ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ವತಿಯಿಂದ ಗದಗ ಜಿಲ್ಲೆಯ ವಿವಿಧ ತಾಲೂಕುಗಳಾದ ಗದಗ, ಶಿರಹಟ್ಟಿ, ರೋಣ, ನರಗುಂದ ಮತ್ತು ಮುಂಡರಗಿಯಲ್ಲಿ ಖಾಲಿ ಇರುವ ಒಟ್ಟು 168 ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಈ ನೇಮಕಾತಿಗೆ ಕೇವಲ ಅರ್ಹ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿದಾರರು ಆಫ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಉತ್ತೀರ್ಣರಾಗಿರುವ ಹಾಗೂ ಅದೇ ಗ್ರಾಮ/ವಾರ್ಡ್‌ನಲ್ಲಿ ವಾಸಿಸುತ್ತಿರುವ ಸ್ಥಳೀಯ ಮಹಿಳೆಯರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಜುಲೈ 30, 2026 ರ ಸಂಜೆ 5:30 ಗಂಟೆಯೊಳಗೆ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಖುದ್ದಾಗಿ ಸಲ್ಲಿಸಬೇಕು. ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
Gadag Anganwadi Recruitment 2026 ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD)
- ಹುದ್ದೆಯ ಹೆಸರು: ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ
- ಒಟ್ಟು ಹುದ್ದೆಗಳ ಸಂಖ್ಯೆ: 168 ಹುದ್ದೆಗಳು
- ಉದ್ಯೋಗ ಸ್ಥಳ: ಗದಗ ಜಿಲ್ಲೆ
ಹುದ್ದೆಗಳ ವಿವರ:
ಗದಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಗಿನಂತಿದೆ:
- ಗದಗ ತಾಲೂಕು – 07 ಕಾರ್ಯಕರ್ತೆ, 41 ಸಹಾಯಕಿ ಹುದ್ದೆಗಳು.
- ಶಿರಹಟ್ಟಿ ತಾಲೂಕು – 08 ಕಾರ್ಯಕರ್ತೆ, 21 ಸಹಾಯಕಿ ಹುದ್ದೆಗಳು.
- ರೋಣ ತಾಲೂಕು – 09 ಕಾರ್ಯಕರ್ತೆ, 27 ಸಹಾಯಕಿ ಹುದ್ದೆಗಳು.
- ನರಗುಂದ ತಾಲೂಕು – 05 ಕಾರ್ಯಕರ್ತೆ, 20 ಸಹಾಯಕಿ ಹುದ್ದೆಗಳು.
- ಮುಂಡರಗಿ ತಾಲೂಕು – 08 ಕಾರ್ಯಕರ್ತೆ, 22 ಸಹಾಯಕಿ ಹುದ್ದೆಗಳು.
ಶೈಕ್ಷಣಿಕ ಅರ್ಹತೆ:
- ಅಂಗನವಾಡಿ ಕಾರ್ಯಕರ್ತೆ: ಕನಿಷ್ಠ ಪಿ.ಯು.ಸಿ (PUC) ತೇರ್ಗಡೆ ಹೊಂದಿರಬೇಕು. ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿರಬೇಕು. (D.S.E.R.T ಯಿಂದ ECCE ಡಿಪ್ಲೊಮಾ, JOC, NTT ತರಬೇತಿ ಪಡೆದವರಿಗೆ ಮೊದಲ ಆದ್ಯತೆ ಮತ್ತು 5 ಬೋನಸ್ ಅಂಕ ನೀಡಲಾಗುವುದು).
- ಅಂಗನವಾಡಿ ಸಹಾಯಕಿ: ಕನಿಷ್ಠ ಎಸ್‌ಎಸ್‌ಎಲ್‌ಸಿ (SSLC) ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ:
- ಕನಿಷ್ಠ ವಯಸ್ಸು: 19 ವರ್ಷ
- ಗರಿಷ್ಠ ವಯಸ್ಸು: 35 ವರ್ಷ
ವಯೋಮಿತಿ ಸಡಿಲಿಕೆ:
ಅಂಗವಿಕಲ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕ:
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಸಂಪೂರ್ಣ ಉಚಿತವಾಗಿ ಅರ್ಜಿ ಸಲ್ಲಿಸಬಹುದು.
ವೇತನ ವಿವರ:
ಆಯ್ಕೆಯಾಗುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿಯಮಗಳ ಪ್ರಕಾರ ಮಾಸಿಕ ಗೌರವಧನವನ್ನು ನೀಡಲಾಗುತ್ತದೆ.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-06-2026 (ಬೆಳಿಗ್ಗೆ 10:30 ರಿಂದ)
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-07-2026 (ಸಂಜೆ 5:30 ರವರೆಗೆ)
ಪ್ರಮುಖ ಲಿಂಕ್‌ಗಳು
- ಗದಗ ಅಧಿಸೂಚನೆ: ಡೌನ್’ಲೋಡ್
- ಶಿರಹಟ್ಟಿ ಅಧಿಸೂಚನೆ: ಡೌನ್’ಲೋಡ್
- ರೋಣ ಅಧಿಸೂಚನೆ: ಡೌನ್’ಲೋಡ್
- ನರಗುಂದ ಅಧಿಸೂಚನೆ: ಡೌನ್’ಲೋಡ್
- ಮುಂಡರಗಿ ಅಧಿಸೂಚನೆ: ಡೌನ್’ಲೋಡ್
- ಅಧಿಕೃತ ವೆಬ್ಸೈಟ್: gadag.nic.in
ಈ ಕೇಳಗಿನ ಸುದ್ದಿಗಳನ್ನು ಓದಿ:
FAQ:
1. ಗದಗ ಜಿಲ್ಲೆಯ ಅಂಗನವಾಡಿ ನೇಮಕಾತಿಯಲ್ಲಿ ಒಟ್ಟು ಎಷ್ಟು ಹುದ್ದೆಗಳಿವೆ?
ಗದಗ ಜಿಲ್ಲೆಯಾದ್ಯಂತ ಒಟ್ಟು 168 ಹುದ್ದೆಗಳು ಖಾಲಿ ಇವೆ. ಇದರಲ್ಲಿ 37 ಅಂಗನವಾಡಿ ಕಾರ್ಯಕರ್ತೆ ಮತ್ತು 131 ಅಂಗನವಾಡಿ ಸಹಾಯಕಿ ಹುದ್ದೆಗಳಿವೆ.
2. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ವಿದ್ಯಾರ್ಹತೆ ಏನು?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಪಿ.ಯು.ಸಿ. (PUC) ತೇರ್ಗಡೆ ಹೊಂದಿರಬೇಕು ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಭಾಷೆಯನ್ನು ಓದಿರಬೇಕು.
3. ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆ ಏನು?
ಕನಿಷ್ಠ ಎಸ್‌ಎಸ್‌ಎಲ್‌ಸಿ (SSLC) ಪಾಸಾಗಿರುವ ಮಹಿಳೆಯರು ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
4. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಯಾವುದು?
ಈ ಹುದ್ದೆಗಳಿಗೆ ಆಫ್‌ಲೈನ್ (ಭೌತಿಕವಾಗಿ) ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸಿದರೆ ತಿರಸ್ಕರಿಸಲಾಗುವುದು.
5. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?
ಅಭ್ಯರ್ಥಿಗಳು ಜುಲೈ 30, 2026 ರ ಸಂಜೆ 05:30 ಗಂಟೆಯೊಳಗೆ ಸಂಬಂಧಪಟ್ಟ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
6. ಪುರುಷರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದೇ?
ಇಲ್ಲ, ಕೇವಲ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
7. ಅರ್ಜಿ ಸಲ್ಲಿಸಲು ಕನಿಷ್ಠ ಮತ್ತು ಗರಿಷ್ಠ ವಯೋಮಿತಿ ಎಷ್ಟು?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 19 ವರ್ಷ ಮತ್ತು ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅಂಗವಿಕಲರಿಗೆ 10 ವರ್ಷಗಳ ಸಡಿಲಿಕೆ ಇರುತ್ತದೆ.
8. ಸ್ಥಳೀಯ ನಿವಾಸಿ (Local Resident) ಎಂಬುದನ್ನು ದೃಢೀಕರಿಸುವುದು ಹೇಗೆ?
ಅಭ್ಯರ್ಥಿಗಳು ತಹಶೀಲ್ದಾರ್ ಅವರಿಂದ ಪಡೆದ 3 ವರ್ಷದ ವಾಸಸ್ಥಳ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಜೊತೆಗೆ ಆಧಾರ ಕಾರ್ಡ್, ರೇಷನ್ ಕಾರ್ಡ್ ಅಥವಾ ವೋಟರ್ ಐಡಿ ಒದಗಿಸಬೇಕು.
9. ಅರ್ಜಿ ಲಗತ್ತುಗಳಿಗೆ ದೃಢೀಕರಣ (Attestation) ಕಡ್ಡಾಯವೇ?
ಹೌದು, ಅರ್ಜಿಯೊಂದಿಗೆ ಸಲ್ಲಿಸುವ ಎಲ್ಲಾ ದಾಖಲಾತಿಗಳ ಝೆರಾಕ್ಸ್ ಪ್ರತಿಗಳನ್ನು ಪತ್ರಾಂಕಿತ (Gazetted) ಅಧಿಕಾರಿಗಳಿಂದ ದೃಢೀಕರಣ ಮಾಡಿಸುವುದು ಕಡ್ಡಾಯವಾಗಿದೆ.
10. ಆಯ್ಕೆ ಪ್ರಕ್ರಿಯೆಯಲ್ಲಿ ಬೋನಸ್ ಅಂಕಗಳನ್ನು ಯಾರಿಗೆ ನೀಡಲಾಗುತ್ತದೆ?
ಇಲಾಖೆಯ ಡಿಪ್ಲೊಮಾ/ತರಬೇತಿ ಪಡೆದವರಿಗೆ, ಆಸಿಡ್ ದಾಳಿಗೊಳಗಾದವರಿಗೆ, ಇಲಾಖಾ ಸಂಸ್ಥೆಗಳ ನಿವಾಸಿಗಳಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಮತ್ತು ಮಾಜಿ ದೇವದಾಸಿಯರ ಮಕ್ಕಳಿಗೆ ಬೋನಸ್ ಅಂಕಗಳನ್ನು ನೀಡಲಾಗುತ್ತದೆ.