ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್. 6,000 ರೂ. ರಿಂದ 20,000 ರೂ. ವರೆಗೆ ವಿದ್ಯಾರ್ಥಿವೇತನ. ಹೈಸ್ಕೂಲ್ ನಿಂದ ಹಿಡಿದು ಮೆಡಿಕಲ್/ಇಂಜಿನಿಯರಿಂಗ್ ಓದುತ್ತಿರುವ ಅರ್ಹ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ನ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ರಾಜ್ಯದ ಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು 2025-26 ನೇ ಸಾಲಿನ ಶೈಕ್ಷಣಿಕ ಪ್ರೋತ್ಸಾಹಧನ ಸಹಾಯಕ್ಕಾಗಿ ಅರ್ಜಿ ಆಹ್ವಾನಿಸಿದೆ.
ಅರ್ಹತೆ:
ವಿದ್ಯಾರ್ಥಿಯ ಪೋಷಕರು ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿಗೆ ವಂತಿಕೆ ನೀಡುತ್ತಿರುವ ಸಂಘಟಿತ ಕಾರ್ಮಿಕರಾಗಿರಬೇಕು.
ಆದಾಯ ಮಿತಿ: ವಿದ್ಯಾರ್ಥಿಯ ಪೋಷಕರ ಮಾಸಿಕ ವೇತನ 35,000 ರೂ. ಮೀರಿರಬಾರದು.
ಹಿಂದಿನ ತರಗತಿಯಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಶೇ.50 ರಷ್ಟು ಮತ್ತು SC/ST ವಿದ್ಯಾರ್ಥಿಗಳು ಶೇ.45 ರಷ್ಟು ಅಂಕ ಪಡೆದು ಪಾಸಾಗಿರಬೇಕು. ಒಂದು ಕುಟುಂಬದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಗಲಿದೆ.
KLWB Scholarship 2025 ವಿದ್ಯಾರ್ಥಿಗಳಿಗೆ ಸಿಗುವ ಸಹಾಯಧನ:
- 8ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ: 6,000 ರೂ.
- ಪಿಯುಸಿ, ಐಟಿಐ, ಡಿಪ್ಲೋಮಾ, ಟಿಸಿಎಚ್ ವಿದ್ಯಾರ್ಥಿಗಳಿಗೆ: 8,000 ರೂ.
- ಪದವಿ ವಿದ್ಯಾರ್ಥಿಗಳಿಗೆ: 10,000 ರೂ.
- ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ: 12,000 ರೂ.
- ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ: 20,000 ರೂ.
ಬೇಕಾಗುವ ದಾಖಲೆಗಳು:
- SSLC ಅಂಕಪಟ್ಟಿ
- PUC ಅಂಕಪಟ್ಟಿ
- ವಿದ್ಯಾರ್ಥಿ, ತಂದೆ ಮತ್ತು ತಾಯಿ- ಈ 3 ಜನರ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕು.
- ಬ್ಯಾಂಕ್ ಪಾಸ್ಬುಕ್ ಜೆರಾಕ್ಸ್ ಪ್ರತಿ (Account Number ಮತ್ತು IFSC Code ಸ್ಪಷ್ಟವಾಗಿ ಕಾಣಬೇಕು)
- ಹಿಂದಿನ ವರ್ಷದ ಅಂಕಪಟ್ಟಿ ಪದವಿ/ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಿಂದಿನ ಎರಡು ಸೆಮಿಸ್ಟರ್ಗಳ ಅಂಕಪಟ್ಟಿಯನ್ನು ಕಡ್ಡಾಯವಾಗಿ ನೀಡಬೇಕು
- ತಂದೆ ಅಥವಾ ತಾಯಿ ಮರಣ ಹೊಂದಿದ್ದಲ್ಲಿ, ಮರಣ ಪ್ರಮಾಣ ಪತ್ರ
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-12-2025
KLWB Scholarship 2025-26 Online Application Link:
ಆನ್ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ಸೈಟ್: klwbapps.karnataka.gov.in, klwb.karnataka.gov.in
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆಗಳು: 080-23475188, 8277291175, 9141602562 ಅನ್ನು ಸಂಪರ್ಕಿಸಬಹುದು.
ಇತರೆ ಮಾಹಿತಿಗಳನ್ನು ಓದಿ:
NSP Scholarship 2025-26: ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ