ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಕಾತುರದಿಂದ ಕಾಯುತ್ತಿರುವ ಯಜಮಾನಿಯರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಏರಡು ಕಂತುಗಳ 4,000 ರೂ. ಜಮಾ ಆಗಬೇಕಿದೆ, ತಾಂತ್ರಿಕ ಕಾರಣಗಳಿಂದ ಬಾಕಿ ಉಳಿದಿದ್ದ ಹಣವನ್ನು ಬಿಡುಗಡೆ ಮಾಡಲು ಇದೀಗ ಮುಹೂರ್ತ ನಿಗದಿಯಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುವ ಪ್ರಕ್ರಿಯೆ ಚುರುಕುಗೊಂಡಿದ್ದು, ಇದೇ ನವೆಂಬರ್ 28ರ ಒಳಗಾಗಿ ಅರ್ಹರ ಖಾತೆಗೆ ಹಣ ಸೇರಲಿದೆ.
ಕಳೆದ 2 ತಿಂಗಳ ಬಾಕಿ ಇರುವ ಹಣ (Gruhalakshmi Pending Amount) ಹಂತ ಹಂತವಾಗಿ ಜಮೆಯಾಗಲಿದೆ. ನವೆಂಬರ್ 28 ರ ಒಳಗೆ ಎಲ್ಲರಿಗೂ ಹಣ ತಲುಪಿಸುವ ಗುರಿಯನ್ನು ಇಲಾಖೆ ಹೊಂದಿದೆ.
ಮಹಿಳೆಯರಿಗೆ ಮತ್ತೆರಡು ಯೋಜನೆಗಳು: ಗೃಹಲಕ್ಷ್ಮಿ ಯೋಜನೆಯ ಜೊತೆಗೆ, ಇತ್ತೀಚೆಗೆ ಇಲಾಖೆಯು ಮಹಿಳೆಯರಿಗಾಗಿ ಇನ್ನೂ ಎರಡು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ.
- ಅಕ್ಕ ಪಡೆ (Akka Pade): ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ ವಿಶೇಷ ಪಡೆ ಕಾರ್ಯನಿರ್ವಹಿಸಲಿದೆ.
- ಗೃಹಲಕ್ಷ್ಮಿ ಸಹಕಾರ ಬ್ಯಾಂಕ್: ಮಹಿಳೆಯರಿಗೆ ಆರ್ಥಿಕ ಸಹಾಯ ಮತ್ತು ಸಾಲ ಸೌಲಭ್ಯ ನೀಡಲು ‘ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಬ್ಯಾಂಕ್ ಸ್ಥಾಪಿಸಲಾಗಿದೆ. ಇದೇ ನವೆಂಬರ್ 28 ರಂದು ಗೃಹಲಕ್ಷ್ಮಿ ಬ್ಯಾಂಕ್ ಉದ್ಘಾಟನೆಯಾಗಲಿದೆ.
ಹೀಗಾಗಿ, ಇನ್ನು 2-3 ದಿನಗಳಲ್ಲಿ ನಿಮ್ಮ ಮೊಬೈಲ್‌ಗೆ ಹಣ ಜಮಾ ಆಗಿರುವ ಕುರಿತು ಬ್ಯಾಂಕ್‌ದಿಂದ ಮೆಸೇಜ್ ಬರಬಹುದು. ನಿಮ್ಮ ಮೊಬೈಲ್‌ನಲ್ಲೇ Gruhalakshmi DBT Status ಕೂಡ ಚೆಕ್ ಮಾಡಿಕೊಳ್ಳಬಹುದು. ಈ ಮಾಹಿತಿಯನ್ನು ಕೂಡಲೇ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ!
ಇತರೆ ಮಾಹಿತಿಗಳನ್ನು ಓದಿ:
ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್‌ಲೈನ್ ಅರ್ಜಿ ಆಹ್ವಾನ