ಎಲ್ಲರಿಗೂ ನಮಸ್ಕಾರ, ನೀವು ಕೂಡ ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದೀರಾ..? ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್ ನ್ಯೂಸ್. ಯಾರು Tata Scholarship 2025 ಗೆ ಅರ್ಜಿಯನ್ನು ಸಲ್ಲಿಸಬಹುದು..? ವಿದ್ಯಾರ್ಹತೆ ಏನು..? ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಎಷ್ಟು ವಿದ್ಯಾರ್ಥಿವೇತನ ದೊರೆಯಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.
ಟಾಟಾ ಕ್ಯಾಪಿಟಲ್ ಲಿಮಿಟೆಡ್ ವತಿಯಿಂದ ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನವನ್ನು ನೀಡುತ್ತಾರೆ. ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ಉನ್ನತ ಶಿಕ್ಷಣವನ್ನು ಮುಂದುವರೆಸಲು ಈ ಸ್ಕಾಲರ್‌ಶಿಪ್ ಅನ್ನು ನೀಡುತ್ತಾರೆ.
ಈ ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ, 11 ಮತ್ತು 12 ನೇ ತರಗತಿಗಳಲ್ಲಿ ಓದುತ್ತಿರುವ ಅಥವಾ ಸಾಮಾನ್ಯ ಪದವಿ/ಡಿಪ್ಲೊಮಾ/ಪಾಲಿಟೆಕ್ನಿಕ್ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅವರ ಕೋರ್ಸ್ ನ ಶುಲ್ಕದ 80% ವರೆಗೆ ಒಂದು ಬಾರಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ ಅಥವಾ 10,000 ರೂ. ರಿಂದ 12,000 ರೂ. ವರೆಗೆ ( ಯಾವುದು ಕಡಿಮೆಯೋ ಅದು) ವಿದ್ಯಾರ್ಥಿವೇತನ ನೀಡುತ್ತಾರೆ.
ಪ್ರಯೋಜನಗಳು:
11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ: 10,000 ರೂ.
ಡಿಪ್ಲೊಮಾ/ಪಾಲಿಟೆಕ್ನಿಕ್ ಮತ್ತು ಸಾಮಾನ್ಯ ಪದವಿ ವಿದ್ಯಾರ್ಥಿಗಳಿಗೆ: 12,000 ರೂ.
Tata Scholarship 2025 ಅರ್ಹತೆಗಳು:
- ಭಾರತದಲ್ಲಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ 11 ಮತ್ತು 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
- ಭಾರತದಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಪ್ರಸ್ತುತ B.Com., B.Sc., BA, ಇತ್ಯಾದಿ ಪದವಿ ಅಥವಾ ಡಿಪ್ಲೊಮಾ/ಪಾಲಿಟೆಕ್ನಿಕ್ ಕೋರ್ಸ್‌ಗಳಿಗೆ ದಾಖಲಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
- ವಿದ್ಯಾರ್ಥಿಯು ಹಿಂದಿನ ತರಗತಿ/ಸೆಮಿಸ್ಟರ್ ನಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 2.5 ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು.
- Tata Capital & Buddy4Study ಉದ್ಯೋಗಿಗಳ ಮಕ್ಕಳು ಅರ್ಹರಲ್ಲ.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಪಾಸ್‌ಪೋರ್ಟ್ ಗಾತ್ರದ ಪೋಟೋ
- ಆದಾಯ ಪ್ರಮಾಣ ಪತ್ರ
- ಪ್ರವೇಶದ ಪುರಾವೆ (ಕಾಲೇಜು/ಸಂಸ್ಥೆಯ ID ಕಾರ್ಡ್/ಬನಫೈಡ್ ಪ್ರಮಾಣಪತ್ರ, ಇತ್ಯಾದಿ)
- ಪ್ರಸಕ್ತ ಶೈಕ್ಷಣಿಕ ವರ್ಷದ ಶುಲ್ಕ ರಶೀದಿ
- ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು (ರದ್ದಾದ ಚೆಕ್/ಪಾಸ್‌ಬುಕ್ ಪ್ರತಿ)
- ಹಿಂದಿನ ತರಗತಿಯ ಅಂಕ ಪಟ್ಟಿ ಅಥವಾ ಗ್ರೇಡ್ ಕಾರ್ಡ್‌ಗಳು
- ಅಂಗವಿಕಲತೆ ಮತ್ತು ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ)
ಅರ್ಜಿ ಸಲ್ಲಿಸುವ ದಿನಾಂಕ:
Tata Scholarship 2025 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 15-03-2025
ಪ್ರಮುಖ ಲಿಂಕ್‌ಗಳು:
Tata Capital Pankh Scholarship 2025 Apply Online ಲಿಂಕ್: Apply ಮಾಡಿ