HESCOM Recruitment 2026: ಹೆಸ್ಕಾಂನಲ್ಲಿ ಉದ್ಯೋಗವಕಾಶ, ಅರ್ಹರಿಂದ ಅರ್ಜಿ ಆಹ್ವಾನ

Telegram Group Join Now
WhatsApp Group Join Now

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (HESCOM Recruitment 2026) 2026ನೇ ಸಾಲಿನ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಒಟ್ಟು 388 ಟ್ರೈನಿ (ಐಟಿಐ ಎಲೆಕ್ಟ್ರಿಷಿಯನ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಎಲೆಕ್ಟ್ರಿಷಿಯನ್ ಟ್ರೇಡ್‌ನಲ್ಲಿ ಐಟಿಐ (ITI) ಮುಗಿಸಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ತರಬೇತಿ ಪಡೆಯಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ಇಲ್ಲೊಂದು ಸಿಹಿಸುದ್ದಿ.

ವಿಶೇಷವೆಂದರೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 9,600 ರೂಪಾಯಿ ಸ್ಟೈಫಂಡ್ (Stipend) ಕೂಡ ಸಿಗಲಿದೆ. ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ, ಐಟಿಐನಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ (Merit List) ಆಯ್ಕೆ ನಡೆಯಲಿದ್ದು, ಆಸಕ್ತರು ಆನ್‌ಲೈನ್ ಹಾಗೂ ಆಫ್‌ಲೈನ್ ಎರಡೂ ವಿಧಾನದ ಮೂಲಕ ಅರ್ಜಿ ಸಲ್ಲಿಸಬೇಕಿದೆ.

HESCOM Recruitment 2026 ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (HESCOM)
  • ಹುದ್ದೆಯ ಹೆಸರು: ಟ್ರೈನಿ / ಅಪ್ರೆಂಟಿಸ್ (ಐಟಿಐ ಎಲೆಕ್ಟ್ರಿಷಿಯನ್)
  • ವೇತನ ಶ್ರೇಣಿ (ಸ್ಟೈಫಂಡ್): ರೂ. 9,600/- (ಪ್ರತಿ ತಿಂಗಳಿಗೆ)
  • ಹುದ್ದೆಗಳ ಸಂಖ್ಯೆ: 388
  • ಉದ್ಯೋಗ ಸ್ಥಳ: ಹುಬ್ಬಳ್ಳಿ (ಕರ್ನಾಟಕ)

ಶೈಕ್ಷಣಿಕ ಅರ್ಹತೆ: ಹೆಸ್ಕಾಂ (HESCOM) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಐಟಿಐ (ಎಲೆಕ್ಟ್ರಿಷಿಯನ್ ಟ್ರೇಡ್) ಪೂರ್ಣಗೊಳಿಸಿರಬೇಕು.

ವಯೋಮಿತಿ: ಹೆಸ್ಕಾಂ ನೇಮಕಾತಿ ಮಾನದಂಡಗಳ ಪ್ರಕಾರ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. (ನಿಯಮಾನುಸಾರ ವಯೋಮಿತಿ ಸಡಿಲಿಕೆ ಲಭ್ಯವಿರುತ್ತದೆ).

ಅರ್ಜಿ ಶುಲ್ಕ: ಅರ್ಜಿ ಶುಲ್ಕವನ್ನು ‘ಬೇಡಿಕೆ ಕರಡು’ (Demand Draft – DD) ಮೂಲಕ ಪಾವತಿಸಬೇಕು.

  • ಸಾಮಾನ್ಯ ಅಭ್ಯರ್ಥಿಗಳು: ರೂ. 100/-
  • SC/ST ಅಭ್ಯರ್ಥಿಗಳು: ರೂ. 50/-

ಆಯ್ಕೆ ಪ್ರಕ್ರಿಯೆ:

  • ಶಾರ್ಟ್‌ಲಿಸ್ಟಿಂಗ್ (Shortlisting)
  • ಮೆರಿಟ್ ಪಟ್ಟಿ (ಐಟಿಐ ಅಂಕಗಳ ಆಧಾರದ ಮೇಲೆ)
  • ದಾಖಲೆಗಳ ಪರಿಶೀಲನೆ

ಅರ್ಜಿ ಸಲ್ಲಿಸುವುದು ಹೇಗೆ? (ಪ್ರಮುಖ ಹಂತಗಳು):

  1. ಮೊದಲು ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡು ಅರ್ಜಿ ಸಲ್ಲಿಸಬೇಕು.
  2. ನಂತರ ಆನ್‌ಲೈನ್ ಅರ್ಜಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿ, ಅಗತ್ಯ ದಾಖಲೆಗಳು ಮತ್ತು ಡಿಡಿ (DD) ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
    • ವಿಳಾಸ: ಕಾರ್ಯನಿರ್ವಾಹಕ ಎಂಜಿನಿಯರ್ (ವಿ), ಕೈಗಾರಿಕಾ ತರಬೇತಿ ಕೇಂದ್ರ (ಐಟಿಸಿ), ಹೆಸ್ಕಾಮ್, ವಿದ್ಯುತ್ ನಗರ, ಕಾರವಾರ ರಸ್ತೆ, ಹುಬ್ಬಳ್ಳಿ – 580024.
    • ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ಓದಿರಿ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11-02-2026
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-03-2026
  • ಆಫ್‌ಲೈನ್‌ನಲ್ಲಿ (ಅರ್ಜಿ ಪ್ರತಿ ತಲುಪಲು) ಕೊನೆಯ ದಿನಾಂಕ: 09-03-2026

ಪ್ರಮುಖ ಲಿಂಕ್‌ಗಳು:

  • ಅಧಿಸೂಚನೆ ಮತ್ತು ಅರ್ಜಿ ನಮೂನೆ: ಡೌನ್’ಲೋಡ್
  • ಆನ್‌ಲೈನ್ ಅರ್ಜಿ: Apply ಮಾಡಿ
  • ಅಧಿಕೃತ ವೆಬ್ ಸೈಟ್: hescom.karnataka.gov.in

RRB Group D Recruitment 2026

Telegram Group Join Now
WhatsApp Group Join Now

Leave a Comment