ಎಲ್ಲರಿಗೂ ನಮಸ್ಕಾರ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್, ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ 2025-26ನೇ ಸಾಲಿನ ಶೈಕ್ಷಣಿಕ ಸಹಾಯಧನಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕಟ್ಟಡ ಕಾರ್ಮಿಕರ ಮಕ್ಕಳ ವ್ಯಾಸಂಗಕ್ಕೆ ನೆರವಾಗಲು ‘ಕಲಿಕಾ ಭಾಗ್ಯ’ ಯೋಜನೆ (Labour Card Scholarship) ನೀಡುತ್ತಿದ್ದಾರೆ. ಈ ಯೋಜನೆಯಡಿಯಲ್ಲಿ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ ಈ ವಿದ್ಯಾರ್ಥಿವೇತನವನ್ನು ದೊರೆಯಲಿದೆ.
ಅರ್ಹತೆಗಳೇನು..?
ಅರ್ಜಿದಾರರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಾಗಿದ್ದು, ಮಂಡಳಿಯಲ್ಲಿ ನೋಂದಾಯಿತರಾಗಿರಬೇಕು.
Labour Card Scholarship Amount 2025
| ಕೋರ್ಸ್/ತರಗತಿ | ತರಗತಿ/ಪದವಿ (ಪ್ರತಿ ವರ್ಷಕ್ಕೆ) (ರೂ.ಗಳಲ್ಲಿ) | ಸ್ನಾತಕೋತ್ತರ ಪದವಿ (ಪ್ರತಿ ವರ್ಷಕ್ಕೆ) (ರೂ.ಗಳಲ್ಲಿ) |
| 1ನೇ ತರಗತಿಯಿಂದ 5ನೇ ತರಗತಿ | 1,800/- | – |
| 6ನೇ ತರಗತಿಯಿಂದ 8ನೇ ತರಗತಿ | 2,400/- | – |
| 9 ಮತ್ತು 10ನೇ ತರಗತಿ | 3,000/- | – |
| ಪಿಯುಸಿ, 11 ಹಾಗೂ 12ನೇ ತರಗತಿ ಅಥವಾ ತತ್ಸಮಾನ ಕೋರ್ಸ್. | 6,000/- | – |
| 10ನೇ ತರಗತಿ ನಂತರದ ಐಟಿಐ/ ತತ್ಸಮಾನ ತಾಂತ್ರಿಕ ಕೋರ್ಸ್ ಗಳು | 10,000/- | – |
| ಪಿಯುಸಿ ನಂತರದ ಯಾವುದೇ ಡಿಪ್ಲೋಮಾ ತರಗತಿ. | 12,000/- | – |
| ಸಾಮಾನ್ಯ ಪದವಿ (ಜನರಲ್ ಡಿಗ್ರಿ) – ಬಿಎ, ಬಿಕಾಂ, ಬಿಎಸ್ಸಿ ಮುಂತಾದವುಗಳು | 15,000/- | 20,000/- |
| 03 ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ Vocational ವೃತ್ತಿಪರ ಕೋರ್ಸ್ ಗಳು ಕಾನೂನು ಪದವಿ ಸಹಿತ (Professional Courses) | 20,000/- | 25,000/- |
| 04 ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ವೃತ್ತಿಪರ ಕೋರ್ಸ್ ಗಳು (Professional Courses) | 25,000/- | 35,000/- |
| 03 ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಪ್ಯಾರಾ ಮೆಡಿಕಲ್ ವೃತ್ತಿಪರ ಕೋರ್ಸ್ ಗಳು (Para Medical Courses) | 20,000/- | 25,000/- |
| 03 ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ವೃತ್ತಿಪರ ಕೋರ್ಸ್ ಗಳು (Professional Courses) | 25,000/- | 35,000/- |
| ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಪದವಿ ಕೋರ್ಸ್ ಗಳು | 40,000/- | 50,000/- |
| ಪಿಎಚ್ಡಿ/ಎಂಫಿಲ್ (03 ವರ್ಷ ಅವಧಿಯವರೆಗೆ) | 40,000/- | – |
| IIT, IIIT, AIMS, IISc, IISERC ನಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು. | 50,000/- | 60,000/- |
Labour Card Scholarship 2025 ಅಗತ್ಯ ದಾಖಲೆಗಳು:
- ಮಂಡಳಿಯಿಂದ ನೀಡಲಾದ ನೋಂದಣಿ ಕಾರ್ಡ್ (ಲೇಬರ್ ಕಾರ್ಡ್) ಹೊಂದಿರಬೇಕು.
- ನೋಂದಣಿದಾರರು ಮತ್ತು ಅವರ ಪತಿ/ಪತ್ನಿಯ ಆಧಾರ್ ಕಾರ್ಡ್.
- ವಿದ್ಯಾರ್ಥಿಯ ಆಧಾರ್ ಕಾರ್ಡ್.
- ಬ್ಯಾಂಕ್ ಖಾತೆ ವಿವರ (ಖಾತೆಗೆ ಆಧಾರ್ ಜೋಡಣೆಯಾಗಿರಬೇಕು ಮತ್ತು NPCI ಮ್ಯಾಪ್ ಆಗಿರಬೇಕು).
- ವಿದ್ಯಾರ್ಥಿಯ SATS ID ಅಥವಾ ಸ್ಟೂಡೆಂಟ್ ಐಡಿ.
- ವ್ಯಾಸಂಗ ಪ್ರಮಾಣ ಪತ್ರ (Study Certificate).
- ಉದ್ಯೋಗ ದೃಢೀಕರಣ ಪತ್ರ ಮತ್ತು ಸ್ವಯಂ ದೃಢೀಕರಣ ಪತ್ರ.
ಸೂಚನೆ: ದಿನಾಂಕ 31-05-2025 ಕ್ಕೂ ಮೊದಲು ಮಂಡಳಿಯಲ್ಲಿ ನೋಂದಾಯಿತರಾದ ಕಾರ್ಮಿಕರು ಮಾತ್ರ ತಮ್ಮ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-01-2026
Labour Department Scholarship 2025 Online Application Link:
ಅರ್ಜಿ ಸಲ್ಲಿಕೆ ಲಿಂಕ್: Apply ಮಾಡಿ
ಅಧಿಕೃತ ವೆಬ್ಸೈಟ್ಗಳು: karbwwb.karnataka.gov.in, ssp.karnataka.gov.in
ಸಹಾಯವಾಣಿ ಸಂಖ್ಯೆ: ಹೆಚ್ಚಿನ ಮಾಹಿತಿಗಾಗಿ ಅಥವಾ ಅರ್ಜಿ ಸಲ್ಲಿಸುವಾಗ ಸಮಸ್ಯೆ ಎದುರಾದರೆ ಕಾರ್ಮಿಕ ಸಹಾಯವಾಣಿ 155214 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
ಇತರೆ ಮಾಹಿತಿಗಳನ್ನು ಓದಿ:
NSP Scholarship 2025-26: ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ