ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ ನೇಮಕಾತಿ 2026: SSLC, PUC ಪಾಸಾದವರಿಗೆ ಉದ್ಯೋಗವಕಾಶ | Chikkamagaluru District Court Recruitment 2026 Apply Online For Peon, Typist & other

Telegram Group Join Now
WhatsApp Group Join Now

ಚಿಕ್ಕಮಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಒಟ್ಟು 55 ಸೇವಕ, ಬೆರಳಚ್ಚುಗಾರ, ಬೆರಳಚ್ಚು-ನಕಲುಗಾರ ಮತ್ತು ಆದೇಶ ಜಾರಿಕಾರ ಹುದ್ದೆಗಳ ನೇರ ನೇಮಕಾತಿಗಾಗಿ ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಜೂನ್ 29, 2026 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪಾಸಾಗಿರುವ ಅಭ್ಯರ್ಥಿಗಳಿಗೆ ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಇದು ಉತ್ತಮ ಅವಕಾಶವಾಗಿದ್ದು,

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಸಾರ ವೇತನವನ್ನು ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕವಾದ ಜುಲೈ 28, 2026 ರ ರಾತ್ರಿ 11:59 ಗಂಟೆಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಛೇರಿ
  • ಒಟ್ಟು ಹುದ್ದೆಗಳ ಸಂಖ್ಯೆ: 55 ಹುದ್ದೆಗಳು
  • ಉದ್ಯೋಗ ಸ್ಥಳ: ಚಿಕ್ಕಮಗಳೂರು
  • ಮಾಸಿಕ ವೇತನ: ರೂ. 27,000 ದಿಂದ ರೂ. 83,700/- ರವರೆಗೆ

ಹುದ್ದೆಗಳ ವಿವರ:

ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ ಘಟಕದಲ್ಲಿ ಒಟ್ಟು 55 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅಧಿಸೂಚನೆವಾರು ಹುದ್ದೆಗಳ ವಿವರ ಈ ಕೆಳಗಿನಂತಿದೆ:

  • ಸೇವಕರು (Peon) – 47 ಹುದ್ದೆಗಳು
  • ಶೀಘ್ರಲಿಪಿಗಾರರು ಗ್ರೇಡ್-III (Stenographer Gr-III) – 05 ಹುದ್ದೆಗಳು (ಬ್ಯಾಕ್ ಲಾಗ್ ಹುದ್ದೆಗಳು)
  • ಬೆರಳಚ್ಚುಗಾರರು (Typist) – 01 ಹುದ್ದೆ
  • ಬೆರಳಚ್ಚು-ನಕಲುಗಾರರು (Typist-Copyist) – 01 ಹುದ್ದೆ
  • ಆದೇಶ ಜಾರಿಕಾರರು (Process Server) – 01 ಹುದ್ದೆ

ಶೈಕ್ಷಣಿಕ ಅರ್ಹತೆ:

ವಿವಿಧ ಹುದ್ದೆಗಳಿಗೆ ನಿಗದಿಪಡಿಸಲಾದ ವಿದ್ಯಾರ್ಹತೆಯ ವಿವರಗಳು ಹೀಗಿವೆ:

  • ಸೇವಕರು (Peon): ಎಸ್‌ಎಸ್‌ಎಲ್‌ಸಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕನ್ನಡ ಭಾಷೆಯಲ್ಲಿ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು.
  • ಆದೇಶ ಜಾರಿಕಾರರು: ಎಸ್‌ಎಸ್‌ಎಲ್‌ಸಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವಾಹನ ಚಾಲನಾ ಪರವಾನಗಿ (Driving License) ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
  • ಬೆರಳಚ್ಚುಗಾರರು: ದ್ವಿತೀಯ ಪಿ.ಯು.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣತೆ ಹಾಗೂ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪ್ರೌಢದರ್ಜೆ ಪರೀಕ್ಷೆ (Senior Grade Typewriting) ಪಾಸ್ ಮಾಡಿರಬೇಕು.
  • ಬೆರಳಚ್ಚು-ನಕಲುಗಾರರು: ದ್ವಿತೀಯ ಪಿ.ಯು.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣತೆ ಹಾಗೂ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಕಿರಿಯದರ್ಜೆ ಪರೀಕ್ಷೆಯಲ್ಲಿ (Junior Grade Typewriting) ಉತ್ತೀರ್ಣರಾಗಿರಬೇಕು.
  • ಶೀಘ್ರಲಿಪಿಗಾರರು ಗ್ರೇಡ್-III: ದ್ವಿತೀಯ ಪಿ.ಯು.ಸಿ ಅಥವಾ ತತ್ಸಮಾನ ಪರೀಕ್ಷೆ ಪಾಸ್. ಜೊತೆಗೆ ಕನ್ನಡ ಮತ್ತು ಇಂಗ್ಲೀಷ್ ಬೆರಳಚ್ಚು ಮತ್ತು ಶೀಘ್ರಲಿಪಿ (Stenography) ಪ್ರೌಢದರ್ಜೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ:

ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಈ ಕೆಳಗಿನ ವಯೋಮಿತಿಯನ್ನು ಹೊಂದಿರಬೇಕು:

  • ಕನಿಷ್ಠ ವಯಸ್ಸು: 18 ವರ್ಷಗಳು
  • ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು: 40 ವರ್ಷಗಳು

ವಯೋಮಿತಿ ಸಡಿಲಿಕೆ:

ಸರ್ಕಾರದ ನಿಯಮಗಳ ಪ್ರಕಾರ, ವಿವಿಧ ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಗೆ 5 ವರ್ಷಗಳ ಸಡಿಲಿಕೆಯನ್ನು ಸೇರಿಸಿ ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ:

  • ಪ್ರವರ್ಗ-2A, 2B, 3A, 3B ಅಭ್ಯರ್ಥಿಗಳಿಗೆ: 43 ವರ್ಷಗಳು
  • SC / ST ಮತ್ತು ಪ್ರವರ್ಗ-I ಅಭ್ಯರ್ಥಿಗಳಿಗೆ: 45 ವರ್ಷಗಳು
  • ಸರ್ಕಾರಿ ನೌಕರರು, ವಿಧವೆಯರು ಹಾಗೂ ಮಾಜಿ ಸೈನಿಕರಿಗೆ: ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ:

ಅರ್ಜಿ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) Collect ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಪಾವತಿಸಬೇಕು:

  • ಸಾಮಾನ್ಯ (GM) ವರ್ಗದ ಅಭ್ಯರ್ಥಿಗಳಿಗೆ: ರೂ. 300/-
  • ಪ್ರವರ್ಗ-2A, 2B, 3A, 3B ಅಭ್ಯರ್ಥಿಗಳಿಗೆ: ರೂ. 150/-
  • SC/ST, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ: ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ.

ವೇತನ ವಿವರ:

  • ಶೀಘ್ರಲಿಪಿಗಾರರು ಗ್ರೇಡ್-III: ರೂ. 44,425 – ರೂ. 83,700/-
  • ಬೆರಳಚ್ಚುಗಾರರು ಹಾಗೂ ಬೆರಳಚ್ಚು-ನಕಲುಗಾರರು: ರೂ. 34,100 – ರೂ. 67,600/-
  • ಆದೇಶ ಜಾರಿಕಾರರು: ರೂ. 31,775 – ರೂ. 61,300/-
  • ಸೇವಕರು (Peon): ರೂ. 27,000 – ರೂ. 46,675/-

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 29-06-2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-07-2026 (ರಾತ್ರಿ 11:59 ಗಂಟೆಯವರೆಗೆ)

ಪ್ರಮುಖ ಲಿಂಕ್‌ಗಳು:

IBPS ನೇಮಕಾತಿ 2026; 6715 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ರೈಲ್ವೆ ಇಲಾಖೆ ನೇಮಕಾತಿ 2026; ಆನ್‌ಲೈನ್ ಅರ್ಜಿ ಆಹ್ವಾನ

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ ನೇಮಕಾತಿ 2026

CAR DAR ಕಾನ್ಸ್‌ಟೇಬಲ್ ನೇಮಕಾತಿ 2026: ಆನ್‌ಲೈನ್‌ ಅರ್ಜಿ ಆಹ್ವಾನ

KSP Civil Police Constable Recruitment 2026

FAQ:

1. ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ ನೇಮಕಾತಿಯಲ್ಲಿ ಒಟ್ಟು ಎಷ್ಟು ಹುದ್ದೆಗಳಿವೆ?
ಈ ನೇಮಕಾತಿಯಲ್ಲಿ ಸೇವಕ (Peon), ಬೆರಳಚ್ಚುಗಾರ, ನಕಲುಗಾರ, ಶೀಘ್ರಲಿಪಿಗಾರ ಮತ್ತು ಆದೇಶ ಜಾರಿಕಾರ ಸೇರಿದಂತೆ ಒಟ್ಟು 55 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

2. ಸಿವಿಲ್ ಕೋರ್ಟ್ ಸೇವಕ (Peon) ಹುದ್ದೆಗೆ ಬೇಕಾದ ವಿದ್ಯಾರ್ಹತೆ ಏನು?
ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕನ್ನಡ ಓದಲು, ಬರೆಯಲು ತಿಳಿದಿರಬೇಕು.

3. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 28, 2026 ಕೊನೆಯ ದಿನಾಂಕವಾಗಿದೆ.

4. ಬೆರಳಚ್ಚು-ನಕಲುಗಾರ (Typist-Copyist) ಹುದ್ದೆಗೆ ಏನು ಅರ್ಹತೆ ಬೇಕು?
ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆ ಪಾಸ್ ಜೊತೆಗೆ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಕಿರಿಯದರ್ಜೆ (Junior Grade) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

5. ಚಿಕ್ಕಮಗಳೂರು ಕೋರ್ಟ್ ನೇಮಕಾತಿಯ ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ವರ್ಗಕ್ಕೆ 300 ರೂ., 2A/2B/3A/3B ವರ್ಗಕ್ಕೆ 150 ರೂ. ನಿಗದಿಪಡಿಸಲಾಗಿದೆ. ಎಸ್‌ಸಿ/ಎಸ್‌ಟಿ, ಪ್ರವರ್ಗ-1 ಮತ್ತು ಅಂಗವಿಕಲರಿಗೆ ಸಂಪೂರ್ಣ ಶುಲ್ಕ ವಿನಾಯಿತಿ ಇದೆ.

6. ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಸೇವಕ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಅಂಕಗಳ ಆಧಾರದ ಮೇಲೆ 1:10 ಅನುಪಾತದಲ್ಲಿ ಶಾರ್ಟ್‌ಲಿಸ್ಟ್ ಮಾಡಿ 10 ಅಂಕಗಳ ಸಂದರ್ಶನ ನಡೆಸಲಾಗುತ್ತದೆ. ಬೆರಳಚ್ಚುಗಾರ ಹುದ್ದೆಗಳಿಗೆ ಕಂಪ್ಯೂಟರ್ ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನ ಇರುತ್ತದೆ.

7. ಸೇವಕ (Peon) ಹುದ್ದೆಯ ವೇತನ ಶ್ರೇಣಿ ಎಷ್ಟು?
ಸೇವಕ ಹುದ್ದೆಗೆ 27,000 ರೂ. ದಿಂದ 46,675 ರೂ. ವರೆಗೆ ಮಾಸಿಕ ವೇತನ ಶ್ರೇಣಿ ಮತ್ತು ಇತರೆ ಭತ್ಯೆಗಳು ನಿಗದಿಪಡಿಸಲಾಗಿದೆ.

8. ಆದೇಶ ಜಾರಿಕಾರ (Process Server) ಹುದ್ದೆಗೆ ಡ್ರೈವಿಂಗ್ ಲೈಸೆನ್ಸ್ ಕಡ್ಡಾಯವೇ?
ಕಡ್ಡಾಯವಲ್ಲ, ಆದರೆ ವಾಹನ ಚಾಲನಾ ಪರವಾನಗಿ (Driving License) ಹೊಂದಿರುವ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುತ್ತದೆ.

9. ಈ ನೇಮಕಾತಿಗೆ ಗರಿಷ್ಠ ವಯೋಮಿತಿ ಎಷ್ಟಿದೆ?
ಸಾಮಾನ್ಯ ವರ್ಗಕ್ಕೆ 40 ವರ್ಷ, ಹಿಂದುಳಿದ ವರ್ಗಗಳಿಗೆ 43 ವರ್ಷ ಹಾಗೂ ಎಸ್‌ಸಿ/ಎಸ್‌ಟಿ/ಪ್ರವರ್ಗ-1 ಕ್ಕೆ 45 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ (5 ವರ್ಷಗಳ ವಿಶೇಷ ಸಡಿಲಿಕೆ ಸೇರಿ).

10. ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ ಲಿಂಕ್ ಯಾವುದು?
ಅಭ್ಯರ್ಥಿಗಳು ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್ [https://chikkamagaluru.dcourts.gov.in/notice-category/recruitments/] ಮೂಲಕ ಅರ್ಜಿ ಸಲ್ಲಿಸಬಹುದು

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment