ಅರಣ್ಯ ಇಲಾಖೆ ನೇಮಕಾತಿ 2026 ; 450 ಗಸ್ತು ಅರಣ್ಯ ಪಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ | Karnataka Forest Department Recruitment 2026 Apply Online For 450 Beat Forester Posts

Telegram Group Join Now
WhatsApp Group Join Now

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 450 ಗಸ್ತು ಅರಣ್ಯ ಪಾಲಕ (ಅರಣ್ಯ ರಕ್ಷಕ – Beat Forester) ಗ್ರೂಪ್ ‘ಸಿ’ ಹುದ್ದೆಗಳ ನೇರ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ.

ಇದರಲ್ಲಿ ಉಳಿಕೆ ಮೂಲ ವೃಂದದ (RPC) 355 ಹುದ್ದೆಗಳು (320 ಹೊಸ + 35 ಹಿಂಬಾಕಿ) ಹಾಗೂ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ (KK) 95 ಹುದ್ದೆಗಳು (93 ಹೊಸ + 2 ಹಿಂಬಾಕಿ) ಸೇರಿವೆ.

ಈ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸ್ವೀಕಾರ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ನಡೆಸಲಾಗುತ್ತಿದೆ. ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ನವೆಂಬರ್ 23, 2026 ರಿಂದ ಡಿಸೆಂಬರ್ 22, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Karnataka Forest Department Recruitment 2026 ಸಂಕ್ಷಿಪ್ತ ವಿವರ:

ವಿವರ ಮಾಹಿತಿ
ಇಲಾಖೆಯ ಹೆಸರು ಕರ್ನಾಟಕ ಅರಣ್ಯ ಇಲಾಖೆ
ಪರೀಕ್ಷಾ ಪ್ರಾಧಿಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ಹುದ್ದೆಯ ಹೆಸರು ಗಸ್ತು ಅರಣ್ಯ ಪಾಲಕ (ಅರಣ್ಯ ರಕ್ಷಕ – ಗ್ರೂಪ್ ‘ಸಿ’)
ಒಟ್ಟು ಹುದ್ದೆಗಳು 450 ಹುದ್ದೆಗಳು (RPC: 355 + KK: 95)
ವೇತನ ಶ್ರೇಣಿ ತಿಂಗಳಿಗೆ ₹37,500 ರಿಂದ ₹76,100

ವೃತ್ತವಾರು ಮತ್ತು ವಿಭಾಗವಾರು ಹುದ್ದೆಗಳ ವಿವರ

1. ಉಳಿಕೆ ಮೂಲ ವೃಂದ (RPC) – 320 ಹೊಸ ಹುದ್ದೆಗಳು

ವೃತ್ತ / ವಿಭಾಗ ಹುದ್ದೆ
1. ಬೆಂಗಳೂರು ವೃತ್ತ (ಒಟ್ಟು: 20)
ಬೆಂಗಳೂರು ಗ್ರಾಮಾಂತರ ಪ್ರಾದೇಶಿಕ ವಿಭಾಗ2
ರಾಮನಗರ ಪ್ರಾದೇಶಿಕ ವಿಭಾಗ5
ಕೋಲಾರ ಪ್ರಾದೇಶಿಕ ವಿಭಾಗ2
ಚಿಕ್ಕಬಳ್ಳಾಪುರ ಪ್ರಾದೇಶಿಕ ವಿಭಾಗ2
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ6
ಕನಕಪುರ ವನ್ಯಜೀವಿ ಉಪ ವಿಭಾಗ3
2. ಚಾಮರಾಜನಗರ ವೃತ್ತ (ಒಟ್ಟು: 75)
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ44
ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ12
ಕಾವೇರಿ ವನ್ಯಜೀವಿ ವಿಭಾಗ, ಕೊಳ್ಳೇಗಾಲ9
ಮಲೈ ಮಹದೇಶ್ವರ ವನ್ಯಜೀವಿ ವಿಭಾಗ, ಕೊಳ್ಳೇಗಾಲ10
3. ಚಿಕ್ಕಮಗಳೂರು ವೃತ್ತ (ಒಟ್ಟು: 27)
ಭದ್ರಾ ಹುಲಿ ಸಂರಕ್ಷಿತ ಪ್ರದೇಶ12
ಚಿಕ್ಕಮಗಳೂರು ಪ್ರಾದೇಶಿಕ ವಿಭಾಗ7
ಕೊಪ್ಪ ಪ್ರಾದೇಶಿಕ ವಿಭಾಗ8
4. ಧಾರವಾಡ ವೃತ್ತ (ಒಟ್ಟು: 3)
ಧಾರವಾಡ ಪ್ರಾದೇಶಿಕ ವಿಭಾಗ2
ಹಾವೇರಿ ಪ್ರಾದೇಶಿಕ ವಿಭಾಗ1
5. ಹಾಸನ ವೃತ್ತ (ಒಟ್ಟು: 18)
ಹಾಸನ ಪ್ರಾದೇಶಿಕ ವಿಭಾಗ12
ತುಮಕೂರು ಪ್ರಾದೇಶಿಕ ವಿಭಾಗ6
6. ಕೆನರಾ ವೃತ್ತ (ಒಟ್ಟು: 33)
ಹೊನ್ನಾವರ ಪ್ರಾದೇಶಿಕ ವಿಭಾಗ4
ಕಾಳಿ ಹುಲಿ ಸಂರಕ್ಷಿತ ಪ್ರದೇಶ, ದಾಂಡೇಲಿ19
ಕಾರವಾರ ಪ್ರಾದೇಶಿಕ ವಿಭಾಗ4
ಶಿರಸಿ ಪ್ರಾದೇಶಿಕ ವಿಭಾಗ3
ಯಲ್ಲಾಪುರ ಪ್ರಾದೇಶಿಕ ವಿಭಾಗ3
7. ಕೊಡಗು ವೃತ್ತ (ಒಟ್ಟು: 26)
ಮಡಿಕೇರಿ ಪ್ರಾದೇಶಿಕ ವಿಭಾಗ11
ಮಡಿಕೇರಿ ವನ್ಯಜೀವಿ ವಿಭಾಗ9
ವಿರಾಜಪೇಟೆ ಪ್ರಾದೇಶಿಕ ವಿಭಾಗ6
8. ಮಂಗಳೂರು ವೃತ್ತ (ಒಟ್ಟು: 32)
ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ14
ಕುಂದಾಪುರ ಪ್ರಾದೇಶಿಕ ವಿಭಾಗ5
ಮಂಗಳೂರು ಪ್ರಾದೇಶಿಕ ವಿಭಾಗ13
9. ಮೈಸೂರು ವೃತ್ತ (ಒಟ್ಟು: 28)
ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ, ಹುಣಸೂರು28
10. ಶಿವಮೊಗ್ಗ ವೃತ್ತ (ಒಟ್ಟು: 58)
ಭದ್ರಾವತಿ ಪ್ರಾದೇಶಿಕ ವಿಭಾಗ12
ಸಾಗರ ಪ್ರಾದೇಶಿಕ ವಿಭಾಗ22
ಶಿವಮೊಗ್ಗ ಪ್ರಾದೇಶಿಕ ವಿಭಾಗ14
ಶಿವಮೊಗ್ಗ ವನ್ಯಜೀವಿ ವಿಭಾಗ10
ಒಟ್ಟು ಹೊಸ ಹುದ್ದೆಗಳು (RPC) 320

2. ಉಳಿಕೆ ಮೂಲ ವೃಂದ (RPC) – 35 ಹಿಂಬಾಕಿ (Backlog) ಹುದ್ದೆಗಳು:

ವೃತ್ತ / ವಿಭಾಗ ಮತ್ತು ಮೀಸಲಾತಿ ಹುದ್ದೆ
ಬೆಂಗಳೂರು ವೃತ್ತ (5)
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
GM ಅಂಗವಿಕಲ [LC/AAV/MI] (1), ST ಬುಡಕಟ್ಟು (4)
5
ಬಳ್ಳಾರಿ ವೃತ್ತ (1)
ಚಿತ್ರದುರ್ಗ ಪ್ರಾದೇಶಿಕ (RPC)
SC ಅಂಗವಿಕಲ [LC/AAV/MI]
1
ಚಾಮರಾಜನಗರ ವೃತ್ತ (3)
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ
SC ಅಂಗವಿಕಲ [LC/AAV/MI]
1
ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ
ಪ್ರವರ್ಗ-2B ಅಂಗವಿಕಲ [LC/AAV/MI]
1
ಮಲೈ ಮಹದೇಶ್ವರ ವನ್ಯಜೀವಿ, ಕೊಳ್ಳೇಗಾಲ
ಪ್ರವರ್ಗ-3B ಅಂಗವಿಕಲ [LC/AAV/MI]
1
ಚಿಕ್ಕಮಗಳೂರು ವೃತ್ತ (2)
ಭದ್ರಾ ಹುಲಿ ಸಂರಕ್ಷಿತ ಪ್ರದೇಶ
ST ಸ್ಥಳೀಯ ಅರಣ್ಯ ಬುಡಕಟ್ಟು
2
ಕೆನರಾ ವೃತ್ತ (12)
ಹೊನ್ನಾವರ ಪ್ರಾದೇಶಿಕ
GM ಅಂಗವಿಕಲ (1), ST ಅಂಗವಿಕಲ (1)
2
ಕಾಳಿ ಹುಲಿ ಸಂರಕ್ಷಿತ ಪ್ರದೇಶ, ದಾಂಡೇಲಿ
GM ಅಂಗವಿಕಲ (1), ಪ್ರವರ್ಗ-3A ಅಂಗವಿಕಲ (1), ST ಬುಡಕಟ್ಟು (7)
9
ಶಿರಸಿ ಪ್ರಾದೇಶಿಕ
ST ಅಂಗವಿಕಲ [LC/AAV/MI]
1
ಕೊಡಗು ವೃತ್ತ (1)
ಮಡಿಕೇರಿ ವನ್ಯಜೀವಿ ವಿಭಾಗ
GM ಅಂಗವಿಕಲ [LC/AAV/MI]
1
ಮಂಗಳೂರು ವೃತ್ತ (4)
ಕುದುರೆಮುಖ ವನ್ಯಜೀವಿ, ಕಾರ್ಕಳ
GM ಅಂಗವಿಕಲ (1), ಪ್ರವರ್ಗ-3B ಅಂಗವಿಕಲ (1)
2
ಕುಂದಾಪುರ ಪ್ರಾದೇಶಿಕ
GM ಅಂಗವಿಕಲ [LC/AAV/MI]
1
ಮಂಗಳೂರು ಪ್ರಾದೇಶಿಕ
ST ಅಂಗವಿಕಲ [LC/AAV/MI]
1
ಮೈಸೂರು ವೃತ್ತ (1)
ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ, ಹುಣಸೂರು
GM ಅಂಗವಿಕಲ [LC/AAV/MI]
1
ಶಿವಮೊಗ್ಗ ವೃತ್ತ (6)
ಭದ್ರಾವತಿ ಪ್ರಾದೇಶಿಕ
GM ಅಂಗವಿಕಲ [LC/AAV/MI]
1
ಶಿವಮೊಗ್ಗ ವನ್ಯಜೀವಿ ವಿಭಾಗ
ST ಸ್ಥಳೀಯ ಅರಣ್ಯ ಬುಡಕಟ್ಟು
4
ಸಾಗರ ಪ್ರಾದೇಶಿಕ
GM ಅಂಗವಿಕಲ [LC/AAV/MI]
1
ಒಟ್ಟು ಹಿಂಬಾಕಿ ಹುದ್ದೆಗಳು (RPC) 35

3. ಕಲ್ಯಾಣ ಕರ್ನಾಟಕ ವೃಂದ (KK) – 93 ಹೊಸ + 2 ಹಿಂಬಾಕಿ ಹುದ್ದೆಗಳು

ವೃತ್ತ / ವಿಭಾಗ ಹುದ್ದೆ
1. ಬಳ್ಳಾರಿ ವೃತ್ತ (ಒಟ್ಟು: 31)
ಬಳ್ಳಾರಿ ಪ್ರಾದೇಶಿಕ ವಿಭಾಗ6
ಬಳ್ಳಾರಿ ಸಾಮಾಜಿಕ ಅರಣ್ಯ ವಿಭಾಗ4
ಬಳ್ಳಾರಿ ಅರಣ್ಯ ಸಂಚಾರಿದಳ3
ಬಳ್ಳಾರಿ ಸಂಶೋಧನೆ ವಿಭಾಗ4
ಕೊಪ್ಪಳ ಸಾಮಾಜಿಕ ಅರಣ್ಯ ವಿಭಾಗ5
ಕೊಪ್ಪಳ ಪ್ರಾದೇಶಿಕ ವಿಭಾಗ4
ವಿಜಯನಗರ ಪ್ರಾದೇಶಿಕ ವಿಭಾಗ5
2. ಕಲಬುರ್ಗಿ ವೃತ್ತ (ಒಟ್ಟು: 62)
ಬೀದರ್ ಪ್ರಾದೇಶಿಕ ವಿಭಾಗ8
ಬೀದರ್ ಸಾಮಾಜಿಕ ಅರಣ್ಯ ವಿಭಾಗ5
ಕಲಬುರ್ಗಿ ಪ್ರಾದೇಶಿಕ ವಿಭಾಗ15
ಕಲಬುರ್ಗಿ ಸಾಮಾಜಿಕ ಅರಣ್ಯ ವಿಭಾಗ5
ಕಲಬುರ್ಗಿ ಅರಣ್ಯ ಸಂಚಾರಿದಳ2
ರಾಯಚೂರು ಪ್ರಾದೇಶಿಕ ವಿಭಾಗ5
ರಾಯಚೂರು ಸಾಮಾಜಿಕ ಅರಣ್ಯ ವಿಭಾಗ7
ಯಾದಗಿರಿ ಪ್ರಾದೇಶಿಕ ವಿಭಾಗ13
ಯಾದಗಿರಿ ಸಾಮಾಜಿಕ ಅರಣ್ಯ ವಿಭಾಗ2
ಹಿಂಬಾಕಿ ಹುದ್ದೆಗಳು – ಕಲಬುರ್ಗಿ ವೃತ್ತ (ಒಟ್ಟು: 2)
ಬೀದರ್ ಪ್ರಾದೇಶಿಕ (GM ಅಂಗವಿಕಲ – LC/AAV/MI)1
ಕಲಬುರ್ಗಿ ಪ್ರಾದೇಶಿಕ (GM ಅಂಗವಿಕಲ – LC/AAV/MI)1
ಒಟ್ಟು ಹುದ್ದೆಗಳು (KK) 95

ಶೈಕ್ಷಣಿಕ ವಿದ್ಯಾರ್ಹತೆ:

  • ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ದ್ವಿತೀಯ ಪಿಯುಸಿ (PUC) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಉತ್ತೀರ್ಣರಾಗಿರಬೇಕು.
  • ತತ್ಸಮಾನ ವಿದ್ಯಾರ್ಹತೆಗಳು: ಸಿಬಿಎಸ್‌ಇ/ಐಸಿಎಸ್‌ಇ ಅಥವಾ ಇತರೆ ರಾಜ್ಯದ 12ನೇ ತರಗತಿ, ಎನ್‌ಐಒಎಸ್ (NIOS) ಹೆಚ್‌ಎಸ್‌ಸಿ, ತಾಂತ್ರಿಕ ಶಿಕ್ಷಣ ಇಲಾಖೆಯ 3 ವರ್ಷಗಳ ಡಿಪ್ಲೊಮಾ, ಜಿಟಿಟಿಸಿ 3+1 ವರ್ಷದ ಡಿಪ್ಲೊಮಾ ಅಥವಾ 2 ವರ್ಷದ ಐಟಿಐ ಜೊತೆಗೆ ಎನ್‌ಐಒಎಸ್/ಪಿಯು ಮಂಡಳಿಯ 1 ಭಾಷೆ ಹಾಗೂ 1 ಶೈಕ್ಷಣಿಕ ವಿಷಯದಲ್ಲಿ ಉತ್ತೀರ್ಣರಾದವರು ಅರ್ಹರು.
  • ಗಮನಿಸಿ: ಜೆ.ಓ.ಸಿ (JOC) ಹಾಗೂ ಕೆಎಸ್‌ಓಯು (KSOU) ಬ್ರಿಡ್ಜ್ ಕೋರ್ಸ್ ವಿದ್ಯಾರ್ಹತೆಯನ್ನು ಈ ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.
  • ಕಲ್ಯಾಣ ಕರ್ನಾಟಕ (KK) ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅನುಚ್ಛೇದ 371(ಜೆ) ಅಡಿ ಅನುಬಂಧ-ಎ ನಮೂನೆಯಲ್ಲಿ ಸಹಾಯಕ ಆಯುಕ್ತರಿಂದ ಪಡೆದ ಅರ್ಹತಾ ಪ್ರಮಾಣಪತ್ರ ಹೊಂದಿರಬೇಕು.

ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆ:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷ ತುಂಬಿರಬೇಕು. ಸರ್ಕಾರದ ಆದೇಶದನ್ವಯ 5 ವರ್ಷಗಳ ಒಂದು ಬಾರಿಯ ಸಡಿಲಿಕೆ ಸೇರಿಸಿ ಗರಿಷ್ಠ ವಯೋಮಿತಿ ಕೆಳಕಂಡಂತಿದೆ:

ಪ್ರವರ್ಗ ಸಾಮಾನ್ಯ ಅರಣ್ಯ ಪ್ರೇರಕರು
ಸಾಮಾನ್ಯ (GM) 32 ವರ್ಷ 43 ವರ್ಷ
2A, 2B, 3A, 3B 35 ವರ್ಷ 46 ವರ್ಷ
SC / ST / ಪ್ರವರ್ಗ-1 37 ವರ್ಷ 48 ವರ್ಷ
  • ಮಾಜಿ ಸೈನಿಕರಿಗೆ: ಆಯಾ ಪ್ರವರ್ಗಕ್ಕೆ ನಿಗದಿಪಡಿಸಿದ ಗರಿಷ್ಠ ವಯೋಮಿತಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ ವರ್ಷಗಳ ಜೊತೆಗೆ ಹೆಚ್ಚುವರಿ 3 ವರ್ಷಗಳ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕದ ವಿವರ:

ಶುಲ್ಕವನ್ನು ಆನ್‌ಲೈನ್ ಮೂಲಕ (UPI / NEFT / ಕಾರ್ಡ್ / ನೆಟ್ ಬ್ಯಾಂಕಿಂಗ್) ಮಾತ್ರ ಪಾವತಿಸಬೇಕು:

  • ಸಾಮಾನ್ಯ ಮತ್ತು ಪ್ರವರ್ಗ 2A, 2B, 3A, 3B: ₹750/- (₹500 ಅರ್ಜಿ ಶುಲ್ಕ + ₹250 ಪ್ರಕ್ರಿಯೆ ಶುಲ್ಕ).
  • SC, ST, ಪ್ರವರ್ಗ-1, ಮಾಜಿ ಸೈನಿಕ ಹಾಗೂ ತೃತೀಯ ಲಿಂಗಿ: ₹500/- (₹250 ಅರ್ಜಿ ಶುಲ್ಕ + ₹250 ಪ್ರಕ್ರಿಯೆ ಶುಲ್ಕ).
  • ವಿಶೇಷ ಚೇತನ (ಅಂಗವಿಕಲ – LC/AAV/MI ಮಾತ್ರ): ₹250/- (ಪ್ರಕ್ರಿಯೆ ಶುಲ್ಕ).

ಆಯ್ಕೆ ವಿಧಾನ:

ಹಂತ 1: 1:20 ಅರ್ಹತಾ ಪಟ್ಟಿ

ಅಭ್ಯರ್ಥಿಗಳು ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:20 ಅನುಪಾತದಲ್ಲಿ ವೃತ್ತ ಮಟ್ಟದ ಶಾರೀರಿಕ ಮತ್ತು ದೈಹಿಕ ಪರೀಕ್ಷೆಗೆ ಅರ್ಹತಾ ಪಟ್ಟಿ ಪ್ರಕಟಿಸಲಾಗುತ್ತದೆ.

ಹಂತ 2: ಶಾರೀರಿಕ ಮಾನದಂಡ ಪರೀಕ್ಷೆ (PST):

ವಿವರ ಪುರುಷರು ಮಹಿಳೆಯರು
ಎತ್ತರ 163 ಸೆಂ.ಮೀ
(ST ಬುಡಕಟ್ಟು: 152)
150 ಸೆಂ.ಮೀ
(ST ಬುಡಕಟ್ಟು: 145)
ಎದೆ ಸುತ್ತಳತೆ 79 ಸೆಂ.ಮೀ + 5 ಹಿಗ್ಗುವಿಕೆ
(ST ಬುಡಕಟ್ಟು: 74 + 5)
ಅನ್ವಯಿಸುವುದಿಲ್ಲ
ಕನಿಷ್ಠ ತೂಕ ಅನ್ವಯಿಸುವುದಿಲ್ಲ 40 ಕೆ.ಜಿ
(ST ಬುಡಕಟ್ಟು: 38)

ಹಂತ 3: ದೈಹಿಕ ತಾಳ್ವಿಕೆ ಪರೀಕ್ಷೆ (Endurance Test)

  • ಪುರುಷ ಅಭ್ಯರ್ಥಿಗಳು: 1600 ಮೀಟರ್ ಓಟವನ್ನು 7 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು.
  • ಮಹಿಳಾ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳು: 1000 ಮೀಟರ್ ಓಟವನ್ನು 6 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು.

ಹಂತ 4: ದೈಹಿಕ ಸಾಮರ್ಥ್ಯ ಪರೀಕ್ಷೆ (PET)

ಈ ಕೆಳಗಿನ 5 ಪರೀಕ್ಷೆಗಳಲ್ಲಿ ಕನಿಷ್ಠ 3 ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವುದು ಕಡ್ಡಾಯವಾಗಿದೆ:

ಪರೀಕ್ಷೆ ಪುರುಷರು ಮಹಿಳೆ / ಮಾಜಿ ಸೈನಿಕ
100 ಮೀ. ಓಟ 15 ಸೆ. 18.5 ಸೆ.
ಎತ್ತರ ಜಿಗಿತ 1.20 ಮೀ. 0.90 ಮೀ.
ಉದ್ದ ಜಿಗಿತ 3.80 ಮೀ. 2.50 ಮೀ.
ಗುಂಡು ಎಸೆತ 5.60 ಮೀ. (16 lb) 3.76 ಮೀ. (8 lb)
800m / 200m ಓಟ 800 ಮೀ. (2 ನಿ. 50 ಸೆ.) 200 ಮೀ. (40 ಸೆ.)

ಹಂತ 5: ಲಿಖಿತ ಪರೀಕ್ಷೆ ಮತ್ತು ಅಂತಿಮ ಮೆರಿಟ್ ಪಟ್ಟಿ

  • ಲಿಖಿತ ಪರೀಕ್ಷೆ (OMR): ದೈಹಿಕ ಪರೀಕ್ಷೆಯಲ್ಲಿ ಅರ್ಹರಾದವರಿಗೆ KEA ವತಿಯಿಂದ 100 ಅಂಕಗಳ (ಗಣಿತ 40 ಅಂಕ + ಸಾಮಾನ್ಯ ಜ್ಞಾನ 60 ಅಂಕ) 2 ಗಂಟೆಯ ವಸ್ತುನಿಷ್ಠ ಪರೀಕ್ಷೆ ನಡೆಯಲಿದೆ.
  • ಋಣಾತ್ಮಕ ಅಂಕ: ಪ್ರತಿ ತಪ್ಪು ಉತ್ತರಕ್ಕೆ ಅಥವಾ ಯಾವುದೇ ವೃತ್ತ ಶೇಡ್ ಮಾಡದಿದ್ದರೆ 0.25 ಅಂಕ ಕಡಿತಗೊಳಿಸಲಾಗುವುದು.
  • ಅಂತಿಮ ಆಯ್ಕೆ: ಪಿಯುಸಿ ಅಂಕಗಳ ಶೇ. 50% ಹಾಗೂ ಲಿಖಿತ ಪರೀಕ್ಷೆಯ ಶೇ. 50% ಅಂಕಗಳನ್ನು ಸೇರಿಸಿ 1:1 ಅನುಪಾತದಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.
  • ತರಬೇತಿ ಮತ್ತು ಸೇವಾ ಕರಾರು: ಆಯ್ಕೆಯಾದವರಿಗೆ 9 ತಿಂಗಳ ಬುನಾದಿ ತರಬೇತಿ (36 ತಿಂಗಳು ಪರೀಕ್ಷಾರ್ಥ ಅವಧಿ) ಇದ್ದು, ಕನಿಷ್ಠ 5 ವರ್ಷ ಸೇವೆ ಸಲ್ಲಿಸುವ ಕುರಿತು ₹100 ಛಾಪಾಕಾಗದದಲ್ಲಿ ಕರಾರು ಪತ್ರ ನೀಡಬೇಕು.

Karnataka Beat Forester Recruitment 2026 ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: 23-11-2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-12-2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 23-12-2026

Beat Forester 2026 Apply Online Links:

  • ಆನ್‌ಲೈನ್ ಅರ್ಜಿ ಲಿಂಕ್ (KEA): Apply ಮಾಡಿ (Link Available From 23-11-2026)
  • ಉಳಿಕೆ ಮೂಲ ವೃಂದ (RPC – 355 ಹುದ್ದೆ) ಅಧಿಸೂಚನೆ PDF: ಡೌನ್‌ಲೋಡ್ ಮಾಡಿ
  • ಕಲ್ಯಾಣ ಕರ್ನಾಟಕ ವೃಂದ (KK – 95 ಹುದ್ದೆ) ಅಧಿಸೂಚನೆ PDF: ಡೌನ್‌ಲೋಡ್ ಮಾಡಿ
  • ಅರಣ್ಯ ಇಲಾಖೆ ಅಧಿಕೃತ ವೆಬ್‌ಸೈಟ್: https://aranya.gov.in/, cetonline.karnataka.gov.in/kea
  • ಸಹಾಯವಾಣಿ ಸಂಖ್ಯೆಗಳು: ಅರಣ್ಯ ಸಹಾಯವಾಣಿ – 1926 | KEA ಸಹಾಯವಾಣಿ – 080-23460460

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ (https://cetonline.karnataka.gov.in/kea/) ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡಬೇಕು ಹಾಗೂ ನಿಗದಿತ ಶುಲ್ಕವನ್ನು ಪಾವತಿಸಬೇಕು. ಒಮ್ಮೆ ಸಲ್ಲಿಸಿದ ಅರ್ಜಿಯಲ್ಲಿ ಯಾವುದೇ ತಿದ್ದುಪಡಿಗೆ ಅವಕಾಶವಿರುವುದಿಲ್ಲವಾದ್ದರಿಂದ ಎಲ್ಲಾ ವಿವರಗಳನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ವೈದ್ಯಕೀಯ ಪರೀಕ್ಷೆ ಆಯ್ಕೆ ಪಟ್ಟಿ ಪ್ರಕಟ

Telegram Group Join Now
WhatsApp Group Join Now

Leave a Comment