Repo Rate Cuts: ಸಾಲದ ಬಡ್ಡಿ ದರ ಇಳಿಕೆ ಮಾಡಿದ RBI; Home Loan, ವಾಹನ ಮತ್ತು ವೈಯಕ್ತಿಕ ಸಾಲ ಪಡೆದವರ EMI ಭಾರ ಇಳಿಕೆ..!

Telegram Group Join Now
WhatsApp Group Join Now

ಮನೆ, ವಾಹನ ಮತ್ತು ವೈಯಕ್ತಿಕ ಸಾಲ ಪಡೆದು ಇಎಂಐ (EMI) ಹೊರೆಯಿಂದ ಬಳಲುತ್ತಿರುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಭರ್ಜರಿ ಸಿಹಿ ಸುದ್ದಿ ನೀಡಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ, ಆರ್‌ಬಿಐ ತನ್ನ ರೆಪೋ ದರವನ್ನು (Repo RateCuts) ಶೇ. 5.5 ರಿಂದ ಶೇ. 5.25 ಕ್ಕೆ ಇಳಿಕೆ ಮಾಡಿದೆ.

ಆರ್‌ಬಿಐನ ಹಣಕಾಸು ನೀತಿ ಸಮಿತಿಯ (MPC) ಸಭೆಯ ಬಳಿಕ ಗವರ್ನರ್ ಸಂಜಯ್ ಮಲ್ಹೋತ್ರಾ (Sanjay Malhotra) ಈ ನಿರ್ಧಾರವನ್ನು ಪ್ರಕಟಿಸಿದ್ದು, ರೆಪೋ ದರದಲ್ಲಿ 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತ ಮಾಡಲಾಗಿದೆ.

ಇದರಿಂದ ನಿಮಗೇನು ಲಾಭ?: ರೆಪೋ ದರ ಎಂದರೆ ಬ್ಯಾಂಕುಗಳಿಗೆ ಆರ್‌ಬಿಐ ನೀಡುವ ಸಾಲದ ಮೇಲಿನ ಬಡ್ಡಿ ದರ. ಈಗ ಈ ದರ ಕಡಿಮೆಯಾಗಿರುವುದರಿಂದ:

  • ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ನೀಡುವ ಸಾಲದ ಬಡ್ಡಿ ದರವನ್ನು ಕಡಿಮೆ ಮಾಡಲಿವೆ.
  • ಇದರಿಂದ ಗೃಹ ಸಾಲ (Home Loan), ವಾಹನ ಸಾಲ (Car Loan) ಮತ್ತು ಇತರೆ ಸಾಲಗಳ ಮಾಸಿಕ ಕಂತು (EMI) ಕಡಿಮೆ ಆಗುವ ನಿರೀಕ್ಷೆಯಿದೆ.
  • ಹೊಸದಾಗಿ ಸಾಲ ಪಡೆಯುವವರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸಿಗಲಿದೆ.

ಆರ್ಥಿಕತೆಯ ವೇಗ ಹೆಚ್ಚಳ (GDP Growth): ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆ ಬಲವಾಗಿದ್ದು, ಹಣದುಬ್ಬರ ನಿಯಂತ್ರಣದಲ್ಲಿದೆ ಎಂದು ಆರ್‌ಬಿಐ ಹೇಳಿದೆ.

  • ಜಿಡಿಪಿ ಮುನ್ಸೂಚನೆ ಹೆಚ್ಚಳ: ದೇಶದ ಒಟ್ಟು ದೇಶೀಯ ಉತ್ಪನ್ನದ (GDP) ಮುನ್ಸೂಚನೆಯನ್ನು ಶೇ. 6.8 ರಿಂದ ಶೇ. 7.3 ಕ್ಕೆ ಹೆಚ್ಚಿಸಲಾಗಿದೆ.
  • ಹಣದುಬ್ಬರ ಇಳಿಕೆ: 2025-26ರ ಸಾಲಿನಲ್ಲಿ ಚಿಲ್ಲರೆ ಹಣದುಬ್ಬರವು ಶೇ. 2ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.

ಇತರೆ ಮುಖ್ಯಾಂಶಗಳು:

  1. ಎಸ್‌ಡಿಎಫ್ (SDF): ಶೇ. 5 ಕ್ಕೆ ನಿಗದಿ.
  2. ಎಂಎಸ್‌ಎಫ್ (MSF): ಶೇ. 5.5 ಕ್ಕೆ ನಿಗದಿ.
  3. ಬಾಂಡ್ ಖರೀದಿ: ಮುಕ್ತ ಮಾರುಕಟ್ಟೆ ಕಾರ್ಯಾಚರಣೆ (OMO) ಮೂಲಕ 1 ಲಕ್ಷ ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ.

“ಹೊಸ ವರ್ಷವನ್ನು ಹೊಸ ಭರವಸೆ ಮತ್ತು ಚೈತನ್ಯದೊಂದಿಗೆ ಬರಮಾಡಿಕೊಳ್ಳಲಿದ್ದೇವೆ,” ಎಂದು ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ. ಕಳೆದ ಜೂನ್‌ನಲ್ಲಿ ಶೇ. 6 ರಷ್ಟಿದ್ದ ರೆಪೋ ದರ ಈಗ ಶೇ. 5.25 ಕ್ಕೆ ಇಳಿದಿರುವುದು ಸಾಲಗಾರರಿಗೆ ದೊಡ್ಡ ನಿರಾಳತೆ ತಂದಿದೆ.

ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್‌ಲೈನ್‌ ಅರ್ಜಿ ಆಹ್ವಾನ

ಮಹಿಳೆಯರಿಗೆ ಗುಡ್ ನ್ಯೂಸ್: ಸರ್ಕಾರದಿಂದ 50 ಸಾವಿರ ಸಹಾಯಧನ

Telegram Group Join Now
WhatsApp Group Join Now

Leave a Comment