ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ವಿದ್ಯಾಭ್ಯಾಸ ಮುಂದುವರಿಸಲು ಕಷ್ಟಪಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಎಚ್ಡಿಎಫ್ಸಿ (HDFC Bank) ಸಿಹಿ ಸುದ್ದಿ ನೀಡಿದೆ. ತನ್ನ ‘ಪರಿವರ್ತನ್ ECSS’ (HDFC Scholarship 2025) ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ.
1 ನೇ ತರಗತಿಯಿಂದ ಹಿಡಿದು ಸ್ನಾತಕೋತ್ತರ ಪದವಿ (PG) ಓದುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಗರಿಷ್ಠ 75,000 ರೂಪಾಯಿಗಳವರೆಗೆ ಆರ್ಥಿಕ ನೆರವು ಲಭ್ಯವಾಗಲಿದೆ.
ಏನಿದು ಎಚ್ಡಿಎಫ್ಸಿ ಪರಿವರ್ತನ್ ಸ್ಕಾಲರ್ಶಿಪ್?
ಕುಟುಂಬದ ಆರ್ಥಿಕ ಸಮಸ್ಯೆ, ವೈಯಕ್ತಿಕ ಬಿಕ್ಕಟ್ಟು ಅಥವಾ ಇನ್ನಿತರ ಕಾರಣಗಳಿಂದ ಶಿಕ್ಷಣ ಅರ್ಧಕ್ಕೆ ನಿಲ್ಲಿಸುವ ಭೀತಿಯಲ್ಲಿರುವ ವಿದ್ಯಾರ್ಥಿಗಳಿಗೆ ನೆರವಾಗಲು HDFC Bank ‘ECSS’ (Educational Crisis Scholarship Support) ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಮೆರಿಟ್ ಆಧಾರದ ಮೇಲೆ ಮತ್ತು ಆರ್ಥಿಕ ಪರಿಸ್ಥಿತಿ ನೋಡಿ ಈ ಸ್ಕಾಲರ್ಶಿಪ್ ನೀಡುತ್ತಾರೆ.
HDFC Scholarship ಯಾರಿಗೆ ಎಷ್ಟು ಹಣ ಸಿಗುತ್ತದೆ?
ವಿದ್ಯಾರ್ಥಿಗಳು ಓದುತ್ತಿರುವ ತರಗತಿಗೆ ಅನುಗುಣವಾಗಿ ಸಹಾಯಧನದ ಮೊತ್ತ ಬದಲಾಗುತ್ತದೆ. ಅದರ ಸಂಪೂರ್ಣ ವಿವರ ಇಲ್ಲಿದೆ:
| ತರಗತಿ / ಕೋರ್ಸ್ | ವಿದ್ಯಾರ್ಥಿವೇತನದ ಮೊತ್ತ (ವಾರ್ಷಿಕ) |
| 1 ರಿಂದ 6 ನೇ ತರಗತಿ | 15,000 ರೂಪಾಯಿ |
| 7 ರಿಂದ 12 ನೇ ತರಗತಿ, ಡಿಪ್ಲೊಮಾ, ITI, ಪಾಲಿಟೆಕ್ನಿಕ್ | 18,000 ರೂಪಾಯಿ |
| ಪದವಿ (General – BCom, BSc, BA ಇತ್ಯಾದಿ) | 30,000 ರೂಪಾಯಿ |
| ಪದವಿ (Professional – BTech, MBBS, LLB, Nursing) | 50,000 ರೂಪಾಯಿ |
| ಸ್ನಾತಕೋತ್ತರ ಪದವಿ (General – MCom, MA) | 35,000 ರೂಪಾಯಿ |
| ಸ್ನಾತಕೋತ್ತರ ಪದವಿ (Professional – MBA, MTech) | 75,000 ರೂಪಾಯಿ |
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ವಿದ್ಯಾರ್ಥಿಯ ಪಾಸ್ಪೋರ್ಟ್ ಅಳತೆಯ ಫೋಟೋ.
- ಹಿಂದಿನ ವರ್ಷದ ಅಂಕಪಟ್ಟಿ (Marks Card).
- ಗುರುತಿನ ಚೀಟಿ (ಆಧಾರ್ ಕಾರ್ಡ್ / ವೋಟರ್ ಐಡಿ).
- ಪ್ರಸ್ತುತ ಸಾಲಿನ ಪ್ರವೇಶಾತಿ ದಾಖಲೆ (ಶುಲ್ಕ ರಸೀದಿ / ಬೊನಾಫೈಡ್ ಸರ್ಟಿಫಿಕೇಟ್ / ಐಡಿ ಕಾರ್ಡ್).
- ಅರ್ಜಿದಾರರ ಬ್ಯಾಂಕ್ ಪಾಸ್ಬುಕ್ ಅಥವಾ Cancelled Cheque.
- ಆದಾಯ ಪ್ರಮಾಣ ಪತ್ರ
- ಕುಟುಂಬದ/ವೈಯಕ್ತಿಕ ಆರ್ಥಿಕ ಬಿಕ್ಕಟ್ಟಿನ ಪುರಾವೆ (ಅಗತ್ಯವಿದ್ದರೆ ಮಾತ್ರ).
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. Buddy4Study ಅಥವಾ HDFC ಅಧಿಕೃತ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು..
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-12-2025
ಪ್ರಮುಖ ಲಿಂಕ್ಗಳು:
HDFC Scholarship 2025 Apply Online Link: Apply ಮಾಡಿ
ಇತರೆ ಮಾಹಿತಿಗಳನ್ನು ಓದಿ:
NSP Scholarship 2025-26: ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ