Age Relaxation: ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ: ನೇಮಕಾತಿ ವಯೋಮಿತಿ 5 ವರ್ಷ ಸಡಿಲಿಕೆ; 3 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಅನುಕೂಲ

Telegram Group Join Now
WhatsApp Group Join Now

ಕೊರೊನಾ ಸಂಕಷ್ಟ ಮತ್ತು ನೇಮಕಾತಿ ವಿಳಂಬದಿಂದಾಗಿ “ಇನ್ನೇನು ವಯಸ್ಸು ಮೀರಿ ಹೋಯಿತು, ಸರ್ಕಾರಿ ನೌಕರಿ ಕನಸು ಭಗ್ನವಾಯಿತು” ಎಂದು ಹತಾಶರಾಗಿದ್ದ ಲಕ್ಷಾಂತರ ಯುವಜನತೆಗೆ ರಾಜ್ಯ ಸರ್ಕಾರ ಐತಿಹಾಸಿಕ ಸಿಹಿಸುದ್ದಿ ನೀಡಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ರಾಜ್ಯ ಸಿವಿಲ್ ಸೇವೆಗಳ ನೇರ ನೇಮಕಾತಿಯಲ್ಲಿ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಗೆ ಮಾತ್ರ ಅನ್ವಯವಾಗುವಂತೆ 5 ವರ್ಷಗಳ ಕಾಲ (Age Relaxation for Govt Jobs) ಸಡಿಲಿಸಲು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಈ ನಿರ್ಧಾರವು ರಾಜ್ಯದ ಉದ್ಯೋಗಾಕಾಂಕ್ಷಿಗಳ ಪಾಲಿಗೆ ಸಂಜೀವಿನಿಯಾಗಲಿದ್ದು, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಮುಂಬರುವ ಬೃಹತ್ ನೇಮಕಾತಿಗಳಲ್ಲಿ ಸ್ಪರ್ಧಿಸಲು ಅರ್ಹತೆ ಕಳೆದುಕೊಂಡಿದ್ದವರಿಗೂ ಈಗ ಅವಕಾಶ ಸಿಗಲಿದೆ.

ಸರ್ಕಾರದ ಈ ನಿರ್ಧಾರ ಏಕೆ?

ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಸಾಂಕ್ರಾಮಿಕದ ಅಬ್ಬರ ಮತ್ತು ವಿವಿಧ ತಾಂತ್ರಿಕ ಕಾರಣಗಳಿಂದಾಗಿ ರಾಜ್ಯದಲ್ಲಿ ನೇಮಕಾತಿ ಪ್ರಕ್ರಿಯೆಗಳು ಸಕಾಲಕ್ಕೆ ನಡೆದಿರಲಿಲ್ಲ. ಕೆಎಎಸ್ (KAS), ಎಫ್‌ಡಿಎ (FDA), ಎಸ್‌ಡಿಎ (SDA) ಮತ್ತು ಶಿಕ್ಷಕರ ಹುದ್ದೆಗಳ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆ ಬರೆಯುವ ಮೊದಲೇ ವಯೋಮಿತಿ ಮೀರಿ (Age Barred) ಕಂಗಾಲಾಗಿದ್ದರು.

ಮೀಸಲಾತಿ ವಿಚಾರಕ್ಕಾಗಿಯೂ ನೇಮಕಾತಿ ವಿಳಂಬವಾಗಿತ್ತು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಸರ್ಕಾರ ಈ “ಒಂದು ಬಾರಿಯ ವಿನಾಯಿತಿ” (One-time relaxation) ನೀಡಿದೆ.

Age Relaxation ಯಾರಿಗೆ, ಯಾವಾಗ ಅನ್ವಯ?

  • ಅವಧಿ: ಈ ಆದೇಶವು 31.12.2027 ರವರೆಗೆ ಹೊರಡಿಸಲಾಗುವ ಎಲ್ಲಾ ನೇಮಕಾತಿ ಅಧಿಸೂಚನೆಗಳಿಗೆ ಅನ್ವಯವಾಗಲಿದೆ.
  • ಫಲಾನುಭವಿಗಳು: ಸರ್ಕಾರದ ಈ ನಿರ್ಧಾರದಿಂದ ಸುಮಾರು 2 ರಿಂದ 3 ಲಕ್ಷ ಹೆಚ್ಚುವರಿ ಅಭ್ಯರ್ಥಿಗಳಿಗೆ ಮತ್ತೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅವಕಾಶ ಲಭ್ಯವಾಗಲಿದೆ.

ಯಾವ ಇಲಾಖೆಗಳಲ್ಲಿ ಬಂಪರ್ ಅವಕಾಶ?

ಪ್ರಸ್ತುತ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ವಯೋಮಿತಿ ಸಡಿಲಿಕೆ ಸಿಕ್ಕಿರುವುದರಿಂದ ಈ ಕೆಳಗಿನ ಇಲಾಖೆಗಳ ನೇಮಕಾತಿಗಳಿಗೆ ಭಾರಿ ಪೈಪೋಟಿ ಏರ್ಪಡಲಿದೆ:

  1. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ: ಇಲ್ಲಿ ಅತಿ ಹೆಚ್ಚು, ಅಂದರೆ ಸುಮಾರು 45,000 ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇವೆ.
  2. ಗೃಹ ಇಲಾಖೆ (ಪೊಲೀಸ್): ಎರಡನೇ ಅತಿದೊಡ್ಡ ನೇಮಕಾತಿ ನಿರೀಕ್ಷೆ ಇಲ್ಲಿದೆ.
  3. ಆರೋಗ್ರ ಇಲಾಖೆ & ಕಲ್ಯಾಣ ಕರ್ನಾಟಕ: ಮುಂಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿಶೇಷ ನೇಮಕಾತಿ ಅಡಿ ಸುಮಾರು 15,000 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಸಜ್ಜಾಗಿದೆ.
  4. ಇತರೆ: ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಲ್ಲಿಯೂ ಶೀಘ್ರವೇ ಅಧಿಸೂಚನೆ ಹೊರಬೀಳುವ ನಿರೀಕ್ಷೆಯಿದೆ.

ಸಂಪುಟ ಸಭೆಯ ಇತರೇ ಪ್ರಮುಖ ನಿರ್ಧಾರಗಳು:

ವಯೋಮಿತಿ ಸಡಿಲಿಕೆ ಜೊತೆಗೆ ಸಂಪುಟ ಸಭೆಯಲ್ಲಿ ಇನ್ನೂ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ:

  • ಶಿಕ್ಷಕರಿಗೆ ‘ಸ್ಮಾರ್ಟ್’ ಹಾಜರಾತಿ: ಶಾಲಾ ಶಿಕ್ಷಣ ಇಲಾಖೆಯಲ್ಲಿ ಪಾರದರ್ಶಕತೆ ತರಲು ‘ಇ-ಆಡಳಿತ ಇಲಾಖೆ’ ಅಭಿವೃದ್ಧಿಪಡಿಸಿರುವ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ (ಕೆವಿಎವಿಎಂಎಸ್) ಯನ್ನು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ. ಇದು ಮೊಬೈಲ್ ಆ್ಯಪ್ ಆಧಾರಿತವಾಗಿದ್ದು, ಶಾಲೆ ಆವರಣದಲ್ಲಿ ಮಾತ್ರ ಹಾಜರಾತಿ ಹಾಕಲು ಸಾಧ್ಯವಾಗುತ್ತದೆ (ಜಿಯೋ ಟ್ಯಾಗ್ ಮೂಲಕ).
  • 22 ಮಠಗಳಿಗೆ ಜಮೀನು: ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ರಾವತನಹಳ್ಳಿ ಗ್ರಾಮದಲ್ಲಿ 22 ಮಠಗಳಿಗೆ ತಲಾ ಒಂದು ಎಕರೆಯಂತೆ ಸುಮಾರು 22 ಎಕರೆಗೂ ಹೆಚ್ಚು ಜಮೀನು ಮಂಜೂರು ಮಾಡಲು ಒಪ್ಪಿಗೆ ನೀಡಲಾಗಿದೆ.
  • ಕೆಎಸ್‌ಆರ್‌ಟಿಸಿ & ಬಿಎಂಟಿಸಿಗೆ ಹೊಸ ಬಸ್: ಸಾರಿಗೆ ಸಂಸ್ಥೆಗಳ ಬಲವರ್ಧನೆಗೆ 91.55 ಕೋಟಿ ರೂ. ಅನುದಾನದಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಎನ್‌ಡಬ್ಲ್ಯೂಕೆಆರ್‌ಟಿಸಿಗೆ 650 ಹೊಸ ಬಿಎಸ್-4 ಮಾದರಿಯ ಬಸ್‌ಗಳನ್ನು ಖರೀದಿಸಲು ಒಪ್ಪಿಗೆ ಸಿಕ್ಕಿದೆ.
  • ಪೌಷ್ಟಿಕ ಆಹಾರ: 8 ಜಿಲ್ಲೆಗಳ 50,046 ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಮುಂದಿನ 3 ತಿಂಗಳವರೆಗೆ ಪೌಷ್ಟಿಕ ಆಹಾರ ಕಿಟ್‌ಗಳನ್ನು ವಿತರಿಸಲು 145.03 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

“ವಯೋಮಿತಿ ಸಡಿಲಿಕೆ ನಿರ್ಧಾರವು ನಿರುದ್ಯೋಗಿ ಯುವಕರಿಗೆ ದೊಡ್ಡ ರಿಲೀಫ್ ನೀಡಿದೆ. ಆದರೆ, ಕೇವಲ ವಯೋಮಿತಿ ಸಡಿಲಿಸಿದರೆ ಸಾಲದು, ಘೋಷಣೆಯಾಗಿರುವ 2.5 ಲಕ್ಷ ಹುದ್ದೆಗಳಿಗೆ ತ್ವರಿತಗತಿಯಲ್ಲಿ ಅಧಿಸೂಚನೆ ಹೊರಡಿಸಿ, ಪಾರದರ್ಶಕವಾಗಿ ಪರೀಕ್ಷೆ ನಡೆಸಿದರೆ ಮಾತ್ರ ಈ ನಿರ್ಧಾರಕ್ಕೆ ನಿಜವಾದ ಅರ್ಥ ಸಿಗುತ್ತದೆ. 2027 ರವರೆಗೆ ಈ ಅವಕಾಶ ಇರುವುದರಿಂದ, ಆಕಾಂಕ್ಷಿಗಳು ಇಂದೇ ಓದಲು ಕುಳಿತುಕೊಳ್ಳುವುದು ಉತ್ತಮ.”

ಈ ಸುದ್ದಿಯು ನಿಮ್ಮ ಸ್ನೇಹಿತರಿಗೆ ಅಥವಾ ಕುಟುಂಬಸ್ಥರಿಗೆ (ವಿಶೇಷವಾಗಿ ವಯಸ್ಸು ಮೀರಿದೆ ಎಂದು ಚಿಂತಿಸುತ್ತಿದ್ದವರಿಗೆ) ಮರುಜೀವ ನೀಡಬಲ್ಲದು. ಕೂಡಲೇ ಅವರಿಗೆ ಶೇರ್ ಮಾಡಿ!

SSLC ಪಾಸಾದವರಿಗೆ RBI ನಲ್ಲಿ ಬಂಪರ್ ಉದ್ಯೋಗ

Telegram Group Join Now
WhatsApp Group Join Now

Leave a Comment