ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (PSI) ಆಗಬೇಕೆಂಬ ಕನಸು ಹೊತ್ತು, ಲಕ್ಷಾಂತರ ರೂಪಾಯಿ ಫೀಸ್ ಕಟ್ಟಿ ಕೋಚಿಂಗ್ ಪಡೆಯಲು ಕಷ್ಟಪಡುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು (BCWD) 2025-26 ನೇ ಸಾಲಿನ ಪಿಎಸ್‌ಐ (PSI) ನೇಮಕಾತಿ ಪರೀಕ್ಷೆಗೆ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಂದ ಉಚಿತ ತರಬೇತಿಗಾಗಿ (PSI Free Coaching) ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ವಿಶೇಷವೆಂದರೆ, ಆಯ್ಕೆಯಾದ ಅಭ್ಯರ್ಥಿಗಳಿಗೆ 75 ದಿನಗಳ ಕಾಲ ಗುಣಮಟ್ಟದ ತರಬೇತಿಯ ಜೊತೆಗೆ ಉಚಿತ ಊಟ ಮತ್ತು ವಸತಿ (Hostel) ಸೌಲಭ್ಯವನ್ನೂ ಸರ್ಕಾರವೇ ನೀಡಲಿದೆ.
PSI Free Coaching 2026: ಯಾರು ಅರ್ಜಿ ಸಲ್ಲಿಸಬಹುದು?
ಈ ಯೋಜನೆಯ ಲಾಭ ಪಡೆಯಲು ಅಭ್ಯರ್ಥಿಗಳು ಈ ಕೆಳಗಿನ ಮಾನದಂಡಗಳನ್ನು ಕಡ್ಡಾಯವಾಗಿ ಪೂರೈಸಿರಬೇಕು:
- ಜಾತಿ/ವರ್ಗ: ಪ್ರವರ್ಗ-1, 2A, 3A ಮತ್ತು 3B ಗೆ ಸೇರಿದವರಾಗಿರಬೇಕು.
- ವಿದ್ಯಾರ್ಹತೆ: ಯುಜಿಸಿ (UGC) ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Degree) ಪಡೆದಿರಬೇಕು.
- ವಯೋಮಿತಿ: ಕನಿಷ್ಠ 21 ವರ್ಷ ಆಗಿರಬೇಕು ಮತ್ತು 27 ವರ್ಷ ಮೀರಿರಬಾರದು.
- ಆದಾಯ ಮಿತಿ: ಅಭ್ಯರ್ಥಿಯ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯ ರೂ. 8 ಲಕ್ಷಗಳ ಒಳಗಿರಬೇಕು.
- ಡೊಮಿಸೈಲ್: ಅಭ್ಯರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
ತರಬೇತಿ ಎಲ್ಲಿ ನಡೆಯುತ್ತೆ? ಸೌಲಭ್ಯಗಳೇನು?
- ಅವಧಿ: ಒಟ್ಟು 75 ದಿನಗಳ ತರಬೇತಿ.
- ಸ್ಥಳ: ಇಲಾಖೆಯು ರಾಜ್ಯದಾದ್ಯಂತ ಗುರುತಿಸಿರುವ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಲ್ಲಿ ಕೋಚಿಂಗ್ ನೀಡಲಾಗುತ್ತದೆ.
- ಸೌಲಭ್ಯ: ಅಭ್ಯರ್ಥಿಗಳಿಗೆ ತರಬೇತಿ ಶುಲ್ಕ ಸಂಪೂರ್ಣ ಉಚಿತ. ಇದರ ಜೊತೆಗೆ ತರಬೇತಿ ಅವಧಿಯಲ್ಲಿ ಇರುವ ಊಟ ಮತ್ತು ವಸತಿ ವೆಚ್ಚವನ್ನು ಇಲಾಖೆಯೇ ಭರಿಸಲಿದೆ. ಊಟ ಮತ್ತು ವಸತಿ ಬೇಡವಾದಲ್ಲಿ, ಹೊರಗಡೆ ಉಳಿದುಕೊಳ್ಳುವವರಿಗೆ ಮಾಸಿಕ ಭತ್ಯೆ (Stipend) ನೀಡಲಾಗುತ್ತದೆ.
ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತದೆ.
- ಪುರುಷ ಅಭ್ಯರ್ಥಿಗಳಿಗೆ: ಬೆಂಗಳೂರು, ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ.
- ಮಹಿಳಾ ಅಭ್ಯರ್ಥಿಗಳಿಗೆ: ಮೈಸೂರು ವಿಭಾಗದಲ್ಲಿ ಮಾತ್ರ.
ಆಯ್ಕೆ ಮಾಡುವುದು ಹೇಗೆ?
- ಅಭ್ಯರ್ಥಿಗಳನ್ನು ಪದವಿಯಲ್ಲಿ ಗಳಿಸಿದ ಒಟ್ಟು ಶೇಕಡಾವಾರು ಅಂಕಗಳ (Total Percentage in Degree) ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಿ ಆಯ್ಕೆ ಮಾಡಲಾಗುತ್ತದೆ.
- ಯಾವುದೇ ಪ್ರತ್ಯೇಕ ಪ್ರವೇಶ ಪರೀಕ್ಷೆ ಇರುವುದಿಲ್ಲ.
- ಆದರೆ, ಈ ಹಿಂದೆ ಇಲಾಖೆಯಿಂದ ಯುಪಿಎಸ್‌ಸಿ/ಕೆಪಿಎಸ್‌ಸಿ/ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ ಪಡೆದವರು ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
- ಎಸ್‌ಎಸ್‌ಎಲ್‌ಸಿ (SSLC) ಅಂಕಪಟ್ಟಿ (ಜನ್ಮ ದಿನಾಂಕಕ್ಕಾಗಿ).
- ಪದವಿ (Degree) ಅಂಕಪಟ್ಟಿಗಳು.
- ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
- ಆಧಾರ್ ಕಾರ್ಡ್.
- ವಿಕಲಚೇತನರಾಗಿದ್ದಲ್ಲಿ (PWD) ಪ್ರಮಾಣ ಪತ್ರ.
- ಇತರೆ ದಾಖಲೆಗಳು
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್ www.bcwd.karnataka.gov.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಆಫ್‌ಲೈನ್ ಅಥವಾ ಅಂಚೆ ಮೂಲಕ ಕಳುಹಿಸಿದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.
PSI Free Coaching 2026 ಪ್ರಮುಖ ಲಿಂಕ್‌ಗಳು:
- ಅಧಿಕೃತ ಅಧಿಸೂಚನೆ (PDF): ಡೌನ್‌ಲೋಡ್
- ಆನ್‌ಲೈನ್ ಅರ್ಜಿ ಸಲ್ಲಿಸಲು: Apply Online
- ಅಧಿಕೃತ ವೆಬ್‌ಸೈಟ್: bcwd.karnataka.gov.in
“ಪಿಎಸ್‌ಐ ಹುದ್ದೆಗಳಿಗೆ ಸ್ಪರ್ಧೆ ಹೆಚ್ಚಿರುವುದರಿಂದ, ಖಾಸಗಿ ಸಂಸ್ಥೆಗಳಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲು ಸರ್ಕಾರವೇ ನೀಡುವ ಈ ಉಚಿತ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಿ. ಸರ್ವರ್ ಸಮಸ್ಯೆ ಬರುವ ಮುನ್ನವೇ ಇಂದೇ ಅರ್ಜಿ ಹಾಕಿ.”
ಹೆಚ್ಚಿನ ಮಾಹಿತಿಗೆ ಸಹಾಯವಾಣಿ: 8050770004 (ಬೆಳಗ್ಗೆ 10 ರಿಂದ ಸಂಜೆ 5:30 ರವರೆಗೆ).
ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಲ್ಲಿ ಪಿಎಸ್‌ಐ ಆಕಾಂಕ್ಷಿಗಳಿದ್ದರೆ ಅವರಿಗೆ ಈ ಮಾಹಿತಿಯನ್ನು ಈಗಲೇ ಶೇರ್ ಮಾಡಿ!
ಇತರೆ ಮಾಹಿತಿಗಳನ್ನು ಓದಿ: