ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 12’ ಆಟ ಇದೀಗ 58 ದಿನಗಳನ್ನು ಪೂರೈಸಿದ್ದು, ಮನೆಯಲ್ಲಿ ಪೈಪೋಟಿ ಜೋರಾಗಿದೆ. ಕಳೆದ ವಾರ ರಿಷಾ ಅವರು ಮನೆಯಿಂದ ಹೊರಬಿದ್ದ ನಂತರ, ಈ ವಾರದ ನಾಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಈ ಬಾರಿ ಒಟ್ಟು 7 ಸ್ಪರ್ಧಿಗಳು ಡೇಂಜರ್ ಝೋನ್ (Danger Zone) ತಲುಪಿದ್ದಾರೆ.
Bigg Boss Kannada 12: ಈ ವಾರ ನಾಮಿನೇಟ್ ಆದವರು ಯಾರು?
ಒಟ್ಟು 7 ಜನ ಸ್ಪರ್ಧಿಗಳು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ:
- ಧ್ರುವಂತ್
- ಅಶ್ವಿನಿ ಗೌಡ
- ಜಾಹ್ನವಿ
- ಮಾಳು ನಿಪನಾಳ
- ಕಾವ್ಯಾ
- ಗಿಲ್ಲಿ ನಟ
- ರಘು (ಕ್ಯಾಪ್ಟನ್ ಅಭಿಷೇಕ್ ಅವರಿಂದ ನೇರ ನಾಮಿನೇಟ್)
ನಾಮಿನೇಷನ್‌ಗೆ ಕಾರಣಗಳೇನು?
- ಅಶ್ವಿನಿ ಗೌಡ: ಕಳೆದ ವಾರ ಮನೆಯಲ್ಲಿ ಹೆಚ್ಚು ಕಿರಿಕ್ ಮಾಡಿಕೊಂಡಿದ್ದರಿಂದ ಮತ್ತು ಇತರರ ಕೆಂಗಣ್ಣಿಗೆ ಗುರಿಯಾಗಿದ್ದರಿಂದ ಅಶ್ವಿನಿ ಗೌಡ ನಾಮಿನೇಟ್ ಆಗಿದ್ದಾರೆ.
- ಧ್ರುವಂತ್: ಮನೆಯಲ್ಲಿ ಹಲವರ ವಿರೋಧ ಕಟ್ಟಿಕೊಂಡಿರುವುದು ಇವರಿಗೆ ಮುಳುವಾಗಿದೆ.
- ಮಾಳು ನಿಪನಾಳ: ಕ್ಯಾಪ್ಟನ್ ಆಗಿದ್ದಾಗ ಮಾತ್ರ ಆ್ಯಕ್ಟೀವ್ ಆಗಿದ್ದು, ಉಳಿದ ಸಮಯ ಸೈಲೆಂಟ್ ಆಗಿರುತ್ತಾರೆ ಎಂಬ ಕಾರಣಕ್ಕೆ ಇವರನ್ನು ನಾಮಿನೇಟ್ ಮಾಡಲಾಗಿದೆ.
- ಗಿಲ್ಲಿ ನಟ ಕೂಲ್ ರಿಯಾಕ್ಷನ್: ಇನ್ನುಳಿದವರು ನಾಮಿನೇಟ್ ಆದಾಗ ಬೇಸರ ಮಾಡಿಕೊಂಡರೆ, ಗಿಲ್ಲಿ ನಟ ಮಾತ್ರ ನಗುನಗುತ್ತಲೇ ಈ ಸವಾಲನ್ನು ಸ್ವೀಕರಿಸಿದ್ದಾರೆ. ತಮ್ಮ ಕಾಮಿಡಿ ಮೂಲಕ ಜನಮನ ಗೆದ್ದಿರುವ ಅವರಿಗೆ ಎಲಿಮಿನೇಷನ್ ಭಯವಿಲ್ಲದಿರುವುದು ಎದ್ದು ಕಾಣುತ್ತಿದೆ.
ಮನೆಗೆ ಬಂದ ಅತಿಥಿಗಳು; ಶುರುವಾಯ್ತು ‘ಬಿಬಿ ಪ್ಯಾಲೇಸ್’: ಈ ವಾರ ಸ್ಪರ್ಧಿಗಳಿಗೆ ಸ್ಪೆಷಲ್ ಟಾಸ್ಕ್ ನೀಡಲಾಗಿದ್ದು, ಬಿಗ್ ಬಾಸ್ ಮನೆ ‘ಬಿಬಿ ಪ್ಯಾಲೇಸ್ ಹೋಟೆಲ್’ (BB Palace Hotel) ಆಗಿ ಬದಲಾಗಿದೆ.
ವಿಶೇಷವೆಂದರೆ, ಹೋಟೆಲ್ ಅತಿಥಿಗಳಾಗಿ ‘ಬಿಗ್ ಬಾಸ್ ಸೀಸನ್ 11’ರ ಪ್ರಬಲ ಸ್ಪರ್ಧಿಗಳಾದ ತ್ರಿವಿಕ್ರಮ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಉಗ್ರಂ ಮಂಜು ಮತ್ತು ರಜತ್ ಎಂಟ್ರಿ ಕೊಟ್ಟಿದ್ದಾರೆ. ಇವರನ್ನು ಉಪಚರಿಸುವ ಜವಾಬ್ದಾರಿ 12ನೇ ಸೀಸನ್ ಸ್ಪರ್ಧಿಗಳ ಮೇಲಿದೆ.
ಒಟ್ಟಿನಲ್ಲಿ ಹಳಬರ ಎಂಟ್ರಿ ಮತ್ತು ನಾಮಿನೇಷನ್ ಟೆನ್ಷನ್ ನಡುವೆ ಈ ವಾರದ ಆಟ ಕುತೂಹಲ ಕೆರಳಿಸಿದೆ.
ಇತರೆ ಮಾಹಿತಿಗಳನ್ನು ಓದಿ:
Home Loan Interest Rate: ಅತಿ ಕಡಿಮೆ ಬಡ್ಡಿಗೆ ಹೋಮ್ ಲೋನ್ ನೀಡುವ ಟಾಪ್ ಬ್ಯಾಂಕ್‌ಗಳು ಇವು..!
ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್‌ಲೈನ್ ಅರ್ಜಿ ಆಹ್ವಾನ