ನೀವು ಕೂಡ ಸರ್ಕಾರದಿಂದ ನೀಡಲಾಗುವ 35,000 ರೂ.ವರೆಗಿನ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಬೇಕಾ? ಹಾಗಿದ್ದರೇ ಇಲ್ಲಿದೆ ನಿಮಗೆ ಗುಡ್ ನ್ಯೂಸ್.
ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಈ ಸೌಲಭ್ಯದ ಲಾಭ ಪಡೆದುಕೊಳ್ಳಲು ಇಲಾಖೆ ತಿಳಿಸಿದೆ.
ಪ್ರಥಮ ಪ್ರಯತ್ನದಲ್ಲೇ ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆಗಿರುವ ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಸಿಹಿ ಸುದ್ದಿ ನೀಡಿದೆ.
ಎಸ್‌ಎಸ್‌ಎಲ್‌ಸಿ (SSLC) ಮತ್ತು ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ (PUC, Degree, PG) ಉತ್ತೀರ್ಣರಾದವರಿಗೆ ನೀಡಲಾಗುವ ‘ಪ್ರೈಜ್ ಮನಿ’ (Prize Money Scholarship) ಅಥವಾ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.
ಅರ್ಹ ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಫೆಬ್ರವರಿ 28, 2026 ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
Prize Money Scholarship Details:
ವಿದ್ಯಾರ್ಥಿಗಳು ಯಾವ ಕೋರ್ಸ್ ಮುಗಿಸಿದ್ದಾರೆ ಎಂಬುದರ ಆಧಾರದ ಮೇಲೆ ₹7,000 ದಿಂದ ಬರೋಬ್ಬರಿ ₹35,000 ದವರೆಗೆ ಪ್ರೋತ್ಸಾಹಧನ ಜಮೆ ಆಗಲಿದೆ. ಅದರ ವಿವರ ಇಲ್ಲಿದೆ:
- SSLC (ಶೇ. 60-75 ಅಂಕ): ₹7,000/-
- SSLC (ಶೇ. 75 ಕ್ಕಿಂತ ಹೆಚ್ಚು): ₹15,000/-
- PUC / ಡಿಪ್ಲೊಮಾ: ₹20,000/-
- ಯಾವುದೇ ಪದವಿ (Degree): ₹25,000/-
- ಸ್ನಾತಕೋತ್ತರ ಪದವಿ (PG): ₹30,000/-
- ವೃತ್ತಿಪರ ಕೋರ್ಸ್‌ಗಳು (Professional Courses – Agri, Engg, Med, Vet): ₹35,000/-.
ಅರ್ಜಿ ಸಲ್ಲಿಸಲು ಅರ್ಹತೆಗಳೇನು?
- ವಿದ್ಯಾರ್ಥಿಯು ಪರಿಶಿಷ್ಟ ಜಾತಿಗೆ (SC) ಸೇರಿರಬೇಕು.
- ಕೋರ್ಸ್ ಅನ್ನು ಪ್ರಥಮ ಪ್ರಯತ್ನದಲ್ಲೇ (First Attempt) ಪಾಸು ಮಾಡಿರಬೇಕು.
- ಪ್ರಥಮ ದರ್ಜೆಯಲ್ಲಿ (First Class) ಉತ್ತೀರ್ಣರಾಗಿರುವುದು ಕಡ್ಡಾಯ.
ಬೇಕಾಗುವ ದಾಖಲೆಗಳು:
- ಆನ್‌ಲೈನ್ ಅರ್ಜಿ ಪ್ರತಿ.
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
- ಎಸ್‌ಎಸ್‌ಎಲ್‌ಸಿ / ಪಿಯುಸಿ / ಪದವಿ ಅಂಕಪಟ್ಟಿಗಳು.
- ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ (ಆಧಾರ್ ಲಿಂಕ್ ಆಗಿರಬೇಕು).
- ಆಧಾರ್ ಕಾರ್ಡ್.
ಅರ್ಜಿ ಸಲ್ಲಿಸುವುದು ಎಲ್ಲಿ?
ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೂಡಲೇ ಅರ್ಜಿ ಸಲ್ಲಿಸಬಹುದು.
SC Prize Money Scholarship Application Link 2025-26
- SC Post Matric Prize Money Link 2025-26: Apply Online
- ST Post Matric Prize Money Link : Apply Online
“ಇದು ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವ ಗೌರವಧನವಿದ್ದಂತೆ. ಮೆರಿಟ್ ಇದ್ದರೂ ಆರ್ಥಿಕ ಸಂಕಷ್ಟದಲ್ಲಿರುವ ಎಸ್‌ಸಿ ವಿದ್ಯಾರ್ಥಿಗಳಿಗೆ ಇದು ದೊಡ್ಡ ನೆರವಾಗುತ್ತದೆ. ಕೊನೆಯ ದಿನಾಂಕದವರೆಗೂ ಕಾಯಬೇಡಿ, ಸರ್ವರ್ ಬಿಜಿ ಆಗುವ ಮುನ್ನವೇ ಇಂದೇ ಅರ್ಜಿ ಹಾಕಿ.”
ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಲ್ಲಿ ಯಾರಾದರೂ ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆಗಿದ್ದರೆ, ಅವರಿಗೆ ಈ ವಿಷಯ ತಿಳಿಸಿ. ಹಣಕಾಸಿನ ನೆರವು ಸಿಗಲಿ.
ಇತರೆ ಮಾಹಿತಿಗಳನ್ನು ಓದಿ:
Labour Card Scholarship 2026: ವಿದ್ಯಾರ್ಥಿಗಳಿಗೆ 60,000 ರೂ. ಶೈಕ್ಷಣಿಕ ಸಹಾಯಧನ