ಗೃಹಲಕ್ಷ್ಮಿಯರಿಗೆ ಗುಡ್‌ನ್ಯೂಸ್: ಗೃಹಲಕ್ಷ್ಮಿ ಬ್ಯಾಂಕ್‌ ಅಧಿಕೃತ ಲೋಕಾರ್ಪಣೆ ಮಾಡಿದ ಸಿಎಂ ಸಿದ್ದರಾಮಯ್ಯ

Telegram Group Join Now
WhatsApp Group Join Now

ಬೆಂಗಳೂರು: ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯು ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸುಲಭವಾಗಿ ಸಾಲ ಸೌಲಭ್ಯ ಒದಗಿಸಲು ಗೃಹಲಕ್ಷ್ಮಿ ಸಹಕಾರ ವಿವಿಧೋದ್ದೇಶ ಸಹಕಾರ ಸಂಘವನ್ನು ಆರಂಭಿಸಿದ್ದು, ಅದಕ್ಕಾಗಿ “ಗೃಹಲಕ್ಷ್ಮಿ ಸಹಕಾರ ಆಪ್” (GruhaLakshmi Sahakara App) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು.

ಶುಕ್ರವಾರ (28 ರಂದು) ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ (ICDS) ಸುವರ್ಣ ಮಹೋತ್ಸವ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಈ ಮಹತ್ವದ ಯೋಜನೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ, ಅಕ್ಕಾಪಡೆ ಹಾಗೂ 5000 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಚಾಲನೆ ನೀಡಿದರು. ‌

ಗೃಹಲಕ್ಷ್ಮಿ ಯೋಜನೆ:

ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ. 2,000 ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲಗೊಳಿಸುವ ಧ್ಯೇಯದೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

  • ಫಲಾನುಭವಿಗಳು: 2023 ರಿಂದ ಇಲ್ಲಿಯವರೆಗೆ ಒಟ್ಟು 1.24 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆದಿದ್ದಾರೆ.
  • ಬಿಡುಗಡೆಯಾದ ಹಣ: ಸರ್ಕಾರವು ಇದುವರೆಗೆ ಒಟ್ಟು 22 ಕಂತುಗಳಲ್ಲಿ ಬರೋಬ್ಬರಿ 52,416.17 ಕೋಟಿ ರೂ. ಗಳನ್ನು ಮಹಿಳೆಯರ ಖಾತೆಗಳಿಗೆ ಪಾವತಿಸಿದೆ.

ಇಲಾಖೆಯಿಂದ 23 ನೇ ಕಂತಿನ 2000 ರೂ. ಹಣ ಮಹಿಳೆಯರ ಬ್ಯಾಂಕ್‌ ಖಾತೆಗೆ ವರ್ಗಾವಣೆಯಾಗಲಿದೆ.

ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ:

ಮಹಿಳೆಯರಲ್ಲಿ ಮಿತವ್ಯಯ, ಆರ್ಥಿಕ ಸ್ವಾವಲಂಬನೆ, ಸ್ವ-ಸಹಾಯ ಮತ್ತು ಸಹಕಾರ ಭಾವನೆಗಳನ್ನು ಪ್ರೋತ್ಸಾಹಿಸಲು ‘ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ’ ವನ್ನು ಪ್ರಾರಂಭಿಸಲಾಗುತ್ತಿದೆ.

₹3 ಲಕ್ಷದವರೆಗೆ ಸಾಲ: ಖಾಸಗಿ ಫೈನಾನ್ಸ್‌ಗಳ ಹಾವಳಿ ತಪ್ಪಿಸಲು ಈ ಸಹಕಾರ ಸಂಘದ ಮೂಲಕ ಸಾಲ ನೀಡಲಾಗುತ್ತದೆ.

  • ಸಾಲದ ಮೊತ್ತ: ಕನಿಷ್ಠ ₹30,000 ದಿಂದ ಗರಿಷ್ಠ ₹3 ಲಕ್ಷದವರೆಗೆ ಸಾಲ ಪಡೆಯಬಹುದು.
  • ನಿಯಮವೇನು?: ಮಹಿಳೆಯರು ಈ ಬ್ಯಾಂಕ್/ಸಂಘದಲ್ಲಿ ಷೇರುದಾರರಾಗಬೇಕು. ನಂತರ ಪ್ರತಿ ತಿಂಗಳು ₹200 ಉಳಿತಾಯ ಮಾಡಬೇಕು.
  • ಅರ್ಹತೆ: ಸತತ 6 ತಿಂಗಳು ಉಳಿತಾಯ ಮಾಡಿದ ನಂತರ, ಅಂತಹ ಮಹಿಳೆಯರು ಕೃಷಿ, ಶಿಕ್ಷಣ ಅಥವಾ ಆರೋಗ್ಯದ ಅವಶ್ಯಕತೆಗಳಿಗೆ ಸಾಲ ಪಡೆಯಲು ಅರ್ಹರಾಗುತ್ತಾರೆ.

ಮಹಿಳೆಯರ ರಕ್ಷಣೆಗೆ ‘ಅಕ್ಕ ಪಡೆ’:

ಇದೇ ವೇದಿಕೆಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ‘ಅಕ್ಕ ಪಡೆ’ (Akka Pade) ಗೂ ಚಾಲನೆ ನೀಡಲಾಯಿತು.

  • ಈ ಪಡೆಯು ಬೆಳಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ.
  • ಕಾಲೇಜು, ದೇವಾಲಯ, ಬಸ್ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಅಕ್ಕಪಡೆಯ ಸಿಬ್ಬಂದಿ ಗಸ್ತು ತಿರುಗಲಿದ್ದಾರೆ.

ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಎಚ್.ಸಿ. ಮಹದೇವಪ್ಪ, ಕೆ.ಎಚ್. ಮುನಿಯಪ್ಪ, ಈಶ್ವರ ಖಂಡ್ರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಮಿಕರ ಮಕ್ಕಳಿಗೆ 20,000 ರೂ. ವಿದ್ಯಾರ್ಥಿವೇತನ; ಅರ್ಜಿ ಆಹ್ವಾನ

ಸ್ವಂತ ವಾಹನ ಖರೀದಿಸಲು 3 ಲಕ್ಷ ರೂ. ಸಹಾಯಧನ

Telegram Group Join Now
WhatsApp Group Join Now

Leave a Comment