RRB Group D Recruitment 2026: ರೈಲ್ವೆ ಗ್ರೂಪ್-D ನೇಮಕಾತಿ 2026; 10ನೇ ತರಗತಿ ಪಾಸಾದವರಿಗೆ 21,997 ಹುದ್ದೆಗಳು

Telegram Group Join Now
WhatsApp Group Join Now

ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಗಬೇಕು ಎಂದು ಹಗಲು ರಾತ್ರಿ ಓದುತ್ತಿರುವ ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಭಾರತೀಯ ರೈಲ್ವೆ (RRB Group D Recruitment 2026) ಭರ್ಜರಿ ಗುಡ್ ನ್ಯೂಸ್ ನೀಡಿದೆ. ‌

ಬಹುನಿರೀಕ್ಷಿತ ಆರ್‌ಆರ್‌ಬಿ ಗ್ರೂಪ್-ಡಿ (ಲೆವೆಲ್-1) ನೇಮಕಾತಿ ಅಧಿಸೂಚನೆ (CEN 09/2025) ಪ್ರಕಟವಾಗಿದ್ದು, ದೇಶಾದ್ಯಂತ ಬರೋಬ್ಬರಿ 21,997 ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ನಂತರ ಅರ್ಜಿ ಸಲ್ಲಿಸಿ.

ಈ ಹುದ್ದೆಗಳಿಗೆ ಕೇವಲ 10ನೇ ತರಗತಿ ಅಥವಾ ಐಟಿಐ (ITI) ಪಾಸಾಗಿದ್ದರೆ ಸಾಕು ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಸುವರ್ಣಾವಕಾಶ ಅಂತಲೇ ಹೇಳಬಹುದು.

RRB Group D Recruitment 2026 ಸಂಕ್ಷಿಪ್ತ ವಿವರ:

  • ಸಂಸ್ಥೆ: ರೈಲ್ವೆ ನೇಮಕಾತಿ ಮಂಡಳಿ (RRB)
  • ಹುದ್ದೆಯ ಹೆಸರು: ಲೆವೆಲ್-1 ಹುದ್ದೆಗಳು (ಗ್ರೂಪ್-ಡಿ)
  • ಒಟ್ಟು ಹುದ್ದೆಗಳು: 21,997 (ವಿವಿಧ ರೈಲ್ವೆ ವಲಯಗಳಲ್ಲಿ)
  • ಉದ್ಯೋಗ ಸ್ಥಳ: All India

ಹುದ್ದೆಗಳ ವಿವರ:

ರೈಲ್ವೆಯ ಸುರಕ್ಷತೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ:

  • ಸಹಾಯಕ ಲೋಕೋ ಶೆಡ್ (ಎಲೆಕ್ಟ್ರಿಕಲ್)
  • ಸಹಾಯಕ ಆಪರೇಷನ್ಸ್ (ಎಲೆಕ್ಟ್ರಿಕಲ್)
  • ಸಹಾಯಕ ಸಿ & ಡಬ್ಲ್ಯೂ (C&W)
  • ಸಹಾಯಕ ಸಿಗ್ನಲ್ ಮತ್ತು ಟೆಲಿಕಾಂ (S&T)
  • ಟ್ರ್ಯಾಕ್ ಮೇಂಟೇನರ್ ಗ್ರೇಡ್-IV (Track Maintainer)
  • ಪಾಯಿಂಟ್ಸ್‌ಮನ್ (Pointsman) ಇತ್ಯಾದಿ.

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC/Matriculation) ಉತ್ತೀರ್ಣರಾಗಿರಬೇಕು.

  • ಅಥವಾ: ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಷನಲ್ ಟ್ರೈನಿಂಗ್ (NCVT/SCVT) ನಿಂದ ಐಟಿಐ (ITI) ಪ್ರಮಾಣ ಪತ್ರ ಹೊಂದಿರಬೇಕು.
  • ಅಥವಾ: ನ್ಯಾಷನಲ್ ಅಪ್ರೆಂಟಿಸ್‌ಶಿಪ್ ಸರ್ಟಿಫಿಕೇಟ್ (NAC) ಹೊಂದಿರಬೇಕು.

ವೇತನ:
7ನೇ ವೇತನ ಆಯೋಗದ ಪ್ರಕಾರ ಲೆವೆಲ್-1 (ಮೂಲ ವೇತನ ₹18,000 + ಭತ್ಯೆಗಳು).

ವಯೋಮಿತಿ:

  • ಕನಿಷ್ಠ ವಯಸ್ಸು: 18 ವರ್ಷ.
  • ಗರಿಷ್ಠ ವಯಸ್ಸು: 33 ವರ್ಷ.
  • ವಯೋಮಿತಿ ಸಡಿಲಿಕೆ: OBC ಅಭ್ಯರ್ಥಿಗಳಿಗೆ 3 ವರ್ಷ, SC/ST ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಕೆಲವರು ನೇರ ನೇಮಕಾತಿ ಎಂದು ತಪ್ಪು ಭಾವಿಸಬಹುದು. ಆದರೆ, ರೈಲ್ವೆ ಗ್ರೂಪ್-ಡಿ ಹುದ್ದೆಗಳಿಗೆ ಈ ಕೆಳಗಿನ ಹಂತಗಳ ಮೂಲಕ ಆಯ್ಕೆ ನಡೆಯುತ್ತದೆ:

  1. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT): ಆನ್‌ಲೈನ್ ಲಿಖಿತ ಪರೀಕ್ಷೆ.
  2. ದೈಹಿಕ ದಕ್ಷತೆ ಪರೀಕ್ಷೆ (PET): ಓಟ ಮತ್ತು ಭಾರ ಎತ್ತುವ ಪರೀಕ್ಷೆ.
  3. ದಾಖಲೆ ಪರಿಶೀಲನೆ (Document Verification).
  4. ವೈದ್ಯಕೀಯ ಪರೀಕ್ಷೆ (Medical Exam).

ಅರ್ಜಿ ಶುಲ್ಕ:

  • ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ: ₹500/- (ಪರೀಕ್ಷೆಗೆ ಹಾಜರಾದರೆ ₹400 ವಾಪಸ್ ಬರುತ್ತದೆ).
  • SC/ST/ಮಾಜಿ ಸೈನಿಕ/ಮಹಿಳೆ/ಟ್ರಾನ್ಸ್‌ಜೆಂಡರ್/EBC: ₹250/- (ಪರೀಕ್ಷೆಗೆ ಹಾಜರಾದರೆ ಪೂರ್ತಿ ₹250 ವಾಪಸ್ ಬರುತ್ತದೆ).

RRB Group D Recruitment 2026 ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 31-01-2026.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-ಮಾರ್ಚ್-2026.
  • ತಿದ್ದುಪಡಿ (Correction) ವಿಂಡೋ: 03-ಮಾರ್ಚ್-2026 ರಿಂದ 12-ಮಾರ್ಚ್-2026 ರವರೆಗೆ.

ಅರ್ಜಿ ಸಲ್ಲಿಸುವುದು ಹೇಗೆ?

  1. ಅಭ್ಯರ್ಥಿಗಳು ಅಧಿಕೃತ ಆರ್‌ಆರ್‌ಬಿ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
  2. CEN 09/2025 (Level-1 Posts) ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. ‘Apply Online’ ಆಯ್ಕೆ ಮಾಡಿ, ರಿಜಿಸ್ಟ್ರೇಷನ್ ಮಾಡಿಕೊಳ್ಳಿ.
  4. ಅಗತ್ಯ ಮಾಹಿತಿ ತುಂಬಿ, ಫೋಟೋ ಮತ್ತು ಸಹಿ ಅಪ್‌ಲೋಡ್ ಮಾಡಿ, ಶುಲ್ಕ ಪಾವತಿಸಿ.

RRB Group D Recruitment 2026 Online Application:
RRB Notification 2026: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: www.rrbapply.gov.in, indianrailways.gov.in

“ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ರೈಲ್ವೆ ಕೆಲಸಕ್ಕೆ ವಿಶೇಷ ಗೌರವವಿದೆ. ಒಮ್ಮೆ ಗ್ರೂಪ್-ಡಿ ಸೇರಿದರೆ ಮುಂದೆ ಇಲಾಖಾ ಪರೀಕ್ಷೆಗಳನ್ನು ಬರೆದು ಮೇಲಿನ ಹುದ್ದೆಗಳಿಗೆ ಏರಬಹುದು. ಸ್ಪರ್ಧೆ ಜೋರಾಗಿರುವುದರಿಂದ ಇಂದಿನಿಂದಲೇ ಪರೀಕ್ಷೆಗೆ ತಯಾರಿ ನಡೆಸಿ. ಕೊನೆಯ ದಿನಾಂಕದವರೆಗೆ ಕಾಯಬೇಡಿ.”

ರೈಲ್ವೆ ಕೆಲಸದ ಕನಸು ಕಾಣುತ್ತಿರುವ ನಿಮ್ಮ ಸ್ನೇಹಿತರಿಗೆ ಈ ಮಾಹಿತಿಯನ್ನು ಶೇರ್ ಮಾಡಿ!

ಅಂಚೆ ಇಲಾಖೆ ನೇಮಕಾತಿ 2026

SBI Recruitment 2026:

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment