Karnataka Government Holidays 2026: ರಾಜ್ಯದ ಸರ್ಕಾರ 2026 ನೇ ಸಾಲಿನ ಸರ್ಕಾರಿ ರಜಾ ಪಟ್ಟಿ; 20 ಸಾರ್ವತ್ರಿಕ ರಜೆಗಳು, 21 ಪರಿಮಿತ ರಜೆಗಳು ಲಭ್ಯ

Telegram Group Join Now
WhatsApp Group Join Now

ರಾಜ್ಯದ ಸರ್ಕಾರಿ ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಬ್ಯಾಂಕ್ ಉದ್ಯೋಗಿಗಳು ವರ್ಷದ ಆರಂಭದಲ್ಲಿಯೇ ಹೆಚ್ಚು ಕುತೂಹಲದಿಂದ ಕಾಯುವ 2026ನೇ ಸಾಲಿನ ಸರ್ಕಾರಿ ರಜಾ ಪಟ್ಟಿಗೆ (Karnataka Government Holidays 2026) ರಾಜ್ಯ ಸರ್ಕಾರ ಅಧಿಕೃತ ಮುದ್ರೆ ಒತ್ತಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಹೊರಡಿಸಿರುವ ಅಧಿಸೂಚನೆಯ ಪ್ರಕಾರ, 2026ನೇ ಸಾಲಿನಲ್ಲಿ ಒಟ್ಟು 20 ಸಾರ್ವತ್ರಿಕ ರಜೆಗಳು (General Holidays) ಹಾಗೂ 21 ಪರಿಮಿತ ರಜೆಗಳು ಲಭ್ಯವಿವೆ.

ಆದರೆ, ಈ ಬಾರಿಯ ರಜಾ ಪಟ್ಟಿ ಉದ್ಯೋಗಿಗಳಲ್ಲಿ ಸಣ್ಣದೊಂದು ನಿರಾಸೆ ಮೂಡಿಸಿದೆ. ಕಾರಣ, ಕನ್ನಡಿಗರ ಹೆಮ್ಮೆಯ ಹಬ್ಬವಾದ ಕನ್ನಡ ರಾಜ್ಯೋತ್ಸವ ಸೇರಿದಂತೆ 5 ಪ್ರಮುಖ ರಜೆಗಳು ಭಾನುವಾರ ಅಥವಾ ಎರಡನೇ ಶನಿವಾರದಂದು ಬಂದಿರುವುದರಿಂದ ಪ್ರತ್ಯೇಕ ರಜೆ ಕೈತಪ್ಪಿದೆ.

20 ಸಾರ್ವತ್ರಿಕ ರಜಾ ದಿನಗಳ ಪಟ್ಟಿ:

ಈ ದಿನಗಳಂದು ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ಬ್ಯಾಂಕ್‌ಗಳು ಮುಚ್ಚಿರುತ್ತವೆ.

  • ಜನವರಿ 15 (ಗುರುವಾರ): ಮಕರ ಸಂಕ್ರಾಂತಿ
  • ಜನವರಿ 26 (ಸೋಮವಾರ): ಗಣರಾಜ್ಯೋತ್ಸವ
  • ಮಾರ್ಚ್ 19 (ಗುರುವಾರ): ಯುಗಾದಿ ಹಬ್ಬ
  • ಮಾರ್ಚ್ 21 (ಶನಿವಾರ): ರಂಜಾನ್ (ಖುತುಬ್-ಎ-ರಂಜಾನ್)
  • ಮಾರ್ಚ್ 31 (ಮಂಗಳವಾರ): ಮಹಾವೀರ ಜಯಂತಿ
  • ಏಪ್ರಿಲ್ 03 (ಶುಕ್ರವಾರ): ಗುಡ್ ಫ್ರೈಡೆ
  • ಏಪ್ರಿಲ್ 14 (ಮಂಗಳವಾರ): ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ
  • ಏಪ್ರಿಲ್ 20 (ಸೋಮವಾರ): ಬಸವ ಜಯಂತಿ / ಅಕ್ಷಯ ತೃತೀಯ
  • ಮೇ 01 (ಶುಕ್ರವಾರ): ಕಾರ್ಮಿಕ ದಿನಾಚರಣೆ (ಲಾಂಗ್ ವೀಕೆಂಡ್ ಲಭ್ಯ)
  • ಮೇ 28 (ಗುರುವಾರ): ಬಕ್ರೀದ್
  • ಜೂನ್ 26 (ಶುಕ್ರವಾರ): ಮೊಹರಂ ಕಡೆ ದಿನ
  • ಆಗಸ್ಟ್ 15 (ಶನಿವಾರ): ಸ್ವಾತಂತ್ರ್ಯ ದಿನಾಚರಣೆ
  • ಆಗಸ್ಟ್ 26 (ಬುಧವಾರ): ಈದ್-ಮಿಲಾದ್
  • ಸೆಪ್ಟೆಂಬರ್ 14 (ಸೋಮವಾರ): ವರಸಿದ್ಧಿ ವಿನಾಯಕ ವ್ರತ
  • ಅಕ್ಟೋಬರ್ 02 (ಶುಕ್ರವಾರ): ಗಾಂಧಿ ಜಯಂತಿ (ಲಾಂಗ್ ವೀಕೆಂಡ್ ಲಭ್ಯ)
  • ಅಕ್ಟೋಬರ್ 20 (ಮಂಗಳವಾರ): ಮಹಾನವಮಿ / ಆಯುಧಪೂಜೆ
  • ಅಕ್ಟೋಬರ್ 21 (ಬುಧವಾರ): ವಿಜಯದಶಮಿ
  • ನವೆಂಬರ್ 10 (ಮಂಗಳವಾರ): ಬಲಿಪಾಡ್ಯಮಿ / ದೀಪಾವಳಿ
  • ನವೆಂಬರ್ 27 (ಶುಕ್ರವಾರ): ಕನಕದಾಸ ಜಯಂತಿ
  • ಡಿಸೆಂಬರ್ 25 (ಶುಕ್ರವಾರ): ಕ್ರಿಸ್‌ಮಸ್

ರಜೆಯ ಮಜಾ ಕಸಿದ ಭಾನುವಾರಗಳು:

ಈ ಕೆಳಗಿನ ಪ್ರಮುಖ ಹಬ್ಬಗಳು ಭಾನುವಾರ ಅಥವಾ ಎರಡನೇ ಶನಿವಾರ ಬಂದಿರುವುದರಿಂದ, ಇವುಗಳನ್ನು ಸಾರ್ವತ್ರಿಕ ರಜಾ ಪಟ್ಟಿಯಲ್ಲಿ ಸೇರಿಸಿಲ್ಲ:

  1. ಮಹಾ ಶಿವರಾತ್ರಿ: ಫೆಬ್ರವರಿ 15 (ಭಾನುವಾರ)
  2. ಮಹಾಲಯ ಅಮಾವಾಸ್ಯೆ: ಅಕ್ಟೋಬರ್ 10 (ಎರಡನೇ ಶನಿವಾರ)
  3. ಮಹರ್ಷಿ ವಾಲ್ಮೀಕಿ ಜಯಂತಿ: ಅಕ್ಟೋಬರ್ 25 (ಭಾನುವಾರ)
  4. ಕನ್ನಡ ರಾಜ್ಯೋತ್ಸವ: ನವೆಂಬರ್ 01 (ಭಾನುವಾರ)
  5. ನರಕ ಚತುರ್ದಶಿ: ನವೆಂಬರ್ 08 (ಭಾನುವಾರ)

21 ಪರಿಮಿತ ರಜಾ ದಿನಗಳ ಪಟ್ಟಿ:

ಸರ್ಕಾರಿ ನೌಕರರು ಈ ಪಟ್ಟಿಯಲ್ಲಿರುವ ಯಾವುದೇ 2 ರಜೆಗಳನ್ನು ಪೂರ್ವಾನುಮತಿ ಪಡೆದು ಬಳಸಿಕೊಳ್ಳಬಹುದು.

  • ಜ. 01 (ಗುರುವಾರ): ಹೊಸ ವರ್ಷಾಚರಣೆ
  • ಜ. 27 (ಮಂಗಳವಾರ): ಮಧ್ವ ನವಮಿ
  • ಫೆ. 04 (ಬುಧವಾರ): ಶಬ್-ಎ-ಬರಾತ್
  • ಮಾ. 02 (ಸೋಮವಾರ): ಹೋಳಿ ಹಬ್ಬ
  • ಮಾ. 17 (ಮಂಗಳವಾರ): ಶಬ್-ಎ-ಖದರ್
  • ಮಾ. 20 (ಶುಕ್ರವಾರ): ಜಮತ್-ಉಲ್-ವಿದಾ
  • ಮಾ. 23 (ಸೋಮವಾರ): ದೇವರ ದಾಸಿಮಯ್ಯ ಜಯಂತಿ
  • ಮಾ. 27 (ಶುಕ್ರವಾರ): ಶ್ರೀ ರಾಮನವಮಿ
  • ಏ. 04 (ಶನಿವಾರ): ಹೋಲಿ ಸ್ಯಾಟರ್ಡೆ
  • ಏ. 21 (ಮಂಗಳವಾರ): ಶ್ರೀ ಶಂಕರಾಚಾರ್ಯ ಜಯಂತಿ
  • ಏ. 22 (ಬುಧವಾರ): ಶ್ರೀ ರಾಮಾನುಜಾಚಾರ್ಯ ಜಯಂತಿ
  • ಆ. 21 (ಶುಕ್ರವಾರ): ವರಮಹಾಲಕ್ಷ್ಮಿ ವ್ರತ
  • ಆ. 27 (ಗುರುವಾರ): ಯಜುರ್ ಉಪಕರ್ಮ (ಗಮನಿಸಿ: ಋಗ್ ಉಪಕರ್ಮ ಆ.26 ರಂದು ಈದ್ ಮಿಲಾದ್ ರಜೆಯಲ್ಲಿ ಬರುತ್ತದೆ)
  • ಆ. 28 (ಶುಕ್ರವಾರ): ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ / ರಕ್ಷಾ ಬಂಧನ
  • ಸೆ. 04 (ಶುಕ್ರವಾರ): ಶ್ರೀ ಕೃಷ್ಣ ಜನ್ಮಾಷ್ಟಮಿ
  • ಸೆ. 08 (ಮಂಗಳವಾರ): ಕನ್ಯಾ ಮರಿಯಮ್ಮ ಜಯಂತಿ
  • ಸೆ. 17 (ಗುರುವಾರ): ವಿಶ್ವಕರ್ಮ ಜಯಂತಿ
  • ಸೆ. 25 (ಶುಕ್ರವಾರ): ಅನಂತಪದ್ಮನಾಭ ವ್ರತ
  • ನ. 24 (ಮಂಗಳವಾರ): ಗುರು ನಾನಕ್ ಜಯಂತಿ
  • ನ. 26 (ಗುರುವಾರ): ಹುತ್ತರಿ ಹಬ್ಬ
  • ಡಿ. 24 (ಗುರುವಾರ): ಕ್ರಿಸ್‌ಮಸ್ ಈವ್

Udyogini Scheme: 1.5 ಲಕ್ಷ ರೂ. ಸಹಾಯಧನಕ್ಕೆ ಆನ್‌ಲೈನ್‌ ಅರ್ಜಿ ಆಹ್ವಾನ

Cibil Score New Rules: ಸಿಬಿಲ್ ಸ್ಕೋರ್ ಇಲ್ಲವೆಂದು ಸಾಲ ಸಿಗುತ್ತಿಲ್ಲವೇ? ಚಿಂತೆ ಬಿಡಿ

Telegram Group Join Now
WhatsApp Group Join Now

Leave a Comment