ಎಲ್ಲರಿಗೂ ನಮಸ್ಕಾರ, ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ವತಿಯಿಂದ ಮೆಟ್ರಿಕ್-ನಂತರದ ವಿದ್ಯಾರ್ಥಿವೇತನಕ್ಕೆ (NSP Scholarship 2025-26) ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವರ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವ ಗುರಿಯನ್ನು ರಾಷ್ಟ್ರೀಯ ವಿದ್ಯಾರ್ಥಿವೇತನ (NSP) ಹೊಂದಿದ್ದು, 2025-26ನೇ ಸಾಲಿನ ಮೆಟ್ರಿಕ್-ನಂತರದ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವ ಪರಿಶಿಷ್ಟ ಜಾತಿಯ (SC) ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿ ಇದರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಅರ್ಹತೆಗಳು:
ಭಾರತೀಯ ಪ್ರಜೆಯಾಗಿರಬೇಕು
ವಿದ್ಯಾರ್ಥಿಗಳು ಅಂಗೀಕೃತ ಸಂಸ್ಥೆಗಳು/ವಿಶ್ವವಿದ್ಯಾಲಯಗಳು/ಕಾಲೇಜು/ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರಬೇಕು
ವಿದ್ಯಾರ್ಥಿಯ ಪಾಲಕರ, ಪೋಷಕರ ವಾರ್ಷಿಕ ಆದಾಯವು ರೂ. 2.5 ಲಕ್ಷ ಮೀರಿರಬಾರದು
ಪ್ರಯೋಜನಗಳು:
ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ವಾರ್ಷಿಕ 2,500 ರೂ. ರಿಂದ 13,500 ವರೆಗಿನ ಶೈಕ್ಷಣಿಕ ಭತ್ಯೆ ನೀಡುತ್ತಾರೆ. ಹಾಗೂ ದಿವ್ಯಾಂಗ (ವಿಶೇಷಚೇತನ) ವಿದ್ಯಾರ್ಥಿಗಳಿಗೆ 10% ಹೆಚ್ಚುವರಿ ಭತ್ಯೆ ನೀಡುತ್ತಾರೆ.
NSP Scholarship 2025-26 ಅಗತ್ಯ ದಾಖಲೆಗಳು:
- ಮೊಬೈಲ್ ಸಂಖ್ಯೆ
- ಆಧಾರ್ ಸಂಖ್ಯೆ
- ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆ
- ಆದಾಯ ಪ್ರಮಾಣಪತ್ರ
- ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್
- ಜಾತಿ ಪ್ರಮಾಣಪತ್ರ
NSP Scholarship 2025-26 Online Application Link:
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: scholarships.gov.in
ಇತರೆ ಮಾಹಿತಿಗಳನ್ನು ಓದಿ:
Govt Scholarship 2025: 5,000 ರೂ. ದಿಂದ 1 ಲಕ್ಷ ರೂ. ವರೆಗೆ ಪ್ರೋತ್ಸಾಹಧನ
Mahindra Scholarship 2025: ಮಹೀಂದ್ರಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ