Home Loan Interest Rate: ಸ್ವಂತ ಮನೆ ಕಟ್ಟೋ ಪ್ಲಾನ್ ಇದ್ಯಾ? ಅತಿ ಕಡಿಮೆ ಬಡ್ಡಿಗೆ ಹೋಮ್ ಲೋನ್ ನೀಡುವ ಟಾಪ್ ಬ್ಯಾಂಕ್‌ಗಳು ಇವು..!

Telegram Group Join Now
WhatsApp Group Join Now

ಪ್ರತಿಯೊಬ್ಬರಿಗೂ ಒಂದು ಪುಟ್ಟ ಗೂಡು, ಅಂದರೆ ಸ್ವಂತ ಮನೆ ಇರಬೇಕು ಎಂಬ ಆಸೆ ಇರುವುದು ಸಹಜ. ಆದರೆ ಇಂದಿನ ದುಬಾರಿ ದುನಿಯಾದಲ್ಲಿ ಕೈಯಲ್ಲಿರುವ ಹಣವೊಂದೇ ಮನೆ ಕಟ್ಟಲು ಸಾಲದು. ಇಂತಹ ಸಮಯದಲ್ಲಿ ನೆರವಿಗೆ ಬರುವುದೇ ‘ಗೃಹ ಸಾಲ’. ನೀವೂ ಕೂಡ ಮನೆ ಕಟ್ಟಲು ಅಥವಾ ಕೊಳ್ಳಲು ಯೋಚಿಸುತ್ತಿದ್ದರೆ, ಬ್ಯಾಂಕ್‌ಗಳ ಬಡ್ಡಿ ದರ, ಪ್ರೊಸೆಸಿಂಗ್ ಶುಲ್ಕ ಮತ್ತು ಯಾರೆಲ್ಲಾ ಸಾಲ ಪಡೆಯಲು ಅರ್ಹರು ಎಂಬ ಮಾಹಿತಿ ಇಲ್ಲಿದೆ.

ಏನಿದು ಗೃಹ ಸಾಲ?

ಸರಳವಾಗಿ ಹೇಳುವುದಾದರೆ, ನೀವು ಹೊಸ ಮನೆ ಕೊಳ್ಳಲು, ಜಾಗ ತೆಗೆದುಕೊಂಡು ಮನೆ ಕಟ್ಟಲು ಅಥವಾ ಈಗಿರುವ ಮನೆಯನ್ನು ರಿಪೇರಿ ಮಾಡಲು/ದೊಡ್ಡದು ಮಾಡಲು ಬ್ಯಾಂಕುಗಳು ನೀಡುವ ಹಣಕಾಸಿನ ನೆರವೇ ಗೃಹ ಸಾಲ.

ಇಲ್ಲಿ ನೀವು ಕೊಳ್ಳುವ ಮನೆಯೇ ಬ್ಯಾಂಕಿಗೆ ಆಧಾರವಾಗಿರುತ್ತದೆ. ಅಂದರೆ, ನೀವು ಸಾಲ ತೀರಿಸುವವರೆಗೂ ಆ ಮನೆಯ ಪತ್ರಗಳು ಬ್ಯಾಂಕ್ ಬಳಿ ಭದ್ರವಾಗಿರುತ್ತವೆ. ಒಂದು ವೇಳೆ ಸಾಲಗಾರ ಹಣ ಮರುಪಾವತಿಸಲು ವಿಫಲನಾದರೆ, ಕಾನೂನಿನ ಪ್ರಕಾರ ಆಸ್ತಿಯನ್ನು ವಶಪಡಿಸಿಕೊಳ್ಳುವ ಹಕ್ಕು ಬ್ಯಾಂಕಿಗೆ ಇರುತ್ತದೆ.

ಬಡ್ಡಿ ದರ ಎಷ್ಟಿರುತ್ತದೆ?

ಎಲ್ಲರಿಗೂ ಒಂದೇ ರೀತಿಯ ಬಡ್ಡಿ ದರ ಇರುವುದಿಲ್ಲ. ನಿಮ್ಮ ಕ್ರೆಡಿಟ್ ಸ್ಕೋರ್ (CIBIL Score), ನಿಮ್ಮ ತಿಂಗಳ ಸಂಬಳ, ನೀವು ಮಾಡುವ ಕೆಲಸ ಮತ್ತು ಸಾಲದ ಮೊತ್ತದ ಮೇಲೆ ಬಡ್ಡಿ ದರ ನಿರ್ಧಾರವಾಗುತ್ತದೆ.

Home Loan Interest Rate: ಪ್ರಮುಖ ಬ್ಯಾಂಕ್‌ಗಳ ಬಡ್ಡಿ ದರ ಪಟ್ಟಿ:

ವಿವಿಧ ಬ್ಯಾಂಕ್‌ಗಳು ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳು 30 ಲಕ್ಷ ರೂ.ವರೆಗಿನ ಸಾಲಕ್ಕೆ ನೀಡುತ್ತಿರುವ ಆರಂಭಿಕ ಬಡ್ಡಿ ದರಗಳು ಹೀಗಿವೆ:

ಬ್ಯಾಂಕ್ ಹೆಸರುಬಡ್ಡಿ ದರ (ವರ್ಷಕ್ಕೆ)
ಇಂಡಿಯನ್ ಬ್ಯಾಂಕ್7.40% ರಿಂದ
ಕೆನರಾ ಬ್ಯಾಂಕ್7.40% ರಿಂದ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)7.50% ರಿಂದ
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)7.50% ರಿಂದ
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್7.55% ರಿಂದ
ಐಡಿಬಿಐ (IDBI) ಬ್ಯಾಂಕ್7.55% ರಿಂದ
ಹೆಚ್‌ಡಿಎಫ್‌ಸಿ (HDFC) ಬ್ಯಾಂಕ್7.90% ರಿಂದ
ಕೋಟಕ್ ಮಹೀಂದ್ರಾ ಬ್ಯಾಂಕ್7.99% ರಿಂದ
ಆರ್‌ಬಿಎಲ್ (RBL) ಬ್ಯಾಂಕ್8.20% ರಿಂದ
ಆಕ್ಸಿಸ್ (Axis) ಬ್ಯಾಂಕ್8.30% ರಿಂದ
ಐಸಿಐಸಿಐ (ICICI) ಬ್ಯಾಂಕ್8.75% ರಿಂದ
ಫೆಡರಲ್ ಬ್ಯಾಂಕ್8.75% ರಿಂದ
ಐಡಿಎಫ್‌ಸಿ (IDFC) ಫಸ್ಟ್ ಬ್ಯಾಂಕ್8.85% ರಿಂದ

2. ಗೃಹ ಸಾಲ ನೀಡು ಹಣಕಾಸು ಸಂಸ್ಥೆಗಳು (NBFCs / HFCs):

ಸಂಸ್ಥೆಯ ಹೆಸರುಬಡ್ಡಿ ದರ (ವರ್ಷಕ್ಕೆ)
ಬಜಾಜ್ ಹೌಸಿಂಗ್ ಫೈನೆನ್ಸ್7.45% ರಿಂದ
ಟಾಟಾ ಕ್ಯಾಪಿಟಲ್ ಹೌಸಿಂಗ್7.75% ರಿಂದ
ಗೋದ್ರೇಜ್ ಹೌಸಿಂಗ್ ಫೈನಾನ್ಸ್7.75% ರಿಂದ
ಹೋಮ್ ಫಸ್ಟ್ ಫೈನಾನ್ಸ್8.00% ರಿಂದ
ಜಿಯೋ ಹೌಸಿಂಗ್ ಫೈನಾನ್ಸ್8.20% ರಿಂದ
ಪಿಎನ್‌ಬಿ (PNB) ಹೌಸಿಂಗ್ ಫೈನಾನ್ಸ್8.25% ರಿಂದ
ಎಲ್ & ಟಿ (L&T) ಫೈನಾನ್ಸ್8.70% ರಿಂದ
ಸಮ್ಮಾನ್ ಕ್ಯಾಪಿಟಲ್ (ಹಿಂದಿನ ಇಂಡಿಯಾಬುಲ್ಸ್)8.75% ರಿಂದ

(ಗಮನಿಸಿ: ಈ ಪಟ್ಟಿಯಲ್ಲಿನ Home Loan ಬಡ್ಡಿ ದರಗಳು ಆರಂಭಿಕ ದರಗಳಾಗಿದ್ದು, ನಿಮ್ಮ ಅರ್ಹತೆ, ಕ್ರೆಡಿಟ್ ಸ್ಕೋರ್ (CIBIL Score) ಮತ್ತು ಇತರೆ ಅಂಶಗಳ ಮೇಲೆ ಬದಲಾಗಬಹುದು.)

ಓದುಗರಿಗೆ ಕಿವಿಮಾತು:

“ಈ ಪಟ್ಟಿಯಲ್ಲಿರುವ ಬಡ್ಡಿ ದರಗಳು 9% ಕ್ಕಿಂತ ಕಡಿಮೆ ಇವೆಯಾದರೂ, ಇವು ‘ಆರಂಭಿಕ ದರಗಳು’ ಆಗಿವೆ. ನಿಮ್ಮ ಸಿಬಿಲ್ ಸ್ಕೋರ್ (CIBIL Score) 750ಕ್ಕಿಂತ ಕಡಿಮೆ ಇದ್ದರೆ, ಬ್ಯಾಂಕ್‌ಗಳು 9% ಕ್ಕಿಂತ ಹೆಚ್ಚು ಬಡ್ಡಿ ವಿಧಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಅರ್ಜಿ ಸಲ್ಲಿಸುವ ಮುನ್ನ ಪ್ರಸ್ತುತ ದರವನ್ನು ಖಚಿತಪಡಿಸಿಕೊಳ್ಳಿ.”

ಇಲ್ಲಿ ನೀಡಲಾಗಿರುವ ಬ್ಯಾಂಕ್‌ಗಳ ಪಟ್ಟಿಯನ್ನು ಹೊರತುಪಡಿಸಿ ಇನ್ನೂ ಕೆಲವು ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರಕ್ಕೆ ‘ಗೃಹ ಸಾಲ’ ನೀಡುತ್ತವೆ. ನೀವೊಮ್ಮೆ ಬ್ಯಾಂಕ್‌ ಭೇಟಿ ನೀಡಿ ವಿಚಾರಿಸಬಹುದು.

ನೀವು ಖಾತೆ ಹೊಂದಿರುವ ಬ್ಯಾಂಕ್‌ ಜೊತೆಗೆ ನಿಮ್ಮ ವ್ಯಾವಹಾರ ಮತ್ತು ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಅಧಿಕಾರಿಗಳೊಂದಿಗೆ ಚರ್ಚಿಸಿದರೆ ಅವರು ಬಡ್ಡಿ ದರ, ಪ್ರೊಸೆಸಿಂಗ್ ಶುಲ್ಕ ಕಡಿಮೆ ಮಾಡಬಹುದು.

ಸಾಲ ಪಡೆಯಲು ಇರಬೇಕಾದ ಅರ್ಹತೆಗಳೇನು?

  • ವಯಸ್ಸು: ಕನಿಷ್ಠ 18 ವರ್ಷ ತುಂಬಿರಬೇಕು (ಕೆಲವು ಬ್ಯಾಂಕ್‌ಗಳಲ್ಲಿ 21 ವರ್ಷ). ಸಾಲ ತೀರುವ ಹೊತ್ತಿಗೆ ಗರಿಷ್ಠ 70 ವರ್ಷ ಮೀರಬಾರದು.
  • ಕ್ರೆಡಿಟ್ ಸ್ಕೋರ್: ನಿಮ್ಮ ಸಿಬಿಲ್ ಸ್ಕೋರ್ 730 ಅಥವಾ ಅದಕ್ಕಿಂತ ಹೆಚ್ಚು ಇದ್ದರೆ ಕಡಿಮೆ ಬಡ್ಡಿಗೆ ಸಾಲ ಸಿಗುವ ಸಾಧ್ಯತೆ ಹೆಚ್ಚು.
  • ಆದಾಯ: ತಿಂಗಳಿಗೆ ಕನಿಷ್ಠ 25,000 ರೂ. ಆದಾಯವಿರಬೇಕು (ಇದು ಸ್ಥಳ ಮತ್ತು ಬ್ಯಾಂಕ್ ಮೇಲೆ ಬದಲಾಗುತ್ತದೆ).
  • ಕೆಲಸದ ಅನುಭವ: ಸಂಬಳ ಪಡೆಯುವವರಾದರೆ ಕನಿಷ್ಠ 2 ವರ್ಷ ಕೆಲಸದ ಅನುಭವ, ಸ್ವಂತ ಬಿಸಿನೆಸ್ ಮಾಡುವವರಾದರೆ 3 ವರ್ಷದ ಆದಾಯ ತೆರಿಗೆ (ITR) ದಾಖಲೆ ಇರಬೇಕು.

ಕೇವಲ ಬಡ್ಡಿ ದರವಷ್ಟೇ ಅಲ್ಲ, ಈ ಶುಲ್ಕಗಳ ಬಗ್ಗೆಯೂ ಗಮನವಿರಲಿ. ಗೃಹ ಸಾಲ ತೆಗೆದುಕೊಳ್ಳುವಾಗ ಬಡ್ಡಿ ದರದ ಜೊತೆಗೆ ಇತರ ಖರ್ಚುಗಳನ್ನು ನೋಡುವುದು ಮುಖ್ಯ.

  1. ಪ್ರೊಸೆಸಿಂಗ್ ಫೀಸ್: ಸಾಲದ ಮೊತ್ತದ 1% ರಿಂದ 2% ರಷ್ಟು ಹಣವನ್ನು ಪ್ರೊಸೆಸಿಂಗ್ ಶುಲ್ಕವಾಗಿ ಬ್ಯಾಂಕ್‌ಗಳು ಪಡೆಯುತ್ತವೆ.
  2. ಪ್ರೀ-ಪೇಮೆಂಟ್ ಚಾರ್ಜಸ್: ಫ್ಲೋಟಿಂಗ್ ಬಡ್ಡಿ ದರವಾಗಿದ್ದರೆ ಸಾಮಾನ್ಯವಾಗಿ ಯಾವುದೇ ದಂಡ ಇರುವುದಿಲ್ಲ. ಆದರೆ ಸ್ಥಿರ (Fixed) ಬಡ್ಡಿ ದರವಾಗಿದ್ದರೆ ಬಾಕಿ ಮೊತ್ತದ ಮೇಲೆ 2-4% ದಂಡ ವಿಧಿಸಬಹುದು.
  3. ಇತರೆ: ಇಎಂಐ (EMI) ಬೌನ್ಸ್ ಆದರೆ ಅಥವಾ ತಡವಾಗಿ ಕಟ್ಟಿದರೆ ಅದಕ್ಕೆ ಪ್ರತ್ಯೇಕ ದಂಡವಿರುತ್ತದೆ.

Home Loan EMI Calculator:

ಗೃಹ ಸಾಲ ಪಡೆಯಲು ಅರ್ಜಿ ಹಾಕುವ ಮುನ್ನ ಈ ಕೇಳಗೆ ನೀಡಲಾಗಿರುವ ‘ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್’ ಬಳಸಿ. ತಿಂಗಳಿಗೆ ಎಷ್ಟು ಕಂತು ಬರುತ್ತದೆ ಮತ್ತು ಅದನ್ನು ಕಟ್ಟಲು ನಿಮಗೆ ಸಾಧ್ಯವಿದೆಯೇ ಎಂದು ಖಚಿತಪಡಿಸಿಕೊಂಡು ಮುಂದುವರಿಯಿರಿ.

Home Loan EMI Calculator
Monthly EMI
₹ 0
Principal Amount: ₹ 0
Total Interest: ₹ 0
Total Payable: ₹ 0

ಸ್ವಂತ ವಾಹನ ಖರೀದಿಸಲು 3 ಲಕ್ಷ ರೂ. ಸಹಾಯಧನ

ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್‌ಲೈನ್‌ ಅರ್ಜಿ ಆಹ್ವಾನ

ಗಂಗಾ ಕಲ್ಯಾಣ ಯೋಜನೆ 2025-26

Telegram Group Join Now
WhatsApp Group Join Now

Leave a Comment