ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Yojana) ಯೋಜನೆಯ 21ನೇ ಕಂತಿನ 2,000 ರೂ. ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (19-11-2025 ರಂದು) ಅಧಿಕೃತವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ.
ಬುಧವಾರ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ನೈಸರ್ಗಿಕ ಕೃಷಿ ಶೃಂಗಸಭೆಯನ್ನು ಉದ್ಘಾಟಿಸಿದ ಸಂದರ್ಭದಲ್ಲಿ, ಈ ಕಂತಿನ ಹಣ ಬಿಡುಗಡೆಗೊಂಡಿದ್ದು ಸುಮಾರು 9 ಕೋಟಿ ರೈತರಿಗೆ ಒಟ್ಟಾರೆ 18,000 ಕೋಟಿಗೂ ಅಧಿಕ ಮೊತ್ತವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿದೆ.
ರೈತರಿಗೆ ವರ್ಷಕ್ಕೆ 6,000 ರೂ. ನೆರವು:
- ಪಿಎಂ ಕಿಸಾನ್ ಯೋಜನೆಯಡಿ ಅರ್ಹ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ., ಒಟ್ಟು ವಾರ್ಷಿಕ 6,000 ರೂ. ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
- ಆಗಸ್ಟ್ನಲ್ಲಿ ಬಿಡುಗಡೆಗೊಂಡ 20 ನೇ ಕಂತಿನಲ್ಲಿ 2.4 ಕೋಟಿ ಮಹಿಳಾ ರೈತರು ಸೇರಿದಂತೆ 9.7 ಕೋಟಿಗೂ ಹೆಚ್ಚು ರೈತರಿಗೆ ಪ್ರಯೋಜನ ದೊರಕಿತ್ತು.
PM Kisan Yojana 21 ನೇ ಕಂತಿನ ಹಣ ನಿಮ್ಮ ಖಾತೆಗೆ ಜಮೆ ಆಯಿತೇ? ಹೀಗೆ ಪರಿಶೀಲಿಸಿ
- PM-KISAN ವೆಬ್ಸೈಟ್ಗೆ ಹೋಗಿ: pmkisan.gov.in
- Farmers Corner ವಿಭಾಗದಲ್ಲಿ Beneficiary Status ಅಥವಾ Beneficiary List ಆಯ್ಕೆ ಮಾಡಿ
- ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಆಯ್ಕೆ ಮಾಡಿದರೆ ಪಟ್ಟಿ ಕಾಣಿಸುತ್ತದೆ
- ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಕಂತು ಜಮೆಯಾಗಿದೆ, ಜೊತೆಗೆ ಬ್ಯಾಂಕ್ ಎಸ್ಎಂಎಸ್ ಕೂಡ ಬರುತ್ತದೆ
ಕೆವೈಸಿ ಕಡ್ಡಾಯ:
OTP ಆಧಾರಿತ eKYC ಅನ್ನು ಪೋರ್ಟಲ್ನಲ್ಲಿ ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರದಲ್ಲಿ ಬಯೋಮೆಟ್ರಿಕ್ ಮೂಲಕ ಮಾಡಿಸಬಹುದು. ಯೋಜನೆಯ ಉದ್ದೇಶ ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಕೃಷಿ ವೆಚ್ಚಗಳಿಗೆ ನೆರವಾಗುವುದು.
PM-Kisan ಯೋಜನೆಗೆ ಹೊಸದಾಗಿ ನೋಂದಣಿ ಮಾಡಬೇಕೇ?
1) ಅಧಿಕೃತ ವೆಬ್ಸೈಟ್:
pmkisan.gov.in ಗೆ ಭೇಟಿ ನೀಡಿ.
2) ‘Farmers Corner’ ವಿಭಾಗದೊಳಗೆ:
New Farmer Registration ಆಯ್ಕೆಮಾಡಿ.
ಅಲ್ಲಿ ನಿಮ್ಮ ಅಗತ್ಯ ವಿವರ ಮತ್ತು ದಾಖಲೆಗಳನ್ನು ನಮೂದಿಸಿ ಹೊಸದಾಗಿ ನೋಂದಣಿ ಮಾಡಿಕೊಳ್ಳಬಹುದು.
ಇತರೆ ಮಾಹಿತಿಗಳನ್ನು ಓದಿ:
CIBIL Score: ಗುಡ್ ನ್ಯೂಸ್; ಸಿಬಿಲ್ ಸ್ಕೋರ್ ಇಲ್ಲದೆಯೂ ಸಾಲ ಪಡೆಯಬಹುದು: ಹಣಕಾಸು ಸಚಿವಾಲಯ
ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್ಲೈನ್ ಅರ್ಜಿ ಆಹ್ವಾನ