ಪೊಲೀಸ್ ಇಲಾಖೆಯಿಂದ ಗುಡ್‌ನ್ಯೂಸ್: 600 PSI ಹುದ್ದೆಗಳ ಹೊಸ ನೇಮಕಾತಿ; KEA ಹೆಗಲಿಗೆ PSI ಪರೀಕ್ಷೆ ನಡೆಸುವ ಹೊಣೆ..? | PSI Recruitment 2026 Karnataka Notification News

Telegram Group Join Now
WhatsApp Group Join Now

ಬೆಳಗಾವಿ: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಬ್‌ ಇನ್ಸ್‌ಪೆಕ್ಟರ್ (PSI) ಹುದ್ದೆಗಳ ನೇಮಕಾತಿಗಾಗಿ (PSI Recruitment 2026) ಕಾಯುತ್ತಿರುವ ಸಾವಿರಾರು ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹೊಸದಾಗಿ 600 ಪಿಎಸ್‌ಐ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಅನುಮತಿ ನೀಡಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಗುರುವಾರ (ಡಿ.11) ವಿಧಾನ ಪರಿಷತ್‌ನಲ್ಲಿ ಸದಸ್ಯರಾದ ಶ್ರೀ ಡಿ.ಎಸ್. ಅರುಣ್ ಅವರು ಕೇಳಿದ ಪ್ರಶ್ನೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಲಿಖಿತ ಉತ್ತರ ನೀಡಿದ್ದು, ನೇಮಕಾತಿ ಪ್ರಕ್ರಿಯೆಯ ಮಹತ್ವದ ಬದಲಾವಣೆಯ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.

PSI Recruitment 2026 News:

ಕೆಇಎ (KEA) ಮೂಲಕ ಪರೀಕ್ಷೆಗೆ ಚಿಂತನೆ: ಈ ಹಿಂದೆ ಪಿಎಸ್‌ಐ ನೇಮಕಾತಿಯಲ್ಲಿ ನಡೆದ ಅಕ್ರಮಗಳ ಹಿನ್ನೆಲೆಯಲ್ಲಿ, ಈ ಬಾರಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ, “ಸರ್ಕಾರವು ಈಗಾಗಲೇ 600 ಪಿಎಸ್‌ಐ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಅನುಮತಿ ನೀಡಿದ್ದು, ಸದರಿ ಹುದ್ದೆಗಳ ನೇಮಕಾತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA) ನಡೆಸಲು ಅನುಮತಿ ನೀಡುವ ಕುರಿತು ಪರಿಶೀಲಿಸಲಾಗುತ್ತಿದೆ,” ಎಂದು ಗೃಹ ಸಚಿವರು ತಮ್ಮ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಅಂದರೆ, ಈ ಬಾರಿ ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಬದಲು, ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ನಡೆಸುವ ಕೆಇಎ ಸಂಸ್ಥೆಗೆ ಪಿಎಸ್‌ಐ ಪರೀಕ್ಷೆಯ ಜವಾಬ್ದಾರಿ ಸಿಗುವ ಸಾಧ್ಯತೆ ದಟ್ಟವಾಗಿದೆ.

ಹಿಂದಿನ ನೇಮಕಾತಿಗಳ ಕಥೆಯೇನು? ಸದನದಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಹಿಂದಿನ ನೇಮಕಾತಿ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ:

  • 545 ಪಿಎಸ್‌ಐ ಹುದ್ದೆಗಳು: 2021-22ನೇ ಸಾಲಿನ ಈ ನೇಮಕಾತಿಯಲ್ಲಿ 542 ಅಭ್ಯರ್ಥಿಗಳಿಗೆ ಆದೇಶ ನೀಡಲಾಗಿದ್ದು, ಈಗಾಗಲೇ 532 ಅಭ್ಯರ್ಥಿಗಳು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ.
  • 402 ಪಿಎಸ್‌ಐ ಹುದ್ದೆಗಳು: 402 ಅಭ್ಯರ್ಥಿಗಳ ಪೈಕಿ 336 ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗಿದ್ದು, ಉಳಿದವರ ಪ್ರಕ್ರಿಯೆ ಬಾಕಿ ಇದೆ.

ಇಲಾಖೆಯಲ್ಲಿ 17,832 ಹುದ್ದೆಗಳು ಖಾಲಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಂಜೂರಾತಿಯಾಗಿರುವ ಒಟ್ಟು 1,15,242 ಹುದ್ದೆಗಳ ಪೈಕಿ ಪ್ರಸ್ತುತ 97,410 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯಕ್ಕೆ 17,832 ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಈ ಕೊರತೆಯನ್ನು ನೀಗಿಸಲು ಹಂತ ಹಂತವಾಗಿ ನೇಮಕಾತಿ ಮಾಡಲಾಗುತ್ತಿದೆ.

ಮುಂದಿನ ನಡೆ ಏನು? 600 ಹುದ್ದೆಗಳಿಗೆ ಅನುಮತಿ ಸಿಕ್ಕಿರುವುದರಿಂದ, ಕೆಇಎ ಜೊತೆಗಿನ ಮಾತುಕತೆ ಅಂತಿಮಗೊಂಡ ತಕ್ಷಣವೇ ಅಧಿಕೃತ ಅಧಿಸೂಚನೆ (Notification) ಹೊರಬೀಳಲಿದೆ. ಅಭ್ಯರ್ಥಿಗಳು ಈಗಿನಿಂದಲೇ ಪರೀಕ್ಷಾ ಸಿದ್ಧತೆ ಚುರುಕುಗೊಳಿಸುವುದು ಒಳಿತು.

SSC GD Constable Notification 2025: SSC 25,487 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಯಚೂರು ಮತ್ತು ಕೊಪ್ಪಳ DCC ಬ್ಯಾಂಕ್ ನೇಮಕಾತಿ 2025

Telegram Group Join Now
WhatsApp Group Join Now

Leave a Comment