ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., (SHIMUL Recruitment 2026) ನಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳ ನೇಮಕಾತಿಗಾಗಿ ಪರಿಷ್ಕೃತ ಅಧಿಕೃತ ಪ್ರಕಟಣೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿ, ಶೈಕ್ಷಣಿಕ ಅರ್ಹತೆ, ವೇತನ ಶ್ರೇಣಿ, ಅರ್ಜಿ ಶುಲ್ಕ ಹಾಗೂ ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
SHIMUL Recruitment 2026 ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿ., (SHIMUL)
- ಒಟ್ಟು ಹುದ್ದೆಗಳ ಸಂಖ್ಯೆ: 194 ಹುದ್ದೆಗಳು
- ಉದ್ಯೋಗ ಸ್ಥಳ: ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ
- ಅರ್ಜಿ ಸಲ್ಲಿಕೆ ವಿಧಾನ: ಆನ್ಲೈನ್
- ವೇತನ ಶ್ರೇಣಿ: 34,100 ರೂ. ರಿಂದ 1,55,200 ರೂ.
ಹುದ್ದೆಗಳ ವಿವರ, ವೇತನ ಶ್ರೇಣಿ ಹಾಗೂ ಶೈಕ್ಷಣಿಕ ಅರ್ಹತೆ:
1) ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ):
- ಹುದ್ದೆಗಳು: 17
- ವೇತನ ಶ್ರೇಣಿ: 83,700 – 1,55,200 ರೂ.
- ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಶುವೈದ್ಯಕೀಯ ವಿಜ್ಞಾನ ಮತ್ತು ಪಶು ಸಂಗೋಪನೆ ವಿಷಯದಲ್ಲಿ (ಬಿ.ವಿ.ಎಸ್ಸಿ ಅಂಡ್ ಎಹೆಚ್) ಪದವಿಯನ್ನು ಹೊಂದಿರಬೇಕು.
2) ಸಹಾಯಕ ವ್ಯವಸ್ಥಾಪಕರು (ಆಡಳಿತ):
- ಹುದ್ದೆಗಳು: 01
- ವೇತನ ಶ್ರೇಣಿ: 83,700 – 1,55,200 ರೂ.
- ಶೈಕ್ಷಣಿಕ ಅರ್ಹತೆ: ಮಾನವ ಸಂಪನ್ಮೂಲ ವಿಷಯದಲ್ಲಿ 2 ವರ್ಷಗಳ ಪೂರ್ಣಾವಧಿ ಎಂಬಿಎ ಜೊತೆಗೆ ಆಡಳಿತ ನಿರ್ವಹಣೆಯಲ್ಲಿ 3 ವರ್ಷಗಳ ಸೇವಾನುಭವ ಹಾಗೂ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
3) ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್):
- ಹುದ್ದೆಗಳು: 03
- ವೇತನ ಶ್ರೇಣಿ: 83,700 – 1,55,200 ರೂ.
- ಶೈಕ್ಷಣಿಕ ಅರ್ಹತೆ: ಕೃಷಿ ವಿಜ್ಞಾನ ವಿಷಯದಲ್ಲಿ ಬಿ.ಎಸ್ಸಿ (ಕೃಷಿ) ಪದವಿ ಹೊಂದಿರಬೇಕು.
4) ಎಂಐಎಸ್ / ಸಿಸ್ಟಂ ಆಫೀಸರ್:
- ಹುದ್ದೆಗಳು: 01
- ವೇತನ ಶ್ರೇಣಿ: 69,250 – 1,34,200 ರೂ.
- ಶೈಕ್ಷಣಿಕ ಅರ್ಹತೆ: ಬಿಇ ಕಂಪ್ಯೂಟರ್ ಸೈನ್ಸ್ ಅಥವಾ ಇನ್ಫಾರ್ಮೇಷನ್ ಸೈನ್ಸ್ ಇಂಜಿನಿಯರಿಂಗ್ ಪದವಿಯನ್ನು ಹೊಂದಿರಬೇಕು.
5) ಮಾರುಕಟ್ಟೆ ಅಧಿಕಾರಿ:
- ಹುದ್ದೆಗಳು: 02
- ವೇತನ ಶ್ರೇಣಿ: 69,250 – 1,34,200 ರೂ.
- ಶೈಕ್ಷಣಿಕ ಅರ್ಹತೆ: ಬಿ.ಕಾಂ / ಬಿ.ಎಸ್ಸಿ / ಬಿಬಿಎಂ ಪದವಿ ಜೊತೆಗೆ ಮಾರುಕಟ್ಟೆಯಲ್ಲಿ 3 ವರ್ಷಗಳ ಅನುಭವದೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
6) ತಾಂತ್ರಿಕ ಅಧಿಕಾರಿ (ಅಭಿಯಂತರ):
- ಹುದ್ದೆಗಳು: 02 (ಮೆಕಾನಿಕಲ್ – 01, ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್ – 01)
- ವೇತನ ಶ್ರೇಣಿ: 69,250 – 1,34,200 ರೂ.
- ಶೈಕ್ಷಣಿಕ ಅರ್ಹತೆ: ಬಿಇ (ಮೆಕಾನಿಕಲ್) ಅಥವಾ ಬಿಇ (ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್) ಪದವಿ ಹೊಂದಿರಬೇಕು.
- ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ: ಸಾಮಾನ್ಯ ವರ್ಗಕ್ಕೆ 40 ವರ್ಷ, 2ಎ/2ಬಿ/3ಎ/3ಬಿ ವರ್ಗಗಳಿಗೆ 43 ವರ್ಷ, ಹಾಗೂ ಪ.ಜಾ/ಪ.ಪಂ/ಪ್ರವರ್ಗ-1 ಕ್ಕೆ 45 ವರ್ಷ.
7) ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ):
- ಹುದ್ದೆಗಳು: 02 (ಕೆಮಿಸ್ಟ್ರಿ – 01, ಮೈಕ್ರೋಬಯಾಲಜಿ – 01)
- ವೇತನ ಶ್ರೇಣಿ: 69,250 – 1,34,200 ರೂ.
- ಶೈಕ್ಷಣಿಕ ಅರ್ಹತೆ: ಎಂ.ಎಸ್ಸಿ (ಕೆಮಿಸ್ಟ್ರಿ) ಅಥವಾ ಎಂ.ಎಸ್ಸಿ (ಮೈಕ್ರೋಬಯಾಲಜಿ) ಸ್ನಾತಕೋತ್ತರ ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
8) ತಾಂತ್ರಿಕ ಅಧಿಕಾರಿ (ಡಿಟಿ):
- ಹುದ್ದೆಗಳು: 14
- ವೇತನ ಶ್ರೇಣಿ: 69,250 – 1,34,200 ರೂ.
- ಶೈಕ್ಷಣಿಕ ಅರ್ಹತೆ: ಬಿ.ಟೆಕ್ (ಡೈರಿ ಟೆಕ್ನಾಲಜಿ) ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
9) ಕೆಮಿಸ್ಟ್ ದರ್ಜೆ-1:
- ಹುದ್ದೆಗಳು: 06 (ಕೆಮಿಸ್ಟ್ರಿ – 04, ಮೈಕ್ರೋಬಯಾಲಜಿ – 02)
- ವೇತನ ಶ್ರೇಣಿ: 54,175 – 99,400 ರೂ.
- ಶೈಕ್ಷಣಿಕ ಅರ್ಹತೆ: ಬಿ.ಎಸ್ಸಿ ಪದವಿಯಲ್ಲಿ ಕೆಮಿಸ್ಟ್ರಿ ಅಥವಾ ಮೈಕ್ರೋಬಯಾಲಜಿ ವಿಷಯ ವ್ಯಾಸಂಗ ಮಾಡಿರಬೇಕು. ಜೊತೆಗೆ ಡೈರಿ / ಆಹಾರ ಸಂಸ್ಕರಣಾ ಘಟಕಗಳಲ್ಲಿ 2 ವರ್ಷಗಳ ಅನುಭವ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
10) ವಿಸ್ತರಣಾಧಿಕಾರಿ ದರ್ಜೆ-3:
- ಹುದ್ದೆಗಳು: 17
- ವೇತನ ಶ್ರೇಣಿ: 54,175 – 99,400 ರೂ.
- ಶೈಕ್ಷಣಿಕ ಅರ್ಹತೆ: ಯಾವುದೇ ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
11) ಆಡಳಿತ ಸಹಾಯಕ ದರ್ಜೆ-2:
- ಹುದ್ದೆಗಳು: 17
- ವೇತನ ಶ್ರೇಣಿ: 44,425 – 83,700 ರೂ.
- ಶೈಕ್ಷಣಿಕ ಅರ್ಹತೆ: ಯಾವುದೇ ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
12) ಲೆಕ್ಕ ಸಹಾಯಕ ದರ್ಜೆ-2:
- ಹುದ್ದೆಗಳು: 12
- ವೇತನ ಶ್ರೇಣಿ: 44,425 – 83,700 ರೂ.
- ಶೈಕ್ಷಣಿಕ ಅರ್ಹತೆ: ಬಿ.ಕಾಂ ಪದವಿಯೊಂದಿಗೆ ಟ್ಯಾಲಿ ಸರ್ಟಿಫಿಕೇಟ್ ಅಥವಾ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
13) ಮಾರುಕಟ್ಟೆ ಸಹಾಯಕ ದರ್ಜೆ-2:
- ಹುದ್ದೆಗಳು: 10
- ವೇತನ ಶ್ರೇಣಿ: 44,425 – 83,700 ರೂ.
- ಶೈಕ್ಷಣಿಕ ಅರ್ಹತೆ: ಬಿಬಿಎಂ / ಬಿ.ಎಸ್ಸಿ ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
14) ಕೆಮಿಸ್ಟ್ ದರ್ಜೆ-2:
- ಹುದ್ದೆಗಳು: 28 (ಕೆಮಿಸ್ಟ್ರಿ – 20, ಮೈಕ್ರೋಬಯಾಲಜಿ – 08)
- ವೇತನ ಶ್ರೇಣಿ: 44,425 – 83,700 ರೂ.
- ಶೈಕ್ಷಣಿಕ ಅರ್ಹತೆ: ಬಿ.ಎಸ್ಸಿ ಪದವಿಯಲ್ಲಿ ಕೆಮಿಸ್ಟ್ರಿ ಅಥವಾ ಮೈಕ್ರೋಬಯಾಲಜಿ ವಿಷಯವನ್ನು ವ್ಯಾಸಂಗ ಮಾಡಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
15) ಕಿರಿಯ ಸಿಸ್ಟಂ ಆಪರೇಟರ್:
- ಹುದ್ದೆಗಳು: 13
- ವೇತನ ಶ್ರೇಣಿ: 44,425 – 83,700 ರೂ.
- ಶೈಕ್ಷಣಿಕ ಅರ್ಹತೆ: ಯಾವುದೇ ಪದವಿಯೊಂದಿಗೆ ಕನಿಷ್ಟ 1 ವರ್ಷದ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸ್ ಹಾಗೂ 3 ವರ್ಷಗಳ ಅನುಭವ ಹೊಂದಿರಬೇಕು.
16) ಶೀಘ್ರಲಿಪಿಗಾರರು ದರ್ಜೆ-2:
- ಹುದ್ದೆಗಳು: 01
- ವೇತನ ಶ್ರೇಣಿ: 44,425 – 83,700 ರೂ.
- ಶೈಕ್ಷಣಿಕ ಅರ್ಹತೆ: ಯಾವುದೇ ಪದವಿಯೊಂದಿಗೆ ಸೀನಿಯರ್ ಇಂಗ್ಲೀಷ್ ಮತ್ತು ಕನ್ನಡ ಶಾರ್ಟ್ ಹ್ಯಾಂಡ್ ಹಾಗೂ ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ಜ್ಞಾನ ಹೊಂದಿರಬೇಕು.
17) ಕಿರಿಯ ತಾಂತ್ರಿಕರು:
- ಹುದ್ದೆಗಳು: 50 (ಎಲೆಕ್ಟಿಕಲ್, ರೆಫ್ರಿಜರೇಷನ್, ಬಾಯ್ಲರ್ ಅಟೆಂಡೆಂಟ್, ಫಿಟ್ಟರ್, ವೆಲ್ಡರ್)
- ವೇತನ ಶ್ರೇಣಿ: 34,100 – 67,600 ರೂ.
- ಶೈಕ್ಷಣಿಕ ಅರ್ಹತೆ: ಎಸ್.ಎಸ್.ಎಲ್.ಸಿ ಯೊಂದಿಗೆ ಸಂಬಂಧಪಟ್ಟ ಟ್ರೇಡ್ನಲ್ಲಿ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ (NTC) / NCVT ಅಥವಾ ಬಾಯ್ಲರ್ ಅಟೆಂಡೆಂಟ್ ದರ್ಜೆ-2 ಪ್ರಮಾಣ ಪತ್ರ ಹೊಂದಿರಬೇಕು.
SHIMUL Recruitment 2026 ವಯೋಮಿತಿ: ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು (14-07-2026) ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸು ತುಂಬಿರಬೇಕು.
ವಯೋಮಿತಿ ಸಡಿಲಿಕೆ: ಸರ್ಕಾರದ ವಿಶೇಷ ಆದೇಶದನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ. ಅದರಂತೆ ಪರಿಷ್ಕೃತ ಗರಿಷ್ಠ ವಯೋಮಿತಿ ವಿವರ ಹೀಗಿದೆ:
- ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳಿಗೆ: 40 ವರ್ಷಗಳು.
- ಹಿಂದುಳಿದ ವರ್ಗಗಳ (2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳಿಗೆ: 43 ವರ್ಷಗಳು.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ: 45 ವರ್ಷಗಳು.
- ವಿಕಲಚೇತನ ಹಾಗೂ ವಿಧವೆ ಅಭ್ಯರ್ಥಿಗಳಿಗೆ: ನಿಯಮಾನುಸಾರ 10 ವರ್ಷಗಳ ಹೆಚ್ಚುವರಿ ವಯೋಮಿತಿ ಸಡಿಲಿಕೆ ಇರುತ್ತದೆ.
- ಮಾಜಿ ಸೈನಿಕರು ಹಾಗೂ ಎನ್ಸಿಸಿ ಕೆಡೆಟ್ ಇನ್ಸ್ಟ್ರಕ್ಟರ್ಗಳಿಗೆ: ಅವರು ಸೇವೆ ಸಲ್ಲಿಸಿದ ಅವಧಿಗೆ ತಕ್ಕಂತೆ ವಯೋಮಿತಿ ವಿನಾಯಿತಿ ದೊರೆಯಲಿದೆ.
ಅರ್ಜಿ ಶುಲ್ಕ:
- ಸಾಮಾನ್ಯ ಮತ್ತು ಇತರ ಎಲ್ಲಾ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ: ರೂ. 1000/-
- SC, ST, Cat-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: ರೂ. 500/-
- ಅರ್ಜಿ ಶುಲ್ಕವನ್ನು ಆನ್ಲೈನ್ ಪಾವತಿ ವಿಧಾನದ ಮೂಲಕ ಮಾತ್ರ ಪಾವತಿಸಬೇಕು.
ಪ್ರಮುಖ ದಿನಾಂಕಗಳು:
- ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14-06-2026
- ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಗೆ ಕೊನೆಯ ದಿನಾಂಕ: 14-07-2026
ಪ್ರಮುಖ ಲಿಂಕ್ಗಳು:
- ಪ್ರಕಟಣೆ: ಡೌನ್ಲೋಡ್
- ಅಧಿಕೃತ ಅಧಿಸೂಚನೆ: ಡೌನ್ಲೋಡ್
- ಆನ್ಲೈನ್ ಅರ್ಜಿ: Apply ಮಾಡಿ
- ಅಧಿಕೃತ ವೆಬ್ಸೈಟ್: www.shimul.coop
ಈ ಕೇಳಗಿನ ಸುದ್ದಿಗಳನ್ನು ಓದಿ: