Kisan Tractor Scheme: ಕಿಸಾನ್ ಟ್ರ್ಯಾಕ್ಟರ್ ಯೋಜನೆ; ಟ್ರ್ಯಾಕ್ಟರ್ ಖರೀದಿಸಲು ರೈತರಿಗೆ ಶೇ.50 ರಷ್ಟು ಸಹಾಯಧನ

Telegram Group Join Now
WhatsApp Group Join Now

ವ್ಯವಸಾಯ ಅಂದ್ರೆ ಸುಮ್ಮನಲ್ಲ, ಎತ್ತುಗಳನ್ನು ಕಟ್ಟಿ ಉಳುವ ಕಾಲ ಈಗ ಬದಲಾಗಿದೆ. ಆಧುನಿಕ ಕೃಷಿ ಪದ್ಧತಿಯಲ್ಲಿ ಯಂತ್ರೋಪಕರಣಗಳದ್ದೇ ದರ್ಬಾರು. ಆದರೆ, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಟ್ರ್ಯಾಕ್ಟರ್ ಖರೀದಿಸುವುದು ಬಡ ರೈತನಿಗೆ ಎಟುಕದ ಕನಸು.

ರೈತರ ಈ ಸಂಕಷ್ಟ ಅರಿತಿರುವ ಸರ್ಕಾರ, ‘ಕಿಸಾನ್ ಟ್ರ್ಯಾಕ್ಟರ್ ಯೋಜನೆ’ (Kisan Tractor Scheme) ಅಡಿ ಬರೋಬ್ಬರಿ ಶೇ.50ರಷ್ಟು ಸಬ್ಸಿಡಿ ನೀಡುತ್ತಿದೆ.

ಹೌದು, ನೀವು ಟ್ರ್ಯಾಕ್ಟರ್ ಖರೀದಿಸಲು ಮುಂದಾಗಿದ್ದರೆ, ಕೇಂದ್ರ ಸರ್ಕಾರವೇ ನಿಮಗೆ ಅರ್ಧ ಹಣವನ್ನು ಸಹಾಯಧನವಾಗಿ ನೀಡಲಿದೆ. ಈ ಯೋಜನೆಯ ಲಾಭ ಪಡೆಯುವುದು ಹೇಗೆ? ಅರ್ಹತೆಗಳೇನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಏನಿದು ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆ?:

ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ದೇಶದ ಯಾವುದೇ ರೈತ ಹೊಸ ಟ್ರ್ಯಾಕ್ಟರ್ ಖರೀದಿಸುವಾಗ ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು.

  • ಸಹಾಯಧನ ಎಷ್ಟು?: ‘ಕಿಸಾನ್ ಟ್ರ್ಯಾಕ್ಟರ್ ಯೋಜನೆ’ (Kisan Tractor Scheme) ಅಡಿಯಲ್ಲಿ ಶೇ.50 ರಷ್ಟು ಸಹಾಯಧನ ಪಡೆಯಬಹುದು. ಅಂದರೆ, 10 ಲಕ್ಷ ರೂಪಾಯಿ ಬೆಲೆಬಾಳುವ ಟ್ರ್ಯಾಕ್ಟರ್ ನಿಮಗೆ ಕೇವಲ 5 ಲಕ್ಷ ರೂಪಾಯಿಗೆ ಸಿಗಲಿದೆ.

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳೇನು?

ಈ ಯೋಜನೆಯ ಲಾಭ ಪಡೆಯಲು ರೈತರು ಕೆಲವೊಂದು ಮಾನದಂಡಗಳನ್ನು ಪೂರೈಸುವುದು ಕಡ್ಡಾಯ:

  1. ಜಮೀನು: ರೈತರು ತಮ್ಮ ಹೆಸರಿನಲ್ಲಿ ಕೃಷಿ ಜಮೀನು ಹೊಂದಿರಬೇಕು.
  2. ವಯೋಮಿತಿ: ಅರ್ಜಿ ಸಲ್ಲಿಸುವ ರೈತರಿಗೆ 18 ರಿಂದ 60 ವರ್ಷ ವಯಸ್ಸಾಗಿರಬೇಕು.
  3. ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂ. ಮೀರಬಾರದು.
  4. ಹೊಸಬರಿಗೆ ಅವಕಾಶ: ಕಳೆದ 7 ವರ್ಷಗಳಲ್ಲಿ ರೈತರು ಯಾವುದೇ ರೀತಿಯ ಕೃಷಿ ಯಂತ್ರೋಪಕರಣಗಳ ಸಬ್ಸಿಡಿ ಪಡೆದಿರಬಾರದು.
  5. ಒಬ್ಬರಿಗೆ ಮಾತ್ರ: ಒಂದು ಕುಟುಂಬದಲ್ಲಿ ಒಬ್ಬ ರೈತರಿಗೆ ಮಾತ್ರ ಟ್ರ್ಯಾಕ್ಟರ್ ಸಬ್ಸಿಡಿ ಸಿಗಲಿದೆ.

ಬೇಕಾಗುವ ಪ್ರಮುಖ ದಾಖಲೆಗಳು:

ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ:

  • ರೈತನ ಆಧಾರ್ ಕಾರ್ಡ್
  • Fruits ID
  • ಜಮೀನಿನ ಪಹಣಿ (RTC)
  • ಬ್ಯಾಂಕ್ ಖಾತೆ ಪಾಸ್‌ಬುಕ್ (ಆಧಾರ್ ಲಿಂಕ್ ಆಗಿರಬೇಕು)
  • ಮೊಬೈಲ್ ಸಂಖ್ಯೆ
  • ಪಾಸ್‌ಪೋರ್ಟ್ ಅಳತೆಯ ಫೋಟೋ
  • ಟ್ರ್ಯಾಕ್ಟರ್ ಖರೀದಿ ಕೊಟೇಶನ್
  • ಜಾತಿ ಪ್ರಮಾಣ ಪತ್ರ
  • ಇತರೆ ದಾಖಲೆಗಳು

ಅರ್ಜಿ ಸಲ್ಲಿಸುವುದು ಹೇಗೆ?

ರೈತರು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್ ಮೂಲಕ (Online):

  • ಕೇಂದ್ರ ಸರ್ಕಾರದ ಪೋರ್ಟಲ್: ಕೇಂದ್ರದ ಅಧಿಕೃತ ವೆಬ್‌ಸೈಟ್ https://agrimachinery.nic.in/ ಗೆ ಭೇಟಿ ನೀಡಿ, ಅಲ್ಲಿ ‘Registration’ ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.
  • ರಾಜ್ಯ ಸರ್ಕಾರದ ಪೋರ್ಟಲ್: ಕರ್ನಾಟಕದ ರೈತರು ರಾಜ್ಯ ಕೃಷಿ ಇಲಾಖೆಯ https://kkisan.karnataka.gov.in ವೆಬ್‌ಸೈಟ್ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು.

2. ಆಫ್‌ಲೈನ್ ಮೂಲಕ (Offline): ಆನ್‌ಲೈನ್ ಬಗ್ಗೆ ಗೊತ್ತಿಲ್ಲದಿದ್ದವರು ನೇರವಾಗಿ ನಿಮ್ಮ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ. ಅಲ್ಲಿ ಅರ್ಜಿ ಫಾರಂ ಪಡೆದು, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿ.

ರೈತರಿಗೆ ಗುಡ್ ನ್ಯೂಸ್: ಟಾರ್ಪಾಲಿನ್ ಖರೀದಿಗೆ ಶೇ.90ರಷ್ಟು ಸಹಾಯಧನ

ಕಾರ್ಮಿಕರಿಗೆ ₹20,000 ಬೆಲೆಯ ಉಚಿತ ಟೂಲ್‌ಕಿಟ್ ಯೋಜನೆ

ಕುರಿ ಸಾಕಾಣಿಕೆಗೆ ಸರ್ಕಾರದಿಂದ ₹1.75 ಲಕ್ಷ ರೂ.: ₹43,750 ಉಚಿತ ಸಹಾಯಧನ

Telegram Group Join Now
WhatsApp Group Join Now

Leave a Comment