ಓದಿನಲ್ಲಿ ಪ್ರತಿಭಾವಂತರಾಗಿದ್ದರೂ ಆರ್ಥಿಕ ಸಂಕಷ್ಟದಿಂದ ಬಳಲುವ ಎಷ್ಟೋ ವಿದ್ಯಾರ್ಥಿಗಳಿರುತ್ತಾರೆ. ಅಂತಹ ಪ್ರತಿಭಾವಂತರಿಗೆ ಕರ್ನಾಟಕ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಅರ್ಹ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹೌದು ಸ್ನೇಹಿತರೇ, ಕರ್ನಾಟಕ ಸರ್ಕಾರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತಿದ್ದು, 50,000 ರೂಪಾಯಿವರೆಗೆ ಧನ ಸಹಾಯ ದೊರೆಯಲಿದೆ.
Prize Money Scholarship 2025-26 ಯೋಜನೆಯ ವಿವರ:
- ಯೋಜನೆಯ ಹೆಸರು: ಪ್ರೋತ್ಸಾಹ ಧನ ಯೋಜನೆ
- ಪ್ರೋತ್ಸಾಹ ಧನ ಮೊತ್ತ: 7,500 ರೂ. ದಿಂದ 50,000 ರೂ.
- ಯಾರು ಅರ್ಜಿ ಸಲ್ಲಿಸಬಹುದು: SSLC, PUC/Diploma), Degree, PG ಪಾಸಾದವರು
ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪ್ರಥಮ ಪ್ರಯತ್ನದಲ್ಲೇ ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದರೆ ಸರ್ಕಾರದಿಂದ ಆಕರ್ಷಕ ‘ಪ್ರೋತ್ಸಾಹ ಧನ’ (Prize Money Scholarship 2026) ಸಿಗಲಿದೆ.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಈ ಯೋಜನೆಯನ್ನು ಜಾರಿಗೊಳಿಸಿದ್ದು, ಎಸ್‌ಎಸ್‌ಎಲ್‌ಸಿಯಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೆ ಪ್ರಯತ್ನದಲ್ಲೇ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.
Prize Money Scholarship Amount 2026:
ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ (First Class in First Attempt) ಉತ್ತೀರ್ಣರಾದರೆ ಈ ಕೆಳಗಿನಂತೆ ಹಣಕಾಸಿನ ನೆರವು ಲಭ್ಯವಾಗಲಿದೆ:
- ಎಸ್‌ಎಸ್‌ಎಲ್‌ಸಿ (SSLC):
- ಶೇ. 60 ರಿಂದ ಶೇ. 75 ರಷ್ಟು ಅಂಕ ಪಡೆದರೆ: ₹7,500/-
- ಶೇ. 75 ಕ್ಕಿಂತ ಹೆಚ್ಚು ಅಂಕ ಪಡೆದರೆ: ₹15,000/-
- ಪಿಯುಸಿ ಅಥವಾ ಡಿಪ್ಲೊಮಾ (PUC/Diploma): ಪಾಸಾದವರಿಗೆ ₹20,000/-
- ಪದವಿ (Degree): ಪಾಸಾದವರಿಗೆ ₹25,000/-
- ಸ್ನಾತಕೋತ್ತರ ಪದವಿ (Post Graduation): ಪಾಸಾದವರಿಗೆ ₹30,000/-
- ವೃತ್ತಿಪರ ಪದವಿ (Professional Courses): ವೈದ್ಯಕೀಯ, ತಾಂತ್ರಿಕ (Engineering), ಕೃಷಿ ಅಥವಾ ಪಶು ವೈದ್ಯಕೀಯ ಪದವಿ ಪೂರೈಸಿದವರಿಗೆ ₹35,000/-
- ರ‍್ಯಾಂಕ್ ವಿಜೇತರಿಗೆ ಬಂಪರ್: ವಿಶ್ವವಿದ್ಯಾಲಯ ಮಟ್ಟದಲ್ಲಿ ಪಿಜಿ ಕೋರ್ಸ್‌ಗಳ ವಿವಿಧ ವಿಷಯಗಳಲ್ಲಿ 1 ರಿಂದ 5 ರೊಳಗೆ Rank ಪಡೆದ ವಿದ್ಯಾರ್ಥಿಗಳಿಗೆ ಬರೋಬ್ಬರಿ ₹50,000/- ಪ್ರೋತ್ಸಾಹ ಧನ ನೀಡಲಾಗುತ್ತದೆ.

ಉದ್ದೇಶವೇನು? ಈ ಯೋಜನೆಯ ಮುಖ್ಯ ಉದ್ದೇಶವೇ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಉನ್ನತ ಶಿಕ್ಷಣ ಪಡೆಯಲು ಆರ್ಥಿಕವಾಗಿ ಬೆಂಬಲ ನೀಡುವುದಾಗಿದೆ. ಇದು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.
ಅರ್ಜಿ ಸಲ್ಲಿಸುವುದು ಹೇಗೆ? ಅರ್ಹ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಅಥವಾ ತಮ್ಮ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
Prize Money Scholarship Application Link 2025-26
- Post Matric Prize Money Link 2025-26: Apply Online
- SSLC Prize Money Application Link 2025-26: Apply Online
ಇತರೆ ಮಾಹಿತಿಗಳನ್ನು ಓದಿ:
Labour Card Scholarship 2026: ವಿದ್ಯಾರ್ಥಿಗಳಿಗೆ 60,000 ರೂ. ಶೈಕ್ಷಣಿಕ ಸಹಾಯಧನ