PM Vidyalaxmi: ಪಿಎಂ ವಿದ್ಯಾಲಕ್ಷ್ಮೀ ಯೋಜನೆ; ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಹಣಕಾಸಿನ ನೆರವು

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಅವರ ಉನ್ನತ ಶಿಕ್ಷಣವನ್ನು ಮುಂದುವರೆಸಲು ಹಣಕಾಸಿನ ನೆರವು ನೀಡುವ ಗುರಿಯನ್ನು ಪಿಎಂ ವಿದ್ಯಾಲಕ್ಷ್ಮೀ ಯೋಜನೆಯ (PM Vidyalaxmi) ಹೊಂದಿದೆ. ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಕೇಂದ್ರ ಶಿಕ್ಷಣ ಸಚಿವಾಲಯದ ವತಿಯಿಂದ ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯು ಭಾರತದಲ್ಲಿ ಉನ್ನತ ಶಿಕ್ಷಣ ಮುಂದುವರೆಸಲು ಸಾಧ್ಯವಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಣಕಾಸಿನ ನೇರವು ನೀಡುವ ಯೋಜನೆಯಾಗಿದೆ.

ಪ್ರಯೋಜನಗಳು:
ಪಿಎಂ ವಿದ್ಯಾಲಕ್ಷ್ಮೀ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿರವ ವಿದ್ಯಾರ್ಥಿಗಳಿಗೆ ಅವರ ಉನ್ನತ ಶಿಕ್ಷಣವನ್ನು ಮುಂದುವರೆಸಲು 10 ಲಕ್ಷ ರೂ. ವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುವ ಯೋಜನೆಯಾಗಿದೆ.

ಯೋಜನೆಯ ಪ್ರಮುಖ ಹೈಲೈಟ್ಸ್:

  • ಯಾವುದೇ ಗ್ಯಾರಂಟಿ ಬೇಕಿಲ್ಲ: ಈ ಯೋಜನೆಯಡಿ ಸಿಗುವ ಸಾಲಗಳು ಮೇಲಾಧಾರ ರಹಿತ (Collateral free) ಮತ್ತು ಜಾಮೀನು ರಹಿತವಾಗಿವೆ (Guarantor free).
  • ಬಡ್ಡಿ ದರ ಎಷ್ಟು?: ಪ್ರತಿ ಬ್ಯಾಂಕಿನ ಬಡ್ಡಿ ದರಗಳು ‘ಎಕ್ಸ್‌ಟರ್ನಲ್ ಬೆಂಚ್‌ಮಾರ್ಕ್ ಲೆಂಡಿಂಗ್ ರೇಟ್’ (EBLR) + 0.5% ಕ್ಕೆ ಸೀಮಿತವಾಗಿರುತ್ತವೆ.
  • ಕ್ರೆಡಿಟ್ ಗ್ಯಾರಂಟಿ: 7.50 ಲಕ್ಷ ರೂ. ವರೆಗಿನ ಸಾಲಗಳಿಗೆ ಭಾರತ ಸರ್ಕಾರದಿಂದಲೇ ಶೇ. 75 ರಷ್ಟು ಕ್ರೆಡಿಟ್ ಗ್ಯಾರಂಟಿ ನೀಡಲಾಗುತ್ತದೆ.

ಯೋಜನೆಯ ಮುಖ್ಯ ಲಕ್ಷಣಗಳು:

  • ಸರ್ಕಾರ ಪಟ್ಟಿ ಮಾಡಿರುವ 860 ಕ್ಕೂ ಅಧಿಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಒಂದು ಕೋರ್ಸ್ ನಲ್ಲಿ ಅಧ್ಯಯನ ಮಾಡುತ್ತಿರಬೇಕು.
  • ವಿದ್ಯಾರ್ಥಿಯು ಮ್ಯಾನೇಜ್ಮೆಂಟ್ ಕೋಟಾದಲ್ಲಿ ಸೀಟು ಪಡೆದಿದ್ದರೆ PM ವಿದ್ಯಾಲಕ್ಷ್ಮೀ ಸಾಲ ಸಿಗುವುದಿಲ್ಲ.
  • ಈ ಯೋಜನೆಯಡಿ 10 ಲಕ್ಷ ರೂ. ವರೆಗೂ ಸಾಲ ಸಿಗುತ್ತದೆ.
  • ಸಾಲದ ಬಡ್ಡಿ ದರವು ಬ್ಯಾಂಕ್‌ EBLR + ಶೇ. 0.5 ಇರುತ್ತದೆ.

ಬಡ್ಡಿ ಸಹಾಯಧನ (Interest Subsidy) ಯಾರಿಗೆ ಸಿಗುತ್ತೆ? ಕುಟುಂಬದ ವಾರ್ಷಿಕ ಆದಾಯದ ಆಧಾರದ ಮೇಲೆ ಬಡ್ಡಿ ವಿನಾಯಿತಿ ಸಿಗಲಿದೆ:

  • ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ ಒಳಗೆ ಇದ್ದರೆ 3% ಬಡ್ಡಿ ರಿಯಾಯಿತಿ ಸಿಗುತ್ತದೆ.
  • 4.5 ಲಕ್ಷ ದೊಳಗಿನ ವಾರ್ಷಿಕ ಆದಾಯ ಹೊಂದಿರುವ ಕುಟುಂಬದ ವಿದ್ಯಾರ್ಥಿಯು ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ಸಂಪೂರ್ಣ ಬಡ್ಡಿ ವಿನಾಯಿತಿ ಪಡೆಯಬಹುದು

ಅಗತ್ಯ ದಾಖಲೆಗಳು:

  1. ಆಧಾರ್ ಕಾರ್ಡ್
  2. ಪ್ಯಾನ್ ಕಾರ್ಡ್
  3. ಪಾಸ್‌ಪೋರ್ಟ್ ಅಳತೆಯ ಕಲರ್ ಫೋಟೋ
  4. 10 ಮತ್ತು 12ನೇ ತರಗತಿ ಅಂಕಪಟ್ಟಿಗಳು ಹಾಗೂ ಪದವಿ ಪ್ರಮಾಣ ಪತ್ರಗಳು
  5. ಶುಲ್ಕಗಳ ವಿವರವಿರುವ ಪ್ರವೇಶ ಪತ್ರ (Admission Letter)
  6. ಬಡ್ಡಿ ಸಹಾಯಧನ ಪಡೆಯಲು ಅಧಿಕೃತ ಆದಾಯ ಪ್ರಮಾಣ ಪತ್ರ

ಮೊರಾಟೋರಿಯಂ ಅವಧಿ: ಈ ಯೋಜನೆಯಡಿ ಸಾಲ ಮಂಜೂರಾದ ದಿನದಿಂದ ಕೋರ್ಸ್ ಮುಗಿದ ಒಂದು ವರ್ಷದವರೆಗೆ ಮೊರಾಟೋರಿಯಂ ಅವಧಿಯಾಗಿದೆ. ಈ ಅವಧಿಯಲ್ಲಿ ಬಡ್ಡಿ ವಿಧಿಸಲಾಗುತ್ತದೆಯಾದರೂ, ಅದನ್ನು ವಿದ್ಯಾರ್ಥಿಯು ಪಾವತಿಸುವ ಅಗತ್ಯವಿರುವುದಿಲ್ಲ.

ಸಾಲ ಮರುಪಾವತಿ ಅವಧಿ: ಈ‌ ಯೋಜನೆಯ ಫಲಾನುಭವಿಗಳು ಮೊರಾಟೋರಿಯಂ ಅವಧಿ ಮುಗಿದ ನಂತರ 15 ವರ್ಷಗಳವರೆಗೆ ಸಾಲವನ್ನು ಮರುಪಾವತಿ ಮಾಡಬಹುದು.

ಸ್ವಂತ ವಾಹನ ಖರೀದಿಸಲು 3 ಲಕ್ಷ ರೂ. ಸಹಾಯಧನ

ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment