ರೈಲಿನಲ್ಲಿ ಪ್ರಯಾಣಿಸಲು ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡುವ ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ನಿಮಗೊಂದು ಮಹತ್ವದ ಸುದ್ದಿಯಿದೆ. ಭಾರತೀಯ ರೈಲ್ವೆ ಇಲಾಖೆಯು ಆನ್ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ದಳ್ಳಾಳಿಗಳ ಹಾವಳಿಗೆ ಕಡಿವಾಣ ಹಾಕಲು ಕಠಿಣ ನಿಯಮವೊಂದನ್ನು ಜಾರಿಗೆ ತಂದಿದೆ.
ಇನ್ಮುಂದೆ ಐಆರ್ಸಿಟಿಸಿ (IRCTC) ವೆಬ್ಸೈಟ್ ಅಥವಾ ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡುವವರು ಕಡ್ಡಾಯವಾಗಿ ತಮ್ಮ ಖಾತೆಗೆ ‘ಆಧಾರ್ ಲಿಂಕ್’ (IRCTC Aadhaar Link) ಮಾಡಿರಲೇಬೇಕು. ಇಲ್ಲದಿದ್ದರೆ ನಿಮಗೆ ಪ್ರಮುಖ ಸಮಯದಲ್ಲಿ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುವುದಿಲ್ಲ.
ಏನಿದು ಹೊಸ ನಿಯಮ? ಜನರಿಗೇನು ಲಾಭ?
ಹಿಂದೆ ಆಧಾರ್ ಲಿಂಕ್ ಕಡ್ಡಾಯವಾಗಿರದ ಕಾರಣ, ಏಜೆಂಟ್ಗಳು ಮತ್ತು ಮಧ್ಯವರ್ತಿಗಳು ನಕಲಿ ಐಡಿಗಳ ಮೂಲಕ ಟಿಕೆಟ್ಗಳನ್ನು ಬ್ಲಾಕ್ ಮಾಡುತ್ತಿದ್ದರು. ಇದರಿಂದ ಸಾಮಾನ್ಯ ಜನರಿಗೆ ಟಿಕೆಟ್ ಸಿಗುತ್ತಿರಲಿಲ್ಲ. ಇದನ್ನು ತಡೆಯಲು ಈಗ ‘ಆಧಾರ್ ಲಿಂಕ್’ ಅಸ್ತ್ರ ಪ್ರಯೋಗಿಸಲಾಗಿದೆ.
ಸಮಯ ವಿಸ್ತರಣೆ (Booking Window): ಹೊಸ ನಿಯಮದ ಪ್ರಕಾರ, ಆಧಾರ್ ಲಿಂಕ್ ಮಾಡಿದ ಬಳಕೆದಾರರಿಗೆ ಟಿಕೆಟ್ ಬುಕಿಂಗ್ ಮಾಡಲು ಹೆಚ್ಚಿನ ಸಮಯಾವಕಾಶ ನೀಡಲಾಗಿದೆ.
- ಬೆಳಗ್ಗೆ 80 ರಿಂದ ಸಂಜೆ 4 ರವರೆಗೆ: ಈ ಸಮಯದಲ್ಲಿ ಕೇವಲ ಆಧಾರ್ ಲಿಂಕ್ ಮಾಡಿದ ಬಳಕೆದಾರರು ಮಾತ್ರ ಟಿಕೆಟ್ ಬುಕ್ ಮಾಡಲು ಅವಕಾಶವಿರುತ್ತದೆ.
- ಸಂಜೆ 4 ರ ನಂತರ: ಯಾರು ಆಧಾರ್ ಲಿಂಕ್ ಮಾಡಿರುವುದಿಲ್ಲವೋ, ಅವರು ಸಂಜೆ 4 ಗಂಟೆಯ ನಂತರವಷ್ಟೇ ಟಿಕೆಟ್ ಬುಕ್ ಮಾಡಲು ಸಾಧ್ಯ. ಅಷ್ಟರೊಳಗೆ ಕನ್ಫರ್ಮ್ ಸೀಟುಗಳು ಖಾಲಿಯಾಗುವ ಸಾಧ್ಯತೆಯೇ ಹೆಚ್ಚು!
ಮುಂದಿನ ದಿನಗಳಲ್ಲಿ ಆಧಾರ್ ಲಿಂಕ್ ಮಾಡಿದವರಿಗೆ ರಾತ್ರಿ 12 ಗಂಟೆಯವರೆಗೂ ಬುಕಿಂಗ್ ಅವಕಾಶ ನೀಡಲು ಇಲಾಖೆ ಚಿಂತಿಸಿದೆ.
ಬುಕಿಂಗ್ ನಿಯಮಗಳಲ್ಲಿನ 3 ಹಂತದ ಬದಲಾವಣೆಗಳೇನು?
- ಹಂತ-1 (ಹಳೇ ನಿಯಮ): ಆಧಾರ್ ಲಿಂಕ್ ಮಾಡಿದವರಿಗೆ ಬೆಳಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ಮಾತ್ರ ಅವಕಾಶವಿತ್ತು.
- ಹಂತ-2 (ಪ್ರಸ್ತುತ ನಿಯಮ): ಈಗ ಈ ಸಮಯವನ್ನು ಸಂಜೆ 4 ಗಂಟೆಯವರೆಗೆ ವಿಸ್ತರಿಸಲಾಗಿದೆ. ಅಂದರೆ ಆಧಾರ್ ಲಿಂಕ್ ಮಾಡಿದವರು ನಿರಾತಂಕವಾಗಿ ಟಿಕೆಟ್ ಬುಕ್ ಮಾಡಬಹುದು.
- ಹಂತ-3 (ಮುಂದಿನ ಯೋಜನೆ): ಮುಂದಿನ ದಿನಗಳಲ್ಲಿ ಮಧ್ಯರಾತ್ರಿ 12 ಗಂಟೆಯವರೆಗೂ ಈ ಆದ್ಯತೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ.
60 ದಿನಗಳ ಮುಂಗಡ ಬುಕಿಂಗ್ (ARP):
ಈ ಹಿಂದೆ ರೈಲು ಹೊರಡುವ 120 ದಿನಗಳ ಮೊದಲು ಟಿಕೆಟ್ ಬುಕ್ ಮಾಡಬಹುದಿತ್ತು. ಆದರೆ 2024ರ ನವೆಂಬರ್ ನಿಂದ ಈ ಅವಧಿಯನ್ನು 60 ದಿನಗಳಿಗೆ ಇಳಿಸಲಾಗಿದೆ. ಅಂದರೆ ಪ್ರಯಾಣಕ್ಕೆ ನಿಖರವಾಗಿ 2 ತಿಂಗಳು ಇರುವಾಗ ಮಾತ್ರ ಬುಕಿಂಗ್ ಓಪನ್ ಆಗುತ್ತದೆ. ಈ ಕಡಿಮೆ ಅವಧಿಯಲ್ಲಿ ಸಾಮಾನ್ಯ ಜನರಿಗೆ ಟಿಕೆಟ್ ಸಿಗಲಿ ಎಂಬ ಉದ್ದೇಶದಿಂದ ಆಧಾರ್ ಲಿಂಕ್ ಕಡ್ಡಾಯಗೊಳಿಸಲಾಗಿದೆ.
ಕೌಂಟರ್ ಟಿಕೆಟ್ಗಳ ಕಥೆಯೇನು?
ಈ ಹೊಸ ‘ಆಧಾರ್ ಲಿಂಕ್’ ನಿಯಮವು ಆನ್ಲೈನ್ ಬುಕಿಂಗ್ಗೆ ಮಾತ್ರ ಸೀಮಿತವಾಗಿದ್ದು, ರೈಲ್ವೆ ಸ್ಟೇಷನ್ ಕೌಂಟರ್ಗಳಲ್ಲಿ ಪಡೆಯುವ ಟಿಕೆಟ್ಗಳಿಗೆ ಅನ್ವಯಿಸುವುದಿಲ್ಲ.
- ಆದರೆ ಗಮನಿಸಿ: ಕೌಂಟರ್ಗಳಲ್ಲಿ ಟಿಕೆಟ್ ಪಡೆಯುವಾಗಲೂ OTP ಪರಿಶೀಲನೆ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ಗೆ ಲಿಂಕ್ ಆಗಿದ್ದರೆ ಬುಕಿಂಗ್ ಸುಲಭವಾಗುತ್ತದೆ.
IRCTC Booking Aadhaar Link ಮಾಡುವುದು ಹೇಗೆ?
ನೀವು IRCTC ಆ್ಯಪ್ ಅಥವಾ ವೆಬ್ಸೈಟ್ನಲ್ಲಿ ಈ ಕೆಳಗಿನಂತೆ ಸುಲಭವಾಗಿ ಲಿಂಕ್ ಮಾಡಬಹುದು:
- IRCTC ಖಾತೆಗೆ ಲಾಗಿನ್ ಆಗಿ.
- ‘My Profile’ ವಿಭಾಗಕ್ಕೆ ಹೋಗಿ.
- ‘Aadhaar KYC’ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಿಮ್ಮ ಆಧಾರ್ ವಿವರಗಳನ್ನು ನಮೂದಿಸಿ, ಒಟಿಪಿ ಮೂಲಕ ದೃಢೀಕರಿಸಿ.
ಯಾವುದೇ ಸಮಸ್ಯೆಗಳಿದ್ದಲ್ಲಿ ರೈಲ್ವೆ ಸಹಾಯವಾಣಿ 139 ಕ್ಕೆ ಕರೆ ಮಾಡಬಹುದು.
ಇತರೆ ಮಾಹಿತಿಗಳನ್ನು ಓದಿ:
Subsidy Loan Scheme: ಬಡ್ಡಿ ಸಹಾಯಧನ ಯೋಜನೆ; ನೀವು ಪಡೆದ ಸಾಲಕ್ಕೆ ಸರ್ಕಾರದಿಂದ ಸಬ್ಸಿಡಿ
Udyogini Scheme: 1.5 ಲಕ್ಷ ರೂ. ಸಹಾಯಧನಕ್ಕೆ ಆನ್ಲೈನ್ ಅರ್ಜಿ ಆಹ್ವಾನ