RBI Recruitment 2026: SSLC ಪಾಸಾದವರಿಗೆ RBI ನಲ್ಲಿ ಬಂಪರ್ ಉದ್ಯೋಗ, ತಿಂಗಳಿಗೆ ₹46,000 ಸಂಬಳ; ಆನ್‌ಲೈನ್ ಅರ್ಜಿ ಆಹ್ವಾನ

Telegram Group Join Now
WhatsApp Group Join Now

ಬ್ಯಾಂಕ್ ಉದ್ಯೋಗದ ಕನಸು ಕಾಣುತ್ತಿರುವ, ಅದರಲ್ಲೂ ಕೇವಲ 10ನೇ ತರಗತಿ ಪಾಸಾಗಿರುವ ಅಭ್ಯರ್ಥಿಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಭರ್ಜರಿ ಸಿಹಿಸುದ್ದಿ ನೀಡಿದೆ. ದೇಶದ ಪ್ರತಿಷ್ಠಿತ ಆರ್‌ಬಿಐನಲ್ಲಿ ‘ಆಫೀಸ್ ಅಟೆಂಡೆಂಟ್’ (Office Attendant) ಹುದ್ದೆಗಳಿಗೆ ಬೃಹತ್ ನೇಮಕಾತಿ ಅಧಿಸೂಚನೆ (RBI Recruitment 2026) ಪ್ರಕಟವಾಗಿದ್ದು, ಆಯ್ಕೆಯಾದವರಿಗೆ ಕೈತುಂಬಾ ಸಂಬಳ ಸಿಗಲಿದೆ.

ಕೇಂದ್ರ ಸರ್ಕಾರದ ಕಾಯಂ ಉದ್ಯೋಗ ಇದಾಗಿದ್ದು, ಬರೋಬ್ಬರಿ 572 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವಿಶೇಷವೆಂದರೆ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಪರೀಕ್ಷಾ ಕೇಂದ್ರಗಳಿದ್ದು, ಕನ್ನಡ ಬಲ್ಲವರಿಗೆ ಆದ್ಯತೆ ಇದೆ.

RBI Recruitment 2026‌ ಮುಖ್ಯಾಂಶಗಳು:

  • ಸಂಸ್ಥೆ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI).
  • ಹುದ್ದೆಯ ಹೆಸರು: ಆಫೀಸ್ ಅಟೆಂಡೆಂಟ್ (Office Attendant).
  • ವೇತನ: 24,250 ರೂ. ರಿಂದ 46,029 ರೂ.
  • ಒಟ್ಟು ಹುದ್ದೆಗಳು: 572.
    • ಬೆಂಗಳೂರು ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳು: 16.

ವೇತನ ವಿವರ:

ಇದು ಕ್ಲಾಸ್-IV ಹುದ್ದೆಯಾದರೂ, ಆರ್‌ಬಿಐ ನೀಡುವ ವೇತನ ಆಕರ್ಷಕವಾಗಿದೆ.

  • ಮೂಲ ವೇತನ: ₹24,250/-.
  • ಒಟ್ಟು ಕೈಗೆ ಸಿಗುವ ಸಂಬಳ: ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ, ಸಾರಿಗೆ ಭತ್ಯೆ ಎಲ್ಲವನ್ನೂ ಸೇರಿಸಿ ಆರಂಭಿಕವಾಗಿ ತಿಂಗಳಿಗೆ ಅಂದಾಜು ₹46,029/- ವೇತನ ಸಿಗಲಿದೆ.

ಯಾರು ಅರ್ಜಿ ಸಲ್ಲಿಸಬಹುದು?

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೆಲವೊಂದು ಕಠಿಣ ನಿಯಮಗಳಿವೆ, ಗಮನವಿಟ್ಟು ಓದಿ:

  1. ವಿದ್ಯಾರ್ಹತೆ: ಅಭ್ಯರ್ಥಿಯು ರಾಜ್ಯದ ಯಾವುದೇ ಅಂಗೀಕೃತ ಮಂಡಳಿಯಿಂದ 10ನೇ ತರಗತಿ (SSLC/Matriculation) ಪಾಸಾಗಿರಬೇಕು.
    • ಅಭ್ಯರ್ಥಿಯು ಪದವಿ (Degree) ಮುಗಿಸಿರಬಾರದು. 01-01-2026 ರ ಅನ್ವಯ ಯಾರು ಪದವಿ ಪೂರೈಸಿದ್ದಾರೋ ಅವರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ (Only Undergraduates are eligible).
  2. ವಯೋಮಿತಿ: 18 ರಿಂದ 25 ವರ್ಷದೊಳಗಿರಬೇಕು.
    • ಸಡಿಲಿಕೆ: SC/ST ಗೆ 5 ವರ್ಷ, OBC ಗೆ 3 ವರ್ಷ ಹಾಗೂ ವಿಕಲಚೇತನರಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.
  3. ಭಾಷಾ ಜ್ಞಾನ: ಬೆಂಗಳೂರು ಕಚೇರಿಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ‘ಕನ್ನಡ’ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು.

ಅರ್ಜಿ ಶುಲ್ಕ ಮತ್ತು ದಿನಾಂಕಗಳು:

  • ಅರ್ಜಿ ಶುಲ್ಕ:
    • ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ: ₹450/- (+ 18% GST).
    • SC/ST/ಮಾಜಿ ಸೈನಿಕ/ಅಂಗವಿಕಲ ಅಭ್ಯರ್ಥಿಗಳಿಗೆ: ₹50/- (Intimation Charges only + GST).
  • ಪ್ರಮುಖ ದಿನಾಂಕ:
    • ಅರ್ಜಿ ಸಲ್ಲಿಕೆ ಆರಂಭ: 15 ಜನವರಿ 2026.
    • ಅರ್ಜಿ ಸಲ್ಲಿಸಲು ಲಾಸ್ಟ್ ಡೇಟ್: 04 ಫೆಬ್ರವರಿ 2026.
    • ಆನ್‌ಲೈನ್ ಪರೀಕ್ಷೆ ದಿನಾಂಕ (Tentative): 28 ಫೆಬ್ರವರಿ ಮತ್ತು 01 ಮಾರ್ಚ್ 2026.

ಆಯ್ಕೆ ಪ್ರಕ್ರಿಯೆ ಹೇಗೆ?

  1. ಆನ್‌ಲೈನ್ ಪರೀಕ್ಷೆ: 120 ಅಂಕಗಳಿಗೆ 120 ಪ್ರಶ್ನೆಗಳಿರುತ್ತವೆ (ರೀಸನಿಂಗ್, ಇಂಗ್ಲಿಷ್, ಸಾಮಾನ್ಯ ಜ್ಞಾನ, ಸಂಖ್ಯಾ ಸಾಮರ್ಥ್ಯ).
  2. ಭಾಷಾ ಪರೀಕ್ಷೆ (LPT): ಆನ್‌ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ. ಇದು ಕಡ್ಡಾಯವಾಗಿದ್ದು, ಇದರಲ್ಲಿ ಅನುತ್ತೀರ್ಣರಾದರೆ ಹುದ್ದೆ ಸಿಗುವುದಿಲ್ಲ.

ಕರ್ನಾಟಕದ ಪರೀಕ್ಷಾ ಕೇಂದ್ರಗಳು: ಬೆಳಗಾವಿ, ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ.

RBI Recruitment 2026‌ ಪ್ರಮುಖ ಲಿಂಕ್‌ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: rbi.org.in

ಸಲಹೆ: ಡಿಗ್ರಿ ಮುಗಿಸಿದವರು “ನನ್ನದು ಎಸ್‌ಎಸ್‌ಎಲ್‌ಸಿ ಕೂಡ ಆಗಿದೆಯಲ್ಲ” ಎಂದು ಸುಳ್ಳು ಮಾಹಿತಿ ನೀಡಿ ಅರ್ಜಿ ಹಾಕಬೇಡಿ. ದಾಖಲೆ ಪರಿಶೀಲನೆ ವೇಳೆ ಪದವಿ ಆಗಿರುವುದು ಗೊತ್ತಾದರೆ ನಿಮ್ಮನ್ನು ಅನರ್ಹಗೊಳಿಸಲಾಗುತ್ತದೆ. ಕೇವಲ ಪಿಯುಸಿ ಅಥವಾ ಅದಕ್ಕಿಂತ ಕಡಿಮೆ ಓದಿದವರಿಗೆ ಇದು ಸುವರ್ಣಾವಕಾಶ. ಸರ್ವರ್ ಸಮಸ್ಯೆ ತಪ್ಪಿಸಲು ಇಂದೇ ಅರ್ಜಿ ಹಾಕಿ!

ಈ ಮಾಹಿತಿಯು ನಿಮ್ಮ ಸ್ನೇಹಿತರಿಗೆ ಅಥವಾ ಸಹೋದರ-ಸಹೋದರಿಯರಿಗೆ ಉಪಯುಕ್ತವಾಗಿದ್ದರೆ, ತಪ್ಪದೇ ಶೇರ್ ಮಾಡಿ!

KSCCF Recruitment 2026

Prize Money Scholarship 2026

Telegram Group Join Now
WhatsApp Group Join Now

Leave a Comment