ಜುಲೈ ತಿಂಗಳಲ್ಲಾದರೂ ರಾಜ್ಯಾದ್ಯಂತ ಮಳೆ ಚುರುಕಾಗಬಹುದು ಎಂಬ ಸಾರ್ವಜನಿಕರ ಹಾಗೂ ರೈತರ ನಿರೀಕ್ಷೆ ಸದ್ಯಕ್ಕೆ ಹುಸಿಯಾಗಿದೆ. ಕರ್ನಾಟಕದಲ್ಲಿ ಮುಂಗಾರು ಮಳೆ ಕೇವಲ ಕರಾವಳಿ ಮತ್ತು ಕೆಲವು ಮಲೆನಾಡು ಹಾಗೂ ಪಶ್ಚಿಮ ಘಟ್ಟದ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ.
ಉಳಿದಂತೆ ದಕ್ಷಿಣ ಮತ್ತು ಉತ್ತರ ಕರ್ನಾಟಕದ ಬಹುತೇಕ ಎಲ್ಲಾ ಭಾಗಗಳಲ್ಲಿ ಮುಂದಿನ ಒಂದು ವಾರ ಹಗುರ ಮಳೆ ಅಥವಾ ಒಣಹವೆ ಇರಲಿದ್ದು, ಜುಲೈ ಕೊನೆಯ ಎರಡು ವಾರಗಳೂ ಸಹ ಒಣಹವೆಯ ಮುನ್ಸೂಚನೆ ನೀಡಲಾಗಿದೆ. ಇದು ರಾಜ್ಯದಲ್ಲಿ ಕೃಷಿ ಚಟುವಟಿಕೆಗಳ ಹಿನ್ನಡೆಗೆ ಕಾರಣವಾಗಿದೆ.
ನಾಳೆಯ ಹವಾಮಾನ: 3 ಜಿಲ್ಲೆಗಳಿಗೆ ಆರೆಂಜ್, 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!
ಜುಲೈ 3 ಮತ್ತು ಜುಲೈ 4 ರಂದು ರಾಜ್ಯದ ನಿರ್ದಿಷ್ಟ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಅಲರ್ಟ್ ಘೋಷಿಸಿದೆ:
- ಆರೆಂಜ್ ಅಲರ್ಟ್ (3 ಜಿಲ್ಲೆಗಳು): ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು.
- ಯೆಲ್ಲೋ ಅಲರ್ಟ್ (5 ಜಿಲ್ಲೆಗಳು): ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳು.
ದಕ್ಷಿಣ ಕನ್ನಡ ಜಿಲ್ಲೆಯ ಹವಾಮಾನದ ಸ್ಥಿತಿ:
ಈ ಹಿಂದೆ ರೆಡ್ ಅಲರ್ಟ್ ಘೋಷಣೆಯಾಗಿದ್ದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆದರೆ, ಇಂದು ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ; ಜಿಲ್ಲೆಯ ಕೆಲವೆಡೆ ಮಾತ್ರ ಭಾರಿ ಜೋರು ಮಳೆಯಾಗಿದ್ದರೆ, ಇನ್ನು ಹಲವೆಡೆ ಕೇವಲ ಹಗುರ ಮಳೆಯಾಗಿದೆ.
ಜುಲೈ 5 ರಿಂದ ಮಳೆ ತೀವ್ರತೆ ಮತ್ತಷ್ಟು ಹೆಚ್ಚಳ
ಹವಾಮಾನ ಕೇಂದ್ರದ ಪ್ರಕಾರ, ಜುಲೈ 5 ರಂದು ಕರಾವಳಿ ಜಿಲ್ಲೆಗಳ ಅತಿ ಭಾರಿ ಮಳೆಯು ಮಲೆನಾಡು ಜಿಲ್ಲೆಗಳಿಗೂ ವ್ಯಾಪಿಸಲಿದೆ.
- ಆರೆಂಜ್ ಅಲರ್ಟ್: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಅತಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.
- ಯೆಲ್ಲೋ ಅಲರ್ಟ್: ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಈ ದಿನ ಯೆಲ್ಲೋ ಅಲರ್ಟ್ ಮುಂದುವರಿಯಲಿದೆ.
ಕಾಸರಗೋಡಿನಲ್ಲಿ ಭಾರಿ ಮಳೆ: ರಸ್ತೆ ಕುಸಿತ, ಮನೆಗೆ ಹಾನಿ
ಕರ್ನಾಟಕದ ಗಡಿಯಾಗಿರುವ ಕಾಸರಗೋಡಿನಲ್ಲಿ ಭಾರಿ ಮಳೆಯ ಅಬ್ಬರ ಮುಂದುವರಿದಿದೆ. ಬುಧವಾರ ಭಾರಿ ಮಳೆಯ ಮುನ್ಸೂಚನೆಯಿದ್ದ ಕಾರಣ ಆರೆಂಜ್ ಅಲರ್ಟ್ ಘೋಷಿಸಿ, ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು.
- ಗುಡ್ಡೆ ಕುಸಿತ: ಭಾರಿ ಮಳೆಯಿಂದಾಗಿ ಕಾಸರಗೋಡು-ಕಾಞಂಗಾಡು ಕೆಎಸ್ಟಿಪಿ (KSTP) ರಸ್ತೆಯ ಚಂದ್ರಗಿರಿ ಮತ್ತು ಚಳಿಯಂಗೋಡು ಬಳಿ ಬುಧವಾರ ಗುಡ್ಡೆ ಕುಸಿದು ಸಂಚಾರ ಅಸ್ತವ್ಯಸ್ತಗೊಂಡಿದೆ.
- ಮನೆ ಕುಸಿತ: ಕಾಸರಗೋಡಿನ ಕೀಯೂರಿನಲ್ಲಿ ಭಾರಿ ಮಳೆಗೆ ಹೆಂಚಿನ ಮನೆಯೊಂದು ಕುಸಿದು ಬಿದ್ದಿದೆ. ಮನೆ ಕುಸಿಯುವ ಸಮಯದಲ್ಲಿ ಒಳಗಿದ್ದ ಐವರು ನಿವಾಸಿಗಳು ಅಪಾಯದಿಂದ ಅದೃಷ್ಟವಶಾತ್ ಪಾರಾಗಿದ್ದಾರೆ.
ಕೇರಳದಲ್ಲಿ ವ್ಯಾಪಕ ಮಳೆ ಮುನ್ಸೂಚನೆ:
ಮಹಾರಾಷ್ಟ್ರ ಕರಾವಳಿಯಿಂದ ಉತ್ತರ ಕೇರಳ ಕರಾವಳಿಯವರೆಗೆ ವ್ಯಾಪಿಸಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಈ ಭಾಗದಲ್ಲಿ ಮಳೆ ಮುಂದುವರಿಯಲಿದೆ. ಹವಾಮಾನ ಇಲಾಖೆಯ ಪ್ರಕಾರ ಶನಿವಾರದವರೆಗೆ ಕೇರಳದಲ್ಲಿ ವ್ಯಾಪಕ ಮಳೆಯಾಗಲಿದ್ದು, ಅಲರ್ಟ್ಗಳನ್ನು ಘೋಷಿಸಲಾಗಿದೆ:
- ಇಂದು (ಗುರುವಾರ): ಮೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್.
- ಶುಕ್ರವಾರ: ಏಳು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್.
- ಶನಿವಾರ: ಒಂಬತ್ತು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಇರಲಿದೆ.
ಮೀನುಗಾರರಿಗೆ ಎಚ್ಚರಿಕೆ: ಜುಲೈ 2 ರವರೆಗೆ ಪ್ರತ್ಯೇಕ ಸ್ಥಳಗಳಲ್ಲಿ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ಕೇರಳ ಮತ್ತು ಲಕ್ಷದ್ವೀಪ ಕರಾವಳಿಯಲ್ಲಿ ಜುಲೈ 2 ರವರೆಗೆ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.
ಈ ಕೇಳಗಿನ ಸುದ್ದಿಗಳನ್ನು ಓದಿ: