KEA FDA SDA Recruitment 2026 | KEA 5,431 ಗ್ರೂಪ್-ಸಿ (FDA & SDA) ಹುದ್ದೆಗಳ ಬೃಹತ್ ನೇಮಕಾತಿ: PUC ಹಾಗೂ ಪದವಿ ಪಾಸಾದವರಿಗೆ ಸುವರ್ಣಾವಕಾಶ

Telegram Group Join Now
WhatsApp Group Join Now

ಕರ್ನಾಟಕ ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳು, ನಿಗಮ ಹಾಗೂ ಮಂಡಳಿಗಳಲ್ಲಿ ಖಾಲಿ ಇರುವ ಒಟ್ಟು 5,431 ಗ್ರೂಪ್-ಸಿ ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಇದರಲ್ಲಿ ಪದವಿ ಮಟ್ಟದ 2,726 ಹುದ್ದೆಗಳು (RPC: 2,163 + KK: 563) ಹಾಗೂ ದ್ವಿತೀಯ ಪಿಯುಸಿ ಮಟ್ಟದ 2,705 ಹುದ್ದೆಗಳು (RPC: 2,070 + KK: 635) ಸೇರಿವೆ.

ದ್ವಿತೀಯ ಪಿಯುಸಿ ಹಾಗೂ ಪದವಿ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 30, 2026 ರಿಂದ ನವೆಂಬರ್ 25, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಶುಲ್ಕ ಪಾವತಿಸಲು ನವೆಂಬರ್ 26, 2026 ಕೊನೆಯ ದಿನವಾಗಿದೆ.

KEA FDA SDA Recruitment 2026 ಸಂಕ್ಷಿಪ್ತ ವಿವರ

ವಿವರ ಮಾಹಿತಿ
ಪರೀಕ್ಷಾ ಪ್ರಾಧಿಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ಹುದ್ದೆಗಳ ಹೆಸರು FDA, SDA, ಲೆಕ್ಕ ಸಹಾಯಕ, ವಾರ್ಡನ್, CTI ಹಾಗೂ ವಿವಿಧ ಗ್ರೂಪ್-ಸಿ ಹುದ್ದೆಗಳು
ವೃಂದ ಮತ್ತು ವರ್ಗ RPC (4,233) & KK (1,198) – ಗ್ರೂಪ್ ‘ಸಿ’
ಒಟ್ಟು ಹುದ್ದೆಗಳು 5,431 ಹುದ್ದೆಗಳು
ವಿದ್ಯಾರ್ಹತೆ ದ್ವಿತೀಯ ಪಿಯುಸಿ (PUC) ಹಾಗೂ ಪದವಿ (Degree)

ಅಗ್ನಿಶಾಮಕ ಇಲಾಖೆ ನೇಮಕಾತಿ 2026

ವೃಂದವಾರು ಮತ್ತು ಮಟ್ಟವಾರು ಹುದ್ದೆಗಳ ಸಾರಾಂಶ

ಹುದ್ದೆಯ ಮಟ್ಟ RPC ವೃಂದ KK ವೃಂದ ಒಟ್ಟು
ಪದವಿ ಮಟ್ಟದ ಹುದ್ದೆಗಳು (FDA & ಇತರೆ) 2,163 563 2,726
ಪಿಯುಸಿ ಮಟ್ಟದ ಹುದ್ದೆಗಳು (SDA & ಇತರೆ) 2,070 635 2,705
ಒಟ್ಟು ಗ್ರೂಪ್-ಸಿ ಹುದ್ದೆಗಳು 4,233 1,198 5,431

ಇಲಾಖಾವಾರು ಹುದ್ದೆಗಳ ಸಂಪೂರ್ಣ ವಿವರ

1. ಉಳಿಕೆ ಮೂಲ ವೃಂದ (RPC) – ಪದವಿ ಮಟ್ಟದ 2,163 ಹುದ್ದೆಗಳು

ಇಲಾಖೆ / ಸಂಸ್ಥೆ ಮತ್ತು ಹುದ್ದೆ ಹುದ್ದೆ
ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ – ಲೆಕ್ಕ ಸಹಾಯಕರು488 + 02(ಹಿಂ)
ಸಮಾಜ ಕಲ್ಯಾಣ ಇಲಾಖೆ – ವಾರ್ಡನ್ (ಪುರುಷ)294
ನ್ಯಾಯಾಂಗ ಇಲಾಖೆ (ವಿವಿಧ ನ್ಯಾಯಾಲಯಗಳು) – ಪ್ರಥಮ ದರ್ಜೆ ಸಹಾಯಕರು249
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ – ನಿಲಯ ಮೇಲ್ವಿಚಾರಕರು (ಪುರುಷ)171 + 09(ಸೇ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) – ಗ್ರಾ.ಪಂ ಕಾರ್ಯದರ್ಶಿ ಗ್ರೇಡ್-1135
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) – ಪ್ರಥಮ ದರ್ಜೆ ಸಹಾಯಕರು (ಜಿ.ಪಂ/ತಾ.ಪಂ)100
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ – ನಿಲಯ ಮೇಲ್ವಿಚಾರಕರು (ಮಹಿಳೆ)95 + 05(ಸೇ)
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ – FDA ಕಂ ಕಂಪ್ಯೂಟರ್ ಆಪರೇಟರ್75 + 04(ಹಿಂ)
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ – ನಿಲಯ ಪಾಲಕರು75 + 03(ಹಿಂ)
ವಾಣಿಜ್ಯ ತೆರಿಗೆಗಳ ಇಲಾಖೆ – ಪ್ರಥಮ ದರ್ಜೆ ಸಹಾಯಕರು56
ಕೃಷಿ ಇಲಾಖೆ – ಪ್ರಥಮ ದರ್ಜೆ ಸಹಾಯಕರು50
ವಾಣಿಜ್ಯ ತೆರಿಗೆಗಳ ಇಲಾಖೆ – ವಾಣಿಜ್ಯ ತೆರಿಗೆ ಪರಿವೀಕ್ಷಕರು (CTI)48
ಅರಣ್ಯ ಇಲಾಖೆ – ಪ್ರಥಮ ದರ್ಜೆ ಸಹಾಯಕರು36
ಕರ್ನಾಟಕ ಸರ್ಕಾರ ಸಚಿವಾಲಯ – ಸಹಾಯಕರು32
ಸಮಾಜ ಕಲ್ಯಾಣ ಇಲಾಖೆ – ವಾರ್ಡನ್ (ಮಹಿಳೆ)31
ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ – ಸಹಕಾರ ಸಂಘಗಳ ಲೆಕ್ಕಪರಿಶೋಧಕರು23
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) – ಸಹಾಯಕರು20
ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ – ಪ್ರಥಮ ದರ್ಜೆ ಸಹಾಯಕರು18
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ – FDA17
ನೋಂದಣಿ ಮತ್ತು ಮುದ್ರಾಂಕ ಇಲಾಖೆ – ಉಪ ನೋಂದಣಾಧಿಕಾರಿ17
ಕರ್ನಾಟಕ ಲೋಕ ಸೇವಾ ಆಯೋಗ (KPSC) – ಸಹಾಯಕರು15
ಕರ್ನಾಟಕ ಲೋಕಾಯುಕ್ತ – ಪ್ರಥಮ ದರ್ಜೆ ಸಹಾಯಕರು13
ಕಾರ್ಮಿಕರ ರಾಜ್ಯ ವಿಮಾ ಯೋಜನೆ (ESI) ವೈದ್ಯಕೀಯ ಸೇವೆಗಳು – FDA12
ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ – ಪ್ರಥಮ ದರ್ಜೆ ಸಹಾಯಕರು12
ಕಾರ್ಮಿಕ ಇಲಾಖೆ – ಪ್ರಥಮ ದರ್ಜೆ ಸಹಾಯಕರು11
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ – ಪ್ರಥಮ ದರ್ಜೆ ಸಹಾಯಕರು10
ನೋಂದಣಿ ಮತ್ತು ಮುದ್ರಾಂಕ ಇಲಾಖೆ – ಪ್ರಥಮ ದರ್ಜೆ ಸಹಾಯಕರು07
ಪ್ರವಾಸೋದ್ಯಮ ಇಲಾಖೆ – ಪ್ರವಾಸೋದ್ಯಮ ಪ್ರಚಾರ ಅಧಿಕಾರಿ (06) & ಹಿರಿಯ ಪ್ರವಾಸಿ ಪ್ರವರ್ತಕರು (06)12
ಕರ್ನಾಟಕ ಗೃಹ ಮಂಡಳಿ – ಪ್ರಥಮ ದರ್ಜೆ ಸಹಾಯಕರು06
ಅಂತರ್ಜಲ ನಿರ್ದೇಶನಾಲಯ – ಪ್ರಥಮ ದರ್ಜೆ ಸಹಾಯಕರು05
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ – ಪ್ರಥಮ ದರ್ಜೆ ಸಹಾಯಕರು05
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) – ಪ್ರಥಮ ದರ್ಜೆ ಸಹಾಯಕರು02
ಒಟ್ಟು RPC ಪದವಿ ಮಟ್ಟದ ಹುದ್ದೆಗಳು [2140 + 14(ಸೇ) + 09(ಹಿಂ)]2,163

ಅರಣ್ಯ ಇಲಾಖೆ ನೇಮಕಾತಿ 2026

2. ಕಲ್ಯಾಣ ಕರ್ನಾಟಕ ವೃಂದ (KK) – ಪದವಿ ಮಟ್ಟದ 563 ಹುದ್ದೆಗಳು

ಇಲಾಖೆ / ಸಂಸ್ಥೆ ಮತ್ತು ಹುದ್ದೆ ಹುದ್ದೆ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ – ನಿಲಯ ಮೇಲ್ವಿಚಾರಕರು (ಪುರುಷ)89 + 05(ಸೇ)
RDPR ಇಲಾಖೆ – ಗ್ರಾ.ಪಂ ಕಾರ್ಯದರ್ಶಿ ಗ್ರೇಡ್-1 (49) & ಜಿ.ಪಂ/ತಾ.ಪಂ FDA (48)97
ನ್ಯಾಯಾಂಗ ಇಲಾಖೆ (ವಿವಿಧ ನ್ಯಾಯಾಲಯಗಳು) – ಪ್ರಥಮ ದರ್ಜೆ ಸಹಾಯಕರು33
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ – ನಿಲಯಪಾಲಕರು27 + 01(ಹಿಂ)
ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ – ಲೆಕ್ಕಪರಿಶೋಧಕರು (27) & FDA (06)33
ಅರಣ್ಯ ಇಲಾಖೆ – ಪ್ರಥಮ ದರ್ಜೆ ಸಹಾಯಕರು26
ಸಮಾಜ ಕಲ್ಯಾಣ ಇಲಾಖೆ – ವಾರ್ಡನ್ (ಪುರುಷ)25
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ – FDA ಕಂ ಕಂಪ್ಯೂಟರ್ ಆಪರೇಟರ್17 + 08(ಹಿಂ)
ಪೌರಾಡಳಿತ ನಿರ್ದೇಶನಾಲಯ – ಪ್ರ.ದ ಕಂದಾಯ ನಿರೀಕ್ಷಕ (ನಗರ: 15, ಪಾಲಿಕೆ: 05), ಲೆಕ್ಕಿಗರು (05), KMAS ಮುಖ್ಯಾಧಿಕಾರಿ-2 [11+01(ಸೇ)]37
ಕೃಷಿ ಮಾರಾಟ ಇಲಾಖೆ – ಪ್ರಥಮ ದರ್ಜೆ ಸಹಾಯಕರು15
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ – ಸಾಂಖ್ಯಿಕ ನಿರೀಕ್ಷಕರು12
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ – ನಿಲಯ ಮೇಲ್ವಿಚಾರಕರು (ಮಹಿಳೆ)11 + 01(ಸೇ)
ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ – ಲೆಕ್ಕ ಸಹಾಯಕರು10 + 02(ಹಿಂ)
ವಾಣಿಜ್ಯ ತೆರಿಗೆಗಳ ಇಲಾಖೆ – FDA (10) & ವಾಣಿಜ್ಯ ತೆರಿಗೆ ಪರಿವೀಕ್ಷಕರು (02)12
ಕೃಷಿ ಇಲಾಖೆ – ಪ್ರಥಮ ದರ್ಜೆ ಸಹಾಯಕರು11
ಕರ್ನಾಟಕ ಸರ್ಕಾರ ಸಚಿವಾಲಯ – ಸಹಾಯಕರು10
ಕಾಲೇಜು ಶಿಕ್ಷಣ ಇಲಾಖೆ – ಪ್ರಥಮ ದರ್ಜೆ ಸಹಾಯಕರು10
ರೇಷ್ಮೆ ಇಲಾಖೆ – ಪ್ರಥಮ ದರ್ಜೆ ಸಹಾಯಕರು07
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ – ವಾರ್ತಾ ಸಹಾಯಕ (04) & FDA (02)06
ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಜಲ ಸಂಪನ್ಮೂಲ) – ಮುನಿರಾಬಾದ್ (04) & ಕಲಬುರಗಿ (02) FDA06
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ / ಆಹಾರ ಮತ್ತು ನಾಗರಿಕ ಸರಬರಾಜು / ಸಾರಿಗೆ ಇಲಾಖೆ – FDA (ತಲಾ 05)15
ಲೋಕಾಯುಕ್ತ / ಗ್ರಾಹಕ ಆಯೋಗ / ಕಾರ್ಮಿಕ ಇಲಾಖೆ – FDA (ತಲಾ 04)12
KPSC (ಸಹಾಯಕ) / KIADB (ಸಹಾಯಕ) / ಗಣಿ ಮತ್ತು ಭೂ ವಿಜ್ಞಾನ (FDA) / ಅಂತರ್ಜಲ (FDA) – ತಲಾ 0312
ವಿದ್ಯುತ್ ಪರಿವೀಕ್ಷಣಾಲಯ / ಸಹಕಾರ ನಿಬಂಧಕರ ಕಛೇರಿ / ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ – FDA (ತಲಾ 02)06
KRIDL – ಅಧೀಕ್ಷಕರು ಲೆಕ್ಕಪತ್ರ (01) & FDA (01)02
ಯುವ ಸಬಲೀಕರಣ / KSRSAC (ಸಹಾಯಕ) / ಕನ್ನಡ ಮತ್ತು ಸಂಸ್ಕೃತಿ / ಕೊಳಗೇರಿ ಮಂಡಳಿ / ಗೃಹ ಮಂಡಳಿ – ತಲಾ 0105
ಒಟ್ಟು KK ಪದವಿ ಮಟ್ಟದ ಹುದ್ದೆಗಳು [545 + 07(ಸೇ) + 11(ಹಿಂ)]563

3. ಉಳಿಕೆ ಮೂಲ ವೃಂದ (RPC) – ಪಿಯುಸಿ ಮಟ್ಟದ 2,070 ಹುದ್ದೆಗಳು

ಇಲಾಖೆ / ಸಂಸ್ಥೆ ಮತ್ತು ಹುದ್ದೆ ಹುದ್ದೆ
ನ್ಯಾಯಾಂಗ ಇಲಾಖೆ (ವಿವಿಧ ನ್ಯಾಯಾಲಯಗಳು) – ದ್ವಿತೀಯ ದರ್ಜೆ ಸಹಾಯಕರು522
ವಾಣಿಜ್ಯ ತೆರಿಗೆಗಳ ಇಲಾಖೆ – ದ್ವಿತೀಯ ದರ್ಜೆ ಸಹಾಯಕರು500
RDPR ಇಲಾಖೆ – ಗ್ರಾ.ಪಂ ಕಾರ್ಯದರ್ಶಿ ಮತ್ತು ಗ್ರಾ.ಅ ಸಹಾಯಕ ಗ್ರೇಡ್-2284
RDPR ಇಲಾಖೆ – ದ್ವಿತೀಯ ದರ್ಜೆ ಸಹಾಯಕರು (ಜಿ.ಪಂ & ತಾ.ಪಂ)200
ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ – ಕಿರಿಯ ಲೆಕ್ಕ ಸಹಾಯಕ130
RDPR ಇಲಾಖೆ – ದ್ವಿತೀಯ ದರ್ಜೆ ಲೆಕ್ಕ ಸಹಾಯಕ (ಗ್ರಾ.ಪಂ)68
ಕಾರ್ಮಿಕರ ರಾಜ್ಯ ವಿಮಾ ಯೋಜನೆ (ESI) – SDA (48) & SDA ಕಂ ರೆಕಾರ್ಡ್ ಸಾರ್ಟರ್ (12)60
ಅರಣ್ಯ ಇಲಾಖೆ – ದ್ವಿತೀಯ ದರ್ಜೆ ಸಹಾಯಕರು45
ನೋಂದಣಿ ಮತ್ತು ಮುದ್ರಾಂಕ ಇಲಾಖೆ – ದ್ವಿತೀಯ ದರ್ಜೆ ಸಹಾಯಕರು38
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ – SDA31
ಕರ್ನಾಟಕ ಲೋಕಾಯುಕ್ತ – ದ್ವಿತೀಯ ದರ್ಜೆ ಸಹಾಯಕರು28
ಸಾರಿಗೆ ಇಲಾಖೆ – ದ್ವಿತೀಯ ದರ್ಜೆ ಸಹಾಯಕರು24
ಕರ್ನಾಟಕ ಲೋಕ ಸೇವಾ ಆಯೋಗ (KPSC) – ಕಿರಿಯ ಸಹಾಯಕ21
ಸಮಾಜ ಕಲ್ಯಾಣ ಇಲಾಖೆ – ದ್ವಿತೀಯ ದರ್ಜೆ ಸಹಾಯಕರು20
ಕಾರ್ಮಿಕ ಇಲಾಖೆ – ದ್ವಿತೀಯ ದರ್ಜೆ ಸಹಾಯಕರು17
ವಿದ್ಯುತ್ ಪರಿವೀಕ್ಷಣಾಲಯ / ಗೃಹ ಮಂಡಳಿ / KIADB (ಕಿರಿಯ ಸಹಾಯಕ) / KRIDL – ತಲಾ 1560
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ – ದ್ವಿತೀಯ ದರ್ಜೆ ಸಹಾಯಕರು10
ಪ್ರವಾಸೋದ್ಯಮ ಇಲಾಖೆ – ಪ್ರವಾಸಿ ಪ್ರವರ್ತಕರು06
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ – ದ್ವಿತೀಯ ದರ್ಜೆ ಸಹಾಯಕರು04
ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ – ದ್ವಿತೀಯ ದರ್ಜೆ ಸಹಾಯಕರು02
ಒಟ್ಟು RPC ಪಿಯುಸಿ ಮಟ್ಟದ ಹುದ್ದೆಗಳು2,070

4. ಕಲ್ಯಾಣ ಕರ್ನಾಟಕ ವೃಂದ (KK) – ಪಿಯುಸಿ ಮಟ್ಟದ 635 ಹುದ್ದೆಗಳು

ಇಲಾಖೆ / ಸಂಸ್ಥೆ ಮತ್ತು ಹುದ್ದೆ ಹುದ್ದೆ
RDPR ಇಲಾಖೆ – ಜಿ.ಪಂ/ತಾ.ಪಂ SDA (109), ಗ್ರಾ.ಪಂ ಕಾರ್ಯದರ್ಶಿ ಗ್ರೇಡ್-2 (38) & ಗ್ರಾ.ಪಂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ (25)172
ನ್ಯಾಯಾಂಗ ಇಲಾಖೆ (ವಿವಿಧ ನ್ಯಾಯಾಲಯಗಳು) – ದ್ವಿತೀಯ ದರ್ಜೆ ಸಹಾಯಕರು104
ವಾಣಿಜ್ಯ ತೆರಿಗೆಗಳ ಇಲಾಖೆ – ದ್ವಿತೀಯ ದರ್ಜೆ ಸಹಾಯಕರು90
ಕೃಷಿ ಮಾರಾಟ ಇಲಾಖೆ – ಮಾರಾಟ ಸಹಾಯಕರು (44) & SDA (09)53
ಅರಣ್ಯ ಇಲಾಖೆ – ದ್ವಿತೀಯ ದರ್ಜೆ ಸಹಾಯಕರು25
ಕೃಷಿ ಇಲಾಖೆ – ದ್ವಿತೀಯ ದರ್ಜೆ ಸಹಾಯಕರು17
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ (ತರಬೇತಿ) – SDA16
ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆ – ದ್ವಿತೀಯ ದರ್ಜೆ ಸಹಾಯಕರು16
ಕರ್ನಾಟಕ ಸರ್ಕಾರ ಸಚಿವಾಲಯ – ಕಿರಿಯ ಸಹಾಯಕರು14
ಸಹಕಾರ ಸಂಘಗಳ ನಿಬಂಧಕರ ಕಛೇರಿ – ದ್ವಿತೀಯ ದರ್ಜೆ ಸಹಾಯಕರು13
ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಜಲ ಸಂಪನ್ಮೂಲ) – ಭೀಮರಾಯನಗುಡಿ (08 SDA + 01 ಲೆಕ್ಕ ಸಹಾಯಕ), ಕಲಬುರಗಿ (05), ಮುನಿರಾಬಾದ್ (03), ನಿರ್ದೇಶನಾಲಯ (01)18
ಸಾರಿಗೆ ಇಲಾಖೆ / ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ – SDA (ತಲಾ 08)16
ಕಾರ್ಮಿಕರ ರಾಜ್ಯ ವಿಮಾ ಯೋಜನೆ (ESI) – SDA (05) & SDA ಕಂ ರೆಕಾರ್ಡ್ ಸಾರ್ಟರ್ (03)08
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ – SDA07
ಗಣಿ ಮತ್ತು ಭೂ ವಿಜ್ಞಾನ / ವಿದ್ಯುತ್ ಪರಿವೀಕ್ಷಣಾಲಯ / ರೇಷ್ಮೆ / KIADB (ಕಿರಿಯ ಸಹಾಯಕ) – ತಲಾ 0624
ಆರ್ಥಿಕ ಮತ್ತು ಸಾಂಖ್ಯಿಕ (ಗಣತಿದಾರರು ಕಂ DEO) / ಗ್ರಾಹಕ ಆಯೋಗ / KRIDL – ತಲಾ 0515
KPSC (ಕಿರಿಯ ಸಹಾಯಕ) / ಕಾರ್ಮಿಕ ಇಲಾಖೆ / ಅಂತರ್ಜಲ / ಮೀನುಗಾರಿಕೆ ಇಲಾಖೆ – ತಲಾ 0416
ಕರ್ನಾಟಕ ಲೋಕಾಯುಕ್ತ / ಕೊಳಗೇರಿ ಮಂಡಳಿ / ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ – SDA (ತಲಾ 03)09
ಕನ್ನಡ ಮತ್ತು ಸಂಸ್ಕೃತಿ (01) / ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (01) – SDA02
ಒಟ್ಟು KK ಪಿಯುಸಿ ಮಟ್ಟದ ಹುದ್ದೆಗಳು635

(ಸೂಚನೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜಿಲ್ಲಾವಾರು ಹುದ್ದೆಗಳು ಹಾಗೂ ನ್ಯಾಯಾಂಗ ಇಲಾಖೆಯ ವಿವಿಧ ಜಿಲ್ಲಾ ನ್ಯಾಯಾಲಯಗಳ ಹುದ್ದೆಗಳ ಪಟ್ಟಿಯನ್ನು ಅಧಿಕೃತ ಅಧಿಸೂಚನೆ PDF ನಲ್ಲಿ ನೀಡಲಾಗಿದೆ. (ಸೇ) ಎಂದರೆ ಇಲಾಖೆಯ ಸೇವಾನಿರತ ಸಿಬ್ಬಂದಿಗಳಿಗೆ ಹಾಗೂ (ಹಿಂ) ಎಂದರೆ ಹಿಂಬಾಕಿ ಹುದ್ದೆಗಳಿಗೆ ಮೀಸಲಾಗಿದೆ.)

ಶೈಕ್ಷಣಿಕ ವಿದ್ಯಾರ್ಹತೆ

ಪದವಿ ಮಟ್ಟದ ಹುದ್ದೆಗಳಿಗೆ (FDA & ಇತರೆ)

  • ಪ್ರಥಮ ದರ್ಜೆ ಸಹಾಯಕರು (FDA), ಸಹಾಯಕರು, ಉಪ ನೋಂದಣಾಧಿಕಾರಿ, ಗ್ರಾ.ಪಂ ಕಾರ್ಯದರ್ಶಿ ಗ್ರೇಡ್-1, ಹಿರಿಯ ಪ್ರವಾಸಿ ಪ್ರವರ್ತಕರು, ಕಂದಾಯ ನಿರೀಕ್ಷಕರು, KMAS ಮುಖ್ಯಾಧಿಕಾರಿ-2: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಉತ್ತೀರ್ಣರಾಗಿರಬೇಕು.
  • ಲೆಕ್ಕ ಸಹಾಯಕರು: B.Com, BBM, BBA ಅಥವಾ UGC ಮಾನ್ಯತೆ ಪಡೆದ ತತ್ಸಮಾನ ಪದವಿ ಹೊಂದಿರಬೇಕು.
  • ವಾರ್ಡನ್ (ಪುರುಷ/ಮಹಿಳೆ), ನಿಲಯ ಮೇಲ್ವಿಚಾರಕರು, ನಿಲಯ ಪಾಲಕರು: ಯಾವುದೇ ಪದವಿ ಜೊತೆಗೆ B.Ed ಪದವಿ ಕಡ್ಡಾಯ.
  • FDA ಕಂ ಕಂಪ್ಯೂಟರ್ ಆಪರೇಟರ್: ಸ್ನಾತಕೋತ್ತರ ಪದವಿ ಹಾಗೂ 1 ವರ್ಷದ ಕಂಪ್ಯೂಟರ್ ಕೋರ್ಸ್ ಪ್ರಮಾಣಪತ್ರ (BE CS/IS/IT, BCA, MCA, BSc/MSc CS, PGDCA ಪದವೀಧರರಿಗೆ ಕಂಪ್ಯೂಟರ್ ಕೋರ್ಸ್ ಪ್ರಮಾಣಪತ್ರದಿಂದ ವಿನಾಯಿತಿ ಇದೆ).
  • ವಾಣಿಜ್ಯ ತೆರಿಗೆ ಪರಿವೀಕ್ಷಕರು (CTI): ವಾಣಿಜ್ಯಶಾಸ್ತ್ರ ಪದವಿ ಅಥವಾ ಅರ್ಥಶಾಸ್ತ್ರ / ಗಣಿತವನ್ನು ಒಂದು ವಿಷಯವಾಗಿ (ಕನಿಷ್ಠ ಒಂದು ಸೆಮಿಸ್ಟರ್/ವರ್ಷ) ಓದಿರುವ ಪದವಿ ಹೊಂದಿರಬೇಕು.
  • ಸಹಕಾರ ಸಂಘಗಳ ಲೆಕ್ಕಪರಿಶೋಧಕರು / ಲೆಕ್ಕಿಗರು / ಅಧೀಕ್ಷಕರು (ಲೆಕ್ಕಪತ್ರ): B.Com ಪದವಿ (ಲೆಕ್ಕಪರಿಶೋಧಕರಿಗೆ ಅಕೌಂಟೆನ್ಸಿ & ಆಡಿಟಿಂಗ್ ವಿಷಯ ಕಡ್ಡಾಯ; ಅಧೀಕ್ಷಕರಿಗೆ ಕಂಪ್ಯೂಟರ್ ಪ್ರಮಾಣಪತ್ರ ಕಡ್ಡಾಯ).
  • ಸಾಂಖ್ಯಿಕ ನಿರೀಕ್ಷಕರು (KK): Economics, Statistics, Mathematics ಅಥವಾ Computer Science ವಿಷಯವನ್ನು ಎಲ್ಲಾ ವರ್ಷ/ಸೆಮಿಸ್ಟರ್‌ಗಳಲ್ಲಿ ಅಭ್ಯಾಸ ಮಾಡಿದ ಪದವಿ (ಬಿ.ಇ ಪದವಿ ಹೊರತುಪಡಿಸಿ).
  • ಪ್ರವಾಸೋದ್ಯಮ ಪ್ರಚಾರ ಅಧಿಕಾರಿ (RPC): Tourism Communication, History, Ideology, Archaeology ಅಥವಾ Journalism ಪದವಿ ಅಥವಾ ಯಾವುದೇ ಪದವಿ ಜೊತೆಗೆ Hotel Management ಡಿಪ್ಲೊಮಾ ಹೊಂದಿರಬೇಕು.
  • ವಾರ್ತಾ ಸಹಾಯಕ (KK): ಯಾವುದೇ ಪದವಿ (ಪತ್ರಿಕೋದ್ಯಮ ಪದವೀಧರರಿಗೆ ಆದ್ಯತೆ) ಹಾಗೂ ಪತ್ರಿಕೆ/ಸುದ್ದಿ ಸಂಸ್ಥೆ/ಸರ್ಕಾರಿ ಪ್ರಚಾರ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷದ ಅನುಭವ ಇರಬೇಕು.

ಪಿಯುಸಿ ಮಟ್ಟದ ಹುದ್ದೆಗಳಿಗೆ (SDA & ಇತರೆ)

  • ದ್ವಿತೀಯ ದರ್ಜೆ ಸಹಾಯಕರು (SDA), ಗ್ರಾ.ಪಂ ಕಾರ್ಯದರ್ಶಿ ಗ್ರೇಡ್-2, ಕಿರಿಯ ಸಹಾಯಕರು, ಮಾರಾಟ ಸಹಾಯಕರು, ಪ್ರವಾಸಿ ಪ್ರವರ್ತಕರು, SDA ಕಂ ರೆಕಾರ್ಡ್ ಸಾರ್ಟರ್: ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ (CBSE/ICSE 12ನೇ ತರಗತಿ, NIOS HSC, 3 ವರ್ಷದ ಡಿಪ್ಲೊಮಾ, GTTC 3+1 ಡಿಪ್ಲೊಮಾ, JOC, ಅಥವಾ 2 ವರ್ಷದ ITI ಜೊತೆಗೆ NIOS/PU ಮಂಡಳಿಯ 1 ಭಾಷೆ + 1 ವಿಷಯ ಉತ್ತೀರ್ಣ) ಹೊಂದಿರಬೇಕು.
  • ಕಿರಿಯ ಲೆಕ್ಕ ಸಹಾಯಕ / ದ್ವಿತೀಯ ದರ್ಜೆ ಲೆಕ್ಕ ಸಹಾಯಕ: ವಾಣಿಜ್ಯಶಾಸ್ತ್ರ (Commerce) ವಿಭಾಗದಲ್ಲಿ ದ್ವಿತೀಯ ಪಿಯುಸಿ (ಕಿರಿಯ ಲೆಕ್ಕ ಸಹಾಯಕರಿಗೆ Accountancy ಐಚ್ಛಿಕ ವಿಷಯ ಕಡ್ಡಾಯ) ಉತ್ತೀರ್ಣರಾಗಿರಬೇಕು.
  • ಗಣತಿದಾರರು ಕಂ ಡಾಟಾ ಎಂಟ್ರಿ ಆಪರೇಟರ್ (KK): ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು.
  • ವಿಶೇಷ ಸೂಚನೆ: KIADB ಕಿರಿಯ ಸಹಾಯಕ ಹುದ್ದೆಗೆ ಕನಿಷ್ಠ 6 ತಿಂಗಳ ಕಂಪ್ಯೂಟರ್ ಕೋರ್ಸ್ ಹಾಗೂ KRIDL ಹುದ್ದೆಗಳಿಗೆ ಕಂಪ್ಯೂಟರ್ ಜ್ಞಾನ ಪ್ರಮಾಣಪತ್ರ ಕಡ್ಡಾಯವಾಗಿದೆ. ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಅನುಚ್ಛೇದ 371(ಜೆ) ಅನುಬಂಧ-ಎ ಅರ್ಹತಾ ಪ್ರಮಾಣಪತ್ರ ಹೊಂದಿರಬೇಕು.

KEA FDA SDA Recruitment 2026 ವೇತನ ಶ್ರೇಣಿ:

ಹುದ್ದೆಯ ವಿವರ ಮಾಸಿಕ ವೇತನ ಶ್ರೇಣಿ
ಪ್ರವಾಸೋದ್ಯಮ ಪ್ರಚಾರ ಅಧಿಕಾರಿ, ಅಧೀಕ್ಷಕರು (ಲೆಕ್ಕಪತ್ರ) ₹61,300 – ₹1,12,900
ವಾಣಿಜ್ಯ ತೆರಿಗೆ ಪರಿವೀಕ್ಷಕರು, ಉಪ ನೋಂದಣಾಧಿಕಾರಿ, KMAS ಮುಖ್ಯಾಧಿಕಾರಿ-2, ವಾರ್ತಾ ಸಹಾಯಕ ₹54,175 – ₹99,400
ಸಹಾಯಕರು (ಸಚಿವಾಲಯ, KIADB, KPSC), ಲೆಕ್ಕಿಗರು ₹49,050 – ₹92,500
FDA, ಲೆಕ್ಕ ಸಹಾಯಕ, ವಾರ್ಡನ್, ನಿಲಯ ಮೇಲ್ವಿಚಾರಕ, ಗ್ರಾ.ಪಂ ಕಾರ್ಯದರ್ಶಿ ಗ್ರೇಡ್-1 & ಇತರೆ ಪದವಿ ಹುದ್ದೆಗಳು ₹44,425 – ₹83,700
SDA, ಕಿರಿಯ ಲೆಕ್ಕ ಸಹಾಯಕ, ಗ್ರಾ.ಪಂ ಕಾರ್ಯದರ್ಶಿ ಗ್ರೇಡ್-2 & ಎಲ್ಲಾ ಪಿಯುಸಿ ಮಟ್ಟದ ಹುದ್ದೆಗಳು ₹34,100 – ₹67,600

ವಯೋಮಿತಿ ಮತ್ತು ಅರ್ಜಿ ಶುಲ್ಕದ ವಿವರ:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ತುಂಬಿರಬೇಕು. ಸರ್ಕಾರದ ಆದೇಶದನ್ವಯ ಒಂದು ಬಾರಿಯ 5 ವರ್ಷಗಳ ವಯೋಮಿತಿ ಸಡಿಲಿಕೆ ಸೇರಿಸಿ ಗರಿಷ್ಠ ವಯೋಮಿತಿ ಹಾಗೂ ಆನ್‌ಲೈನ್ ಅರ್ಜಿ ಶುಲ್ಕ ಕೆಳಕಂಡಂತಿದೆ:

ಪ್ರವರ್ಗ ಗರಿಷ್ಠ ವಯೋಮಿತಿ ಅರ್ಜಿ ಶುಲ್ಕ
ಸಾಮಾನ್ಯ ವರ್ಗ (GM) 40 ವರ್ಷ ₹750/-
ಪ್ರವರ್ಗ 2A, 2B, 3A, 3B 43 ವರ್ಷ ₹750/-
SC / ST / ಪ್ರವರ್ಗ-1 45 ವರ್ಷ ₹500/-
ಮಾಜಿ ಸೈನಿಕ / ತೃತೀಯ ಲಿಂಗಿ ನಿಯಮಾನುಸಾರ ₹500/-
ವಿಶೇಷ ಚೇತನ ಅಭ್ಯರ್ಥಿಗಳು (PWD) +10 ವರ್ಷ ಸಡಿಲಿಕೆ ₹250/-
  • ವಿಧವೆಯರು ಹಾಗೂ ಜೀತ ಕಾರ್ಮಿಕರಿಗೆ ಹೆಚ್ಚುವರಿ 10 ವರ್ಷ, ಮಾಜಿ ಸೈನಿಕರಿಗೆ ಸೇವೆ ಸಲ್ಲಿಸಿದ ಅವಧಿ + 3 ವರ್ಷ, ಹಾಗೂ ರಾಜ್ಯ ಸರ್ಕಾರ/ನಿಗಮ ನೌಕರರಿಗೆ ಸೇವಾವಧಿ ಅಥವಾ ಗರಿಷ್ಠ 10 ವರ್ಷ ಸಡಿಲಿಕೆ ಇರುತ್ತದೆ.
  • ದಿನಾಂಕ 19-05-2026 ರಂದು ಪ್ರಕಟವಾಗಿದ್ದ KEA ಯ 2 FDA ಹುದ್ದೆಗಳಿಗೆ ಈಗಾಗಲೇ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದವರಿಗೆ RPC ಪದವಿ ಮಟ್ಟದ ಅಧಿಸೂಚನೆಯಲ್ಲಿ ಶುಲ್ಕ ವಿನಾಯಿತಿ ಇದೆ.

ಪರೀಕ್ಷಾ ಮಾದರಿ ಮತ್ತು ಆಯ್ಕೆ ವಿಧಾನ:

  • ಪರೀಕ್ಷಾ ವಿಧಾನ: ಆಫ್‌ಲೈನ್ OMR ಮಾದರಿಯಲ್ಲಿ ಎರಡು ಪತ್ರಿಕೆಗಳ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.
  • ಪತ್ರಿಕೆ-1 (ಸಾಮಾನ್ಯ ಜ್ಞಾನ): 100 ಪ್ರಶ್ನೆಗಳು, 100 ಅಂಕಗಳು, ಅವಧಿ 2 ಗಂಟೆ.
  • ಪತ್ರಿಕೆ-2 (ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ & ಕಂಪ್ಯೂಟರ್ ಜ್ಞಾನ): 100 ಪ್ರಶ್ನೆಗಳು, 100 ಅಂಕಗಳು, ಅವಧಿ 2 ಗಂಟೆ.
  • ಕನಿಷ್ಠ ಅರ್ಹತೆ ಮತ್ತು ಋಣಾತ್ಮಕ ಅಂಕ: ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲು ಕನಿಷ್ಠ ಶೇ. 35% ಅಂಕ ಪಡೆಯುವುದು ಕಡ್ಡಾಯವಾಗಿದೆ. ಪ್ರತಿ ತಪ್ಪು ಉತ್ತರಕ್ಕೆ ಅಥವಾ OMR ನಲ್ಲಿ ಯಾವುದೇ ವೃತ್ತ ಶೇಡ್ ಮಾಡದಿದ್ದರೆ 0.25 ಅಂಕ ಕಡಿತಗೊಳಿಸಲಾಗುವುದು (ಉತ್ತರಿಸದ ಪ್ರಶ್ನೆಗಳಿಗೆ 5ನೇ ವೃತ್ತ ಶೇಡ್ ಮಾಡಲು ಹೆಚ್ಚುವರಿ 5 ನಿಮಿಷ ನೀಡಲಾಗುತ್ತದೆ).
  • ಕಡ್ಡಾಯ ಕನ್ನಡ ಪರೀಕ್ಷೆ: SSLC ಅಥವಾ ಮೇಲ್ಪಟ್ಟ ಹಂತದಲ್ಲಿ ಕನ್ನಡವನ್ನು ಪ್ರಥಮ/ದ್ವಿತೀಯ ಭಾಷೆಯಾಗಿ ಓದಿರದವರಿಗೆ 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆ ಇರುತ್ತದೆ (ಕನಿಷ್ಠ 50 ಅಂಕ ಕಡ್ಡಾಯ).
  • ಆನ್‌ಲೈನ್ ಕೌನ್ಸಲಿಂಗ್ ಮತ್ತು ಆಯ್ಕೆ: ಫಲಿತಾಂಶದ ನಂತರ ಆನ್‌ಲೈನ್ ಮೂಲಕ ಹುದ್ದೆಗಳ ಆದ್ಯತೆ (Option Entry) ದಾಖಲಿಸಲು ಅವಕಾಶ ನೀಡಿ, ಅಣುಕು ಹಂಚಿಕೆ (Mock Allotment) ನಂತರ ಅಂತಿಮ 1:1 ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು. ಎಲ್ಲಾ 4 ಅಧಿಸೂಚನೆಗಳಲ್ಲಿ ಮೆರಿಟ್ ಹಾಗೂ ಆದ್ಯತೆ ಆಧಾರದ ಮೇಲೆ ಒಬ್ಬ ಅಭ್ಯರ್ಥಿಗೆ ಒಂದು ಹುದ್ದೆಗೆ ಮಾತ್ರ ಆಯ್ಕೆಗೊಳ್ಳಲು ಅವಕಾಶವಿರುತ್ತದೆ.
  • ಖಾಯಂಪೂರ್ವ ಅವಧಿ & NPS: ಆಯ್ಕೆಯಾದವರಿಗೆ 2 ವರ್ಷ ಖಾಯಂಪೂರ್ವ ಅವಧಿ ಇರಲಿದ್ದು, KIADB ಹಾಗೂ KRIDL ಹೊರತುಪಡಿಸಿ ಉಳಿದ ಎಲ್ಲಾ ಇಲಾಖೆಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಅನ್ವಯಿಸುತ್ತದೆ.

KEA Group-C Recruitment 2026 ಪ್ರಮುಖ ದಿನಾಂಕಗಳು:

ವಿವರ ದಿನಾಂಕ
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ 30-10-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-11-2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 26-11-2026
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ (ಮಧ್ಯಾಹ್ನ 3:00 – 5:00) 08-01-2027
KK ಪದವಿ ಮಟ್ಟದ (FDA & ಇತರೆ) ಪರೀಕ್ಷೆ 09-01-2027
RPC ಪದವಿ ಮಟ್ಟದ (FDA & ಇತರೆ) ಪರೀಕ್ಷೆ 10-01-2027
KK ಪಿಯುಸಿ ಮಟ್ಟದ (SDA & ಇತರೆ) ಪರೀಕ್ಷೆ 16-01-2027
RPC ಪಿಯುಸಿ ಮಟ್ಟದ (SDA & ಇತರೆ) ಪರೀಕ್ಷೆ 17-01-2027

(ಪರೀಕ್ಷಾ ಸಮಯ: ಪತ್ರಿಕೆ-1 ಬೆಳಿಗ್ಗೆ 10:30 ರಿಂದ 12:30 ಹಾಗೂ ಪತ್ರಿಕೆ-2 ಮಧ್ಯಾಹ್ನ 2:30 ರಿಂದ 4:30 ರವರೆಗೆ ನಡೆಯಲಿದೆ.)

KEA FDA SDA Recruitment 2026 Apply Online Links:

ಪ್ರಮುಖ ಲಿಂಕ್‌ಗಳು ಲಿಂಕ್
Non-HK ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
HK ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
RPC ಪದವಿ ಮಟ್ಟದ (FDA – 2,163 ಹುದ್ದೆ) ಅಧಿಸೂಚನೆ PDF ಇಲ್ಲಿ ಕ್ಲಿಕ್ ಮಾಡಿ
KK ಪದವಿ ಮಟ್ಟದ (FDA – 563 ಹುದ್ದೆ) ಅಧಿಸೂಚನೆ PDF ಇಲ್ಲಿ ಕ್ಲಿಕ್ ಮಾಡಿ
RPC ಪಿಯುಸಿ ಮಟ್ಟದ (SDA – 2,070 ಹುದ್ದೆ) ಅಧಿಸೂಚನೆ PDF ಇಲ್ಲಿ ಕ್ಲಿಕ್ ಮಾಡಿ
KK ಪಿಯುಸಿ ಮಟ್ಟದ (SDA – 635 ಹುದ್ದೆ) ಅಧಿಸೂಚನೆ PDF ಇಲ್ಲಿ ಕ್ಲಿಕ್ ಮಾಡಿ
ಸಂಯುಕ್ತ ಸಂಕ್ಷಿಪ್ತ ಅಧಿಸೂಚನೆ PDF (5,431 ಹುದ್ದೆಗಳು) ಇಲ್ಲಿ ಕ್ಲಿಕ್ ಮಾಡಿ
KEA ಸಹಾಯವಾಣಿ (ಬೆಳಿಗ್ಗೆ 10:00 – ಸಂಜೆ 6:00) 080-23460460

ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು

ಅಭ್ಯರ್ಥಿಗಳು KEA ಅಧಿಕೃತ ವೆಬ್‌ಸೈಟ್ (cetonline.karnataka.gov.in/kea) ಮೂಲಕವೇ ಅರ್ಜಿ ಸಲ್ಲಿಸಬೇಕು. ಅರ್ಜಿ ಭರ್ತಿ ಮಾಡುವಾಗ ಬಿಳಿ ಹಿನ್ನೆಲೆಯ ಪಾಸ್‌ಪೋರ್ಟ್ ಫೋಟೋ (JPEG, 50KB–200KB) ಹಾಗೂ ಬಿಳಿ ಹಾಳೆಯ ಮೇಲೆ ಕಪ್ಪು ಸ್ಕೆಚ್/ಮಾರ್ಕರ್ ಪೆನ್ನಿನಲ್ಲಿ ಮಾಡಿದ ಸಹಿಯನ್ನು (JPEG, 50KB–70KB) ಅಪ್‌ಲೋಡ್ ಮಾಡಬೇಕು. ಒಮ್ಮೆ ಸಲ್ಲಿಸಿದ ಅರ್ಜಿಯಲ್ಲಿ ಯಾವುದೇ ತಿದ್ದುಪಡಿಗೆ ಅವಕಾಶವಿರುವುದಿಲ್ಲವಾದ್ದರಿಂದ ಜಾತಿ/ಮೀಸಲಾತಿ RD ಸಂಖ್ಯೆ ಹಾಗೂ ವಿದ್ಯಾರ್ಹತೆ ವಿವರಗಳನ್ನು ಸರಿಯಾಗಿ ಪರಿಶೀಲಿಸಿ ಸಲ್ಲಿಸಿ.

Telegram Group Join Now
WhatsApp Group Join Now

Leave a Comment