PM Kusum Yojana: ರೈತರ ಪಂಪ್‌ಸೆಟ್‌ಗೆ 80% ಸಬ್ಸಿಡಿ! ಅರ್ಜಿ ಆಹ್ವಾನ

Telegram Group Join Now
WhatsApp Group Join Now

ರೈತರಿಗೆ ವಿದ್ಯುತ್ ಸಮಸ್ಯೆಯಿಂದ ಮುಕ್ತಿ ನೀಡಲು ಮತ್ತು ಹಗಲು ಹೊತ್ತಿನಲ್ಲಿ ನೀರಾವರಿ ಸೌಲಭ್ಯ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಮಹತ್ವದ (PM Kusum Yojana) ಯೋಜನೆಯನ್ನು ಜಾರಿಗೆ ತಂದಿವೆ.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (KREDL) ವತಿಯಿಂದ ‘ಪಿ.ಎಂ ಕುಸುಮ್-ಬಿ’ (PM KUSUM-B) ಯೋಜನೆಯಡಿ ಸೌರ ಚಾಲಿತ (Solar) ಪಂಪ್‌ಸೆಟ್‌ಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ರೈತರು ತಮ್ಮ ಜಮೀನಿನ ಕೊಳವೆಬಾವಿ ಅಥವಾ ತೆರೆದ ಬಾವಿಗಳಿಗೆ ಸೋಲಾರ್ ಪಂಪ್‌ಸೆಟ್ ಅಳವಡಿಸಿಕೊಳ್ಳಲು ಬರೋಬ್ಬರಿ 80% ರಷ್ಟು ಸಹಾಯಧನ ಪಡೆಯಬಹುದು.

ಸಹಾಯಧನದ ಲೆಕ್ಕಾಚಾರ ಹೀಗಿದೆ:

  • ರಾಜ್ಯ ಸರ್ಕಾರ: 50% ಸಬ್ಸಿಡಿ
  • ಕೇಂದ್ರ ಸರ್ಕಾರ: 30% ಸಬ್ಸಿಡಿ
  • ರೈತರ ವಂತಿಕೆ: ಕೇವಲ 20% ಹಣವನ್ನು ರೈತರು ಭರಿಸಬೇಕಾಗುತ್ತದೆ

PM Kusum Yojana: ಪಂಪ್‌ಸೆಟ್ ದರ ಮತ್ತು ರೈತರು ಕಟ್ಟಬೇಕಾದ ಹಣ (ಅಂದಾಜು):

ಪಂಪ್ ಸಾಮರ್ಥ್ಯಪಂಪ್ ಮಾದರಿಒಟ್ಟು ದರ (ರೂ.)ರೈತರು ಕಟ್ಟಬೇಕಾದ ಹಣ (ರೂ.)ಸರ್ಕಾರ ಭರಿಸುವ ಹಣ (ಸಹಾಯಧನ) (ರೂ.)
3 HPಸರ್ಫೇಸ್ (Surface)1,95,94443,2761,52,668
3 HPಸಬ್‌ಮರ್ಸಿಬಲ್1,99,04744,8271,54,220
5 HPಸರ್ಫೇಸ್2,83,98557,7332,26,252
5 HPಸಬ್‌ಮರ್ಸಿಬಲ್2,85,53658,5092,27,027
7.5 HPಸರ್ಫೇಸ್4,13,66392,6283,21,035
7.5 HPಸಬ್‌ಮರ್ಸಿಬಲ್3,92,04081,8173,10,223
10 HPಸರ್ಫೇಸ್5,13,0181,91,9833,21,035
10 HPಸಬ್‌ಮರ್ಸಿಬಲ್4,92,1341,81,9113,10,223
(ಗಮನಿಸಿ: ದರಗಳು ಜಿಎಸ್‌ಟಿ ಸೇರಿವೆ).

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ರೈತರು www.souramitra.com (ಸೌರಮಿತ್ರ) ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಈ ಪೋರ್ಟಲ್ ಮೂಲಕವೇ ರೈತರು ತಮಗಿಷ್ಟವಾದ ವೆಂಡರ್ ಅಥವಾ ಏಜೆನ್ಸಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.

ಎಚ್ಚರಿಕೆ: ರೈತರು ಯಾವುದೇ ಮಧ್ಯವರ್ತಿಗಳ ಮಾತು ನಂಬಿ ಮೋಸಹೋಗಬಾರದು. souramitra.com ಮೂಲಕವೇ ಹಣ ಪಾವತಿಸಬೇಕು ಮತ್ತು ವ್ಯವಹರಿಸಬೇಕು ಎಂದು KREDL ಸ್ಪಷ್ಟಪಡಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 080-22202100 ಅಥವಾ 8095132100 ಗೆ ಸಂಪರ್ಕಿಸಬಹುದು.

ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್‌ಲೈನ್‌ ಅರ್ಜಿ ಆಹ್ವಾನ

ಮಹಿಳೆಯರಿಗೆ ಗುಡ್‌ನ್ಯೂಸ್: 1.5 ಲಕ್ಷ ರೂ. ಸಹಾಯಧನಕ್ಕೆ ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now

Leave a Comment