ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) 2026 ಸೆಪ್ಟೆಂಬರ್ 06 ರಂದು ಆಯೋಜಿಸಿರುವ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (Armed Police Constable – CAR/DAR) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಪ್ರವೇಶ ಪತ್ರವನ್ನು (CAR DAR Exam Hall Ticket 2026) ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಅರ್ಹ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅಧಿಕೃತ ಲಿಂಕ್ಗೆ ಭೇಟಿ ನೀಡಿ, ತಮ್ಮ ಲಾಗಿನ್ ವಿವರಗಳನ್ನು ನಮೂದಿಸುವ ಮೂಲಕ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಪರೀಕ್ಷಾ ಕೇಂದ್ರದ ಪ್ರಮುಖ ನಿಯಮಗಳು ಮತ್ತು ಸೂಚನೆಗಳು:
ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳುವ ಜೊತೆಗೆ, ಪ್ರಾಧಿಕಾರವು ಅಧಿಸೂಚಿಸಿರುವ ಈ ಕೆಳಗಿನ ಕಟ್ಟುನಿಟ್ಟಿನ ಪರೀಕ್ಷಾ ನಿಯಮಗಳು ಹಾಗೂ ವಸ್ತ್ರ ಸಂಹಿತೆಯನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕಿದೆ:
- ಹಾಜರಾತಿ ಸಮಯ: ಪರೀಕ್ಷಾ ಕೇಂದ್ರದಲ್ಲಿ ‘Facial Detection & Frisking’ (ಮುಖ ಗುರುತಿಸುವಿಕೆ ಮತ್ತು ತಪಾಸಣೆ) ವ್ಯವಸ್ಥೆ ಇರುವುದರಿಂದ, ಬಸ್ ಅಥವಾ ರೈಲು ವಿಳಂಬವಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆ ಪ್ರಾರಂಭವಾಗುವ ಕನಿಷ್ಠ ಎರಡು ಗಂಟೆಗಳ ಮೊದಲು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಆವರಣದಲ್ಲಿ ಹಾಜರಿರಬೇಕು.
- ಗುರುತಿನ ಚೀಟಿ ಕಡ್ಡಾಯ: ಪ್ರವೇಶ ಪತ್ರದ ಜೊತೆಗೆ ಕಡ್ಡಾಯವಾಗಿ ಯಾವುದಾದರೂ ಒಂದು ಮೂಲ (Original) ಗುರುತಿನ ಚೀಟಿಯನ್ನು ಅಂದರೆ, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯನ್ನು ತರಬೇಕು.
- ಪೆನ್ ಬಳಕೆ: ಪರೀಕ್ಷೆಗೆ ಕೇವಲ ನೀಲಿ ಅಥವಾ ಕಪ್ಪು ಶಾಯಿಯ ಬಾಲ್ ಪಾಯಿಂಟ್ ಪೆನ್ನು (Blue or Black ink ball point pen) ಮಾತ್ರ ಬಳಸಬೇಕು.
- ನಿಷೇಧಿತ ವಸ್ತುಗಳು: ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಫೋನ್, ಬ್ಲೂಟೂತ್, ಸ್ಮಾರ್ಟ್ ವಾಚ್, ಕ್ಯಾಲ್ಕುಲೇಟರ್, ಎಲೆಕ್ಟ್ರಾನಿಕ್ ಪೆನ್, ಪೇಪರ್ ಚೀಟಿಗಳು, ಮತ್ತು ಪುಸ್ತಕಗಳಂತಹ ಯಾವುದೇ ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವಂತಿಲ್ಲ.
- ಕೈಗಡಿಯಾರ ನಿಷೇಧ: ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ರೀತಿಯ ಕೈಗಡಿಯಾರವನ್ನು (Wrist watch) ಕಟ್ಟಿಕೊಂಡು ಹೋಗುವಂತಿಲ್ಲ.
Download CAR DAR Exam Hall Ticket 2026:
- ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ವೇಶ ಪತ್ರ: ಡೌನ್ಲೋಡ್ ಲಿಂಕ್
- ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್: https://cetonline.karnataka.gov.in/kea/
ಓ.ಎಂ.ಆರ್ (OMR) ಮತ್ತು ನೆಗೆಟಿವ್ ಮಾರ್ಕಿಂಗ್ (Negative Marking) ನಿಯಮಗಳು:
- ನೆಗೆಟಿವ್ ಅಂಕಗಳು: ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ ನೆಗೆಟಿವ್ ಅಂಕಗಳಿರುತ್ತವೆ; ಪ್ರತಿ ತಪ್ಪು ಉತ್ತರಕ್ಕೆ 1/4 ರಷ್ಟು (0.25) ಅಂಕಗಳನ್ನು ಕಳೆಯಲಾಗುವುದು.
- 5ನೇ ವೃತ್ತದ ನಿಯಮ: ಪ್ರಶ್ನೆಗೆ ಸರಿಯಾದ ಉತ್ತರ ಗೊತ್ತಿಲ್ಲದಿದ್ದರೆ, ಓ.ಎಂ.ಆರ್ ಪತ್ರಿಕೆಯಲ್ಲಿ ಕಡ್ಡಾಯವಾಗಿ 05ನೇ ವೃತ್ತವನ್ನು ಶೇಡ್ ಮಾಡಬೇಕು. ಇದಕ್ಕಾಗಿ ಪರೀಕ್ಷೆಯ ನಿಗದಿತ ಅವಧಿ ಮುಗಿದ ನಂತರ 05 ನಿಮಿಷಗಳ ಹೆಚ್ಚುವರಿ ಸಮಯಾವಕಾಶ ನೀಡಲಾಗುತ್ತದೆ.
- ಒಂದು ವೇಳೆ ಯಾವುದೇ ಆಯ್ಕೆಯನ್ನು / ವೃತ್ತವನ್ನು ಶೇಡ್ ಮಾಡಿಲ್ಲದಿದ್ದರೆ, ಪ್ರತಿ ಪ್ರಶ್ನೆಗೆ 1/4 ರಷ್ಟು (0.25) ಅಂಕಗಳನ್ನು ಕಡಿತಗೊಳಿಸಲಾಗುವುದು.
- ಮೊದಲನೆಯ ಬೆಲ್ ಆದ ನಂತರ ಓ.ಎಂ.ಆರ್ ಪತ್ರಿಕೆಯಲ್ಲಿ ಹೆಸರು, ನೋಂದಣಿ ಸಂಖ್ಯೆ, ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್ (Version Code) ಮತ್ತು ಕ್ರಮ ಸಂಖ್ಯೆಯನ್ನು ಬರೆದು ಸಂಬಂಧಿಸಿದ ವೃತ್ತಗಳನ್ನು ಸಂಪೂರ್ಣವಾಗಿ ತುಂಬಬೇಕು.
- ಕೊನೆಯ ಬೆಲ್ ಆಗುವವರೆಗೂ (ಪರೀಕ್ಷೆಯ ನಿಗದಿತ ಸಮಯ ಮುಗಿಯುವವರೆಗೂ) ಅಭ್ಯರ್ಥಿಗಳಿಗೆ ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗಲು ಅನುಮತಿ ಇರುವುದಿಲ್ಲ.
ಕಡ್ಡಾಯ ವಸ್ತ್ರ ಸಂಹಿತೆ (Dress Code):
- ಧರಿಸುವಂತಿಲ್ಲ: ಶೂಗಳು, ಬೂಟ್ಸ್, ಕ್ಯಾಪ್, ಕಿವಿ/ತಲೆ ಮತ್ತು ಮುಖ ಮುಚ್ಚುವಂತಹ ಉಡುಪುಗಳು, ಬ್ಯಾಗ್, ಪರ್ಸ್ ಹಾಗೂ ಹೆಚ್ಚು ಜೇಬುಗಳಿರುವ ಜೀನ್ಸ್ ಪ್ಯಾಂಟ್ಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
- ಅನುಮತಿಸಲಾದ ವಸ್ತುಗಳು (ಭದ್ರತಾ ತಪಾಸಣೆಗೆ ಒಳಪಟ್ಟು): ಮಹಿಳೆಯರು ಮಾಂಗಲ್ಯ ಸರ, ಮೂಗುತಿ, ಕಾಲುಂಗುರ, ಕಾಲುಗೆಜ್ಜೆ, ಕೈಬಳೆಗಳು, ಮತ್ತು ಕುಂಕುಮ ಧರಿಸಲು ಅವಕಾಶವಿದೆ. ಪುರುಷರು ಜನಿವಾರ, ಉಡದಾರ ಧರಿಸಬಹುದು. ಜೊತೆಗೆ ಎಲ್ಲಾ ಅಭ್ಯರ್ಥಿಗಳು ಕೈಗೆ ಕಟ್ಟುವ ಧಾರ್ಮಿಕ ದಾರಗಳು, ಶಿವದಾರ, ಉಂಗುರ, ತಾಯತ, ಮತ್ತು ರುದ್ರಾಕ್ಷಿಯನ್ನು ಧರಿಸಲು ಅನುಮತಿಸಲಾಗಿದೆ.
- ಧಾರ್ಮಿಕ ಉಡುಪು: ಕೆಲವು ಸಮುದಾಯದ ವಿದ್ಯಾರ್ಥಿಗಳು ಧಾರ್ಮಿಕ ಉಡುಪುಗಳನ್ನು ಧರಿಸಿ ಪರೀಕ್ಷೆ ಬರೆಯಲು ಇಚ್ಚಿಸಿದರೆ, ಪರೀಕ್ಷೆ ಆರಂಭಕ್ಕೆ 2:30 ಗಂಟೆ ಮೊದಲು ವಸ್ತ್ರ ಸಂಹಿತೆ ಅಧಿಕಾರಿಯ ಮುಂದೆ ಹಾಜರಾಗಿ ಪ್ರತ್ಯೇಕ ಕೊಠಡಿಯಲ್ಲಿ ತಪಾಸಣೆಗೆ ಒಳಪಡಬೇಕು.