ಎಲ್ಲರಿಗೂ ನಮಸ್ಕಾರ, ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಅವರ ಉನ್ನತ ಶಿಕ್ಷಣವನ್ನು ಮುಂದುವರೆಸಲು ಹಣಕಾಸಿನ ನೆರವು ನೀಡುವ ಗುರಿಯನ್ನು ಪಿಎಂ ವಿದ್ಯಾಲಕ್ಷ್ಮೀ ಯೋಜನೆಯ (PM Vidyalaxmi) ಹೊಂದಿದೆ. ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಕೇಂದ್ರ ಶಿಕ್ಷಣ ಸಚಿವಾಲಯದ ವತಿಯಿಂದ ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯು ಭಾರತದಲ್ಲಿ ಉನ್ನತ ಶಿಕ್ಷಣ ಮುಂದುವರೆಸಲು ಸಾಧ್ಯವಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಣಕಾಸಿನ ನೇರವು ನೀಡುವ ಯೋಜನೆಯಾಗಿದೆ.
ಪ್ರಯೋಜನಗಳು:
ಪಿಎಂ ವಿದ್ಯಾಲಕ್ಷ್ಮೀ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿರವ ವಿದ್ಯಾರ್ಥಿಗಳಿಗೆ ಅವರ ಉನ್ನತ ಶಿಕ್ಷಣವನ್ನು ಮುಂದುವರೆಸಲು 10 ಲಕ್ಷ ರೂ. ವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುವ ಯೋಜನೆಯಾಗಿದೆ.
ಯೋಜನೆಯ ಪ್ರಮುಖ ಹೈಲೈಟ್ಸ್:
- ಯಾವುದೇ ಗ್ಯಾರಂಟಿ ಬೇಕಿಲ್ಲ: ಈ ಯೋಜನೆಯಡಿ ಸಿಗುವ ಸಾಲಗಳು ಮೇಲಾಧಾರ ರಹಿತ (Collateral free) ಮತ್ತು ಜಾಮೀನು ರಹಿತವಾಗಿವೆ (Guarantor free).
- ಬಡ್ಡಿ ದರ ಎಷ್ಟು?: ಪ್ರತಿ ಬ್ಯಾಂಕಿನ ಬಡ್ಡಿ ದರಗಳು ‘ಎಕ್ಸ್ಟರ್ನಲ್ ಬೆಂಚ್ಮಾರ್ಕ್ ಲೆಂಡಿಂಗ್ ರೇಟ್’ (EBLR) + 0.5% ಕ್ಕೆ ಸೀಮಿತವಾಗಿರುತ್ತವೆ.
- ಕ್ರೆಡಿಟ್ ಗ್ಯಾರಂಟಿ: 7.50 ಲಕ್ಷ ರೂ. ವರೆಗಿನ ಸಾಲಗಳಿಗೆ ಭಾರತ ಸರ್ಕಾರದಿಂದಲೇ ಶೇ. 75 ರಷ್ಟು ಕ್ರೆಡಿಟ್ ಗ್ಯಾರಂಟಿ ನೀಡಲಾಗುತ್ತದೆ.
ಯೋಜನೆಯ ಮುಖ್ಯ ಲಕ್ಷಣಗಳು:
- ಸರ್ಕಾರ ಪಟ್ಟಿ ಮಾಡಿರುವ 860 ಕ್ಕೂ ಅಧಿಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಒಂದು ಕೋರ್ಸ್ ನಲ್ಲಿ ಅಧ್ಯಯನ ಮಾಡುತ್ತಿರಬೇಕು.
- ವಿದ್ಯಾರ್ಥಿಯು ಮ್ಯಾನೇಜ್ಮೆಂಟ್ ಕೋಟಾದಲ್ಲಿ ಸೀಟು ಪಡೆದಿದ್ದರೆ PM ವಿದ್ಯಾಲಕ್ಷ್ಮೀ ಸಾಲ ಸಿಗುವುದಿಲ್ಲ.
- ಈ ಯೋಜನೆಯಡಿ 10 ಲಕ್ಷ ರೂ. ವರೆಗೂ ಸಾಲ ಸಿಗುತ್ತದೆ.
- ಸಾಲದ ಬಡ್ಡಿ ದರವು ಬ್ಯಾಂಕ್ EBLR + ಶೇ. 0.5 ಇರುತ್ತದೆ.
ಬಡ್ಡಿ ಸಹಾಯಧನ (Interest Subsidy) ಯಾರಿಗೆ ಸಿಗುತ್ತೆ? ಕುಟುಂಬದ ವಾರ್ಷಿಕ ಆದಾಯದ ಆಧಾರದ ಮೇಲೆ ಬಡ್ಡಿ ವಿನಾಯಿತಿ ಸಿಗಲಿದೆ:
- ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ ಒಳಗೆ ಇದ್ದರೆ 3% ಬಡ್ಡಿ ರಿಯಾಯಿತಿ ಸಿಗುತ್ತದೆ.
- 4.5 ಲಕ್ಷ ದೊಳಗಿನ ವಾರ್ಷಿಕ ಆದಾಯ ಹೊಂದಿರುವ ಕುಟುಂಬದ ವಿದ್ಯಾರ್ಥಿಯು ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್ಗಳಿಗೆ ಸಂಪೂರ್ಣ ಬಡ್ಡಿ ವಿನಾಯಿತಿ ಪಡೆಯಬಹುದು
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಪಾಸ್ಪೋರ್ಟ್ ಅಳತೆಯ ಕಲರ್ ಫೋಟೋ
- 10 ಮತ್ತು 12ನೇ ತರಗತಿ ಅಂಕಪಟ್ಟಿಗಳು ಹಾಗೂ ಪದವಿ ಪ್ರಮಾಣ ಪತ್ರಗಳು
- ಶುಲ್ಕಗಳ ವಿವರವಿರುವ ಪ್ರವೇಶ ಪತ್ರ (Admission Letter)
- ಬಡ್ಡಿ ಸಹಾಯಧನ ಪಡೆಯಲು ಅಧಿಕೃತ ಆದಾಯ ಪ್ರಮಾಣ ಪತ್ರ
ಮೊರಾಟೋರಿಯಂ ಅವಧಿ: ಈ ಯೋಜನೆಯಡಿ ಸಾಲ ಮಂಜೂರಾದ ದಿನದಿಂದ ಕೋರ್ಸ್ ಮುಗಿದ ಒಂದು ವರ್ಷದವರೆಗೆ ಮೊರಾಟೋರಿಯಂ ಅವಧಿಯಾಗಿದೆ. ಈ ಅವಧಿಯಲ್ಲಿ ಬಡ್ಡಿ ವಿಧಿಸಲಾಗುತ್ತದೆಯಾದರೂ, ಅದನ್ನು ವಿದ್ಯಾರ್ಥಿಯು ಪಾವತಿಸುವ ಅಗತ್ಯವಿರುವುದಿಲ್ಲ.
ಸಾಲ ಮರುಪಾವತಿ ಅವಧಿ: ಈ ಯೋಜನೆಯ ಫಲಾನುಭವಿಗಳು ಮೊರಾಟೋರಿಯಂ ಅವಧಿ ಮುಗಿದ ನಂತರ 15 ವರ್ಷಗಳವರೆಗೆ ಸಾಲವನ್ನು ಮರುಪಾವತಿ ಮಾಡಬಹುದು.
ಇತರೆ ಮಾಹಿತಿಗಳನ್ನು ಓದಿ:
ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್ಲೈನ್ ಅರ್ಜಿ ಆಹ್ವಾನ