Tata Capital Pankh Scholarship: PUC, Degree, ITI, ಡಿಪ್ಲೊಮಾ Professional Degree) ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ; ವಿದ್ಯಾರ್ಥಿಗಳಿಗೆ ಸಿಗಲಿದೆ ₹1 ಲಕ್ಷದವರೆಗೆ ಸಹಾಯಧನ

Telegram Group Join Now
WhatsApp Group Join Now

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಟಾಟಾ ಕ್ಯಾಪಿಟಲ್ ಲಿಮಿಟೆಡ್ ಬೆಂಬಲವಾಗಿ ನಿಂತಿದೆ. ತನ್ನ ‘ಪಂಖ್’ (Tata Capital Pankh Scholarship) ಯೋಜನೆಯಡಿ 2025-26ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದ್ದು, ವಿದ್ಯಾರ್ಥಿಗಳು ಗಳಿಸಿದ ಅಂಕಗಳಿಗೆ ಅನುಗುಣವಾಗಿ ಆರ್ಥಿಕ ನೆರವು ನೀಡಲಾಗುತ್ತಿದೆ.

Tata Capital Pankh Scholarship Amount 2025:

ಯಾರಿಗೆ ಎಷ್ಟು ಹಣ ಸಿಗುತ್ತದೆ?: ಈ ಸ್ಕಾಲರ್‌ಶಿಪ್‌ನ ವಿಶೇಷವೇನೆಂದರೆ, ನೀವು ಎಷ್ಟು ಹೆಚ್ಚು ಅಂಕ ಗಳಿಸಿರುತ್ತೀರೋ, ಅಷ್ಟು ಹೆಚ್ಚು ಹಣ ನಿಮಗೆ ಸಿಗಲಿದೆ.

11 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ (PUC Students Scholarship 2025):

  • ಅರ್ಹತೆ: SSLC/10 ನೇ ತರಗತಿಯಲ್ಲಿ ಕನಿಷ್ಠ 60% ಅಂಕ ಪಡೆದಿರಬೇಕು.

ಸಹಾಯಧನ ವಿವರ:

  • 60% – 80% ಅಂಕ ಗಳಿಸಿದವರಿಗೆ: ಬೋಧನಾ ಶುಲ್ಕದ 80% ಅಥವಾ ₹10,000 (ಯಾವುದು ಕಡಿಮೆಯೋ ಅದು).
  • 81% – 90% ಅಂಕ ಗಳಿಸಿದವರಿಗೆ: ಬೋಧನಾ ಶುಲ್ಕದ 80% ಅಥವಾ ₹12,000.
  • 91% ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ: ಬೋಧನಾ ಶುಲ್ಕದ 80% ಅಥವಾ ₹15,000.

ಪದವಿ (Degree) / ಡಿಪ್ಲೊಮಾ / ITI ವಿದ್ಯಾರ್ಥಿಗಳಿಗೆ:

  • ಅರ್ಹತೆ: ಮಾನ್ಯತೆ ಪಡೆದ ಕಾಲೇಜಿನಲ್ಲಿ ಓದುತ್ತಿರಬೇಕು. ಹಿಂದಿನ ತರಗತಿಯಲ್ಲಿ ಕನಿಷ್ಠ 60% ಅಂಕ ಕಡ್ಡಾಯ.

ಸಹಾಯಧನ ವಿವರ:

  • 60% – 80% ಅಂಕ: ಬೋಧನಾ ಶುಲ್ಕದ 80% ಅಥವಾ ₹12,000.
  • 81% – 90% ಅಂಕ: ಬೋಧನಾ ಶುಲ್ಕದ 80% ಅಥವಾ ₹15,000.
  • 91% ಕ್ಕಿಂತ ಹೆಚ್ಚು ಅಂಕ: ಬೋಧನಾ ಶುಲ್ಕದ 80% ಅಥವಾ ₹18,000.

ವೃತ್ತಿಪರ ಪದವಿ (Professional Degree) ವಿದ್ಯಾರ್ಥಿಗಳಿಗೆ:

  • ಅರ್ಹತೆ: ಇಂಜಿನಿಯರಿಂಗ್, ಮೆಡಿಕಲ್, ಲಾ (Law), ಆರ್ಕಿಟೆಕ್ಚರ್ ಮುಂತಾದ ಕೋರ್ಸ್ ಓದುತ್ತಿರುವವರು. ಹಿಂದಿನ ಸಾಲಿನಲ್ಲಿ ಕನಿಷ್ಠ 80% ಅಂಕ ಪಡೆದಿರಬೇಕು.
  • ಸಹಾಯಧನ: ಇವರಿಗೆ ಬೋಧನಾ ಶುಲ್ಕದ 80% ಅಥವಾ ಗರಿಷ್ಠ ₹1,00,000 ರೂ. ವರೆಗೆ ವಿದ್ಯಾರ್ಥಿವೇತನ ಸಿಗಲಿದೆ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:

  1. ಭಾರತೀಯ ಪ್ರಜೆಯಾಗಿರಬೇಕು.
  2. ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷಕ್ಕಿಂತ ಕಡಿಮೆ ಇರಬೇಕು.
  3. ಟಾಟಾ ಕ್ಯಾಪಿಟಲ್ ಮತ್ತು Buddy4Study ಉದ್ಯೋಗಿಗಳ ಮಕ್ಕಳಿಗೆ ಇದು ಅನ್ವಯಿಸುವುದಿಲ್ಲ.

Tata Capital Pankh Scholarship 2025 ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್.
  • ಪ್ರಸ್ತುತ ಸಾಲಿನ ಫೀಸ್ ರಸೀದಿ (Fee Receipt) ಮತ್ತು ಐಡಿ ಕಾರ್ಡ್.
  • ಹಿಂದಿನ ತರಗತಿಯ ಮಾರ್ಕ್ಸ್ ಕಾರ್ಡ್.
  • ಆದಾಯ ಪ್ರಮಾಣ ಪತ್ರ.
  • ಬ್ಯಾಂಕ್ ಪಾಸ್‌ಬುಕ್ (Bank Passbook).
  • ಪಾಸ್‌ಪೋರ್ಟ್ ಅಳತೆಯ ಫೋಟೋ.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26-12-2025

ಪ್ರಮುಖ ಲಿಂಕ್‌ಗಳು:
Tata Capital Pankh Scholarship 2025 Online Application Link:‌ Apply ಮಾಡಿ

HDFC Scholarship 2025: HDFC ಬ್ಯಾಂಕ್‌ನಿಂದ ಸಿಗಲಿದೆ ₹75,000 ವಿದ್ಯಾರ್ಥಿವೇತನ

ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ

ವಿದ್ಯಾಸಿರಿ ವಿದ್ಯಾರ್ಥಿವೇತನ 2025-26; ಆನ್‌ಲೈನ್ ಅರ್ಜಿ ಸಲ್ಲಿಸಿ

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment