CAR/DAR ಕಾನ್ಸ್‌ಟೇಬಲ್ ದೈಹಿಕ ಪರೀಕ್ಷೆಯ 1:5 ಅರ್ಹತಾ ಪಟ್ಟಿ ಪ್ರಕಟ | Karnataka CAR DAR Police Constable 1:5 PST/PET Eligibility List 2026

Telegram Group Join Now
WhatsApp Group Join Now

ರಾಜ್ಯ ಪೊಲೀಸ್ ಇಲಾಖೆಯ 1421 ಉಳಿಕೆ ಮೂಲ ವೃಂದ (RPC) ಮತ್ತು 179 ಕಲ್ಯಾಣ ಕರ್ನಾಟಕ (KK) ಸೇರಿದಂತೆ ಒಟ್ಟು 1,600 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (Armed Police Constable – CAR/DAR) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಅಪ್ಡೇಟ್ ಹೊರಬಿದ್ದಿದೆ.

ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಮುಂದಿನ ಹಂತವಾದ ದೇಹದಾರ್ಢ್ಯತೆ ಮತ್ತು ದೈಹಿಕ ಸಹಿಷ್ಣುತೆ ಪರೀಕ್ಷೆಗೆ (PST/PET) ಅರ್ಹತೆ ಪಡೆದಿರುವ ಅಭ್ಯರ್ಥಿಗಳ 1:5 ಅನುಪಾತದ ಪಟ್ಟಿಯನ್ನು (CAR DAR Police Constable 1:5 PST/PET Eligibility List) ಪೊಲೀಸ್ ಇಲಾಖೆಯ ಅಧಿಕೃತ ನೇಮಕಾತಿ ವೆಬ್‌ಸೈಟ್‌ನಲ್ಲಿ ಇದೀಗ ಪ್ರಕಟಿಸಲಾಗಿದೆ.

CAR DAR Police Constable 1:5 PST/PET Eligibility List 2026:

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಘಟಕಗಳ/ಜಿಲ್ಲೆಗಳ ಪಟ್ಟಿಯನ್ನು ಡೌನ್‌ಲೋಡ್ ಮಾಡಿ ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬಹುದು. ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಘಟಕವಾರು ಪಟ್ಟಿಗಳ ವಿವರ ಈ ಕೆಳಗಿನಂತಿದೆ:

1. ಉಳಿಕೆ ಮೂಲ ವೃಂದ (APC RPC – 1421 ಹುದ್ದೆಗಳು):

ಕೆಳಕಂಡ ಘಟಕಗಳ 1:5 PST/PET ಅರ್ಹತಾ ಪಟ್ಟಿಯು ಲಭ್ಯವಿದೆ:

  • ಕಮಾಂಡೆಂಟ್, ಕೆಎಆರ್‌ಪಿ ಮೌಂಟೆಡ್ ಕಂಪನಿ, ಮೈಸೂರು (Comnt. Karp Mounted Company Mysuru)
  • ವಿಜಯನಗರ ಜಿಲ್ಲೆ
  • ಕಲಬುರಗಿ ಜಿಲ್ಲೆ
  • ಗದಗ ಜಿಲ್ಲೆ
  • ಚಿಕ್ಕಮಗಳೂರು ಜಿಲ್ಲೆ
  • ಉತ್ತರ ಕನ್ನಡ ಜಿಲ್ಲೆ (ಕಾರವಾರ)
  • ಉಡುಪಿ ಜಿಲ್ಲೆ
  • ದಕ್ಷಿಣ ಕನ್ನಡ ಜಿಲ್ಲೆ (ಮಂಗಳೂರು)
  • ಚಿತ್ರದುರ್ಗ ಜಿಲ್ಲೆ
  • ಶಿವಮೊಗ್ಗ ಜಿಲ್ಲೆ
  • ಮಂಡ್ಯ ಜಿಲ್ಲೆ
  • ಕೊಡಗು ಜಿಲ್ಲೆ
  • ಮೈಸೂರು ಜಿಲ್ಲೆ
  • ಚಿಕ್ಕಬಳ್ಳಾಪುರ ಜಿಲ್ಲೆ
  • ಕಲಬುರಗಿ ನಗರ
  • ಮಂಗಳೂರು ನಗರ
  • ಮೈಸೂರು ನಗರ
  • ಬೆಂಗಳೂರು ನಗರ

2. ಕಲ್ಯಾಣ-ಕರ್ನಾಟಕ ವೃಂದ (APC KK – 179 ಹುದ್ದೆಗಳು):

ಕಲ್ಯಾಣ-ಕರ್ನಾಟಕ ವಿಭಾಗದ ಈ ಕೆಳಗಿನ ಘಟಕಗಳ 1:5 ಪಟ್ಟಿ ಬಿಡುಗಡೆಯಾಗಿದೆ:

  • ಬಳ್ಳಾರಿ ಜಿಲ್ಲೆ
  • ಬೆಂಗಳೂರು ನಗರ
  • ಕಲಬುರಗಿ ನಗರ
  • ಕಲಬುರಗಿ ಜಿಲ್ಲೆ
  • ವಿಜಯನಗರ ಜಿಲ್ಲೆ

ಪಟ್ಟಿಯನ್ನು ಪರಿಶೀಲಿಸುವುದು ಹೇಗೆ?

ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಇಲಾಖೆಯ ಈ ಅಧಿಕೃತ ವೆಬ್‌ಸೈಟ್ ಲಿಂಕ್‌ ಅನ್ನು ಬಳಸಿ ತಮ್ಮ ಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

CAR DAR Constable 1:5 PST/PET Eligibility List 2026: Download PDF

1:5 ಪಟ್ಟಿಯಲ್ಲಿ ಹೆಸರು ಬಂದಿರುವ ಅಭ್ಯರ್ಥಿಗಳು ಶೀಘ್ರದಲ್ಲೇ ನಡೆಯಲಿರುವ ತಮ್ಮ ಮುಂದಿನ ದೈಹಿಕ ಪರೀಕ್ಷೆಗೆ (Physical Test) ಸಿದ್ಧರಾಗಲು ಸೂಚಿಸಲಾಗಿದೆ. PST/PET ಪರೀಕ್ಷೆಯ ದಿನಾಂಕಗಳನ್ನು ಶೀಘ್ರದಲ್ಲೇ ಇಲಾಖೆಯು ಪ್ರಕಟಿಸಲಿದೆ.

KEA VAO Exam Key Answer 2026

HDFC ಬ್ಯಾಂಕ್ ವಿದ್ಯಾರ್ಥಿವೇತನ 2026-27: ₹75,000 ವರೆಗೆ ಸ್ಕಾಲರ್‌ಶೀಪ್

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment