Ahara Vahini Scheme: ಸ್ವಂತ ‘ಮೊಬೈಲ್ ಕ್ಯಾಂಟೀನ್’ ಆರಂಭಿಸಲು ₹3 ಲಕ್ಷ ಉಚಿತ ಸಹಾಯಧನ! ಅರ್ಜಿ ಸಲ್ಲಿಸುವುದು ಹೇಗೆ?

Telegram Group Join Now
WhatsApp Group Join Now

ಸ್ವಂತ ಕಾಲ ಮೇಲೆ ನಿಂತು ಬದುಕು ಕಟ್ಟಿಕೊಳ್ಳಬೇಕು ಎಂಬ ಛಲ ಇರುವ ಯುವಕ-ಯುವತಿಯರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಬೀದಿ ಬದಿ ವ್ಯಾಪಾರ ಅಥವಾ ಫುಡ್ ಟ್ರಕ್ ಉದ್ಯಮಕ್ಕೆ ಈಗ ಭಾರಿ ಡಿಮ್ಯಾಂಡ್.

ಇದನ್ನೇ ಬಂಡವಾಳವಾಗಿಸಿಕೊಂಡು ಸ್ವಯಂ ಉದ್ಯೋಗ ಮಾಡಲು ಬಯಸುವವರಿಗಾಗಿ ಸರ್ಕಾರವು ‘ಆಹಾರ ವಾಹಿನಿ’ (Ahara Vahini Scheme) ಯೋಜನೆಯಡಿ ಭರ್ಜರಿ ಆರ್ಥಿಕ ನೆರವು ಘೋಷಿಸಿದೆ.

ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳ ಮೂಲಕ ಜಾರಿಗೊಳಿಸಲಾಗಿರುವ ಈ ಯೋಜನೆಯಡಿ, ಫಲಾನುಭವಿಗಳಿಗೆ ನಾಲ್ಕು ಚಕ್ರಗಳ ಇವಿ-ಗೂಡ್ಸ್ (EV-Goods) ವಾಹನಗಳನ್ನು ಖರೀದಿಸಲು ಬರೋಬ್ಬರಿ 3 ಲಕ್ಷ ರೂಪಾಯಿಗಳ ಸಹಾಯಧನ (Subsidy) ನೀಡಲಾಗುತ್ತಿದೆ.

ಏನಿದು ‘ಆಹಾರ ವಾಹಿನಿ’ ಯೋಜನೆ?

ನಗರ ಪ್ರದೇಶಗಳಲ್ಲಿ ಜನಸಂದಣಿ ಇರುವ ಕಡೆ ರುಚಿಕರವಾದ ತಿಂಡಿ-ತಿನಿಸುಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ, ನಾಲ್ಕು ಚಕ್ರಗಳ ಗೂಡ್ಸ್ ವಾಹನಗಳನ್ನು ‘ಮೊಬೈಲ್ ಕ್ಯಾಂಟೀನ್’ (Mobile Canteen) ಅಥವಾ ‘ಆಹಾರ ಕಿಯೋಸ್ಕ್’ ಮಾದರಿಯಲ್ಲಿ ವಿನ್ಯಾಸಗೊಳಿಸಿ ನೀಡಲಾಗುತ್ತದೆ.

  • ಸರ್ಕಾರದ ಪಾಲು: ವಾಹನ ಖರೀದಿಗೆ ನಿಗಮದಿಂದ ₹3 ಲಕ್ಷ ಸಹಾಯಧನ.
  • ಉಳಿದ ಮೊತ್ತ: ಬಾಕಿ ಹಣವನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲದ ರೂಪದಲ್ಲಿ ಪಡೆಯಬಹುದು.

ಯಾವ ಸಮುದಾಯದವರು ಅರ್ಜಿ ಸಲ್ಲಿಸಬಹುದು?

ಪ್ರತಿಯೊಂದು ಸಮುದಾಯಕ್ಕೂ ಪ್ರತ್ಯೇಕ ಅಭಿವೃದ್ಧಿ ನಿಗಮವಿದ್ದು, ಆಯಾ ನಿಗಮಗಳ ಮೂಲಕವೇ ಅರ್ಜಿ ಕರೆಯಲಾಗಿದೆ. ಅರ್ಹ ಸಮುದಾಯಗಳ ಪಟ್ಟಿ ಇಲ್ಲಿದೆ:

  1. ವಿಶ್ವಕರ್ಮ ಸಮುದಾಯ ನಿಗಮ: (ಪ್ರವರ್ಗ-2ಎ).
  2. ಮಡಿವಾಳ ಸಮುದಾಯ ನಿಗಮ: ಮಡಿವಾಳ, ಅಗಸ, ಚಕಲ, ಧೋಬಿ, ಮನ್ನನ್, ಪರಿತ್, ರಾಜಕ, ಸಕಲ, ವಣ್ಣನ್, ವೆಳ್ಳತೇಡನ್ ಮತ್ತು ಸಾಕ್ರಲವಾಡು (ಪ್ರವರ್ಗ-2ಎ).
  3. ಕಾಡುಗೊಲ್ಲ ಸಮುದಾಯ ನಿಗಮ: (ಪ್ರವರ್ಗ-1).
  4. ಸವಿತಾ ಸಮಾಜ ನಿಗಮ: ಸವಿತಾ ಮತ್ತು ಅದರ ಉಪಜಾತಿಗಳು (ಪ್ರವರ್ಗ-2ಎ).
  5. ವೀರಶೈವ-ಲಿಂಗಾಯತ ನಿಗಮ: (ಪ್ರವರ್ಗ-3ಬಿ).
  6. ಅಲೆಮಾರಿ/ಅರೆ ಅಲೆಮಾರಿ ನಿಗಮ: ಬುಡ್ಗ ಜಂಗಮ, ಬೈಲಪತ್ತರ್, ಬೈರಾಗಿ, ಗೋಸಾವಿ, ಹಾವಾಡಿಗ, ಸುಡುಗಾಡು ಸಿದ್ಧ, ಪಿಚ್ಚಕುಂಟಲ, ಸಿಕ್ಕಲಿಗಾರ ಸೇರಿದಂತೆ 46 ಜಾತಿಗಳು (ಪ್ರವರ್ಗ-1).
  7. ಮರಾಠ ಸಮುದಾಯ ನಿಗಮ: ಮರಾಠ, ಮರಾಠಾ, ಅರೆ ಮರಾಠ, ಆರ್ಯ, ಕೊಂಕಣ ಮರಾಠ, ಕ್ಷತ್ರಿಯ ಮರಾಠ ಇತ್ಯಾದಿ (ಪ್ರವರ್ಗ-3ಬಿ).
  8. ಇತರೆ ಹಿಂದುಳಿದ ವರ್ಗಗಳನಿಗಮ : ಮೇಲೆ ತಿಳಿಸಿದ ನಿಗಮಗಳನ್ನು ಹೊರತುಪಡಿಸಿ ಉಳಿದ ಹಿಂದುಳಿದ ವರ್ಗದವರು (ಪ್ರವರ್ಗ-1, 2ಎ, 3ಎ, 3ಬಿ) ಡಿ.ದೇವರಾಜ ಅರಸು ನಿಗಮದಡಿ ಅರ್ಜಿ ಸಲ್ಲಿಸಬಹುದು.

Ahara Vahini Scheme: ಅರ್ಜಿ ಸಲ್ಲಿಸಲು ಅರ್ಹತೆಗಳೇನು?

  • ವಯೋಮಿತಿ: ಅರ್ಜಿದಾರರ ವಯಸ್ಸು 21 ರಿಂದ 45 ವರ್ಷಗಳ ಒಳಗಿರಬೇಕು.
  • ಆದಾಯ ಮಿತಿ: ಕುಟುಂಬದ ವಾರ್ಷಿಕ ವರಮಾನ ₹3 ಲಕ್ಷಗಳ ಮೀರಬಾರದು.
  • ಒಮ್ಮೆ ಮಾತ್ರ ಅವಕಾಶ: ಈಗಾಗಲೇ ನಿಗಮದ ಯಾವುದೇ ಯೋಜನೆಯಲ್ಲಿ ನೀವು ಅಥವಾ ನಿಮ್ಮ ಕುಟುಂಬದವರು ಲಾಭ ಪಡೆದಿದ್ದರೆ, ಮತ್ತೊಮ್ಮೆ ಅರ್ಜಿ ಸಲ್ಲಿಸಲು ಬರುವುದಿಲ್ಲ.
  • ದಾಖಲೆಗಳು: ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್. (ಎಲ್ಲದರಲ್ಲೂ ಹೆಸರು ಒಂದೇ ರೀತಿ ಇರಬೇಕು).

ಯಾವ ಮತಕ್ಷೇತ್ರದ ಅಭ್ಯರ್ಥಿಗಳಿಗೆ ಅವಕಾಶ?:

  • ಬೆಂಗಳೂರು ನಗರ ವ್ಯಾಪ್ತಿ: ಬ್ಯಾಟರಾಯನಪುರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ, ಗಾಂಧಿನಗರ, ಕೆ.ಆರ್. ಪುರಂ, ಮಹದೇವಪುರ, ಪುಲಕೇಶಿನಗರ, ಸರ್ವಜ್ಞನಗರ, ಸಿ.ವಿ. ರಾಮನ್ ನಗರ, ಶಿವಾಜಿನಗರ, ದಾಸರಹಳ್ಳಿ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ, ಬೊಮ್ಮನಹಳ್ಳಿ, ಗೋವಿಂದರಾಜನಗರ, ವಿಜಯನಗರ, ಚಾಮರಾಜಪೇಟೆ, ಚಿಕ್ಕಪೇಟೆ, ರಾಜರಾಜೇಶ್ವರಿ ನಗರ, ಶಾಂತಿನಗರ, ರಾಜಾಜಿನಗರ, ಆನೇಕಲ್ ಇತ್ಯಾದಿ.
  • ಇತರೆ ಮಹಾನಗರ ಪಾಲಿಕೆಗಳು: ಶಿವಮೊಗ್ಗ ನಗರ, ತುಮಕೂರು ನಗರ, ಮೈಸೂರು (ಕೃಷ್ಣರಾಜ, ಚಾಮರಾಜ, ನರಸಿಂಹರಾಜ), ಮಂಗಳೂರು ನಗರ (ದಕ್ಷಿಣ), ಬೆಳಗಾವಿ ಉತ್ತರ, ಹುಬ್ಬಳ್ಳಿ-ಧಾರವಾಡ (ಪೂರ್ವ, ಸೆಂಟ್ರಲ್, ಪಶ್ಚಿಮ), ಕಲಬುರಗಿ ಉತ್ತರ, ಬಳ್ಳಾರಿ ನಗರ.
  • ವಿಶೇಷ ಸೂಚನೆ (ಮರಾಠ ನಿಗಮಕ್ಕೆ): ಮರಾಠ ಅಭಿವೃದ್ಧಿ ನಿಗಮದಡಿ ಅರ್ಜಿ ಸಲ್ಲಿಸುವವರಿಗೆ ಮಾತ್ರ ಮೇಲೆ ತಿಳಿಸಿದ ನಗರಗಳ ಜೊತೆಗೆ ದಾವಣಗೆರೆ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಹಾಸನ, ಉಡುಪಿ, ಕಾರವಾರ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಬೀದರ್ ಸೇರಿದಂತೆ ರಾಜ್ಯದ ಬಹುತೇಕ ತಾಲೂಕು ಕೇಂದ್ರಗಳಲ್ಲಿ ಅವಕಾಶ ನೀಡಲಾಗಿದೆ. (ನಿಮ್ಮ ಊರು ಪಟ್ಟಿಯಲ್ಲಿದೆಯೇ ಎಂದು ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ).

ಅರ್ಜಿ ಸಲ್ಲಿಸುವುದು ಹೇಗೆ? ಕೊನೆಯ ದಿನಾಂಕ ಯಾವುದು?

ಆಸಕ್ತರು ‘ಸೇವಾ ಸಿಂಧು’ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ (Grama One / Bangalore One / Karnataka One ಕೇಂದ್ರಗಳಲ್ಲಿ) ಅರ್ಜಿ ಸಲ್ಲಿಸಬೇಕು.

Ahara Vahini Scheme Application Last Date:

  • ಡಿ.ದೇವರಾಜ ಅರಸು ನಿಗಮ: 04.03.2026
  • ಮರಾಠ ನಿಗಮ: 05.03.2026
  • ಮಡಿವಾಳ / ಅಲೆಮಾರಿ / ಕಾಡುಗೊಲ್ಲ ನಿಗಮಗಳು: 06.03.2026
  • ವಿಶ್ವಕರ್ಮ / ಸವಿತಾ ಸಮಾಜ ನಿಗಮಗಳು: 07.03.2026
  • ವೀರಶೈವ ಲಿಂಗಾಯತ ನಿಗಮ: 08.03.2026

Ahara Vahini Scheme Online Application Link:

  • ಆಹಾರ ವಾಹಿನಿ ಅರ್ಜಿ ಲಿಂಕ್: Apply Online
  • ಅಧಿಕೃತ ವೆಬ್‌ಸೈಟ್:sevasindhu.karnataka.gov.in

“ಮೊಬೈಲ್ ಕ್ಯಾಂಟೀನ್ ಬಿಸಿನೆಸ್ ಇಂದಿನ ದಿನಗಳಲ್ಲಿ ಕೈತುಂಬಾ ಆದಾಯ ತರುವ ಮಾರ್ಗ. ₹3 ಲಕ್ಷ ಸಬ್ಸಿಡಿ ಸಿಗುವುದು ಸಣ್ಣ ವಿಷಯವಲ್ಲ. ನಿಮ್ಮ ದಾಖಲೆಗಳಲ್ಲಿ (ಆಧಾರ್, ಬ್ಯಾಂಕ್ ಪಾಸ್ ಬುಕ್) ಹೆಸರಿನ ಸ್ಪೆಲ್ಲಿಂಗ್ ಸರಿಯಾಗಿದೆಯೇ ಎಂದು ಇಂದೇ ಚೆಕ್ ಮಾಡಿಕೊಳ್ಳಿ. ಕೊನೆಯ ದಿನಾಂಕದವರೆಗೂ ಕಾಯಬೇಡಿ, ಸರ್ವರ್ ಸಮಸ್ಯೆ ಎದುರಾಗಬಹುದು.”

ಸ್ವಂತ ಬಿಸಿನೆಸ್ ಕನಸು ಕಾಣುತ್ತಿರುವ ನಿಮ್ಮ ಸ್ನೇಹಿತರಿಗೆ ಈ ಮಾಹಿತಿಯನ್ನು ಈಗಲೇ ಶೇರ್ ಮಾಡಿ!

PMMY Scheme: ಮುದ್ರಾ ಸಾಲದ ಮಿತಿ ಈಗ 20 ಲಕ್ಷಕ್ಕೆ ಏರಿಕೆ!

ಹೊಸ ಆಧಾರ್ ಆ್ಯಪ್ ಬಿಡುಗಡೆ ಮಾಡಿದ UIDAI

Telegram Group Join Now
WhatsApp Group Join Now

Leave a Comment