ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil Police Constable) ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಹತ್ವದ ಮಾಹಿತಿಯೊಂದನ್ನು ನೀಡಿದೆ.
2026 ರ ಆಗಸ್ಟ್ 02 ರಂದು ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ಕೆಇಎ ಅಧಿಕೃತ ಪರಿಷ್ಕೃತ ವೇಳಾಪಟ್ಟಿಯನ್ನು (Revised Schedule) ಬಿಡುಗಡೆ ಮಾಡಿದೆ.
ಸಮಯ ಬದಲಾವಣೆಗೆ ಕಾರಣವೇನು?: ಈ ಮೊದಲು ದಿನಾಂಕ 05-06-2026 ರಂದು ಹೊರಡಿಸಲಾದ ಅಧಿಸೂಚನೆಯಂತೆ ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯನ್ನು 2026 ರ ಆಗಸ್ಟ್ 2 ರಂದು ಮಧ್ಯಾಹ್ನ 2:30 ರಿಂದ 4:00 ರವರೆಗೆ ನಡೆಸಲು ತೀರ್ಮಾನಿಸಲಾಗಿತ್ತು.
ಆದರೆ, ಬೆಳಗಿನ ಅವಧಿಯ ಪರೀಕ್ಷಾ ಕೇಂದ್ರಗಳಿಂದ ಮಧ್ಯಾಹ್ನದ ಪರೀಕ್ಷಾ ಕೇಂದ್ರಗಳು ದೂರವಿರುವುದರಿಂದ ನಿಗದಿತ ಸಮಯಕ್ಕೆ ತಲುಪಲು ಕಷ್ಟವಾಗುತ್ತದೆ ಎಂದು ಹಲವು ಅಭ್ಯರ್ಥಿಗಳು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು. ಅಭ್ಯರ್ಥಿಗಳ ಹಿತದೃಷ್ಟಿಯನ್ನು ಪರಿಗಣಿಸಿ ಕೆಇಎ ಈಗ ಪರೀಕ್ಷಾ ಸಮಯವನ್ನು ಪರಿಷ್ಕರಿಸಿದೆ.
ಕಲ್ಯಾಣ ಕರ್ನಾಟಕ ವೃಂದದ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಮತ್ತು ವಿವರಗಳು:
- ಪರೀಕ್ಷಾ ದಿನಾಂಕ: 02-08-2026 (ಭಾನುವಾರ)
- ಹೊಸ ಪರೀಕ್ಷಾ ಸಮಯ: ಸಂಜೆ 4.00 ರಿಂದ ಸಂಜೆ 5.30 ರವರೆಗೆ (ಹಿಂದಿನ ಸಮಯ: ಮಧ್ಯಾಹ್ನ 2.30 ರಿಂದ 4.00)
- ಪರೀಕ್ಷಾ ವಿಷಯ: ಸಾಮಾನ್ಯ ಜ್ಞಾನ, ವಿಜ್ಞಾನ, ಭೂಗೋಳ, ಇತಿಹಾಸ, ಭಾರತದ ಸಂವಿಧಾನ, ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿ, ಮಾನಸಿಕ ಸಾಮರ್ಥ್ಯ ಮತ್ತು ನೈತಿಕ ಶಿಕ್ಷಣವನ್ನು ಒಳಗೊಂಡ ‘ಸಾಮಾನ್ಯ ಅಧ್ಯಯನ’ (General Studies).
- ಒಟ್ಟು ಪ್ರಶ್ನೆಗಳು: 100 ಪ್ರಶ್ನೆಗಳು
- ಗರಿಷ್ಠ ಅಂಕಗಳು: 100 ಅಂಕಗಳು
ಸೂಚನೆ: ದಿನಾಂಕ 05-06-2026 ರಂದು ಹೊರಡಿಸಲಾದ ಮೂಲ ಅಧಿಸೂಚನೆಯಲ್ಲಿನ ಇತರ ಯಾವುದೇ ಷರತ್ತು ಹಾಗೂ ನಿಯಮಗಳಲ್ಲಿ ಬದಲಾವಣೆ ಇರುವುದಿಲ್ಲ ಎಂದು ಕೆಇಎ ಕಾರ್ಯಾಚರಣಾ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಹೊಸ ವೇಳಾಪಟ್ಟಿಗೆ ತಕ್ಕಂತೆ ಪರೀಕ್ಷಾ ಕೇಂದ್ರಕ್ಕೆ ತಲುಪಲು ಯೋಜಿಸಿಕೊಳ್ಳಲು ಕೋರಲಾಗಿದೆ.
- ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕೃತ ಪ್ರಕಟಣೆ: ಡೌನ್‌ಲೋಡ್
- ಪೊಲೀಸ್ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷೆಯ ಪ್ರವೇಶ ಪತ್ರ: ಡೌನ್‌ಲೋಡ್
ಈ ಕೇಳಗಿನ ಸುದ್ದಿಗಳನ್ನು ಓದಿ: