಖರೀದಿಸಿ ದಾಸ್ತಾನು ಮಾಡಿದೆ. ಇದು ಮುಂದಿನ 10 ತಿಂಗಳ ವಿತರಣೆಗೆ ಸಾಕಾಗಲಿದೆ.

ಇನ್ನೂ ರಾಗಿ ಮಾರಾಟ ಮಾಡದ ನೋಂದಾಯಿತ ರೈತರಿಗೆ ಮೇ 15 ರವರೆಗೆ ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ.

ಲೇಬರ್ ಕಾರ್ಡ್ ಇದ್ದವರಿಗೆ ₹60,000 ಉಚಿತ ಸಹಾಯಧನ

E-Swathu 2.0: ಇ-ಸ್ವತ್ತು ಅರ್ಜಿಗಳ ವಿಲೇವಾರಿಗೆ ವೇಗ: ಸಚಿವ ಪ್ರಿಯಾಂಕ್ ಖರ್ಗೆ

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment