ಎಲ್ಲರಿಗೂ ನಮಸ್ಕಾರ, ಸ್ವಯಂ ಉದ್ಯೋಗ ಆರಂಭಿಸಿ ಸ್ವಾವಲಂಬಿಗಳಾಗಿ ಬದುಕಬೇಕು ಎಂಬುದು ಎಲ್ಲರ ಕನಸು. ಸ್ವಯಂ ಉದ್ಯೋಗ ಪ್ರಾರಂಭಿಸಲು ಸರ್ಕಾರ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಿದೆ. ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ವ್ಯಾಪಾರ/ ಉದ್ದಿಮೆ ಚಟುವಟಿಕೆ ಕೈಗೊಳ್ಳಲು ಬಯಸುವ ಅರ್ಜಿದಾರರ ಆಸ್ತಿ (ಕಟ್ಟಡ/ ಭೂಮಿ) ಅಡಮಾನ ಮೇಲೆ ಕಡಿಮೆ ಬಡ್ಡಿ ದರದಲ್ಲಿ 20 ಲಕ್ಷದವರೆಗೆ ಸಾಲ ನೀಡುತ್ತಾರೆ.
ಕಡಿಮೆ ಬಡ್ಡಿ ದರದಲ್ಲಿ ನೇರ ಸಾಲ:
ಅರ್ಜಿ ಸಲ್ಲಿಸುವವರ ಕುಟುಂಬದ ವಾರ್ಷಿಕ ಆದಾಯ 8 ಲಕ್ಷಗಳಿಗಿಂತ ಕಡಿಮೆ ಇರುವವರಿಗೆ 20 ಲಕ್ಷದ ವರೆಗೆ ಸಾಲವನ್ನು ಶೇ. 4ರಷ್ಟು ಬಡ್ಡಿದರದಲ್ಲಿ ನೀಡುತ್ತಾರೆ.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ದಿಂದ 15 ಲಕ್ಷ ದವರೆಗೆ ಇರುವವರಿಗೆ 20 ಲಕ್ಷದ ವರೆಗಿನ ಸಾಲವನ್ನು ಶೇ. 6ರಷ್ಟು ಬಡ್ಡಿದರದಲ್ಲಿ ನೀಡುತ್ತಾರೆ.
ಸಾಲ ಮರುಪಾವತಿ ವಿವರ:
ಫಲಾನುಭವಿಗಳು ಉದ್ಯೋಗ/ವ್ಯಾಪಾರ ಆರಂಭಿಸಿದ ಕೂಡಲೇ ಅಥವಾ ಮೂರು ತಿಂಗಳ ನಂತರ ಅವರು ತೆಗೆದುಕೊಂದು ಸಾಲದ ಶೇ 4/6 ರಷ್ಟು ಬಡ್ಡಿದರದೊಂದಿಗೆ ಸಮಾನ 60 ಕಂತುಗಳಲ್ಲಿ ಸಾಲ ಮರುಪಾವತಿ ಮಾಡನೇಕು. ಅರ್ಜಿದಾರರು ನಿಗದಿ ಪಡಿಸಿದ ಕಂತುಗಳಲ್ಲಿ ಸಾಲವನ್ನು ಕಟ್ಟದಿದ್ದರೆ ಶೇ. 2 ರಷ್ಟು ದಂಡದ ಬಡ್ಡಿಯನ್ನು ಹೆಚ್ಚುವರಿಯಾಗಿ ವಿಧಿಸುತ್ತಾರೆ.
Direct Loan Scheme Karnataka ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್ ಪ್ರತಿ
- ಕ್ರಿಶ್ಚಿಯನ್ (ಜಾತಿ) ಪ್ರಮಾಣ ಪತ್ರ.
- ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ.
- ಆಸ್ತಿಯ ಗುತ್ತಿಗೆ ಪತ್ರ / ವಿಭಜನಾ ಪತ್ರ / ಬಿಡುಗಡೆ ಪತ್ರ / ಗಿಫ್ಟ್ ಡೀಡ್ / ಬಾಡಿಗೆ ಒಪ್ಪಂದ / ಮಾರಾಟ ಪತ್ರ.
- ಸಿಎ (ಚಾರ್ಟೆಡ್ ಅಕೌಂಟೆಂಟ್) ವತಿಯಿಂದ ದೃಢೀಕರಿಸಿದ ಯೋಜನಾ ವರದಿ.
- ಯೋಜನೆಗೆ ಸಂಬಂಧಿಸಿದ ದರಪಟ್ಟಿಗಳು.
- ಅಡಮಾನ ಮಾಡುವ ಸ್ವತ್ತಿಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳಿಂದ ಪಡೆದ ಪರವಾನಿಗೆ ಪತ್ರ.
- ಕಟ್ಟಡದ ಖಾತಾ ಎಕ್ಸ್‌ಟ್ರಾಕ್ಟ್ ಮತ್ತು ಖಾತಾ ಪ್ರಮಾಣ ಪತ್ರ ಅಥವಾ ಭೂಮಿಯ ಹಕ್ಕು ಬದಲಾವಣೆ ಪ್ರತಿ.
- ಕಂದಾಯ ಜಮೀನಿನ ಪಹಣಿ / RTC ಮತ್ತು ಪೋಡಿ / ವಿಭಜನಾ ಪತ್ರ.
- ಋಣಭಾರ ಪ್ರಮಾಣ ಪತ್ರ (EC) ಫಾರಂ ನಂ:15.
- ಇತ್ತೀಚಿನವರೆಗೆ ತೆರಿಗೆ ಪಾವತಿಸಿದ ರಶೀದಿ.
- ಸಕ್ಷಮ ಪ್ರಾಧಿಕಾರದಿಂದ ಪಡೆದ ಜಮೀನಿನ ಸರ್ಕಾರಿ ಮೌಲ್ಯ
- ನೋಂದಾಯಿತ ಮೌಲ್ಯಮಾಪಕರಿಂದ ಮೌಲ್ಯಮಾಪನ ವರದಿ – ಮೌಲ್ಯಮಾಪನ ಪ್ರಮಾಣಪತ್ರ.
- ಅರ್ಜಿದಾರರ ಸ್ವಯಂ ಘೋಷಣೆ ಪ್ರಮಾಣಪತ್ರ.
ಅರ್ಹತೆಗಳು:
ಅರ್ಜಿದಾರರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿರಬೇಕು.
ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
ಅರ್ಜಿದಾರರ ವಯಸ್ಸು 18 ವರ್ಷ ದಿಂದ 55 ವರ್ಷ ದೊಳಗಿರಬೇಕು.
KMDC ನಿಗಮದಿಂದ ಸಾಲ ಪಡೆದು ಸುಸ್ತಿದಾರರಾಗಿರಬಾರದು.
ನಿಗಮಕ್ಕೆ ಆಸ್ತಿಯ (ಕಟ್ಟಡ / ಭೂಮಿ) ಅಡಮಾನದ ಮೇಲೆ ಮಾತ್ರ ಸಾಲ ಒದಗಿಸಲಾಗುತ್ತದೆ. ಆಸ್ತಿ ಮೌಲ್ಯವು ಸಾಲದ ಮೊತ್ತಕ್ಕಿಂತ ಕಡಿಮೆ ಇರಬಾರದು.
ವ್ಯಾಪಾರ ಉದ್ದಿಮೆ ಸಾಲವನ್ನು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ನೀಡುತ್ತಾರೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25-10-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 20-12-2025
ಈ ಯೋಜನೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆ ಮಾಡುವ ದಿನಾಂಕವನ್ನು ಮತ್ತೊಮ್ಮೆ ವಿಸ್ತರಣೆ ಮಾಡಿ, ಅರ್ಜಿ ಸಲ್ಲಿಸದ ಅರ್ಹ ಫಲಾನುಭವಿಗಳಿಗೆ ಈ ಕಾಲವಕಾಶ ಅನುಕೂಲಕರವಾಗಿದೆ.
Direct Loan Scheme Karnataka Online Application Link:
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: kccdclonline.karnataka.gov.in
ಹೆಚ್ಚಿನ ಮಾಹಿತಿಗಾಗಿ:
ಅರ್ಜಿದಾರರು ಹೆಚ್ಚಿನ ವಿವರಗಳಿಗಾಗಿ ನಿಗಮದ ವೆಬ್‌ಸೈಟ್‌ಗೆ / KMDC ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.
ಸಹಾಯವಾಣಿ ಸಂಖ್ಯೆ: 63607 53075
Email: kccdchelpline@gmail.com
ಇತರೆ ಮಾಹಿತಿಗಳನ್ನು ಓದಿ:
ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್‌ಲೈನ್ ಅರ್ಜಿ ಆಹ್ವಾನ