SHIMUL Recruitment 2026: SHIMUL ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ; SSLC, ITI, ಡಿಗ್ರಿ, ಇಂಜಿನಿಯರಿಂಗ್ ಪಾಸಾದವರಿಗೆ ಸುವರ್ಣಾವಕಾಶ

Telegram Group Join Now
WhatsApp Group Join Now

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (SHIMUL) ಸಿಹಿ ಸುದ್ದಿ ನೀಡಿದೆ. ಒಕ್ಕೂಟದಲ್ಲಿ ಖಾಲಿ ಇರುವ ಬರೋಬ್ಬರಿ 194 ವಿವಿಧ ವೃಂದದ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ವಿಶೇಷವೆಂದರೆ, ಈ ಹಿಂದೆ ನಿಗದಿಪಡಿಸಿದ್ದ ಅರ್ಜಿ ಸಲ್ಲಿಕೆ ದಿನಾಂಕವನ್ನು ಆಡಳಿತಾತ್ಮಕ ಕಾರಣಗಳಿಂದ ವಿಸ್ತರಿಸಲಾಗಿದ್ದು, ಅಭ್ಯರ್ಥಿಗಳು ಫೆಬ್ರವರಿ 21, 2026 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಸಹಾಯಕ ವ್ಯವಸ್ಥಾಪಕರಿಂದ ಹಿಡಿದು ಜೂನಿಯರ್ ಟೆಕ್ನಿಷಿಯನ್ ವರೆಗೆ ವಿವಿಧ ಹುದ್ದೆಗಳಿದ್ದು, ಎಸ್ಸೆಸ್ಸೆಲ್ಸಿ (SSLC), ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ ಮತ್ತು ಇಂಜಿನಿಯರಿಂಗ್ ಮುಗಿಸಿದವರಿಗೂ ಇಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಅವಕಾಶವಿದೆ.

SHIMUL Recruitment 2026 ಸಂಕ್ಷಿಪ್ತ ವಿವರ:

  • ಸಂಸ್ಥೆಯ ಹೆಸರು: ಶಿಮುಲ್ – SHIMUL
  • ಒಟ್ಟು ಹುದ್ದೆಗಳು: 194 ಹುದ್ದೆಗಳು.
  • ಉದ್ಯೋಗ ಸ್ಥಳ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿ
  • ವೇತನ ಶ್ರೇಣಿ: ₹21,400 ರಿಂದ ₹155200 ರವರೆಗೆ

ಹುದ್ದೆಗಳ ವಿವರ:

ಒಕ್ಕೂಟವು ವಿವಿಧ ವಿಭಾಗಗಳಲ್ಲಿ ಈ ಕೆಳಗಿನಂತೆ ಹುದ್ದೆಗಳನ್ನು ಹಂಚಿಕೆ ಮಾಡಿದೆ:

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಸಹಾಯಕ ವ್ಯವಸ್ಥಾಪಕ (AH/AI)17
ಸಹಾಯಕ ವ್ಯವಸ್ಥಾಪಕ (ಆಡಳಿತ)1
ಸಹಾಯಕ ವ್ಯವಸ್ಥಾಪಕ (ಎಫ್ & ಎಫ್)3
MIS / ಸಿಸ್ಟಮ್ ಅಧಿಕಾರಿ1
ಮಾರ್ಕೆಟಿಂಗ್ ಅಧಿಕಾರಿ2
ತಾಂತ್ರಿಕ ಅಧಿಕಾರಿ (ಎಂಜಿನಿಯರ್)2
ತಾಂತ್ರಿಕ ಅಧಿಕಾರಿ (ಗುಣಮಟ್ಟ ನಿಯಂತ್ರಣ)2
ತಾಂತ್ರಿಕ ಅಧಿಕಾರಿ (ಡಿಟಿ)14
ರಸಾಯನಶಾಸ್ತ್ರಜ್ಞ ಗ್ರೇಡ್-I4
ವಿಸ್ತರಣಾ ಅಧಿಕಾರಿ ದರ್ಜೆ-III17
ಆಡಳಿತ ಸಹಾಯಕ ದರ್ಜೆ-II17
ಲೆಕ್ಕಪತ್ರ ಸಹಾಯಕ ದರ್ಜೆ-II12
ಮಾರ್ಕೆಟಿಂಗ್ ಸಹಾಯಕ ದರ್ಜೆ-II10
ರಸಾಯನಶಾಸ್ತ್ರಜ್ಞ ಗ್ರೇಡ್-II28
ಜೂನಿಯರ್ ಸಿಸ್ಟಮ್ ಆಪರೇಟರ್13
ಸ್ಟೆನೋಗ್ರಾಫರ್ ಗ್ರೇಡ್-II1
ಜೂನಿಯರ್ ತಂತ್ರಜ್ಞ50
ಒಟ್ಟು ಹುದ್ದೆಗಳು194

KMF SHIMUL Recruitment 2026 ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಈ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು:

ಹುದ್ದೆಯ ಹೆಸರುಶೈಕ್ಷಣಿಕ ಅರ್ಹತೆ
ಸಹಾಯಕ ವ್ಯವಸ್ಥಾಪಕರು (AH/AI)B.V.Sc & A.H
ಸಹಾಯಕ ವ್ಯವಸ್ಥಾಪಕರು (ಆಡಳಿತ)MBA
ಸಹಾಯಕ ವ್ಯವಸ್ಥಾಪಕರು (F&F)B.Sc (Agriculture)
MIS / ಸಿಸ್ಟಂ ಆಫೀಸರ್B.E (CS / IS)
ಮಾರ್ಕೆಟಿಂಗ್ ಅಧಿಕಾರಿB.Com / B.Sc / BBM
ತಾಂತ್ರಿಕ ಅಧಿಕಾರಿ (ಎಂಜಿನಿಯರ್)B.E (Mechanical / Electrical)
ತಾಂತ್ರಿಕ ಅಧಿಕಾರಿ (ಗುಣಮಟ್ಟ ನಿಯಂತ್ರಣ)M.Sc (Chemistry / Microbiology)
ತಾಂತ್ರಿಕ ಅಧಿಕಾರಿ (DT)B.Tech (Dairy Technology)
ಕೆಮಿಸ್ಟ್ ಗ್ರೇಡ್-IB.Sc (Chemistry / Microbiology)
ವಿಸ್ತರಣಾ ಅಧಿಕಾರಿ ಗ್ರೇಡ್-IIIಪದವಿ
ಆಡಳಿತ ಸಹಾಯಕ ಗ್ರೇಡ್-IIಪದವಿ
ಲೆಕ್ಕಪತ್ರ ಸಹಾಯಕ ಗ್ರೇಡ್-IIB.Com
ಮಾರ್ಕೆಟಿಂಗ್ ಸಹಾಯಕ ಗ್ರೇಡ್-IIBBM / B.Sc / B.Com
ಕೆಮಿಸ್ಟ್ ಗ್ರೇಡ್-IIB.Sc (Chemistry / Microbiology)
ಜೂನಿಯರ್ ಸಿಸ್ಟಂ ಆಪರೇಟರ್Degree + Diploma (Computer Application)
ಸ್ಟೆನೋಗ್ರಾಫರ್ ಗ್ರೇಡ್-IIಪದವಿ
ಜೂನಿಯರ್ ತಂತ್ರಜ್ಞSSLC + ITI

ವಯೋಮಿತಿ:

  • ಕನಿಷ್ಠ ವಯಸ್ಸು: 18 ವರ್ಷಗಳು
  • ಗರಿಷ್ಠ ವಯಸ್ಸು:
    • ಸಾಮಾನ್ಯ ವರ್ಗ (General Merit): 35 ವರ್ಷಗಳು
    • ಪ್ರವರ್ಗ 2A, 2B, 3A, 3B: 38 ವರ್ಷಗಳು
    • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1: 40 ವರ್ಷಗಳು

ವಯೋಮಿತಿ ಸಡಿಲಿಕೆ:

  • ಮಾಜಿ ಸೈನಿಕರು: ಸೇವೆ ಸಲ್ಲಿಸಿದ ಅವಧಿಗೆ ಹೆಚ್ಚುವರಿ 3 ವರ್ಷಗಳು
  • ವಿಧವೆಯರು: ಗರಿಷ್ಠ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ
  • ಅಂಗವಿಕಲರು: 10 ವರ್ಷಗಳ ಸಡಿಲಿಕೆ
  • KMF/ಒಕ್ಕೂಟಗಳ ನೌಕರರಿಗೆ: ನೇಮಕಾತಿ ನಿಯಮಾವಳಿ ಪ್ರಕಾರ ಸಡಿಲಿಕೆ ಇರುತ್ತದೆ

ವೇತನ ಶ್ರೇಣಿ:

ಹುದ್ದೆಯ ಹೆಸರುವೇತನ ಶ್ರೇಣಿ
ಸಹಾಯಕ ವ್ಯವಸ್ಥಾಪಕ (AH/AI)ರೂ. 83700 – 155200/-
ಸಹಾಯಕ ವ್ಯವಸ್ಥಾಪಕ (ಆಡಳಿತ)ರೂ. 83700 – 155200/-
ಸಹಾಯಕ ವ್ಯವಸ್ಥಾಪಕ (ಎಫ್ & ಎಫ್)ರೂ. 83700 – 155200/-
MIS / ಸಿಸ್ಟಮ್ ಅಧಿಕಾರಿರೂ. 69250 – 134200/-
ಮಾರ್ಕೆಟಿಂಗ್ ಅಧಿಕಾರಿರೂ. 69250 – 134200/-
ತಾಂತ್ರಿಕ ಅಧಿಕಾರಿ (ಎಂಜಿನಿಯರ್)ರೂ. 69250 – 134200/-
ತಾಂತ್ರಿಕ ಅಧಿಕಾರಿ (ಗುಣಮಟ್ಟ ನಿಯಂತ್ರಣ)ರೂ. 69250 – 134200/-
ತಾಂತ್ರಿಕ ಅಧಿಕಾರಿ (ಡಿಟಿ)ರೂ. 69250 – 134200/-
ರಸಾಯನಶಾಸ್ತ್ರಜ್ಞ ಗ್ರೇಡ್-Iರೂ. 54175 – 99400/-
ವಿಸ್ತರಣಾ ಅಧಿಕಾರಿ ದರ್ಜೆ-IIIರೂ. 54175 – 99400/-
ಆಡಳಿತ ಸಹಾಯಕ ದರ್ಜೆ-IIರೂ. 44425 – 83700/-
ಲೆಕ್ಕಪತ್ರ ಸಹಾಯಕ ದರ್ಜೆ-IIರೂ. 44425 – 83700/-
ಮಾರ್ಕೆಟಿಂಗ್ ಸಹಾಯಕ ದರ್ಜೆ-IIರೂ. 44425 – 83700/-
ರಸಾಯನಶಾಸ್ತ್ರಜ್ಞ ಗ್ರೇಡ್-IIರೂ. 44425 – 83700/-
ಜೂನಿಯರ್ ಸಿಸ್ಟಮ್ ಆಪರೇಟರ್ರೂ. 44425 – 83700/-
ಸ್ಟೆನೋಗ್ರಾಫರ್ ಗ್ರೇಡ್-IIರೂ. 44425 – 83700/-
ಜೂನಿಯರ್ ತಂತ್ರಜ್ಞರೂ. 34100 – 67600/-

ಅರ್ಜಿ ಶುಲ್ಕ:

ಅರ್ಜಿ ಶುಲ್ಕವನ್ನು ಆನ್‌ಲೈನ್ (Net Banking/Credit/Debit Card/UPI) ಮೂಲಕವೇ ಪಾವತಿಸಬೇಕು.

  • SC / ST / ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ: ₹500/-
  • ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಗಳ (OBC) ಅಭ್ಯರ್ಥಿಗಳಿಗೆ: ₹1,000/-
  • (ಶುಲ್ಕ ಪಾವತಿಸದ ಅರ್ಜಿಗಳನ್ನು ತಿರಸ್ಕರಿಸಲಾಗುವುದು).

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 14-11-2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Extended): 21-02-2026
  • ಶುಲ್ಕ ಪಾವತಿಸಲು ಕೊನೆಯ ದಿನಾಂಕ: 21-02-2026.

ಪ್ರಮುಖ ಲಿಂಕ್‌ಗಳು:

RRB Group D Recruitment 2026

ಅಂಚೆ ಇಲಾಖೆ ನೇಮಕಾತಿ 2026

Telegram Group Join Now
WhatsApp Group Join Now

Leave a Comment