ನೂತನವಾಗಿ ಮದುವೆಯಾದ ದಂಪತಿಗಳಿಗೆ ಅಥವಾ ಮದುವೆ ನೋಂದಣಿ ಮಾಡಿಸಲು ಬಾಕಿ ಇರುವವರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ‘ಮ್ಯಾರೇಜ್ ಸರ್ಟಿಫಿಕೇಟ್’ (Marriage Certificate) ಪಡೆಯಲು ಇನ್ನು ಮುಂದೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಅಲೆದಾಡಬೇಕಿಲ್ಲ. ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ‘ಕಾವೇರಿ 2.0’ (Kaveri 2.0) ತಂತ್ರಾಂಶದ ಮೂಲಕ ಆನ್‌ಲೈನ್‌ನಲ್ಲಿ ವಿವಾಹ ನೋಂದಣಿಗೆ ಅವಕಾಶ ಕಲ್ಪಿಸಿದೆ.
Marriage Certificate ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
ನೀವು ಅರ್ಜಿ ಸಲ್ಲಿಸಲು ಕುಳಿತುಕೊಳ್ಳುವ ಮುನ್ನ ಈ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ PDF ರೂಪದಲ್ಲಿ ರೆಡಿ ಇಟ್ಟುಕೊಳ್ಳಿ:
- ಲಗ್ನ ಪತ್ರಿಕೆ (Wedding Invitation).
- ದಂಪತಿಗಳ ಒಂದು ಜಂಟಿ ಫೋಟೋ.
- ಪತಿ ಮತ್ತು ಪತ್ನಿಯ ಆಧಾರ್ ಕಾರ್ಡ್.
- ಮೂವರು ಸಾಕ್ಷಿದಾರರ (Witness) ಆಧಾರ್ ಕಾರ್ಡ್‌ಗಳು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? (Step-by-Step):
ಹಂತ 1: ಮೊದಲಿಗೆ ನೋಂದಣಿ ಇಲಾಖೆಯ ಅಧಿಕೃತ ವೆಬ್‌ಸೈಟ್ Kaveri 2.0 – https://kaveri.karnataka.gov.in ಗೆ ಭೇಟಿ ನೀಡಿ.
ಹಂತ 2: ವೆಬ್‌ಸೈಟ್‌ನ ಮುಖಪುಟದಲ್ಲಿ (ಬಲಭಾಗದ ಮೇಲ್ಭಾಗದಲ್ಲಿ) ಕಾಣುವ ‘ನೋಂದಣಿ’ (Register) ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತಿತರ ವಿವರ ನೀಡಿ ಹೊಸ ಖಾತೆ (User ID) ತೆರೆಯಿರಿ.
ಹಂತ 3: ನಂತರ ಲಾಗಿನ್ ಆಗಿ, ‘ಮದುವೆ ನೋಂದಣಿ’ ವಿಭಾಗವನ್ನು ಆರಿಸಿಕೊಳ್ಳಿ. ಅಲ್ಲಿ ಪತಿ ಮತ್ತು ಪತ್ನಿಯ ಹೆಸರು, ಜನ್ಮ ದಿನಾಂಕ ಮತ್ತು ವಿಳಾಸವನ್ನು ಆಧಾರ್ ಕಾರ್ಡ್ ನಲ್ಲಿರುವಂತೆ ನಿಖರವಾಗಿ ನಮೂದಿಸಿ.
ಹಂತ 4: ಮುಂದುವರಿದು ಮದುವೆಯಾದ ದಿನಾಂಕ, ಸ್ಥಳ, ಕಲ್ಯಾಣ ಮಂಟಪದ ಹೆಸರು ಮತ್ತು ವಿಳಾಸದ ಮಾಹಿತಿಯನ್ನು ಭರ್ತಿ ಮಾಡಿ. ಜೊತೆಗೆ ಮೂವರು ಸಾಕ್ಷಿದಾರರ ವಿವರವನ್ನೂ ನೀಡಬೇಕು.
ಹಂತ 5 (ದಾಖಲೆ ಅಪ್‌ಲೋಡ್): ನೀವು ಸ್ಕ್ಯಾನ್ ಮಾಡಿಟ್ಟುಕೊಂಡಿರುವ ಲಗ್ನ ಪತ್ರಿಕೆ, ಆಧಾರ್ ಕಾರ್ಡ್‌ಗಳು ಮತ್ತು ಫೋಟೋವನ್ನು ಅಪ್‌ಲೋಡ್ ಮಾಡಿ.
ಇ-ಕೆವೈಸಿ (e-KYC) ಕಡ್ಡಾಯ: ದಾಖಲೆ ಅಪ್‌ಲೋಡ್ ಮಾಡಿದ ನಂತರ, ಪತಿ-ಪತ್ನಿ ಹಾಗೂ ಸಾಕ್ಷಿದಾರರ ಆಧಾರ್ ಸಂಖ್ಯೆಗೆ ಬರುವ OTP ಯನ್ನು ನಮೂದಿಸಿ ‘ಇ-ಸಹಿ’ (e-Sign) ಮಾಡುವುದು ಕಡ್ಡಾಯವಾಗಿದೆ. ಇದು ಮುಗಿದರೆ ನಿಮ್ಮ ಅರ್ಜಿ ಸಲ್ಲಿಕೆ ಬಹುತೇಕ ಪೂರ್ಣಗೊಂಡಂತೆ.
ಅಂತಿಮ ಹಂತ: ನಿಮ್ಮ ವಿಳಾಸಕ್ಕೆ ಹತ್ತಿರವಿರುವ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಆನ್‌ಲೈನ್‌ನಲ್ಲೇ ಆಯ್ಕೆ ಮಾಡಿಕೊಂಡು, ನಿಗದಿತ ಸೇವಾ ಶುಲ್ಕವನ್ನು ಪಾವತಿಸಿದರೆ, ‘ಸಕಾಲ’ ಯೋಜನೆಯಡಿ 4 ದಿನಗಳ ಒಳಗೆ ನಿಮ್ಮ ಮ್ಯಾರೇಜ್ ಸರ್ಟಿಫಿಕೇಟ್ ಅನುಮೋದನೆಗೊಳ್ಳಲಿದೆ.
ಇನ್ಯಾಕೆ ತಡ? ಕೂಡಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಸುಲಭವಾಗಿ ವಿವಾಹ ನೋಂದಣಿ ಪ್ರಮಾಣ ಪತ್ರ (Marriage Certificate Download) ಡೌನ್‌ಲೋಡ್ ಮಾಡಿಕೊಳ್ಳಿ !
ಇಲಾಖೆಯ ಅಧಿಕೃತ ವೆಬ್‌ಸೈಟ್ kaveri.karnataka.gov.in
ಇತರೆ ಮಾಹಿತಿಗಳನ್ನು ಓದಿ:
ಉಚಿತ ಹೊಲಿಗೆ ಯಂತ್ರ ಯೋಜನೆ 2026; ಅರ್ಹರಿಂದ ಆನ್‌ಲೈನ್ ಅರ್ಜಿ ಆಹ್ವಾನ