ರಾಜ್ಯದಲ್ಲಿ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಮತ್ತು ಇತರೆ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಬಿಪಿಎಲ್ (BPL) ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ. ಹೀಗಾಗಿ ಈಗಾಗಲೇ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರು ಮತ್ತು ಹಳೆಯ ಕಾರ್ಡ್ ಹೊಂದಿರುವವರು ತಮ್ಮ ಕಾರ್ಡ್ ಸ್ಥಿತಿಯನ್ನು (Ration Card Status) ತಿಳಿದುಕೊಳ್ಳಲು ಪ್ರಯತ್ನ ಪಡುತ್ತಾರೆ.
ನಿಮ್ಮ ರೇಷನ್ ಕಾರ್ಡ್ Active (ಚಾಲ್ತಿ) ಆಗಿದೆಯಾ? ಅಥವಾ ರದ್ದಾಗಿದೆಯಾ? ನೀವು ಸಲ್ಲಿಸಿದ ಹೊಸ ಅರ್ಜಿ ಏನಾಗಿದೆ? ಎಂಬುದನ್ನು ತಿಳಿಯಲು ಕಚೇರಿಗೆ ಅಲೆಯಬೇಕಿಲ್ಲ. ನಿಮ್ಮ ಮೊಬೈಲ್‌ನಲ್ಲೇ ಕೆಲವೇ ನಿಮಿಷಗಳಲ್ಲಿ ಚೆಕ್ ಮಾಡಬಹುದು.
1. ಹೊಸ ರೇಷನ್ ಕಾರ್ಡ್ ಅರ್ಜಿ ಸ್ಥಿತಿ (New Ration Card Status) ಚೆಕ್ ಮಾಡುವುದು ಹೇಗೆ?
ನೀವು ಹೊಸದಾಗಿ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದರೆ, ಅದು ಯಾವ ಹಂತದಲ್ಲಿದೆ ಎಂದು ತಿಳಿಯಲು ಈ ಹಂತಗಳನ್ನು ಅನುಸರಿಸಿ:
- ಹಂತ 1: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್
ahara.karnataka.gov.inಗೆ ಭೇಟಿ ನೀಡಿ. - ಹಂತ 2: ಮುಖಪುಟದಲ್ಲಿ ‘ಇ-ಸೇವೆಗಳು’ (e-Services) ವಿಭಾಗದಲ್ಲಿ ‘ಇ-ಸ್ಥಿತಿ’ (e-Status) ಮೇಲೆ ಕ್ಲಿಕ್ ಮಾಡಿ. ನಂತರ ‘ಹೊಸ/ಹಾಲಿ ಪಡಿತರ ಚೀಟಿಯ ಸ್ಥಿತಿ’ ಆಯ್ಕೆ ಮಾಡಿಕೊಳ್ಳಿ.
- ಹಂತ 3: ನಿಮ್ಮ ಜಿಲ್ಲೆಗೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ. (ಜಿಲ್ಲಾವಾರು ಲಿಂಕ್ ಕೆಳಗೆ ನೀಡಲಾಗಿದೆ).
- ಹಂತ 4: “Status of new ration card application” (ಹೊಸ ಪಡಿತರ ಚೀಟಿಗೆ ಸಲ್ಲಿಸಲಾದ ಅರ್ಜಿಯ ಸ್ಥಿತಿ) ಆಯ್ಕೆ ಮಾಡಿ.
- ಹಂತ 5: ನೀವು ನಗರ ಪ್ರದೇಶದವರಾದರೆ ‘Urban’, ಗ್ರಾಮೀಣ ಪ್ರದೇಶದವರಾದರೆ ‘Rural’ ಆಯ್ಕೆ ಮಾಡಿ.
- ಹಂತ 6: ನಿಮಗೆ ನೀಡಿರುವ ‘Acknowledgment Number’ (ಸ್ವೀಕೃತಿ ಸಂಖ್ಯೆ) ನಮೂದಿಸಿ, ‘Go’ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿಯ ಸ್ಟೇಟಸ್ ತಿಳಿಯುತ್ತದೆ.
2. ನಿಮ್ಮ ಹಳೆಯ/ ಹಾಲಿ ರೇಷನ್ ಕಾರ್ಡ್ ಸ್ಟೇಟಸ್ ನೋಡುವುದು ಹೇಗೆ?
ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿದೆಯಾ (Active) ಅಥವಾ ರದ್ದಾಗಿದೆಯಾ (Cancelled) ಎಂದು ತಿಳಿಯಲು ಮತ್ತು e-KYC ಆಗಿದೆಯಾ ಎಂದು ನೋಡಲು ಹೀಗೆ ಮಾಡಿ:
- ಅದೇ ವೆಬ್‌ಸೈಟ್‌ನಲ್ಲಿ ನಿಮ್ಮ ಜಿಲ್ಲೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಈಗ “Status of Ration Card” (ಪಡಿತರ ಚೀಟಿಯ ಸ್ಥಿತಿ) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಪರಿಶೀಲನಾ ವಿಧಾನದಲ್ಲಿ “With OTP” ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
- ನಿಮ್ಮ ರೇಷನ್ ಕಾರ್ಡ್ ನಂಬರ್ (RC Number) ಎಂಟರ್ ಮಾಡಿ ‘Go’ ಕೊಡಿ.
- ನಂತರ ‘Select Member’ ಎಂಬಲ್ಲಿ ಕಾರ್ಡ್‌ನಲ್ಲಿರುವ ಮನೆಯ ಯಜಮಾನರ ಅಥವಾ ಸದಸ್ಯರ ಹೆಸರನ್ನು ಆಯ್ಕೆ ಮಾಡಿ. (ಆಧಾರ್ ಲಿಂಕ್ ಇರುವ ಮೊಬೈಲ್‌ಗೆ OTP ಬರುತ್ತದೆ).
- ಮೊಬೈಲ್‌ಗೆ ಬಂದ OTP ನಮೂದಿಸಿ ‘Go’ ಕ್ಲಿಕ್ ಮಾಡಿ.
- ಈಗ ನಿಮ್ಮ ರೇಷನ್ ಕಾರ್ಡ್ ವಿವರ ತೆರೆದುಕೊಳ್ಳುತ್ತದೆ. ಅದರಲ್ಲಿ ಹಸಿರು ಬಣ್ಣದಲ್ಲಿ “Active” ಎಂದು ಇದ್ದರೆ ನಿಮ್ಮ ಕಾರ್ಡ್ ಸುರಕ್ಷಿತವಾಗಿದೆ ಎಂದರ್ಥ.
Ration Card Status Check Direct Links:
ನಿಮ್ಮ ಜಿಲ್ಲೆ ಯಾವ ವಿಭಾಗಕ್ಕೆ ಬರುತ್ತದೆಯೋ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಚೆಕ್ ಮಾಡಿ:
- ಬೆಂಗಳೂರು ನಗರ ಮತ್ತು ಗ್ರಾಮಾಂತರ: 👉 Click Here for Bengaluru Division
- ಬಳ್ಳಾರಿ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ: 👉 Click Here for North & Central Karnataka
- ಮೈಸೂರು, ಮಂಡ್ಯ, ಹಾಸನ, ಕೊಡಗು, ಚಾಮರಾಜನಗರ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು: 👉 Click Here for South & Coastal Karnataka
ವಿಶೇಷ ಸೂಚನೆ: ಒಂದು ವೇಳೆ ಲಿಂಕ್ ಓಪನ್ ಆಗದಿದ್ದರೆ ಅಥವಾ “Data Not Found” ಎಂದು ಬಂದರೆ, ನೀವು ತಪ್ಪು ವಿಭಾಗದ (Division) ಲಿಂಕ್ ಕ್ಲಿಕ್ ಮಾಡಿರಬಹುದು. ಬೇರೆ ಲಿಂಕ್ ಪ್ರಯತ್ನಿಸಿ.
ಇತರೆ ಮಾಹಿತಿಗಳನ್ನು ಓದಿ:
Udyogini Scheme: 1.5 ಲಕ್ಷ ರೂ. ಸಹಾಯಧನಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ
Cibil Score New Rules: ಸಿಬಿಲ್ ಸ್ಕೋರ್ ಇಲ್ಲವೆಂದು ಸಾಲ ಸಿಗುತ್ತಿಲ್ಲವೇ? ಚಿಂತೆ ಬಿಡಿ