Kisan Tractor Scheme: ಟ್ರ್ಯಾಕ್ಟರ್ ಖರೀದಿಸಲು 50% ಸಬ್ಸಿಡಿ; ಅರ್ಹ ರೈತರು ಅರ್ಜಿ ಸಲ್ಲಿಸಿ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ರೈತರಿಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹಲವಾರು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಅದರಲ್ಲಿ‌ ಕಿಸಾನ್ ಟ್ರ್ಯಾಕ್ಟರ್ ಯೋಜನೆಯು ಒಂದಾಗಿದೆ. ಈ ಯೋಜನೆಗೆ ಎಷ್ಟು ಸಬ್ಸಿಡಿ ದೊರೆಯಲಿದೆ..? ಅರ್ಹತೆಗಳೇನು..? ಹಾಗೂ ಯಾವೇಲ್ಲಾ ದಾಖಲೆಗಳು ಬೇಕಾಗುತ್ತದೆ. ಎಂಬ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಕಿಸಾನ್ ಟ್ರ್ಯಾಕ್ಟರ್ ಯೋಜನೆಯು ರೈತರಿಗೆ ಆಧುನಿಕ ಕೃಷಿಗೆ ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ಯೋಜನೆಯ ಮೂಲಕ, ರೈತರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಮತ್ತು ಕೃಷಿ ಕೆಲಸವನ್ನು ಸುಲಭಗೊಳಿಸಲು ಸರ್ಕಾರವು ಟ್ರ್ಯಾಕ್ಟರ್ ಖರೀದಿಗೆ ಆರ್ಥಿಕ ನೆರವು ನೀಡುತ್ತದೆ.

ಕೃಷಿ ಯಾಂತ್ರೀಕರಣದ ಉಪ-ಮಿಷನ್ (SMAM) ಅಡಿಯಲ್ಲಿ ಕಿಸಾನ್ ಟ್ರ್ಯಾಕ್ಟರ್ ಯೋಜನೆಯನ್ನು ಜಾರಿ ಮಾಡಲಾಗಿದೆ, ಇದು ಉಪ ಯೋಜನೆಯಾಗಿದೆ. SMAM ಯೋಜನೆಯ ಅಡಿಯಲ್ಲಿ ಟ್ರ್ಯಾಕ್ಟರ್ ಮತ್ತು ಇತರ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸರ್ಕಾರವು ರೈತರಿಗೆ ಆರ್ಥಿಕ ನೆರವು ನೀಡುತ್ತದೆ.

ಎಷ್ಟು ಸಹಾಯಧನ ಸಿಗಲಿದೆ..?
ಕಿಸಾನ್ ಟ್ರ್ಯಾಕ್ಟರ್ ಯೋಜನೆಯ ಅಡಿಯಲ್ಲಿ ಟ್ರ್ಯಾಕ್ಟರ್‌ನ ಆನ್-ರೋಡ್ ಬೆಲೆಯ ಮೇಲೆ ಗರಿಷ್ಠ 50% ವರೆಗೆ ಸಬ್ಸಿಡಿಯನ್ನು ಸರ್ಕಾರದಿಂದ ಪಡೆಯಬಹುದು.

ಅರ್ಹತಾ ಮಾನದಂಡಗಳು:

  • ಅರ್ಜಿದಾರರು ಭಾರತದ ನಿವಾಸಿ ರೈತರಾಗಿರಬೇಕು.
  • ರೈತರ ವಾರ್ಷಿಕ ಆದಾಯವು 2 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು.
  • ಅರ್ಜಿದಾರರು ಈ ಹಿಂದೆ ಟ್ರ್ಯಾಕ್ಟರ್ ಸಬ್ಸಿಡಿಯನ್ನು ಪಡೆದಿರಬಾರದು.
  • ಒಂದು ಕುಟುಂಬಕ್ಕೆ ಒಂದು ಬಾರಿ ಟ್ರ್ಯಾಕ್ಟರ್ ಸಬ್ಸಿಡಿ ಮಾತ್ರ ಲಭ್ಯ.
  • ಅರ್ಜಿ‌ ಸಲ್ಲಿಸುವವರು ಮಾನ್ಯವಾದ ಭೂ ದಾಖಲೆಗಳನ್ನು ಅಥವಾ ಕೃಷಿ ಮಾಲೀಕತ್ವದ ಪುರಾವೆಯನ್ನು ಹೊಂದಿರಬೇಕು.

Kisan Tractor Scheme ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್‌ಬುಕ್
  • ಭೂ ಮಾಲೀಕತ್ವದ ಪುರಾವೆ – (ಉದಾಹರಣೆಗೆ: 8-A ಭೂ ದಾಖಲೆ ಅಥವಾ ಪಹಣಿ/RTC)
  • ನಿವಾಸ ಪ್ರಮಾಣಪತ್ರ
  • ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಪೋಟೋ
  • ಅಧಿಕೃತ ಡೀಲರ್‌ನಿಂದ ದರಪಟ್ಟಿ – (ನೀವು ಖರೀದಿಸವ ಟ್ರ್ಯಾಕ್ಟರ್‌ನ ದರಪಟ್ಟಿ)

ಆನ್‌ಲೈನ್ ಅರ್ಜಿ ಸಲ್ಲಿಕೆ: ಕೃಷಿ ಯಾಂತ್ರೀಕರಣ ಮತ್ತು ತಂತ್ರಜ್ಞಾನ ವೆಬ್ ಸೈಟ್ https://agrimachinery.nic.in/ ಪೋರ್ಟಲ್‌ಗೆ ಭೇಟಿ ನೀಡಿ. ಹಾಗೂ ರಾಜ್ಯದ ಕೃಷಿ ಇಲಾಖೆಯ ಪೋರ್ಟಲ್ https://kkisan.karnataka.gov.in/Citizen/ApplicationEntry.aspx?AID=FM ಮೂಲಕವೂ ಅರ್ಜಿ ಸಲ್ಲಿಸಬಹುದು.

ಆಫ್‌ಲೈನ್ ಅರ್ಜಿ ಸಲ್ಲಿಕೆ:
ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಅಥವಾ ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಿ. ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ. ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಮತ್ತು ಅವುಗಳನ್ನು ಉಸ್ತುವಾರಿ ಅಧಿಕಾರಿಗೆ ಸಲ್ಲಿಸಬೇಕು‌.

ಗಂಗಾ ಕಲ್ಯಾಣ ಯೋಜನೆ 2025-26

ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್‌ಲೈನ್‌ ಅರ್ಜಿ ಆಹ್ವಾನ

Mahindra Scholarship 2025: ಮಹೀಂದ್ರಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Telegram Group Join Now
WhatsApp Group Join Now

Leave a Comment