ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುವ ನಿಟ್ಟಿನಲ್ಲಿ ಪ್ರಮುಖ ವಿಮಾ ಕಂಪನಿ ‘ಟಾಟಾ ಎಐಎ ಲೈಫ್ ಇನ್ಶುರೆನ್ಸ್’ (TATA AIA Life Insurance) ಮಹತ್ವದ ಹೆಜ್ಜೆ ಇಟ್ಟಿದೆ. ತನ್ನ ಸಿಎಸ್‌ಆರ್ (CSR) ಉಪಕ್ರಮದ ಭಾಗವಾಗಿ “ಟಾಟಾ AIA ಪ್ಯಾರಾಸ್ ವಿದ್ಯಾರ್ಥಿವೇತನ ಕಾರ್ಯಕ್ರಮ 2025-26” ಘೋಷಿಸಿದ್ದು, ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾರ್ಷಿಕ ₹15,000/- ಗಳ ಆರ್ಥಿಕ ನೆರವು ಸಿಗಲಿದ್ದು, ಈ ವಿದ್ಯಾರ್ಥಿವೇತನಕ್ಕೆ ಅರ್ಹರು ಅರ್ಜಿ ಸಲ್ಲಿಸಿ ಯೋಜನೆಯ ಸೌಲಭ್ಯ ಪಡೆದುಕೊಂಡು, ತಮ್ಮ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಳ್ಳಬಹುದು. ಬಡತನದ ಕಾರಣದಿಂದಾಗಿ ಅನೇಕ ವಿದ್ಯಾರ್ಥಿಗಳು
TATA AIA Scholarship 2025 ಯಾರು ಅರ್ಜಿ ಸಲ್ಲಿಸಬಹುದು?
ಈ ವಿದ್ಯಾರ್ಥಿವೇತನವು ವಿಶೇಷವಾಗಿ ವಿದ್ಯಾರ್ಥಿನಿಯರು, SC/ST ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳು, ವಿಕಲಚೇತನರು ಮತ್ತು ಟ್ರಾನ್ಸ್‌ಜೆಂಡರ್ ವಿದ್ಯಾರ್ಥಿಗಳಿಗೆ ಮೀಸಲಾಗಿದೆ.
- ವಿದ್ಯಾಭ್ಯಾಸ: ವಾಣಿಜ್ಯ (Commerce), ಅರ್ಥಶಾಸ್ತ್ರ, ಹಣಕಾಸು, ಬ್ಯಾಂಕಿಂಗ್, ವಿಮೆ, ಮ್ಯಾನೇಜ್‌ಮೆಂಟ್, ಡೇಟಾ ಸೈನ್ಸ್, ಬಿ.ಕಾಂ, ಬಿ.ಎಸ್ಸಿ, ಬಿಬಿಎ, ಬಿಬಿಐ, ಬಿಎ ಮುಂತಾದ ಪದವಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.
- ಆದಾಯ ಮಿತಿ: ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ₹5,00,000 (5 ಲಕ್ಷ) ಮೀರಬಾರದು.
- ಪ್ಯಾನ್ ಇಂಡಿಯಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
TATA AIA Scholarship 2025 ಸಹಾಯಧನ ಎಷ್ಟು?
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕೆ 15,000 ರೂಪಾಯಿ ಸ್ಕಾಲರ್‌ಶಿಪ್ ನೀಡುತ್ತಾರೆ. ಈ ಹಣವನ್ನು ಬೋಧನಾ ಶುಲ್ಕ (Tuition Fee), ಪರೀಕ್ಷಾ ಶುಲ್ಕ ಮತ್ತು ಶೈಕ್ಷಣಿಕ ವೆಚ್ಚಗಳಿಗೆ ಮಾತ್ರ ಬಳಸಬೇಕು. (ಪ್ರಯಾಣ, ಊಟ, ಮೊಬೈಲ್ ಖರೀದಿಗೆ ಬಳಸುವಂತಿಲ್ಲ).
TATA AIA Scholarship 2025 ಅಗತ್ಯ ದಾಖಲೆಗಳು:
ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು:
- ಪಾಸ್‌ಪೋರ್ಟ್ ಅಳತೆಯ ಫೋಟೋ.
- ಗುರುತಿನ ಚೀಟಿ (ಆಧಾರ್/ವೋಟರ್ ಐಡಿ).
- 10ನೇ ಮತ್ತು 12ನೇ ತರಗತಿ ಅಂಕಪಟ್ಟಿಗಳು.
- ಪ್ರಸ್ತುತ ಸಾಲಿನ ಕಾಲೇಜು ಶುಲ್ಕದ ರಶೀದಿ (Fee Receipt).
- ಬೋನಾಫೈಡ್ ಪ್ರಮಾಣ ಪತ್ರ ಅಥವಾ ಕಾಲೇಜು ಐಡಿ ಕಾರ್ಡ್.
- ಕುಟುಂಬದ ಆದಾಯ ಪ್ರಮಾಣ ಪತ್ರ.
- ಬ್ಯಾಂಕ್ ಪಾಸ್‌ಬುಕ್ ಪ್ರತಿ.
- ಜಾತಿ ಪ್ರಮಾಣ ಪತ್ರ (ಅನ್ವಯಿಸಿದರೆ).
- ಅಂಗವಿಕಲ/ಅನಾಥ ಪ್ರಮಾಣ ಪತ್ರ (ಅನ್ವಯಿಸಿದರೆ).
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-12-2025
ಪ್ರಮುಖ ಲಿಂಕ್‌ಗಳು:
TATA AIA Scholarship 2025 Apply Online Link: Apply ಮಾಡಿ
ಇತರೆ ಮಾಹಿತಿಗಳನ್ನು ಓದಿ:
HDFC Scholarship 2025: ವಿದ್ಯಾರ್ಥಿಗಳಿಗೆ ₹75,000 ವಿದ್ಯಾರ್ಥಿವೇತನ; ಅರ್ಹರು ಅರ್ಜಿ ಸಲ್ಲಿಸಿ