ಬೆಂಗಳೂರು: ಪೊಲೀಸ್ ಸಬ್-ಇನ್ಸ್ಪೆಕ್ಟರ್ (Civil PSI) 402 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ಮಹತ್ವದ ಆದೇಶ ಹೊರಡಿಸಿದ್ದು, ಪರಿಷ್ಕೃತ ಅಂತಿಮ ಆಯ್ಕೆ ಪಟ್ಟಿಯನ್ನು (PSI Revised Selection List) ಪ್ರಕಟಿಸಿದೆ.
ದಿನಾಂಕ 27-11-2025 ರಂದು ನೇಮಕಾತಿ ವಿಭಾಗದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (DGP) ಉಮೇಶ್ ಕುಮಾರ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ.
ಪಟ್ಟಿ ಪರಿಷ್ಕರಣೆಗೆ ಕಾರಣವೇನು? ಈ ಹಿಂದೆ ದಿನಾಂಕ 09.09.2025 ರಂದು ಪ್ರಕಟಿಸಲಾಗಿದ್ದ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಅಭ್ಯರ್ಥಿಗಳ ಪೈಕಿ, 40 ಅಭ್ಯರ್ಥಿಗಳು ಈ ಹುದ್ದೆಗೆ ಸೇರಲು ಇಚ್ಛೆ ಇಲ್ಲವೆಂದು ತಿಳಿಸಿದ್ದಾರೆ ಅಥವಾ ನಿಗದಿತ ಅವಧಿಯೊಳಗೆ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
(ಗಮನಿಸಿ: ಅನೇಕ ಅಭ್ಯರ್ಥಿಗಳು 545 ಪಿಎಸ್ಐ ಹುದ್ದೆಗೂ ಆಯ್ಕೆಯಾಗಿರುವುದರಿಂದ ಮತ್ತು ಎರಡೂ ಹುದ್ದೆಗಳಿಗೆ ಆಯ್ಕೆಯಾದವರು ಒಂದನ್ನು ಆರಿಸಿಕೊಳ್ಳಬೇಕಿರುವುದರಿಂದ ಈ ಬದಲಾವಣೆ ಉಂಟಾಗಿದೆ).
ಹೊಸಬರಿಗೆ ಮಣೆ: ನಿಯಮಾನುಸಾರ, ಹುದ್ದೆಗೆ ಹಾಜರಾಗದ ಆ 40 ಅಭ್ಯರ್ಥಿಗಳ ಆಯ್ಕೆಯನ್ನು ರದ್ದುಪಡಿಸಲಾಗಿದೆ. ಅವರ ಬದಲಿಗೆ, ಮೆರಿಟ್ ಮತ್ತು ಮೀಸಲಾತಿ ಅನ್ವಯ ಪಟ್ಟಿಯಲ್ಲಿರುವ ನಂತರದ ಸ್ಥಾನದಲ್ಲಿದ್ದ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಈ ಪರಿಷ್ಕೃತ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
PSI Revised Selection List ಮುಖ್ಯಾಂಶಗಳು:
- ಘಟಕ: ಬೆಂಗಳೂರು ನಗರ ಘಟಕಕ್ಕೆ ಸಂಬಂಧಿಸಿದಂತೆ ಒಟ್ಟು 236 ಅಭ್ಯರ್ಥಿಗಳ ಪಟ್ಟಿಯನ್ನು (ಹಳೆಯ ಮತ್ತು ಹೊಸಬರನ್ನು ಒಳಗೊಂಡಂತೆ) ನೀಡಲಾಗಿದೆ.
- ಒಟ್ಟು ಸಂಖ್ಯೆ: ಹಳೆಯ ಮತ್ತು ಹೊಸಬರನ್ನು ಒಳಗೊಂಡಂತೆ ಒಟ್ಟು 236 ಅಭ್ಯರ್ಥಿಗಳ ವೈದ್ಯಕೀಯ ವರದಿ ಬಗ್ಗೆ ಉಲ್ಲೇಖಿಸಲಾಗಿದೆ.
ಮುಂದಿನ ಹಂತವೇನು? ಹೊಸದಾಗಿ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಭ್ಯರ್ಥಿಗಳಿಗೆ ಶೀಘ್ರದಲ್ಲೇ ವೈದ್ಯಕೀಯ ಪರೀಕ್ಷೆ (Medical Exam) ಮತ್ತು ದಾಖಲಾತಿ ಪರಿಶೀಲನೆ (Document Verification) ಪ್ರಕ್ರಿಯೆಯನ್ನು ಕೈಗೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಈಗಾಗಲೇ ವೈದ್ಯಕೀಯ ಪರೀಕ್ಷೆ ಪೂರೈಸಿರುವ ಅಭ್ಯರ್ಥಿಗಳ ದಾಖಲೆಗಳನ್ನು ಆಯಾ ಘಟಕಗಳಿಂದ ಪಡೆದುಕೊಳ್ಳಲು ಸೂಚಿಸಲಾಗಿದೆ. ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೂ ಅಭಿನಂದನೆಗಳು!
PSI Revised Selection List Of 402 Posts: Download PDF
ಇತರೆ ಮಾಹಿತಿಗಳನ್ನು ಓದಿ: