LPG Cylinder Price Hike: ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ; ಹೊಸ ದರ ಇಂದಿನಿಂದಲೇ ಜಾರಿ

Telegram Group Join Now
WhatsApp Group Join Now

ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಇದೀಗ ಜನಸಾಮಾನ್ಯರಿಗೆ ಮತ್ತೊಂದು ಆಘಾತ ಎದುರಾಗಿದೆ. ಗೃಹಬಳಕೆಯ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಬೆಲೆಯನ್ನು ದಿಢೀರ್ ಹೆಚ್ಚಿಸಲಾಗಿದ್ದು, ಪರಿಷ್ಕೃತ ಹೊಸ ದರಗಳು ಇಂದಿನಿಂದಲೇ (ಜೂನ್ 7) ದೇಶಾದ್ಯಂತ ಜಾರಿಗೆ ಬಂದಿವೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಗ್ರಾಹಕರಿಗೆ ತಟ್ಟಿದ ಎರಡನೇ ದರ ಏರಿಕೆಯ ಬಿಸಿ ಇದಾಗಿದೆ. ಈ ಮೊದಲು ಮಾರ್ಚ್ 7ರಂದು ತೈಲ ಕಂಪನಿಗಳು ಸಿಲಿಂಡರ್ ಬೆಲೆಯಲ್ಲಿ 60 ರೂ.ಗಳ ಭಾರಿ ಹೆಚ್ಚಳ ಮಾಡಿದ್ದವು.

ಇದೀಗ ಗೃಹಬಳಕೆಯ ಸಿಲಿಂಡರ್ ದರವನ್ನು ಮತ್ತೆ 29 ರೂ.ಗಳಷ್ಟು ಹೆಚ್ಚಳ ಮಾಡಲಾಗಿದೆ. ಇಂದಿನ ಈ ಏರಿಕೆಯೊಂದಿಗೆ, ದೆಹಲಿಯಲ್ಲಿ 14.2 ಕೆ.ಜಿ ತೂಕದ ಗೃಹಬಳಕೆ ಸಿಲಿಂಡರ್ ಬೆಲೆ ಈ ಹಿಂದಿನ 913 ರೂ. ಗಳಿಂದ 942 ರೂಪಾಯಿಗಳಿಗೆ ತಲುಪಿದೆ. ರಾಜ್ಯ ಹಾಗೂ ನಗರಗಳ ಸ್ಥಳೀಯ ತೆರಿಗೆಗಳು (Taxes) ಮತ್ತು ಸಾರಿಗೆ ವೆಚ್ಚದ ಆಧಾರದ ಮೇಲೆ ಗ್ರಾಹಕರ ಕೈಸೇರುವ ಅಂತಿಮ ದರದಲ್ಲಿ ಕೊಂಚ ವ್ಯತ್ಯಾಸವಿರಲಿದೆ.

ಬೆಲೆ ಏರಿಕೆಗೆ ಕಾರಣವೇನು? ಈ ಬೆಲೆ ಏರಿಕೆಗೆ ಜಾಗತಿಕ ಮಾರುಕಟ್ಟೆಯ ಏರಿಳಿತವೇ ಪ್ರಮುಖ ಕಾರಣ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ನಿರಂತರ ಸಂಘರ್ಷದಿಂದಾಗಿ ಜಾಗತಿಕ ತೈಲ ಹಾಗೂ ಅನಿಲ ಪೂರೈಕೆ ವ್ಯವಸ್ಥೆಯ ಮೇಲೆ ಭಾರಿ ಒತ್ತಡ ಉಂಟಾಗಿದೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಗಗನಕ್ಕೇರಲು ದಾರಿಮಾಡಿಕೊಟ್ಟಿದೆ.

ಇಷ್ಟಾದರೂ ತೈಲ ಕಂಪನಿಗಳಿಗೆ 700 ರೂ. ನಷ್ಟ!: ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, “ಬೆಲೆ ಏರಿಕೆ ಮಾಡಿದ್ದರೂ ಸಹ ತೈಲ ಕಂಪನಿಗಳಿಗೆ ನಷ್ಟ ತಪ್ಪಿಲ್ಲ. ಪ್ರತಿ ಗೃಹಬಳಕೆ ಸಿಲಿಂಡರ್ ಮಾರಾಟದ ಮೇಲೆ ತೈಲ ಕಂಪನಿಗಳು ಇನ್ನೂ ಸುಮಾರು 700 ರೂ.ಗಳಷ್ಟು ‘ಅಂಡರ್ ರಿಕವರಿ’ ಎದುರಿಸುತ್ತಿವೆ” ಎಂದು ತಿಳಿಸಿದ್ದಾರೆ.

ಜೊತೆಗೆ, ದೇಶದಲ್ಲಿ ಅಡುಗೆ ಅನಿಲದ ಕೊರತೆಯಾಗದಂತೆ, ಅದರ ಲಭ್ಯತೆಯನ್ನು ಕಾಯ್ದುಕೊಳ್ಳಲು ಆಮದು ಪ್ರಕ್ರಿಯೆ ಹಾಗೂ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹೋಟೆಲ್ ಊಟವೂ ದುಬಾರಿ: ಮತ್ತೊಂದೆಡೆ, ವಾಣಿಜ್ಯ ಬಳಕೆಯ (Commercial) ಸಿಲಿಂಡರ್‌ಗಳ ಬೆಲೆ ಹಾಗೂ ಕೊರತೆಯಿಂದಾಗಿ ಹೋಟೆಲ್ ಉದ್ಯಮಕ್ಕೂ ಪೆಟ್ಟು ಬಿದ್ದಿದೆ. ನಷ್ಟವನ್ನು ಸರಿದೂಗಿಸಲು ಹೋಟೆಲ್ ಮಾಲೀಕರು ಊಟ-ತಿಂಡಿಯ ದರಗಳನ್ನು ಹೆಚ್ಚಿಸುತ್ತಿದ್ದಾರೆ. ಒಟ್ಟಾರೆಯಾಗಿ ಜಾಗತಿಕ ಬಿಕ್ಕಟ್ಟು ಶಮನವಾಗುವವರೆಗೂ ಈ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರನ್ನು ಕಾಡುವ ಸಾಧ್ಯತೆಯಿದೆ.

ಗೃಹಜ್ಯೋತಿ, ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹೊಸ ನಿಯಮ

KSP ಸಿವಿಲ್ ಕಾನ್ಸ್‌ಟೇಬಲ್ ನೇಮಕಾತಿ 2026

ವಿದ್ಯಾರ್ಥಿಗಳಿಗೆ ₹35 ಸಾವಿರ ಪ್ರೋತ್ಸಾಹಧನ; ಆನ್‌ಲೈನ್‌ ಅರ್ಜಿ ಆಹ್ವಾನ

SSLC ಪಾಸಾದ ವಿದ್ಯಾರ್ಥಿಗಳಿಗೆ 15,000 ರೂ. ಪ್ರೋತ್ಸಾಹಧನ

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment