ಹೊಸ ವರ್ಷದ ಸಂಭ್ರಮದ ಹೊತ್ತಲ್ಲೇ ರಾಜ್ಯದ ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿಯೊಂದು ಸಿಕ್ಕಿದೆ. ಬಹುದಿನಗಳಿಂದ ‘ಗೃಹಲಕ್ಷ್ಮಿ ಯೋಜನೆ’ಯ (GruhaLakshmi Scheme) ಹಣಕ್ಕಾಗಿ ಕಾಯುತ್ತಿದ್ದ ಯಜಮಾನಿಯರ ಮೊಗದಲ್ಲಿ ಈಗ ಮಂದಹಾಸ ಮೂಡಿದೆ. ಯೋಜನೆಯ 24ನೇ ಕಂತಿನ 2,000 ರೂಪಾಯಿ ಹಣವು ಬಿಡುಗಡೆಯಾಗಿದ್ದು, ಈಗಾಗಲೇ ಫಲಾನುಭವಿಗಳ ಖಾತೆ ಸೇರಲಾರಂಭಿಸಿದೆ.
ಬೆಳಗಾವಿ ಜಿಲ್ಲೆಯ ಹಲವು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾದ ಮೆಸೇಜ್ ಬಂದಿದ್ದು, ಹೊಸ ವರ್ಷದ ಆಚರಣೆಗೆ ಸರ್ಕಾರ ಬಂಪರ್ ಉಡುಗೊರೆ ನೀಡಿದಂತಾಗಿದೆ. ಕಳೆದ ಕೆಲವು ಸಮಯದಿಂದ ಹಣ ಬಿಡುಗಡೆ ವಿಳಂಬವಾಗಿದ್ದರಿಂದ ಮಹಿಳೆಯರಲ್ಲಿ ಸಹಜವಾಗಿಯೇ ಅಸಮಾಧಾನವಿತ್ತು. ಹಣ ಯಾವಾಗ ಬರುತ್ತದೆಯೋ ಎಂಬ ಆತಂಕದಲ್ಲಿದ್ದವರಿಗೆ ಇದೀಗ ಸಮಾಧಾನ ಸಿಕ್ಕಿದೆ.
ಹೊಸ ವರ್ಷದ ಹೊಸ್ತಿಲಲ್ಲಿ ಕೈಗೆ ಹಣ ಸಿಕ್ಕಿದ್ದರಿಂದ ಖುಷಿಯಾಗಿರುವ ಫಲಾನುಭವಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಖಾತೆ ಚೆಕ್ ಮಾಡಿ: ನೀವು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗಿದ್ದರೆ, ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆಯೇ ಎಂಬುದನ್ನು ತಿಳಿಯಲು ಕೂಡಲೇ Balance Check ಮಾಡಿಕೊಳ್ಳಿ. ಅಥವಾ ಬ್ಯಾಂಕ್‌ನಿಂದ ಬಂದಿರುವ ಎಸ್‌ಎಂಎಸ್ (SMS) ಗಮನಿಸಿ.
ಇತರೆ ಮಾಹಿತಿಗಳನ್ನು ಓದಿ:
Cibil Score New Rules: ಸಿಬಿಲ್ ಸ್ಕೋರ್ ಇಲ್ಲವೆಂದು ಸಾಲ ಸಿಗುತ್ತಿಲ್ಲವೇ? ಚಿಂತೆ ಬಿಡಿ
Udyogini Scheme: 1.5 ಲಕ್ಷ ರೂ. ಸಹಾಯಧನಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ