Apple iPhone Fold: ಲೇಟ್‌ ಆಗಿ ಬಂದ್ರೂ.. ಲೇಟೆಸ್ಟ್ ಆಗಿ ಬರುತ್ತಿದೆ ‘ಐಫೋನ್ ಫೋಲ್ಡ್’ ಫೋನ್‌; ಏನು ವಿಶೇಷ, ಬೆಲೆ ಎಷ್ಟು..?

Telegram Group Join Now
WhatsApp Group Join Now

ಆಪಲ್ (Apple) ಕಂಪನಿಯು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ತಡಮಾಡಿದರೂ, ಬರುವಾಗ ಲೇಟೆಸ್ಟ್ ಆಗಿ ಬರುತ್ತದೆ. ಇದೀಗ ಟೆಕ್ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿರುವ ಆಪಲ್‌ನ ಬಹುನಿರೀಕ್ಷಿತ ‘ಐಫೋನ್ ಫೋಲ್ಡ್’ (Apple iPhone Fold) ಬಗ್ಗೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.

ವರದಿಗಳ ಪ್ರಕಾರ, ಆಪಲ್ ತನ್ನ ಈ ಹೊಸ ಫೋಲ್ಡ್ ಫೋನ್‌ನಲ್ಲಿ, ಸದ್ಯ ಮಾರುಕಟ್ಟೆಯಲ್ಲಿರುವ ಇತರೆ ಫೋಲ್ಡ್ ಫೋನ್‌ಗಳ ದೊಡ್ಡ ಸಮಸ್ಯೆಯಾದ ‘ಸ್ಕ್ರೀನ್ ಮೇಲಿನ ಗೆರೆ’ (Crease) ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಿದೆ ಎಂದು ಹೇಳಲಾಗಿದೆ.

iPhone Fold ಪ್ರಮುಖ ಹೈಲೈಟ್ಸ್ ಇಲ್ಲಿದೆ:

1. ಪ್ರತ್ಯೇಕ ಉತ್ಪಾದನಾ ಘಟಕ ಆರಂಭ: ಚೀನಾದ ಎಕನಾಮಿಕ್ ಡೈಲಿ ವರದಿಯ ಪ್ರಕಾರ, ಐಫೋನ್ ತಯಾರಕ ಕಂಪನಿ ಫಾಕ್ಸ್‌ಕಾನ್ (Foxconn) ಈಗಾಗಲೇ ಈ ಫೋಲ್ಡ್ ಫೋನ್‌ಗಳಿಗಾಗಿ ಮೀಸಲಾದ ಉತ್ಪಾದನಾ ಮಾರ್ಗವನ್ನು (Production Line) ಸ್ಥಾಪಿಸಿದೆ. ಈಗಾಗಲೇ ಪ್ರಾಯೋಗಿಕ ಹಂತ ಮುಗಿದಿದ್ದು, ಫೋನ್ ನಿರ್ಮಾಣ ಕಾರ್ಯ ಚುರುಕುಗೊಂಡಿದೆ.

2. ಏನಿದು ‘ಕ್ರೀಸ್-ಮುಕ್ತ’ ವಿನ್ಯಾಸ? ಸ್ಯಾಮ್‌ಸಂಗ್ ಅಥವಾ ಒಪ್ಪೋ ಫೋಲ್ಡ್ ಫೋನ್‌ಗಳನ್ನು ತೆರೆದಾಗ ಮಧ್ಯದಲ್ಲಿ ಸಣ್ಣದೊಂದು ಗೆರೆ ಕಾಣಿಸುತ್ತದೆ. ಆದರೆ, ಐಫೋನ್ ಫೋಲ್ಡ್‌ನಲ್ಲಿ ಆಪಲ್ ವಿಶೇಷ ತಂತ್ರಜ್ಞಾನ ಬಳಸುತ್ತಿದ್ದು, ಸ್ಕ್ರೀನ್ ಸಂಪೂರ್ಣವಾಗಿ ‘ಸುಕ್ಕುಗಳಿಲ್ಲದಂತೆ’ (Crease-Free) ಇರಲಿದೆ. ಇದಕ್ಕಾಗಿ ‘ಲಿಕ್ವಿಡ್ ಮೆಟಲ್’ (Liquid Metal) ನಿಂದ ಮಾಡಿದ ಹಿಂಜ್ (Hinge) ಬಳಸಲಾಗುತ್ತಿದೆ. ಇದು ಫೋನ್‌ಗೆ ಹೆಚ್ಚಿನ ಬಲ ನೀಡುತ್ತದೆ.

3. ಡಿಸ್‌ಪ್ಲೇ ಮತ್ತು ಕ್ಯಾಮೆರಾ: ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಈ ಫೋನ್:

  • ಒಳಗಿನ ಸ್ಕ್ರೀನ್: 7.8 ಇಂಚು (ಸ್ಯಾಮ್‌ಸಂಗ್ ನಿರ್ಮಿತ).
  • ಹೊರಗಿನ ಸ್ಕ್ರೀನ್: 5.5 ಇಂಚು.
  • ಕ್ಯಾಮೆರಾ: ಹಿಂಭಾಗದಲ್ಲಿ ಎರಡು 48MP ಕ್ಯಾಮೆರಾ ಸೇರಿ ಒಟ್ಟು 4 ಕ್ಯಾಮೆರಾಗಳು ಇರಲಿವೆ.
  • ಫೇಸ್ ಐಡಿ ಬದಲು ‘ಟಚ್ ಐಡಿ’ (Touch ID) ಬರುವ ಸಾಧ್ಯತೆ ಇದೆ.

4. ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಆಪಲ್‌ನ ಈ ಫೋಲ್ಡ್ ಫೋನ್ ಬೆಲೆ ಸುಮಾರು $2,400 ರಿಂದ $2,500 ಇರುವ ಸಾಧ್ಯತೆ ಇದೆ. ಅಂದರೆ ಭಾರತೀಯ ರೂಪಾಯಿಗಳಲ್ಲಿ ಇದರ ಬೆಲೆ ಬರೋಬ್ಬರಿ 2 ಲಕ್ಷ ರೂಪಾಯಿಗಳಿಗೂ ಅಧಿಕ! ಇದು ಆಪಲ್ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಯ ಫೋನ್ ಆಗಲಿದೆ.

ಒಟ್ಟಿನಲ್ಲಿ, ಸ್ಯಾಮ್‌ಸಂಗ್, ವಿವೋ ಮತ್ತು ಮೊಟೊರೊಲಾ ಫೋಲ್ಡ್ ಫೋನ್‌ಗಳಿಗೆ ಸೆಡ್ಡು ಹೊಡೆಯಲು ಆಪಲ್ ಸಜ್ಜಾಗಿದೆ. ನೀವು ಈ ಪೋನ್‌ ಕೊಳ್ಳಲು ಇಚ್ಛಿಸುತ್ತೀರಾ?

ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್‌ಲೈನ್‌ ಅರ್ಜಿ ಆಹ್ವಾನ

ಮಹಿಳೆಯರಿಗೆ ಗುಡ್ ನ್ಯೂಸ್: ಸರ್ಕಾರದಿಂದ 50 ಸಾವಿರ ಸಹಾಯಧನ

Telegram Group Join Now
WhatsApp Group Join Now

Leave a Comment