Simple Marriage Scheme: ಮದುವೆಯಾದ ಹೊಸ ಜೋಡಿಗಳಿಗೆ ಸರ್ಕಾರದಿಂದ ಸಿಗಲಿದೆ ₹50,000 ಪ್ರೋತ್ಸಾಹಧನ!

Telegram Group Join Now
WhatsApp Group Join Now

ಬೆಂಗಳೂರು: ಮದುವೆಯಾಗುವ ಕನಸು ಕಾಣುತ್ತಿರುವ, ಆರ್ಥಿಕವಾಗಿ ಹಿಂದುಳಿದ ಯುವಕ-ಯುವತಿಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಸರಳ ಸಾಮೂಹಿಕ ವಿವಾಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರವು ₹50,000 ಪ್ರೋತ್ಸಾಹಧನ ನೀಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ‘ಸರಳ ಸಾಮೂಹಿಕ ವಿವಾಹ ನೆರವು ಯೋಜನೆ’ಯಡಿ (Simple Marriage Scheme) ಈ ಸೌಲಭ್ಯ ದೊರೆಯಲಿದ್ದು, ಅರ್ಹರು ಇದರ ಲಾಭ ಪಡೆಯಬಹುದಾಗಿದೆ.

ಯೋಜನೆಯ ಲಾಭವೇನು? ಈ ಯೋಜನೆಯಡಿ ನಡೆಯುವ ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವ ಪ್ರತಿ ಜೋಡಿಗೆ ಸರ್ಕಾರದಿಂದ ₹50,000 ಆರ್ಥಿಕ ನೆರವು ನೀಡಲಾಗುತ್ತದೆ.

Simple Marriage Scheme ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:

  1. ಸಮುದಾಯ: ವಧು ಮತ್ತು ವರ ಇಬ್ಬರೂ ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯಗಳಿಗೆ (ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್ ಅಥವಾ ಪಾರ್ಸಿ) ಸೇರಿದವರಾಗಿರಬೇಕು.
  2. ವಯಸ್ಸಿನ ಮಿತಿ:
    • ವಧು: ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು 42 ವರ್ಷ ಮೀರಿರಬಾರದು.
    • ವರ: ಕನಿಷ್ಠ 21 ವರ್ಷ ತುಂಬಿರಬೇಕು ಮತ್ತು 45 ವರ್ಷ ಮೀರಿರಬಾರದು.
  3. ಆದಾಯ ಮಿತಿ: ವಧು-ವರರ ಕುಟುಂಬದ ವಾರ್ಷಿಕ ಆದಾಯ ₹2.50 ಲಕ್ಷದ ಒಳಗಿರಬೇಕು.
  4. ನಿಯಮಗಳು:
    • ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಕನಿಷ್ಠ 10 ಜೋಡಿಗಳು ಭಾಗವಹಿಸಿರಬೇಕು.
    • ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿದೆ.
    • ವಧು ಅಥವಾ ವರನಿಗೆ ಈಗಾಗಲೇ ಜೀವಂತ ಪತಿ/ಪತ್ನಿ ಇದ್ದರೆ ಈ ಯೋಜನೆ ಅನ್ವಯಿಸುವುದಿಲ್ಲ (ಮೊದಲ ಮದುವೆಗೆ ಆದ್ಯತೆ).

ಸಂಪರ್ಕಿಸಬೇಕಾದ ವಿವರಗಳು: ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಅಥವಾ ಅರ್ಜಿ ಸಲ್ಲಿಸುವ ಕುರಿತು ಗೊಂದಲಗಳಿದ್ದರೆ ಇಲಾಖೆಯ ಸಹಾಯವಾಣಿಗೆ ಕರೆ ಮಾಡಬಹುದು.

  • ಸಹಾಯವಾಣಿ ಸಂಖ್ಯೆ: 090-22864212
  • ಇಮೇಲ್: directorgokdom@gmail.com

ಅರ್ಹ ಫಲಾನುಭವಿಗಳು ಕೂಡಲೇ ಇಲಾಖೆಯ ವೆಬ್‌ಸೈಟ್‌ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಿ, ಸರ್ಕಾರದ ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಿ.

ಇದೇ ರೀತಿ ಬೇರೆ ಸಮೂದಾಯದ ಸರಳ ಸಾಮೂಹಿಕ ವಿವಾಹ ನೆರವು ಯೋಜನೆಯ ಬಗ್ಗೆ ಕೂಡ ಮಾಹಿತಿ ನೀಡಲಾಗುವುದು.

ಕಾರ್ಮಿಕರ ಮಕ್ಕಳಿಗೆ 20,000 ರೂ. ವಿದ್ಯಾರ್ಥಿವೇತನ; ಅರ್ಜಿ ಆಹ್ವಾನ

ಸ್ವಂತ ವಾಹನ ಖರೀದಿಸಲು 3 ಲಕ್ಷ ರೂ. ಸಹಾಯಧನ

Telegram Group Join Now
WhatsApp Group Join Now

Leave a Comment