ಮಹಿಳೆಯರಿಗೆ ಗುಡ್ ನ್ಯೂಸ್: ಸರ್ಕಾರದಿಂದ 50 ಸಾವಿರ ಸಹಾಯಧನ; ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಿರಿ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಗರ್ಭಿಣಿ ಮಹಿಳೆಯರಿಗೆ ಗುಡ್ ನ್ಯೂಸ್, ರಾಜ್ಯ ಸರ್ಕಾರವು ಮಹಿಳಾ ಫಲಾನುಭವಿಯ ಮೊದಲ ಎರಡು ಹೆರಿಗೆಗೆ ಮಂಡಳಿಯ ವತಿಯಿಂದ 50,000 ರೂ ಸಹಾಯಧನವನ್ನು ನೀಡುತ್ತದೆ. ನೀವು ಕೂಡ ಅರ್ಜಿ ಸಲ್ಲಿಸಿ ಇದರ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಕಾರ್ಮಿಕ ಇಲಾಖೆಯ ವತಿಯಿಂದ ನೋಂದಾಯಿತ ಮಹಿಳಾ ಕಾರ್ಮಿಕ ಫಲಾನುಭವಿಯ ಮೊದಲನೇ ಎರಡು ಮಕ್ಕಳಿಗೆ ಮಂಡಳಿಯು ಹೆರಿಗೆ ಸೌಲಭ್ಯವನ್ನು ನೀಡುತ್ತದೆ. ಹೆರಿಯ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಮಹಿಳೆಯರಿಗೆ ಈ ಸಹಾಯಧನವು ನೇರವಾಗಲಿದೆ.

ಹೆರಿಗೆ ಸೌಲಭ್ಯಗಳನ್ನು ಪಡೆಯಲಿಚ್ಛಿಸುವ ಫಲಾನುಭವಿಯು ಮಗು ಜನಿಸಿದ ದಿನಾಂಕ ದಿಂದ ಆರು ತಿಂಗಳ ಒಳಗಾಗಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಮಗು ಜನಿಸಿದ ಆರು ತಿಂಗಳ ನಂತರ ಬಂದ ಅರ್ಜಿಗಳನ್ನು ಇಲಾಖೆಯು ಪರಿಗಣಿಸುವುದಿಲ್ಲ.

Karnataka Labour Welfare Board ಪ್ರಯೋಜನ:

ನೋಂದಾಯಿತ ಮಹಿಳಾ ಕಾರ್ಮಿಕರ ಮಗು ಗಂಡು/ಹೆಣ್ಣು ಆಗಿದ್ದರೆ ಮೊದಲ ಎರಡು ಮಗುವಿನ ಜನನಕ್ಕೆ ಮಂಡಳಿಯ ವತಿಯಿಂದ 50,000 ರೂ. ಸಹಾಯಧನ ನೀಡುತ್ತಾರೆ.

ಅಗತ್ಯ ದಾಖಲೆಗಳು:

  • ಮಗುವಿನ ಜನನ ಪ್ರಮಾಣಪತ್ರ
  • ಮಂಡಳಿಯು ನೀಡಿರುವ ಗುರುತಿನ ಚೀಟಿ/ಸ್ಮಾರ್ಟ್ ಕಾರ್ಡ್
  • ಎರಡನೇ ಮಗುವಿನ ಹೆರಿಗೆ ಎಂದು ಅಫಿಡವಿಟ್ ಸಲ್ಲಿಸಬೇಕು
  • ಬ್ಯಾಂಕ್ ಖಾತೆ ವಿವರ
  • ಫಲಾನುಭವಿ ಮಕ್ಕಳ ಪೋಟೋ
  • ಅರ್ಜಿದಾರರ ಉದ್ಯೋಗ ದೃಡೀಕರಣ ಪತ್ರ
  • ಫಲಾನುಭವಿಯ ಡಿಸ್ಚಾರ್ಜ್ ಸಾರಾಂಶ
  • ಮಗುವಿನ ಜನಿಸಿದ ಆರು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸಬೇಕು.

ಸ್ವಂತ ವಾಹನ ಖರೀದಿಸಲು 3 ಲಕ್ಷ ರೂ. ಸಹಾಯಧನ

ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now

Leave a Comment